Launch of Koppal Factory Affected Farmers Association in Halavarthi Village

ಹಾಲವರ್ತಿ ಗ್ರಾಮದಲ್ಲಿ ಕೊಪ್ಪಳ ಕಾರ್ಖಾನೆ ಬಾಧಿತ ರೈತ ಸಂಘಕ್ಕೆ ಚಾಲನೆ
ಎಂ.ಬಿ ಪಾಟೀಲರು ಇಲ್ಲಿನ ಕಾರ್ಖಾನೆಗಳನ್ನು ತಮ್ಮೂರಲ್ಲಿ ಹಾಕಿಕೊಳ್ಳಲಿ
ಕೊಪ್ಪಳ : ತಾಲ್ಲೂಕಿನ ಹಾಲವರ್ತಿ ಗ್ರಾಮದಲ್ಲಿ ಕೊಪ್ಪಳ ಕಾರ್ಖಾನೆ ಬಾಧಿತ ರೈತ ಸಂಘದ ಗ್ರಾಮ ಘಟಕ ಉದ್ಘಾಟನೆ, ಹಸಿರು ಶಾಲು ದೀಕ್ಷೆ, ಬೋರ್ಡ್ ಅನಾವರಣ, ಪದಾಧಿಕಾರಿಗಳಿಗೆ ಪದಗ್ರಹಣ ಹಾಗೂ ಪ್ರಮಾಣ ವಚನ ಬೋಧನೆ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.
ಇಲ್ಲಿನ ನಗರಸಭೆ ಮುಂಭಾಗದಲ್ಲಿ ನಡೆಯುತ್ತಿರುವ ಕಾರ್ಖಾನೆ ವಿರೋಧಿ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ ೧೫೪ ದಿನ ಪೂರೈಸಿದ್ದು, ಹೋರಾಟಕ್ಕೆ ಏಕ ರೂಪ ಮತ್ತು ತೀವ್ರಸ್ವರೂಪ ನೀಡಲು ೨೨ ಗ್ರಾಮಗಳಲ್ಲಿ ರೈತ ಸಂಘ ಸ್ಥಾಪಿಸುವ ಕಾರ್ಯ ನಡೆದಿದೆ.
ಹಾಲವರ್ತಿ ಗ್ರಾಮದಲ್ಲಿ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದ ಅಲ್ಲಮಪ್ರಭು ಬೆಟ್ಟದೂರು ಅವರು, ರೈತರು ಹೆದರದೇ ಜೀವಿಸುವ ಮತ್ತು ಪಟ್ಟಭದ್ರರನ್ನು ಎದುರಿಸುವ ಶಕ್ತಿ ಮೈಗೂಡಿಸಿಕೊಂಡು ಸಾಗಿರಿ, ಜಂಟಿ ಕ್ರಿಯಾ ವೇದಿಕೆ ಸದಾ ನಿಮ್ಮ ಜೊತೆಗೆ ನಿಲ್ಲುತ್ತದೆ, ಕಂಪನಿಗಳ ಗೂಂಡಾಗಿರಿ, ದಬ್ಬಾಳಿಕೆ, ಕಪಟತನ ಇನ್ನು ಮುಂದೆ ನಡೆಯುವುದಿಲ್ಲ. ರೈತರು ಜಾತಿ ಮತ ಧರ್ಮ ಮೀರಿ ಒಂದಾಗಿ ನಡೆಯಬೇಕು, ಹೋರಾಟಕ್ಕೆ ಸಹಕಾರ ನೀಡಬೇಕು ಎಂದು ಕರೆ ನೀಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಜಂಟಿ ಕ್ರಿಯಾ ವೇದಿಕೆ ಸಂಚಾಲಕ ಮಂಜುನಾಥ ಜಿ. ಗೊಂಡಬಾಳ, ಕಂಪನಿಯ ಏಜಂಟರು ಒಂದೆಡೆ ಹೋರಾಟದ ಸೋಗು ಹಾಕಿದ್ದಾರೆ, ಅವರಿಗೆ ಕಾರ್ಖಾನೆಗಳು ಹಣ ಕೊಟ್ಟು ಹೋರಾಟ ಮಾಡಿಸುತ್ತಿರುವದಕ್ಕೆ ನಮ್ಮ ಬಳಿ ಸಾಕ್ಷಿ ಇದ್ದು ಅವಶ್ಯಕತೆ ಬಿದ್ದಾಗ ಸಾರ್ವಜನಿಕವಾಗಿ ಬಿಡುಗಡೆ ಮಾಡುತ್ತೇವೆ, ಅಂತಹ ಕೆಲಸಗಳಲ್ಲಿ ಯಾರೆಲ್ಲಾ ಇದಾರೆ ಎಂಬ ಮಾಹಿತಿ ಸಹ ಇದೆ.
