
ದೇಶವೇ ಮೊದಲೆಂದ ಭಾರತೀಯ ಯುವಕರ ಸ್ಫೂರ್ತಿಯ ಚಿಲುಮೆ ಛತ್ರಪತಿ ಶಿವಾಜಿ : ಪ್ರೊ. ಕರಿಗೂಳಿ
Chhatrapati Shivaji is the source of inspiration for Indian youth as the nation comes first: Prof. Kariguli

ಗಂಗಾವತಿ ತಾಲೂಕಿನ ಶ್ರೀರಾಮನಗರದ ಚಿಲುಕೂರಿ ನಾಗೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ದಿನಾಂಕ 19-02-2026 ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯನ್ನು ದೇಶಪ್ರೇಮಿ ರಾಷ್ಟ್ರೀಯ ಚೈತನ್ಯದೊಂದಿಗೆ ಆಚರಿಸಲಾಯಿತು.
ಕಾರ್ಯಕ್ರಮದ ಪ್ರಾಸ್ತಾವಿಕವಾಗಿ ಇತಿಹಾಸ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಶ್ರೀ ಶಂಕ್ರಪ್ಪ ಎಂ ಅವರು ಮಾತನಾಡಿ, ಛತ್ರಪತಿ ಶಿವಾಜಿಯವರು ಕೇವಲ ಒಬ್ಬ ಯೋಧನಲ್ಲ, ರಾಷ್ಟ್ರದ ಪುನರುಜ್ಜೀವನದ ಸಂಕೇತವಾಗಿದ್ದರು ಎಂದು ತಿಳಿಸಿದರು. “ಸ್ವರಾಜ್ಯವೆಂಬ ಕನಸು ಕಾಣಲು ಧೈರ್ಯ ಬೇಕು; ಆದರೆ ಅದನ್ನು ಸಾಧಿಸಲು ಶಿವಾಜಿಯಂತಹ ಆತ್ಮಶಕ್ತಿ ಬೇಕು” ಎಂದು ಉಲ್ಲೇಖಿಸುತ್ತಾ ಮಾತನಾಡಿದ ಅವರು
ಗೆರಿಲ್ಲಾ ಯುದ್ಧತಂತ್ರ ,ಕೋಟೆ ನಿರ್ಮಾಣ ಮತ್ತು ಸಮುದ್ರ ನೌಕಾಪಡೆಯ ಸ್ಥಾಪನೆ, ಅಷ್ಟಪ್ರಧಾನ ಮಂಡಳಿ ವ್ಯವಸ್ಥೆ ಮುಂತಾದವುಗಳ ಮೂಲಕ ಶಿವಾಜಿಯವರು ಆಡಳಿತದ ಆಧುನಿಕ ದೃಷ್ಟಿಕೋನವನ್ನು ರೂಪಿಸಿದರು ಎಂದು ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಶ್ರೀ ಕರಿಗೂಳಿ ಅವರು ಮಾತನಾಡಿ, ಛತ್ರಪತಿ ಶಿವಾಜಿಯವರ ಸಮಾಧಿ ಸ್ಥಳವನ್ನು ಹಾಗೂ ಮುಚ್ಚಲ್ಪಟ್ಟ ಇತಿಹಾಸವನ್ನು ಶೋಧಿಸಿ ಹೊರತೆಗೆದು ಪ್ರಪ್ರಥಮ ಬಾರಿಗೆ ಶಿವಾಜಿಯವರ ಜಯಂತ್ಯೋತ್ಸವವನ್ನು ಆಚರಣೆ ಮಾಡಿ, ನೈಜ ಇತಿಹಾಸವನ್ನು ಜಗತ್ತಿಗೆ ಪರಿಚಯ ಮಾಡಿರುವ ಕೀರ್ತಿಯು ಸಾಮಾಜಿಕ ಪರಿವರ್ತನೆಯ ಪಿತಾಮಹರಾದ ಮಹಾತ್ಮ ಜ್ಯೋತಿರಾವ್ ಫುಲೆಯವರಿಗೆ ಸಲ್ಲುತ್ತದೆ ಎಂದರು, ಶಿವಾಜಿ ಮಹಾರಾಜರು ಧರ್ಮಸಹಿಷ್ಣುತೆ ಮತ್ತು ಸಾಮಾಜಿಕ ನ್ಯಾಯದ ಪ್ರತೀಕವಾಗಿದ್ದರು,ತಾಯ್ತನಕ್ಕೆ ಅವರು ನೀಡಿದ ಗೌರವ, ಯಾರಿಗೂ ತಲೆತಗ್ಗಿಸದೆ ತಲೆಯೆತ್ತಿ ನಿಲ್ಲಿರಿ ಎಂಬ ಅವರ ಸ್ವಾಭಿಮಾನಯುಕ್ತ ಕರೆ, ದೇಶವೇ ಮೊದಲು ಎಂಬ ಅವರ ಗುಣಗಳು ಭಾರತದ ಎಲ್ಲಾ ಯುವಕರಿಗೆ ಸದಾ ಸ್ಫೂರ್ತಿ ಎಂದರು ತಿಳಿಸಿದರು.
