Preparatory meeting for the centenary celebrations of Shivaratri Rajendra Mahaswamy.

ವರದಿ: ಬಂಗಾರಪ್ಪ .ಸಿ .
ಹನೂರು : ವಿಶ್ವದಲ್ಲೇ ಭಾರತ ದೇಶವು ಒಂದು ಧಾರ್ಮಿಕ ಸ್ಥಳವಾಗಿದೆ ಎಲ್ಲಾ ಶತಮಾನದಲ್ಲಿ ಒಬ್ಬೋಬ್ಬ ಸಂತರನ್ನು ಕಂಡ ನಾಡು ನಮ್ಮದು .ನಮ್ಮ ಜಿಲ್ಲೆಯಾದ್ಯಂತ ಹತ್ತೊಂಬತ್ತನೆ ಶತಮಾನದಲ್ಲಿ ಶೈಕ್ಷಣಿಕ ಸಂಸ್ಥೆಗಳ ಮೂಲಕ ಕ್ರಾಂತಿಯನ್ನು ಮಾಡಿದ ಸಂಸ್ಥೆಯಾಗಿದೆ ಶ್ರೀ ಸುತ್ತುರು ಮಠದ ಫಲವನ್ನು ನಾವೆಲ್ಲರೂ ಒಂದೊಂದು ರೂಪದಲ್ಲಿ ಪಡೆದಿದ್ದೆವೆ, ಶ್ರೀ ಗಳ ಆಚರಣೆಯನ್ನು ನಮ್ಮ ತಾಲ್ಲೂಕಿನ ನಡೆಯುವ ಮೂಲಕ ಇತಿಹಾಸ ಸೃಷ್ಟಿಮಾಡಲು ಪ್ರಯತ್ನಿಸೋಣ ,ಹನೂರು ಕ್ಷೇತ್ರವು ವಿಸ್ತೀರ್ಣದಲ್ಲಿ ದೊಡ್ಡದಿದೆ ಎಲ್ಲಾ ಭಕ್ತರು ಶಿಸ್ತಿನ ಸಿಪಾಯಿಗಳಾಗಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ಮಾಡೋಣ , ರಾಜೇಂದ್ರ ಶ್ರೀ ಗಳ ಶೈಕ್ಷಣಿಕ ಕ್ರಾಂತಿಗೆ ಸಹಕರಿಸೋಣ ವೆಂದು ಶ್ರೀ ಸಾಲೂರು ಮಠದ ಶಾಂತಮಲ್ಲಿಕಾರ್ಜುನಸ್ವಾಮಿಗಳು ತಿಳಿಸಿದರು.
ಶ್ರೀ ಮತ್ಸುತ್ತರು ಜಗದ್ಗುರು ಶ್ರೀ ವೀರಸಿಂಹಾಸನ ಮಠದ ಶ್ರೀ ಮನ್ ಮಹಾರಾಜ ರಾಜಗುರುತಿಲಕ ಪರಮಪೂಜ್ಯ ಡಾ ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರ. ಶತೋತ್ತರ ದಶಮಾನೋತ್ಸವದ. ಪೂರ್ವಭಾವಿ ಸಭೆಯನ್ನು ಆರ್ ಎಮ್ ಸಿ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು .
ಪೂರ್ವಭಾವಿ ಸಭೆಯಲ್ಲಿ ಶಾಸಕರಾದ ಎಮ್ ಆರ್ ಮಂಜುನಾಥ್ ರವರು ಮಾತನಾಡಿ ಶ್ರೀ ಗಳ ಶತೋತ್ತರ ದಶಮಾನೋತ್ಸವ ಕಾರ್ಯವನ್ನು ಅಯೋಜಿಸುತ್ತಿರುವುದು ನಮ್ಮೇಲ್ಲರ ಸೌಭಾಗ್ಯವಾಗಿದೆ ಈ ಭಾಗಕ್ಕೆ ಶ್ರೀ ಮಠದ ಕೊಡುಗೆ ಅಪಾರವಾಗಿದೆ , ಅವರ ಕೆಲಸವು ಎಲ್ಲಾರಿಗೂ ಮಾಧರಿಯಾಗಿರವಂತಹದು , ಪೂರ್ವಭಾವಿ ಸಭೆಗೆ ಎಲ್ಲಾ ಸಮಾಜದ ಮುಖಂಡರುಗಳು ಬಂದಿರುವುದು ನಮಗೆ ಹೆಮ್ಮೇಯ ವಿಷಯವಾಗಿದೆ , ಶ್ರೀ ಕಾರ್ಯಕ್ರಮದ ದಿನವನ್ನು ಇತಿಹಾಸ ಸೃಷ್ಟಿಯಾಗಬೇಕು , ಈಗಿನ ಸಾಲೂರು ಶ್ರೀ ಗಳ ಆರ್ಶಿವಾದದಿಂದ ಕಾರ್ಯಕ್ರಮವನ್ನು ಯಶಸ್ವಿಯಾಗಿ ಮಾಡೋಣ ನಿಮ್ಮಗಳಿಗೆ ಸಂಪೂರ್ಣವಾಗಿ ನನ್ನ ಸಹಕಾರ ನೀಡುತ್ತೇನೆಂದು ತಿಳಿಸಿದರು.
