
ವೈದ್ಯನ ವಿರುದ್ದ ಕ್ರಮಕ್ಕೆ ಮ್ಯಾಗಳಮನಿ ಒತ್ತಾಯ.
Magalamani demands action against the doctor.
ಗಂಗಾವತಿ :1-ನಗರದ ತಹಶೀಲ್ದಾರ್ ಕಚೇರಿ ಮುಂದೆ ಸರ್ವಾOಗೀಣ ಅಭಿವೃದ್ಧಿ ಹೋರಾಟ ಸಮಿತಿಯ ಸದಸ್ಯರು ಸೋಮವಾರ ಪ್ರತಿಭಟನೆ ನಡೆಸಿ ಶಿರಸ್ತೇದಾರ್ ರವಿಕುಮಾರ್ ನಾಯ್ಕವಾಡಿ ಗೆ ಮನವಿ ಸಲ್ಲಿಸಿದರು. ಜಿಲ್ಲಾ ಅಧ್ಯಕ್ಷ ಬಸವರಾಜ ಮ್ಯಾಗಳಮನಿ ಮಾತನಾಡಿ ಗಂಗಾವತಿ ನಗರದಲ್ಲಿ ಆಶಾ ಕಾಯ೯ಕತೆ೯ಯಾಗಿರುವ ಲಲಿತಾ ಅವರು ಕಿಡ್ನಿ ಸ್ಟೋನ್ ಸಮಸ್ಯೆಯಿಂದ ಬಳಲುತ್ತಿದ್ದರು. ಸರಕಾರಿ ಉಪವಭಾಗದ ಆಸ್ಪತ್ರೆಯಲ್ಲಿ ತಜ್ಞರು ಕೊರತೆಯಿಂದ ನಗರದ ಮಲ್ಲಿಕಾಜು೯ನ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಹೋಗಿದ್ದಾರೆ. ಆಸ್ಪತ್ರೆಯವರು ಆಯುಷ್ಮಾನ ಭಾರತ ಯೋಜನೆಯ ಅಡಿಯಲ್ಲಿ ಶಸ್ತ್ರ ಚಿಕಿತ್ಸೆ ಮಾಡಲು ರೋಗಿಯನ್ನು ದಾಖಲು ಮಾಡಿಕೊಂಡು, ಸೆ.07, 2024 ರಂದು ಸಂಜೆ 5 ಗಂಟೆಗೆ ಶಸ್ತ್ರ ಚಿಕಿತ್ಸೆ ಮಾಡಿದ್ದಾರೆ. ದಾಖಲು ಮಾಡಿಕೊಳ್ಳುವ ಸಮಯದಲ್ಲಿ ಅಸ್ಪತ್ರೆಯ ಸಿಬ್ಬಂದಿಗಳು ರೋಗಿಯಿಂದ 5,000 ಪಡೆದುಕೊಂಡಿದ್ದಾರೆ. ಶಸ್ತ್ರ ಚಿಕಿತ್ಸೆಯ ನಂತರ ಶಸ್ತ್ರ ಚಿಕಿತ್ಸೆಗೆ ಬಳಸುವ ಮೆಡಿಷನ್ ಗಳನ್ನು ಖರೀದಿ ಮಾಡಲಾಗಿದೆ ಎಂದು 6,000 ಸಾವಿರ ರೂಗಳನ್ನು ಪಡೆದುಕೊಂಡಿದ್ದಾರೆ. ಕೊನೆಯದಾಗಿ ಮನೆಗೆ ಹೋಗುವ ಸಮಯದಲ್ಲಿ ಬಾಕಿ ಬಿಲ್ ಎಂದು 5,000 ರೂಗಳನ್ನು ಪಡೆದುಕೊಂಡಿದ್ದಾರೆ. ಒಟ್ಟು 3 ಹಂತದಲ್ಲಿ 16,000 ರೂಗಳನ್ನು ಪಡೆದುಕೊಂಡು ಆಸ್ಪತ್ರೆಯವರು