‘ಛತ್ರಪತಿ ಎಂದರೆ ರಕ್ಷಕ’ ಹಾಗೆಯೇ
ಇಂದಿನ ಯುವಕರು ಸಾoವಿಧಾನಿಕ ಭಾರತದಲ್ಲಿ ಶಿವಾಜಿಯ ಆದರ್ಶಗಳನ್ನು ರೂಡಿಸಿಕೊಂಡು ‘ಸಂವಿಧಾನ- ಭಾರತದ ರಕ್ಷಕರಾಗಿ’ ದೇಶದ ಏಳಿಗೆಗೆ ಕಂಕಣಬದ್ಧರಾಗಿ,
ಶಿವಾಜಿ ಜಯಂತಿ ಆಚರಣೆ ಕೇವಲ ಸ್ಮರಣೆ ಮಾತ್ರವಲ್ಲ, ಅದು ಯುವಜನತೆಗೆ ಆತ್ಮಗೌರವ, ನಾಯಕತ್ವ ಮತ್ತು ರಾಷ್ಟ್ರಪ್ರೇಮದ ಪಾಠವಾಗಿದೆ ಎಂದು ಅವರು ಸಮಾರೋಪಿಸಿದರು.
ಕಾಲೇಜಿನ ರೋವರ್ಸ್ & ರೇಂಜರ್ಸ್ ಘಟಕದ & ಐಕ್ಯೂಎಸಿ ಸಹಯೋಗದಲ್ಲಿ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.
ಕಾರ್ಯಕ್ರಮದಲ್ಲಿ ಅಧ್ಯಾಪಕಾರದ, ಡಾ.ಸರಪರಾಜ್ ಅಹಮದ್ ವೀರೇಶ್, ಐಕ್ಯೂಎಸಿ ಸಂಚಾಲಕ ರವಿಕುಮಾರ, ಡಾ. ಶಶಿಕುಮಾರ, ವಿರೂಪಾಕ್ಷ ಕೆ, ಉಪನ್ಯಾಸಕರಾದ ವೆಂಕಟರಾಜು, ಈಶಪ್ಪ,ಅಯ್ಯಪ್ಪ, ಬಾಲಚಂದ್ರ ಸಾಯಿಕುಮಾರ, ಪ್ರವೀಣ್ ಕುಮಾರ್, ಪೆನಜಾ, ಮಲ್ಲಯ್ಯ, ಸುರೇಶ ಗೌಡ, ಚೆನ್ನಮಲ್ಲ, ಸಹಾಯಕ ಸಿಬ್ಬಂದಿ, ಶಾಂತಿ, ಚಿನ್ನವರಪ್ರಸಾದ್, ಶರಣಬಸವ ಹಾಗೂ ಕಾಲೇಜಿನ ಎಲ್ಲಾ ತರಗತಿಗಳ ವಿದ್ಯಾರ್ಥಿಗಳು ಹಾಜರಿದ್ದರು.



