ಸತ್ತ ಸಮಾಜ : ಯಾವ ಕಾನೂನು ಏನು ಮಾಡಲು ಸಾಧ್ಯ.

Mallikarjun
3 Min Read

Dead society: What law can do what?




ಲೇಖಕರು: ಪೂಜಾ ಬಂಕಲಗಿ ಚಿತ್ತಾಪುರ.

ಸತ್ತ ಸಮಾಜ : ಯಾವ ಕಾನೂನು ಏನು ಮಾಡಲು ಸಾಧ್ಯ.
ಎರಡು ದಿನಗಳಿಂದ ಕಲಬುರಗಿ ಜಿಲ್ಲೆಯ ಬಳುರ್ಗಿ ಗ್ರಾಮದಲ್ಲಿ ನಡೆದ ಮಹಿಳೆಯ ಕೊಲೆ ಇಡೀ ರಾಜ್ಯವೇ ಬೆಚ್ಚಿ ಬೀಳಿಸುವಂತಾದ್ದು.

ಕಾರಿಂದ ತಳ್ಳಿ ಕುಡುಗೋಲಲ್ಲಿ ಹೆಂಡತಿಯ ಕುತ್ತಿಗೆ ಕೊಯ್ದ ಪಾಪಿ ಗಂಡ! ಅದೆಷ್ಟು ಮಾನಸಿಕ ಅಸ್ವಸ್ಥನಿರಬೇಕು.

ಹಾಡಹಗಲೇ ಸಾರ್ವಜನಿಕರ ಎದುರು ಪತಿಯೊಬ್ಬ ಪತ್ನಿಯನ್ನು ಕೊಚ್ಚಿ ಕೊಂದು ಶವದ ಮೇಲೆ ಕಾರು ಹರಿಸಿ ವಿಕೃತಿ ಮೆರೆದಿರುವ ಘಟನೆ ನಡೆದಿದೆ. ಕಲಬುರಗಿ ಜಿಲ್ಲೆ ಅಫಜಲಪುರ ತಾಲೂಕಿನ ಬಳೂರಗಿ ಗ್ರಾಮದ ಅಫಜಲಪುರ ರಾಷ್ಟ್ರೀಯ ಹೆದ್ದಾರಿ ಬಳಿ ಈ ನಡೆದಿದೆ., ಪರಾರಿಯಾಗಲು ಯತ್ನಿಸಿದ ಹಂತಕನನ್ನು ಪೊಲೀಸರು ಬಂಧಿಸಿದ್ದಾರೆ.
ಆದರೇನು
ಆಕೆಯ ಪ್ರಾಣ ಬಂದೀತೆ?
28 ವರ್ಷದ ಶೈಲಾ ಕೊಲೆಯಾದ ದುರ್ದೈವಿ. ಈಕೆಯ ಪತಿ ಅಕ್ಷಯ್‌ ಎಂತಹ ಕಿರಾತಕನಿರಬೇಕು.. ಶೈಲಾ ಜೊತೆ ಅಕ್ಷಯ್‌ ಕಾರಿನಲ್ಲಿ ಮಹಾರಾಷ್ಟ್ರದತ್ತ ಹೋಗುತ್ತಿದ್ದರು. ಬಳೂರಗಿ ಬಳಿ ಕಾರು ನಿಲ್ಲಿಸಿದ ಪತಿ ಮಟಮಟ ಮಧ್ಯಾಹ್ನ ರಸ್ತೆಮಧ್ಯೆ ಕಾರಿನಿಂದ ಪತ್ನಿಯನ್ನು ಬಲವಂತವಾಗಿ ಕೆಳಗೆ ತಳ್ಳಿದ್ದು, ಸಾರ್ವಜನಿಕರ ಎದುರೇ ರಸ್ತೆಯಲ್ಲಿಯೇ ಮಾರಕಾಸ್ತ್ರಗಳಿಂದ ಆಕೆಯ ಕತ್ತು ಸೀಳಿದ್ದಾನೆ. ಪತಿಯಿಂದ ತಪ್ಪಿಸಿಕೊಂಡು ಹೆದ್ದಾರಿ ಪಕ್ಕದ ಜೋಳದ ಹೊಲಕ್ಕಿಳಿದ ಪತ್ನಿಯನ್ನು ಕಾರಿನಲ್ಲೇ ಬೆನ್ನಟ್ಟಿದ ಅಕ್ಷಯ್‌, ಆಕೆಯ ಮೇಲೆ ಕಾರು ಹತ್ತಿಸಿದ್ದಾನೆ. ಅಷ್ಟೊತ್ತಿಗಾಗಲೇ ಶೈಲಾಳ ಪ್ರಾಣಪಕ್ಷಿ ಹಾರಿ ಹೋಗಿತ್ತು. ಈ ವೇಳೆ ಮಹಿಳೆಯ ರಕ್ಷಣೆಗೆ ಯಾರು ಮುಂದಾಗಲಿಲ್ಲ. ಬದಲಿಗೆ ತಮ್ಮ ಮೊಬೈಲ್‌ ನಲ್ಲಿ ಸೆರೆ ಹಿಡಿಯುವ ಘನಂದಾರಿ ಕೆಲಸದಲ್ಲಿ ತಲ್ಲೀನರಾಗಿ ನಿಂತಿದ್ದರು. ಕೊಲೆಯ ಭಯಾನಕ ದೃಶ್ಯಗಳು ವೈರಲ್‌ ಆಗಿದ್ದು, ನೋಡುಗರ ಎದೆ ಝಲ್‌ ಎನ್ನಿಸುವಂತಿದೆ‌.

