
Magalamani condemns extension of government school holidays.

ಗಂಗಾವತಿ :09-ಹಿಂದುಳಿದ ಆಯೋಗವು ನಡೆಸುತ್ತಿರುವ ಗಣತಿ ಆಧಾರದ ಮೇಲೆ ಸರಕಾರಿ ಮತ್ತು ಅನುದಾನಿತ ಶಾಲೆಗಳಿಗೆ 18 ರ ವರೆಗೆ ರಜೆ ವಿಸ್ತರಣೆ ಮಾಡಿದ್ದನ್ನು ಕೊಪ್ಪಳ ಜಿಲ್ಲಾ ಸರ್ವಾOಗೀಣ ಅಭಿವೃದ್ಧಿ ಹೋರಾಟ ಸಮಿತಿಯ ಜಿಲ್ಲಾ ಅಧ್ಯಕ್ಷ ಬಸವರಾಜ ಮ್ಯಾಗಳಮನಿ ಸರ್ಕಾರದ ನಿರ್ಧಾರವನ್ನು ಖಂಡಿಸಿದ್ದಾರೆ. ನಮ್ಮ ಸಂಘವು ಶಿಕ್ಷಕರನ್ನು ಗಣತಿ ಕಾರ್ಯಕ್ಕೆ ನಿಯೋಜನೆ ಮಾಡಬಾರದೆಂದು ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಅದರೂ ಗಣತಿಗೆ ನಿಯೋಜನೆ ಮಾಡಿ ಈಗ ರಜೆಯನ್ನು ವಿಸ್ತರಣೆ ಮಾಡಿದೆ. ಖಾಸಗಿ ಶಾಲೆಗಳು ಪ್ರಾರಂಭವಾಗಿದ್ದು ಅವುಗಳಿಗೆ ಈ ಆದೇಶ ಅನ್ವಯವಾಗುವುದಿಲ್ಲ. ಇದರಿಂದ ಅಲ್ಲಿನ ಮಕ್ಕಳು ವಿದ್ಯಾಭ್ಯಾಸ ಪಡೆಯುತ್ತಾರೆ. ಸರ್ಕಾರಿ ಶಾಲೆ ಮಕ್ಕಳು ವಿದ್ಯಾಬ್ಯಾಸದಿಂದ ವಂಚಿತರಾಗುತ್ತಾರೆ. ಪ್ರಸಕ್ತ ರಜೆಯ ಅವಧಿಯನ್ನು ಮುಂದಿನ ದಿನಗಳಲ್ಲಿ ಸರಿದೂಗಿಸುವ ಆದೇಶವಿದ್ದರೂ ಮಕ್ಕಳ ಮನಸ್ಥಿತಿ ಹೊಂದಿಕೊಳ್ಳುವುದಿಲ್ಲ. ಈ ರೀತಿಯಾದರೆ ಪಾಲಕರು ತಮ್ಮ ಮಕ್ಕಳ ಭವಿಷ್ಯಕ್ಕಾಗಿ ಖಾಸಗಿ ಶಾಲೆಗಳತ್ತ ಮುಖ ಮಾಡುತ್ತಾರೆ. ಈಗಾಗಲೇ ರಾಜ್ಯದಲ್ಲಿ ಸಾವಿರಾರು ಸರ್ಕಾರಿ ಶಾಲೆಗಳು ಮಕ್ಕಳ ಧಾಖಲಾತಿ ಕಡಿಮೆ ಇವೆ ಎಂಬ ಆಧಾರದ ಮೇಲೆ ಮುಚ್ಚಲ್ಪಟ್ಟಿವೆ. ಇನ್ನು ಮುಚ್ಚುವ ಆತಂಕವನ್ನು ಮ್ಯಾಗಳಮನಿ ಪತ್ರಿಕಾ ಪ್ರಕಟಣೆ ಮೂಲಕ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ಚಂದ್ರು ನಿಸರ್ಗ, ಜಡಿಯಪ್ಪ ಹಂಚಿನಾಳ, ರಾಘವೇಂದ್ರ ಕಡೆಬಾಗಿಲು, ರಾಮಣ್ಣ ರುದ್ರಾಕ್ಷಿ, ಬಸವರಾಜ ನಾಯಕ, ಪಂಪಾಪತಿ ಕುರಿ, ಮಂಜುನಾಥ ಚನ್ನಾದಾಸರ, ಜಂಬಣ್ಣ ಶಿಂದೊಳ್ಳಿ, ಮುತ್ತುರಾಜ್, ವಿರೇಶ್,ಹುಲ್ಲೇಶ್ ದುರ್ಗೇಶ್ ಹೊಸಳ್ಳಿ, ನರಸಪ್ಪ,ಮತ್ತಿತರರು ಇದ್ದರು.