ಜನಚಳುವಳಿಯ ಮುಂದೆ ಯಾವುದೇ ಶಕ್ತಿ ನಿಲ್ಲುವುದಿಲ್ಲ, ಅಂತಹ ಚಳುವಳಿ ಮುರಿಯುವ ಕೆಲಸ ಮಾಡುತ್ತಾರೆ, ಆದರೆ ಅತ್ಯಂತ ಪ್ರಾಮಾಣಿಕ ನಿಷ್ಠೆ ಮತ್ತು ಶ್ರದ್ಧೆ ಇರುವ ಹೋರಾಟ ಆರನೇ ತಿಂಗಳಲ್ಲಿ ಮುನ್ನಡೆದಿದೆ ಎಂದರೆ ಅದೇನು ಸಣ್ಣ ಸಂಗತಿ ಅಲ್ಲ, ಅಲ್ಲಿಯೇ ಘೋರಿ ಕಟ್ಟುವ ಸಂದರ್ಭ ಬಂದರೂ ಹೆದರುವ ಪ್ರಶ್ನೆ ಇಲ್ಲ, ನಮ್ಮ ಜೀವಿಸುವ ಹಕ್ಕನ್ನು ಕಿತ್ತುಕೊಳ್ಳುವ ಶಕ್ತಿ ಯಾರಿಗೂ ಇಲ್ಲ, ಎಂ. ಬಿ. ಪಾಟೀಲರು ಬೇಕಾದರೆ ಎಲ್ಲಾ ಕಾರ್ಖಾನೆಗಳನ್ನು ಬಿಜಾಪುರ, ಬಾಗಲಕೋಟೆಗೆ ತೆಗೆದುಕೊಂಡು ಹೋಗಿ ಅಲ್ಲಿನ ಕೃಷ್ಣಾ ನದಿಯನ್ನು ಕಾರ್ಖಾನೆಗಳಿಗೆ ಬಿಟ್ಟುಕೊಡಲಿ ನಮ್ಮದೇನು ಅಭ್ಯಂತರವಿಲ್ಲ, ನಾವು ಕೇವಲ ಬಲ್ಡೋಟ ಎನ್ನುತ್ತಿಲ್ಲ ಉಳಿದ ಸಮಸ್ಯಾತ್ಮಕವಾಗಿರುವ ಎಲ್ಲಾ ಕಾರ್ಖಾನೆ ವಿರುದ್ಧವೂ ಹೋರಾಟ ಮಾಡುತ್ತಿದ್ದೇವೆ.
ಎಲ್ಲಾ ಕಾರ್ಖಾನೆಗಳು ವಶಪಡಿಸಿಕೊಂಡ ಹೆಚ್ಷುವರಿ ಭೂಮಿಯನ್ನು ರೈತರಿಗೆ ಮರಳಿ ಕೊಡಿಸುತ್ತೇವೆ, ಹೋರಾಟಗಾರರ ಮೇಲೆ ಸುಳ್ಳು ಆರೋಪ ಮಾಡಕೂಡದು ಮತ್ತು ಅದನ್ನೇ ಮಾಧ್ಯಮ ಪ್ರಕಟಿಸಬಾರದು ಎಂದು ವಿನಂತಿಸುವೆ, ಸರಕಾರದ ಕಣ್ಣು ತೆರೆಸಿರುವ ಶಾಸಕರುಗಳಿಗೆ ಧನ್ಯವಾದ ಸಲ್ಲಿಸುವ ಜೊತೆಗೆ ಶೀಘ್ರ ಸಿಎಂ ಶಾಶ್ವತವಾಗಿ ಕಾರ್ಖಾನೆ ಮುಚ್ಚಿಸಲಿ ಎಂದು ಮನವಿ ಮಾಡಿದರು.
ಕಾರ್ಖಾನೆಗೆ ಭೂಮಿ ಕಳೆದುಕೊಂಡ ರೈತ, ವಕೀಲ ರಾಜು ಬಾಕಳೆ ಮಾತನಾಡಿ, ಕಾರ್ಖಾನೆ ನೇರವಾಗಿ, ಸರಕಾರ ಮತ್ತು ಏಜಂಟರ ಮೂಲಕ ಭೂಮಿ ಕಿತ್ತುಕೊಂಡಿದೆ, ರೈತರು ಕೊಟ್ಟಿಲ್ಲ, ಈಗ ೨೦ ವರ್ಷ ಕಾರ್ಖಾನೆ ಸ್ಥಾಪನೆ ಮಾಡಲು ಮುಂದಾಗದೇ ಇರುವದರಿಂದ ಕೂಡಲೇ ಭೂಮಿ ಸರಕಾರಕ್ಕೆ ಮರಳಿಸಿ ಊರು ಬಿಡಲಿ, ಸರಕಾರ ಸದರಿ ಭೂಮಿಯನ್ನು ಆಯಾ ರೈತರಿಗೆ ಕೊಡಲಿ, ದೇಶಕ್ಕೆ ಪಶ್ಚಿಮ ಬಂಗಾಳದ ಜನಪರ ಕಾಳಜಿ ಮಾದರಿ ಆಗಲಿ ಎಂದರು.