ಈ ಕೊಲೆ ಮಾಡಿದವನ ವಿಕೃತಿ ಮತ್ತು ಮಾನಸಿಕ ಅಸ್ವಸ್ಥತೆ ಒಂದು ಕಡೆಯಾದರೆ.
ಸತ್ತ ಸಾರ್ವಜನಿಕರ ಅಸ್ತಿತ್ವದ ಬಗ್ಗೆ ನೂರು ಪ್ರಶ್ನೆಗಳು ಕಾಡುತ್ತವೆ.

ಅದು ಸಾಕಷ್ಟು ಜನರು ಓಡಾಡುವ ಜಾಗ
ಅಕ್ಕಪಕ್ಕದಲ್ಲಿ ಎಷ್ಟೋ ಕಾರುಗಳು ತಮಗೂ ಘಟನೆಗೂ ಸಂಭಂದವಿಲ್ಲದಂತೆ ವರ್ತಿಸುತ್ತಿವೆ. ಹಿಂದೆ ಒಬ್ಬಳು ಮಹಿಳೆ ಇದ್ದಾಳೆ
ಕಾರಿನಲ್ಲಿ ಕುಳಿತು ಎಷ್ಟೋ ಜನ ಘಟನೆಯ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದಾರೆ. ಅಷ್ಟು ಜನ ಒಮ್ಮೆಲೆ ಹೋದರೆ ಅವರನ್ನು ಅವನು ಏನು ಮಾಡುತ್ತಿದ್ದ

ಕಡೇ ಪಕ್ಷ ಅವನ ಮೇಲೆ ಕಾರು ಹಾಯಿಸುವ ಪ್ರಯತ್ನ ಮಾಡಬಹುದಿತ್ತು.
ಜೋರಾಗಿ ಎಲ್ಲರೂ ಹಾರ್ನ ಮಾಡಬಹುದಿತ್ತು

ಕಲ್ಲು ತೂರಾಟ ಮಾಡಿ ಅವನ ಕಾರ್ ಜಖಂಗೊಳಿಸಿ ಅವನ ಗಮನ ಬೇರೆಡೆ ಸೆಳೆಯುವ ಪ್ರಯತ್ನ ಮಾಡಬಹುದಿತ್ತು.

ಆದರೆ ಆ ಸತ್ತ ಸಮಾಜದ ಸತ್ತ ಪ್ರಜೆಗಳು ಇದ್ಯಾವುದನ್ನೂ ಮಾಡದೆ

ನಾಳೆ ನಮ್ಮ ಕಾನೂನು, ಸಂವಿಧಾನ, ಪೋಲಿಸರ ಬಗ್ಗೆ ಮಾತಾಡುತ್ತಾರೆ.

