
Free children's summer camp organized by Sri Channamallikarjuna Math Trust Committee

ಶ್ರೀ ಚನ್ನಮಲ್ಲಿಕಾರ್ಜುನ ಮಠ ಟ್ರಸ್ಟ್ ಕಮಿಟಿ ವತಿಯಿಂದ ಉಚಿತ ಮಕ್ಕಳ ಬೇಸಿಗೆ ಶಿಬಿರ

ಗಂಗಾವತಿ ನಗರದ ಶ್ರೀ ಚನ್ನಮಲ್ಲಿಕಾರ್ಜುನ ಮಠ ಟ್ರಸ್ಟ್ ಕಮಿಟಿ ವತಿಯಿಂದ ಮೂರನೇ ಉಚಿತ ಚಿಗುರು ಚೈತನ್ಯ ಮಕ್ಕಳ ಬೇಸಿಗೆ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಶಿಬಿರವು 15-4-2026ರಿಂದ 30-4-2026ವರೆಗೆ ಪ್ರತಿದಿನ ಬೆಳಿಗ್ಗೆ 7.30 ರಿಂದ ಮಧ್ಯಾಹ್ನ 12 ಗಂಟೆಯವರೆಗೆ ನಡೆಯಲಿದೆ. ಸಿಬಿರದಲ್ಲಿ ಯೋಗ, ಧ್ಯಾನ, ಪ್ರಾರ್ಥನೆ ಸಹಿತ ಮಕ್ಕಳ ಮಾನಸಿಕ, ಬೌದ್ಧಿಕ ,ನೈತಿಕ ಹಾಗೂ ಮಾನವೀಯ, ಕೌಟುಂಬಿಕ ಮೌಲ್ಯಗಳನ್ನು ಬೆಳೆಸುವ ,ರಾಷ್ಟ್ರಭಕ್ತಿ, ಶಿಸ್ತಿನ ಜೀವನ, ಸಾಮಾಜಿಕ ಜವಾಬ್ದಾರಿ ಮೂಡಿಸುವ ನಿಟ್ಟಿನಲ್ಲಿ ವಿವಿಧ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ನೀಡಲಾಗುವುದು .ಸಿಬಿರಕ್ಕೆ 6 ರಿಂದ 9ನೇ ತರಗತಿ ಮಕ್ಕಳಿಗೆ ಮಾತ್ರ ಅವಕಾಶವಿದೆ. ಆಸಕ್ತ ಪಾಲಕರು ಮಠದ ಪೂಜಾ ಸ್ಟೋರ್ ನಲ್ಲಿ ಅರ್ಜಿ ಫಾರಂ ಪಡೆದು ಭರ್ತಿ ಮಾಡಿ ಅಲ್ಲಿಯ ಸಲ್ಲಿಸಬೇಕು ಹೆಚ್ಚಿನ ಮಾಹಿತಿಗೆ ಸಂಚಾಲಕರಾದ ನಾಗನಗೌಡ 9480348094,ಶಿವಾನಂದ ತಿಮ್ಮಾಪುರ್ 8762601641 ಇವರನ್ನು ಸಂಪರ್ಕಿಸಲು ಮಠದ ಟ್ರಸ್ಟಿಗಳಾದ ಕೆ. ಚನ್ನಬಸಯ್ಯ ಸ್ವಾಮಿಯವರು ತಿಳಿಸಿದ್ದಾರೆ.