ಮತ್ತೋರ್ವ ಜಂಟಿ ಕ್ರಿಯಾ ವೇದಿಕೆ ಸಂಚಾಲಕ ಮಲ್ಲಿಕಾರ್ಜುನ ಬಿ. ಗೋನಾಳ ಮಾತನಾಡಿ, ತುಂಗಭದ್ರಾ ನಸಿಯಿಂದ ನಿರಾಶ್ರಿತರಾಗಿರುವ ಭಾಗ್ಯನಗರದ ಜನರನ್ನು ಮತ್ತೊಮ್ಮೆ ಪುನರ್ವಸತಿ ಮಾಡಲು ಸಂವಿಧಾನವೇ ಒಪುö್ಪವುದಿಲ್ಲ ಆದ್ದರಿಂದ ಏನೇ ಆಗಲಿ ಕಾರ್ಖಾನೆ ಇಲ್ಲಿಂದ ತೊಲಗಬೇಕು, ನಮಗೆ ಯಾವ ಕಾರ್ಖಾನೆ ಎಂಬ ಬೇಧವಿಲ್ಲ ಸಮಸ್ಯೆ ಅಷ್ಟೇ ಮುಖ್ಯ, ಕಾರ್ಖಾನೆ ಪರವಾಗಿ ಬಂದು ಗ್ರಾಮಗಳನ್ನು ಸ್ಥಳಾಂತರ ಮಾಡಿ ಎನ್ನುವ ಜನಪ್ರತಿನಿಧಿಗಳನ್ನು ಊರಲ್ಲಿ ಬಿಟ್ಟುಜೊಳ್ಳಬಾರದು, ನಮ್ಮದು ರಾಜಿ ಇಲ್ಲದ ರೈತ ಸಂಘವಾಗಿದ್ದು ಇತಿಹಾಸವನ್ನು ಬರೆಯುವ ಕಾರ್ಯ ಮಾಡುತ್ತೇವೆ, ನಮ್ಮ ಹೋರಾಟ ದೇಶಕ್ಕೆ ಮಾದರಿಯಾಗಿದೆ ಎಂದರು. ಮಹಿಳಾ ಮುಖಂಡರಾದ ಸರೋಜಾ ಬಾಕಳೆ, ಮಹಿಳಾ ಮುಖಂಡರಾದ ಜ್ಯೋತಿ ಎಂ. ಗೊಂಡಬಾಳ, ಅನೇಕ ರೈತರು ಮಾತನಾಡಿದರು.
ಪದಾಧಿಕಾರಿಗಳ ಆಯ್ಕೆ : ಗೌರವಾಧ್ಯಕ್ಷರಾಗಿ ಗವಿಸಿದ್ದರಡ್ಡಿ ರಡ್ಡೇರ, ಅಧ್ಯಕ್ಷರಾಗಿ ಮಾರ್ಕಾಂಡೇಯ ಹಿರೇಮಠ, ಉಪಾಧ್ಯಕ್ಷರಾಗಿ ಪರಮೇಶ ಕುರಗಡ್ಡಿ, ಪ್ರಧಾನ ಕಾರ್ಯದರ್ಶಿ ಮಂಜುನಾಥ ಕೆಂಚನಗೌಡ್ರ, ಸಹಕಾರ್ಯದರ್ಶಿ ಬಸವರಾಜ ಮೈನಳ್ಳಿ, ಸಂಘಟನಾ ಕಾರ್ಯದರ್ಶಿ ಎಂ. ಹನುಮಂತ, ಖಜಾಂಚಿ ನಾಗರಾಜ ಕಟ್ಟಿಮನಿ, ಸಂಘಟನಾ ಕಾರ್ಯದರ್ಶಿ ಶಿವು ಕೌದಿ, ಕಾರ್ಯಕಾರಿ ಸಮಿತಿ ಸದಸ್ಯರಾದ ಹನುಮಪ್ಪ ಹೊಸಮನಿ, ಮುತ್ತು ಮಾಲಿಗೌಡ್ರ, ಗವಿಸಿದ್ದಪ್ಪ ಗೊರವರ, ಸುರೇಶ ಕಿನ್ನಾಳ ಸರ್ವಾನುಮತದಿಂದ ಆಯ್ಕೆಯಾದರು.