ಅಲ್ಲಿ ಓಡಾಡುವ ಯಾರಿಗೂ ಸಾಮಾಜಿಕ ಬದ್ಧತೆಯ ಇಲ್ಲವೇ?
ನಾಳೆ ಇದೇ ಮನೆಯ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ದೌರ್ಜನ್ಯಗಳಾದರೂ ಅವರ ಪರಿಸ್ಥಿತಿ ಕೂಡ ಇದಕ್ಕಿಂತ ಭಿನ್ನವಾಗಿರುವುದಿಲ್ಲ.
ಇನ್ನೂ ಈ ಘಟನೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಈ ಪೋಸ್ಟಗೆ ಸಂಭಂದಿಸಿದ ಪ್ರತಿಕ್ರಿಯೆ ಗಮನಿಸಿದೆ.

90% ಆ ಕೊಲೆಗಡುಕ ಮಾಡಿದ್ದೇ ಸರಿ ಎನ್ನುವಂತಹ ವಾದ.

ಈ ರೀತಿ ಕೊಲೆಗೆ ಪ್ರಚೋದಿಸುವವರ ಮೇಲೆ

ಘಟನೆಯಲ್ಲಿ ಹಾಜರಿದ್ದು ಸತ್ತಂತಿಹರೆಲ್ಲರ ಮೇಲೂ ಕಾನೂನು ಕ್ರಮವಾಗಬೇಕು.

ಮೃತ ಶೈಲಾ ಸಾವಿರ ತಪ್ಪು ಮಾಡಲಿ
ಅವಳನ್ನು ತ್ಯಜಿಸಬಹುದಿತ್ತು

ಅವಳನ್ನು ಕೊಲೆ ಮಾಡಲು ಇವನೇನು ಹೆತ್ತನೇ ಹೊತ್ತನೇ ಅಥವಾ ಜೀವ ಕೊಟ್ಟನೇ?

ಈ ದರಿದ್ರ ಸಮಾಜದ
ದರಿದ್ರ ಕೆಲವರು ಆತ ಮಾಡಿದ್ದೆ ಸರಿ ಅಂತ ಪ್ರತಿಕ್ರಿಯಿಸುತ್ತಾರಲ್ಲ.

ಅವರ ಮನೆಯಲ್ಲೂ ಇಂತಹ ಘಟನೆಗಳು ನಡೆಯುವ ಕಾಲ ದೂರವಿಲ್ಲ.

ಶೈಲಾ ಸಾವು ಒಂದೇ ಅಲ್ಲ
ಹುಬ್ಬಳ್ಳಿ ಕಾಲೇಜಿನ ವಿದ್ಯಾರ್ಥಿನಿ ಕೊಲೆ,
ಪ್ರೇಮ ನಿರಾಕರಣೆ ಕೊಲೆ
ಎಲ್ಲವುಗಳಲ್ಲಿ ಕೊಲೆಗಡುಕರ ಹೇಯ ಕೃತ್ಯದ ಜೊತೆಗೆ ನಿಂತು ನೋಡುವ ಸತ್ತ ಸಮಾಜದ
ಷಂಡರು ಬಳೆ ಹಾಕಿಕೊಂಡವರು ಅಂತ ಹೇಳಲು ಬೇಸರವೆನಿಸದು.
ಪ್ರತಿ ಬೀದಿಯಲ್ಲಿ ಪೋಲಿಸರು ನಿಲ್ಲಲು ಸಾಧ್ಯವಿಲ್ಲ.
ಆದರೆ ಪ್ರತಿ ಬೀದಿಯಲ್ಲಿ ಜವಾಬ್ದಾರಿಯುತ ನಾಗರಿಕ ನಿಂತಿರುತ್ತಾನೆ.

ಆತ ಮನಸ್ಸು ಮಾಡಿದರೆ
ಯಾವ ಅಪರಾಧ ಕೂಡ ಜರುಗುವುದಿಲ್ಲ.
ಮತ್ತು ಇಂತಹ ಪ್ರಕರಣದಲ್ಲಿ ತ್ವರಿತವಾಗಿ ಶಿಕ್ಷೆ ಘೋಷಣೆಯಾದರೂ ಅಪರಾಧಗಳ ಪ್ರಮಾಣ ಕಡಿಮೆಯಾಗಬಹುದು.

ಪೂಜಾ ಬಂಕಲಗಿ
ಚಿತ್ತಾಪುರ.
ಲೇಖಕರು

Total Views: 0
Share This Article