ಮಾಜಿ ಶಾಸಕರಾದ ಆರ್ ನರೇಂದ್ರರವರು ಮಾತನಾಡಿ ನಮ್ಮ ತಾಲ್ಲೂಕಿಗೆ ಒಂದು ಸುವರ್ಣ ಅವಕಾಶ ಸಿಕ್ಕಿದ್ದು ಎರಡು ದಿನ ಕಾರ್ಯಕ್ರಮವನ್ನು ಮಾಡಲು , ಜೊತೆಯಲ್ಲಿ ಹಿರಿಯರ ಕಿರಿಯರ ಸಮ್ಮುಖದಲ್ಲಿ ಕಾರ್ಯಕ್ರಮಗಳನ್ನು ಭಕ್ತಿ ಶಿಸ್ತಿನಿಂದ ಕೂಡಿದಾಗಿರಲಿ ಜಿಲ್ಲೆಯಲ್ಲಿನ ಮಹದೇಶ್ವರರಿಗೂ ಸುತ್ತುರಿಗೂ ಅವಿನಾಭಾವ ಸಂಬಂಧವಿದೆ ಜಯಂತಿಯು ಜಿಲ್ಲೆಯಲ್ಲಿಯೆ ಮನೆಮಾತಾಗಿರಲಿ ಎಂದರು.
ಪರಿಮಳ ನಾಗಪ್ಪ ಮಾತನಾಡಿ ಪೂಜ್ಯರು ನಮ್ಮ ಹನೂರು ತಾಲ್ಲೂಕು ಜನರಿಗೆ ಬಹಳಷ್ಟು ಉಪಕಾರವಾಗಿದೆ , ನಾಗಪ್ಪರವರ ಒತ್ತಸೆಯಂತೆ ಹಲವಾರು ಶಾಲೆ ತೆರದು ಶಿಕ್ಷಣವನ್ನು ನೀಡಿ ಮೂನ್ನೂರೈವತ್ತುಕ್ಕು ಹೆಚ್ಚು ಸಂಸ್ಥೆಗಳನ್ನು ನಿರ್ಮಿಸಿದ್ದಾರೆ ,ಸುತ್ತುರು ಸಂಸ್ಥೆಗೆ ದೇಶ ವಿದೇಶದಿಂದ ಮಕ್ಕುಳು ಬರ್ತಿದ್ದರು ಎಂದರು.
ಡಾಕ್ಟರ್ ದತ್ತೇಶ್ ಕುಮಾರ್ವ ಮಾತನಾಡಿ ಹನೂರಿನಲ್ಲಿ ಶ್ರೀ ಗಳ ಕಾರ್ಯ ಮಾಡುತ್ತಿರುವುದು ಸಂತೋಷದ ಸಂಗತಿ ಎಲ್ಲಾ ಸಮಾಜದ ಬಂಧುಗಳನ್ನು ಸೇರಿಸಿ ಪೂರ್ವ ಭಾವಿ ಸಭೆಯನ್ನು ಮಾಡುತ್ತಿರುವುದು ಸರಿ ಇದು ಕೇವಲ ಸುತ್ತರು ಕ್ಷೇತ್ರದ ಕಾರ್ಯಕ್ರಮವಾಗದೆ ನಮ್ಮೆಲ್ಲರ ಕಾರ್ಯವೆಂಬಂತೆ ಮಾಡೋಣವೆಂದರು . ಸರ್ಕಾರ ಮಾಡದ ಕೆಲಸವನ್ನು ಶಿಕ್ಷಣ ಕ್ರಾಂತಿಯನ್ನು ಜೆಎಸ್ ಎಸ್ ಸಂಸ್ಥೆಗಳು ಮಾಡಿದ್ದೇವೆ ,ಇಲ್ಲಿನ ಹಲವಾರು ಪ್ರತಿಭೆಗಳು ದೇಶವಿದೇಶಗಳಲ್ಲಿ ಪ್ರಜ್ವಲಿಸುವಂತೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ರೈತ ಮುಖಂಡರಾದ ಅಮ್ಜಾದ್ ಖಾನ್ ರವರು ಮಾತನಾಡಿ ನಮ್ಮ ಸಂಘದಿಂದ ರಕ್ತಧಾನ ಮಾಡುತ್ತೇವೆ ಎಂದು ತಿಳಿಸಿದರು.
ಇದೇ ಸಮಯದಲ್ಲಿ ಮಾಜಿ ಶಾಸಕರಾದ ಜಿ ಎನ್ ನಂಜುಂಡಸ್ವಾಮಿ . ನಿಶಾಂತ್ , ಜನಧ್ವನಿ ವೆಂಕಟೇಶ್ , ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ಮಮ್ತಾಜ್ ,ಪುಟ್ಟುವೀರ ನಾಯಕ , ಜೆಸ್ಸಿಂ,ಎನ್ರಿಚ್ ಮಹಾದೇವಸ್ವಾಮಿ , ರಾಚಯ್ಯ , ಕಿಟ್ಟಪ್ಪ ನಾಯ್ಡ್ , ವೆಂಕಟೆಗೌಡ್ರು , ಪೊನ್ನಾಚಿ ಮಹಾದೇವಸ್ವಾಮಿ , ಟಿಎಪಿಎಮ್ ಸಿ ಅಧ್ಯಕ್ಷರಾದ ಗೊವೀಂದು .ವಿಜಯ್ ಕುಮಾರ್ ,ಮಂಜೇಶ್ , ಪುಟ್ಟಸ್ವಾಮಿ ಕರಿಕಲ್ಲುಮಾಲಿಕರು ,ಬಸವರಾಜಪ್ಪ , ವಿರಶೈವ ಸಂಘದ ತಾಲ್ಲೂಕಿನ ಅಧ್ಯಕ್ಷರಾದ ಸೋಮಶೇಖರ್ , ಉಮೇಶ್ ಸೇರಿದಂತೆ ಇನ್ನಿತರರು ಹಾಜರಿದ್ದರು.
Kalyanasiri Kannada News Live 24×7 | News Karnataka
