Take steps to prevent children from swimming in agricultural ponds.

ಕೃಷಿ ಹೊಂಡಗಳಲ್ಲಿ ಮಕ್ಕಳು ಈಜದಂತೆ ಕ್ರಮ ವಹಿಸಿ
ಗಂಗಾವತಿ: ಗ್ರಾಮೀಣ ಭಾಗದಲ್ಲಿ ಮಕ್ಕಳು ಕೃಷಿ ಹೊಂಡದಲ್ಲಿ ಮುಳುಗಿ ಸಾವನ್ನಪ್ಪುವ ಘಟನೆಗಳು ಹೆಚ್ಚಾಗುತ್ತಿದ್ದು ಇದಕ್ಕೆ ಕಡಿ ವಾಣ ಹಾಕಲು ಜಮೀನಿನ ಮಾಲೀಕರು ತಮ್ಮ ಕೃಷಿ ಹೊಂಡಗಳಿಗೆ ಬೇಲಿ ಹಾಕಿಸಿ ಮಕ್ಕಳ ಸಾವನ್ನು ತಪ್ಪಿಸಬೇಕು ಎಂದು ಪಬ್ಲಿಕ್ ಪವರ್ ಹೋರಾಟ ಸಮಿತಿಯ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಡಾ.ಆರ್.ಬಿ.ಪಾಟೀಲ್ ವಕೀಲರು ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೇಸಿಗೆ ಪ್ರಾರಂಭವಾಗಿದ್ದು ಮಕ್ಕಳು ಪರೀಕ್ಷೆ ಬರೆದು ಬೇಸಿಗೆ ರಜೆ ಕಳೆಯಲು ಅಜ್ಜಿ ತಾತನ ಮನೆ ಎಂದು ಗ್ರಾಮೀಣ ಭಾಗಗಳಿಗೆ ತೆರಳುತ್ತಾರೆ. ಈ ವೇಳೆ ಈಜಲು ತೆರಳುವ ಮಕ್ಕಳು ಕೃಷಿ ಹೊಂಡಗಳಲ್ಲಿ ಮುಳುಗಿ ಸಾವನ್ನಪ್ಪುತ್ತಿರುವ ವರದಿಗಳು ರಾಜ್ಯದಲ್ಲಿ ಹೆಚ್ಚಾಗುತ್ತಿವೆ. ಆದ್ದರಿಂದ ಸಂಬಂಧಪಟ್ಟ ಕೃಷಿ ಅಧಿಕಾರಿಗಳು, ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ತಮ್ಮ ವ್ಯಾಪ್ತಿಯ ಕೃಷಿ ಹೊಂಡಗಳಿಗೆ ಕಡ್ಡಾಯವಾಗಿ ಬೇಲಿ ಹಾಕಿಸಿದರೆ ಸಾವಿನ ಪ್ರಮಾಣ ತಗ್ಗಿಸಬಹುದು.ಮನೆ ಯಲ್ಲಿ ಪೋಷಕರು ಕೂಡ ಮಕ್ಕಳನ್ನು ಈಜಲು ಕಳುಹಿಸು ವಾಗ ಎಚ್ಚರಿಕೆ ವಹಿಸಬೇಕು. ಈಜು ಕಲಿಸುವ ಈಜು ಕೊಳಗಳಲ್ಲಿ ಮಕ್ಕಳಿಗೆ ಈಜು ಕಲಿಸಬಹುದು. ಅಲ್ಲಿ ಮಕ್ಕಳ ರಕ್ಷಣೆಯೊಂದಿಗೆ ಈಜು ಕಲಿಸುತ್ತಾರೆ ಎಂದರು.