ವೇದಿಕೆ ಮೇಲೆ ಬಸಾಪುರ ಮೂಕಪ್ಪ ಮೇಸ್ತಿç, ಯಮನೂರಪ್ಪ ಹಾಲಳ್ಳಿ, ಹನುಮಪ್ಪ ತಳವಾರ, ಸಣ್ಣಹನುಮಪ್ಪ ಗಿಣಿಗೇರಿ, ಮಂಗಳೇಶ ರಾಠೋಡ್, ಕುಣಿಕೇರಿಯ ಚನ್ನವೀರಯ್ಯ ಹಿರೇಮಠ, ಹುಲಿಗೇಶ ಭೋವಿ, ಜಂಟಿ ಕ್ರಿಯಾ ವೇದಿಕೆಯ ಮಹಾದೇವಪ್ಪ ಮಾವಿನಮಡು, ವೈ. ಸತ್ಯನಾರಾಯಣ, ಹಾಲವರ್ತಿ ಗ್ರಾಮದ ಗವಿರಾಜ ಎಂ. ಗೊರವರ, ಪರಶುರಾಮ ಕಂಕಿ, ದೇವಪ್ಪ ಶಿರಿಗೇರಿ, ಶಿವಪ್ಪ ಗೊರವರ, ಮಾಬುಸಾಬ ಪಟ್ವಾರಿ, ಶಂಕ್ರಪ್ಪ ಹಳ್ಳಿ, ವಿಕ್ರಮ್ ಈಳಗೇರ, ದೇವಪ್ಪ ಗೊರವರ, ಗವಿಸಿದ್ದಪ್ಪ ನಡಗುಡ್ತಿ, ಶಿವು ಬೂದಿಹಾಳ, ಗುಂಡಪ್ಪ ಗರಳ್ಳಿ, ಅಶೋಕ ಕೊಡ್ತಿ, ಸುರೇಶ ಹಲಗೇರಿ, ಹನುಮಂತಪ್ಪ ಹೊಸಮನಿ, ಫಕೀರೇಶ ಗೌಡ್ರು, ನಾಗಪ್ಪ ತಾವರಗೇರಿ, ಪ್ರಕಾಶ ಮೈನಳ್ಳಿ, ಶೇಖಪ್ಪ ನಡಗುಡ್ತಿ, ಮಾರುತಿ ಮೇಟಿ, ಶ್ರೀಕಾಂತ್ ಮುರಡಿ, ಮುಸ್ತಫಾ ಪಟ್ವಾರಿ, ಯಲ್ಲಪ್ಪ ಕೌದಿ, ನಾಗರಾಜ ಅಜ್ಜಿ, ಶಿವಪ್ಪ ಕೌದಿ, ಬಸಯ್ಯ ಹಿರೇಮಠ, ಕೃಷ್ಣ ಅಜ್ಜಿ, ಮಹಾಂತೇಶ ಮೇಟಿ, ಹನುಮಪ್ಪ ನಾಯಕರು, ರಾಮಪ್ಪ ಗರ‍್ರ, ನೀಲಪ್ಪ ಮೇಟಿ, ದಾನಪ್ಪ ಪಾಟೀಲ್, ಶ್ರೀಕಾಂತ್ ಗೊರವರ, ನಿಂಗಪ್ಪ ಚಿಲವಾಡಗಿ, ಶರಣಪ್ಪ ರಡ್ಡೇರ, ಹೇಮಣ್ಣ ತಳವಾರ, ಶ್ರೀನಿವಾಸ ಈಳಿಗೇರ, ದೇವಪ್ಪ ಕೊಡ್ತಿ, ಸಣ್ಣಹನುಮಪ್ಪ ಕಿನ್ನಾಳ, ಮಂಜುನಾಥ ಕಿನ್ನಾಳ, ಮಂಜುನಾಥ ಹೊಸಮನಿ, ಜಡಿಯಪ್ಪ ಗರ‍್ರ, ಬಾಳಪ್ಪ ಹೊಸಳ್ಳಿ, ಗವಿಸಿದ್ದಯ್ಯ ಹಿರೇಮಠ, ಸೂರ್ಯಪ್ಪ ಹಲಗೇರಿ, ಜಡಿಯಪ್ಪ ಕೆಂಚನಗೌಡ್ರು, ನಾಗಪ್ಪ ಶಿರಗೇರಿ, ಮಲ್ಲಿಕಾರ್ಜುನ ಶಿರಗೇರಿ, ಶಿವಾನಂದ ಗರ‍್ರ, ಹನುಮಪ್ಪ ಕೆಂಚನಗೌಡ್ರು, ಶಿವಪ್ಪ ಗೊರವರ, ರಾಮಕೃಷ್ಣ ಬಳ್ಳಾರಿ, ರಂಗಪ್ಪ ಕೌದಿ, ಮಲ್ಲಪ್ಪ ಹೊಸಮನಿ ಇದ್ದರು.
