Breaking News

ಬೆಳ್ಳೆತೆರೆಗೆ ಬರಲು ಸಜ್ಜಾದ “ಮಾವುತ”

Mavutha" is all set to hit the big screen

Screenshot 2025 10 17 17 14 42 31 E307a3f9df9f380ebaf106e1dc980bb61292266497338533783 1024x792

ಬೆಂಗಳೂರು : ಎಸ್ ಡಿ ಆರ್ ಪ್ರೊಡಕ್ಷನ್ ಅವರ ದ್ವಿತೀಯ ಚಿತ್ರ ‘ಮಾವುತ’ ಚಲನಚಿತ್ರ ಸಂಪೂರ್ಣ ಸಿದ್ದವಾಗಿದ್ದು ಶೀಘ್ರವೇ ತೆರೆಗೆ ಬರಲಿದೆ .
ಹೆಸರೇ ಸೂಚಿಸುವಂತೆ ಮಾವುತ ಹಾಗೂ ಆನೆಯ ಭಾಂದವ್ಯದ ಕಾಡಿನ ಕಥಾ ಹಂದರವುಳ್ಳ ಚಿತ್ರ. ಈ ಚಿತ್ರವು ಈಗಾಗಲೇ ಶಿವಮೊಗ್ಗದ ಸಕ್ರೆಬೈಲು ಅರಣ್ಯ , ಹೊಸ ನಗರದ ಶ್ರೀ ರಾಮಚಂದ್ರಪುರ ಮಠ, ನಿಟ್ಟೂರು ಹಾಗೂ ಸುತ್ತ ಮುತ್ತ ೪೫ ದಿನಗಳ ಕಾಲ ಚಿತ್ರೀಕರಿಸಲಾಗಿದ್ದು ಪೋಸ್ಟ್ ಪ್ರೊಡಕ್ಷನ್ ಕೆಲಸ ಮುಗಿಸಿ ನವೆಂಬರ್ ತಿಂಗಳಲ್ಲಿ ತೆರೆಗೆ ಬರಲು ಸಜ್ಜಾಗಿದ್ದಾನೆ. ಸಕ್ರೆಬೈಲಿನ “ಸಾಗರ್ ” ಎಂಬ ಆನೆಯು ನಟಿಸಿರುವುದು ಈ ಚಿತ್ರದ ವಿಶೇಷ.
ಚಿತ್ರಕ್ಕೆ ಲಕ್ಷ್ಮೀಪತಿ ಬಾಲಾಜಿ ಬಂಡವಾಳ ಹಾಕುವುದರೊಂದಿಗೆ ನಾಯಕ ನಟನಾಗಿ ಅಭಿನಯಿಸಿದ್ದು, ಸಹ ನಿರ್ಮಾಪಕರಾಗಿ ಮುರುಳಿಧರ ತಿಪ್ಪುರ್, ಚಲುವರಾಜ್ ಎನ್ ಅವರು ಸಾಥ್ ಕೊಟ್ಟಿದ್ದಾರೆ.

ಜಾಹೀರಾತು
Screenshot 2025 10 17 17 14 29 84 E307a3f9df9f380ebaf106e1dc980bb63351232099031197151 1024x928

ರವಿಶÀಂಕರನಾಗ್‌ರವರು ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಬರೆದು ನಿರ್ದೇಶನ ಹೊಣೆ ಹೊತ್ತಿದ್ದಾರೆ. ಛಾಯಾಗ್ರಾಹಕ ವೀನಸ್ ಮೂರ್ತಿಯವರು ಅದ್ಭುತ ಕೈಚಳಕ ತೋರಿದ್ದು, ವಿನು ಮನಸು ಅವರ ಸಂಗೀತದಲ್ಲಿ ನಾಲ್ಕು ಹಾಡುಗಳು ಅದ್ದೂರಿಯಾಗಿ ಮೂಡಿ ಬಂದಿವೆ, ರವಿವರ್ಮ ಹಿನ್ನೆಲೆ ಸಂಗೀತ ಸೊಗಸಾಗಿದೆ. ವೆಂಕಿ ಯುಡಿವಿ ಸಂಕಲನ, ಕಮಲ್ ಗೋಯಲ್ ಡಿಐ ,ಅಕ್ಷಯ್ ಅವರ ಸಿಜಿ ಕಾರ್ಯ ಹಾಗೂ ಥ್ರಿಲ್ಲರ್ ಮಂಜು ಸಾಹಸ ಸಂಯೋಜನೆಯಲ್ಲಿ ಚಿತ್ರವು ತುಂಬಾ ಚೆನ್ನಾಗಿ ಮೂಡಿಬಂದಿದೆ. ಪಿಆರ್ ಓ ಸುಧೀಂದ್ರ ವೆಂಕಟೇಶ, ಡಾ.ಪ್ರಭು ಗಂಜಿಹಾಳ, ಡಾ.ವೀರೇಶ ಹಂಡಿಗಿ ಅವರಾಗಿದ್ದಾರೆ. ಚಿತ್ರದ ತಾರಾಬಳಗದಲ್ಲಿ ಲಕ್ಷಿö್ಮÃಪತಿ ಬಾಲಾಜಿ, ಮಹಾಲಕ್ಷ್ಮಿ, ದಿವ್ಯಶ್ರೀ , ಥ್ರಿಲರ್‌ಮಂಜು, ಪದ್ಮವಾಸಂತಿ, ಬಲರಾಜ್‌ವಾಡಿ , ಲಯ ಕೋಕಿಲ, ನಂಜು ಸಿದ್ದಪ್ಪ , ಕೈಲಾಶ್ ಕುಟ್ಟಪ್ಪ , ಮೈಸೂರ್ ಸುಂದರ್ ,ಮೈಸೂರ್ ಮಂಜುಳ ಮೊದಲಾದವರು ಅಭಿನಯಿಸಿದ್ದಾರೆ.

Screenshot 2025 10 17 17 14 56 27 E307a3f9df9f380ebaf106e1dc980bb61565892814789021703 1024x708

About Mallikarjun

Check Also

screenshot 2025 10 17 14 06 37 12 92b64b2a7aa6eb3771ed6e18d0029815.jpg

ಕನಕಗಿರಿಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಪ್ರೊ.ಬಿ,ಕೃಷ್ಣಪ್ಪ ಬಣ ವತಿಯಿಂದ ತಾಲೂಕು ಪದಾಧಿಕಾರಿಗಳ ಆಯ್ಕೆ ಪರಶುರಾಮ್ ಕೆರೆಹಳ್ಳಿ

In Kanakagiri, the Karnataka Dalit Sangharsh Samiti Prof. B. Krishnappa faction elected taluk office bearers …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.