ಯಾವುದೇ ರೀತಿಯ ಬಿಲ್ ನೀಡದೆ ಕಳುಹಿಸಿದ್ದಾರೆ. ಆಯುಷ್ಮಾನ ಭಾರತ ಯೋಜನೆಯಲ್ಲಿ ಲಂಚ ಪಡೆದುಕೊಂಡಿದ್ದಾರೆOದು ಆರೋಪಿಸಿದ್ದಾರೆ ಈ ಕುರಿತು ಜಿಲ್ಲಾಧಿಕಾರಿಗಳಿಗೆ ಸಂಬಂದಿಸಿದವರು ದೂರು ನೀಡಿರುವುದರಿಂದ ಆಸ್ಪತ್ರೆಯ ವೈದ್ಯ, ಸಿಬ್ಬಂದಿಯನ್ನು ಆಗಿನ ಡಿಸಿ ನಳೀನ್ ಅತುಲ್ ಅವರು ವಿಚಾರಣೆಗೆ ಕರೆಸಿದ್ದಾರೆ. ಸತ್ಯ ಒಪ್ಪಿಕೊಳ್ಳದೆ ಸುಳ್ಳು ಎಂದು ವಾದಿಸಿದ್ದಾರೆ. ಸತತ ಹೀಗೆ 4 ಬಾರಿ ವಿಚಾರಣೆಯಲ್ಲೂ ಸತ್ಯ ಒಪ್ಪಿಕೊಳ್ಳದೆ ಆಶಾ ಕಾಯ೯ಕತೆ೯ ವಿರುದ್ಧ ವಾದ ಮಾಡಿ ಹೋಗಿದ್ದಾರೆ. ಆಶಾ ಕಾಯ೯ಕತೆ೯ ಹೋರಾಟ ಕೈ ಬಿಡದೆ ಒಂದು ವಷ೯ಗಳ ಕಾಲ ಹೋರಾಟ ನಡೆಸಿದ್ದಾರೆ. ಕಳೆದ ವಾರವಷ್ಟೇ ಪ್ರಸ್ತುತ ಇರುವ ಡಿಸಿಯವರ ಗಮನಕ್ಕೆ ಪ್ರಕರಣ ಬಂದಿದೆ. ಪುನ: ಆಸ್ಪತ್ರೆಯ ಸಿಬ್ಬಂದಿ ಹಾಗೂ ವೈದ್ಯನನ್ನು 5ನೇ ಬಾರಿ ವಿಚಾರಣೆಗೆ ಕರೆಸಲಾಗಿದೆ. ಆಗಲೂ ವೈದ್ಯ, ಸಿಬ್ಬಂದಿ ಸತ್ಯ ಒಪ್ಪಿಕೊಳ್ಳದೆ ವಾದ ಮಾಡಿದ್ದಾರೆ. ಡಿಸಿ ಸುರೇಶ ಹಿಟ್ನಾಳ ಅವರು ಇಬ್ಬರ ಮೇಲೂ ಪ್ರಕರಣ ದಾಖಲು ಮಾಡಿ, ತನಿಖೆ ನಡೆಯಲು ಸ್ಥಳದಲ್ಲಿಯೇ ಪೊಲೀಸರಿಗೆ ಮಾಹಿತಿ ನೀಡಲು ಮುಂದಾಗಿದ್ದಾರೆ. ಭಯಗೊಂಡು ಆಸ್ಪತ್ರೆಯ ಸಿಬ್ಬಂದಿಯು 16,000 ಪಡೆದುಕೊಂಡಿರುವುದು ಸತ್ಯ ಎಂದು ಜಿಲ್ಲಾಧಿಕಾರಿಗಳ ಮುಂದೆ ಒಪ್ಪಿಕೊಂಡಿದ್ದಾರೆ. ಕೂಡಲೇ ವಾಪಸ್ಸು ಹಣ ನೀಡಲು ಡಿಸಿ ಸೂಚಿಸಿದ ಹಿನ್ನಲೆಯಲ್ಲಿ ಆಸ್ಪತ್ರೆಯ ವೈದ್ಯರು 16,000 ರೂಗಳ ಹಣವನ್ನು ಚೆಕ್ ಮೂಲಕ ನವೆಂಬರ 28,2025 ರಂದು ವಾಪಸ್ಸು ಆಶಾ ಕಾಯ೯ಕತೆ೯ಗೆ ನೀಡಿದ್ದಾರೆ.
ಜಿಲ್ಲೆಯಲ್ಲಿ ಆಯುಷ್ಮಾನ ಭಾರತ ಯೋಜನೆಯನ್ನು ದುರುಪಯೋಗ ಮಾಡಿಕೊಳ್ಳುತ್ತಿರುವ ಆಸ್ಪತ್ರೆಗಳ ಸಂಖ್ಯೆಗೆ ಏನು ಕಡಿಮೆಯಿಲ್ಲ. ಈ ಯೋಜನೆಯ ಅಡಿಯಲ್ಲಿ ಜಿಲ್ಲೆಯ ಸುಮಾರು 09 ಆಸ್ಪತ್ರೆಗಳು ಕಾಯ೯ನಿವ೯ಹಿಸುತ್ತಿವೆ. ಪ್ರತಿ ದಿನಾ ಒಂದಿಲ್ಲ ಒಂದು ಆಸ್ಪತ್ರೆಯಲ್ಲಿ ಈ ಯೋಜನೆಯಡಿಯಲ್ಲಿ ಶಸ್ತ್ರ ಚಿಕಿತ್ಸೆ ನಡೆಯುತ್ತಿವೆ. ಆದರೆ ಬಡತರಿಂದ ಹಣ ಪಡೆದುಕೊಳ್ಳುವುದನ್ನು ಖಾಸಾಗಿ ಆಸ್ಪತ್ರೆಯವರು ನಿಲ್ಲಿಸಿಲ್ಲ. ಒಂದಿಲ್ಲ ಒಂದು ರೀತಿಯಲ್ಲಿ ಹಣ ಸುಲುಗೆ ಮಾಡುವ ಘಟನೆಗಳು ಸುಮಾರು ನಡೆದಿವೆ. ಆದರೆ ಎಷ್ಟೋ ಬಡವರು ಹಣ ನೀಡಿ, ಸುಮ್ಮನಾಗಿದ್ದಾರೆ. ನಿರಂತರ 1 ವಷ೯ದ ಹೋರಾಟದಿಂದ ಈ ಪ್ರಕರಣವನ್ನು ಆಸ್ಪತ್ರೆಯವರು ಒಪ್ಪಿಕೊಂಡಿದ್ದಾರೆ. ಆದರೆ ಆಸ್ಪತ್ರೆಯವರು ಹಣ ಮಾತ್ರ ವಾಪಸ್ಸ್ ನೀಡಿದ್ದಾರೆ. ಹಣ ಸುಲುಗೆ ಮಾಡಿರುವುದು ಅಪರಾಧವಾಗಿದೆ. ಆಸ್ಪತ್ರೆಯ ವಿರುದ್ಧ ಕ್ರಮಕ್ಕೆ ಮುಂದಾಗದೆ ಇರುವುದು ನಾನಾ ಅನುಮಾನಗಳಿಗೆ ಕಾರಣವಾಗಿದೆ ಎಂದು ಮ್ಯಾಗಳಮನಿ ದೂರಿದ್ದಾರೆ.ಮುಂದೆ ಇಂತಹ ಘಟನೆಗಳಿಗೆ ಅವಕಾಶ ನೀಡಬಾರದು ಎನ್ನುವದಾದರೆ ಕೂಡಲೇ ಜಿಲ್ಲಾಧಿಕಾರಿಗಳು ವೈದ್ಯರ ವಿರುದ್ಧ ಕ್ರಮಕ್ಕೆ ಮುಂದಾಗಬೇಕು ಒತ್ತಾಯಿಸಿದ್ದಾರೆ. ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷ ಜಡಿಯಪ್ಪ ಹಂಚಿನಾಳ.ಬಸವರಾಜ್ ನಾಯಕ, ಮೇಘರಾಜ್, ಹನುಮೇಶ್, ಗಣೇಶ್ ಬಿ ಕೆ, ಆನಂದ,ಮಂಜುನಾಥ್,ಮತ್ತಿತರರು ಇದ್ದರು



