Breaking News

ಕುವೆಂಪು ಓದು: ಕಮ್ಮಟ

Great read: Kammat

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
whatsapp image 2025 09 12 at 14.01.19 24783e42

ಗಂಗಾವತಿ: ಕರ್ನಾಟಕ ಸರ್ಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕುವೆಂಪು ಭಾಷಾ ಭಾರತಿ ಬೆಂಗಳೂರು ಮತ್ತು
ಸರಕಾರಿ ಪದವಿ ಪೂರ್ವ ಕಾಲೇಜು ಗಂಗಾವತಿ ಸಂಯುಕ್ತಾಶ್ರಯದಲ್ಲಿ ಸೆಪ್ಟೆಂಬರ್ ೧೨ ಮತ್ತು ೧೩ ರಂದು ನಡೆಯುವ ಎರಡು ದಿನಗಳ ಕಮ್ಮಟವನ್ನು ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷರಾದ ಚೆನ್ನಪ್ಪ ಕಟ್ಟಿ ಅವರು ಜಂಬೆ ನುಡಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿ, ಭಾಷಾ ಭಾರತಿ ಮೂಲಕ ವಿಶ್ವಮಾನವ ಕವಿಯನ್ನು ನಾಡಿನ ಪ್ರತಿ ಕಾಲೇಜಿನ ವಿದ್ಯಾರ್ಥಿಗಳಿಗೂ ಕೂಡ ತಲುಪಿಸಬೇಕು. ಕಾವ್ಯ, ನಾಟಕ, ಸಾಹಿತ್ಯ, ಕಥೆ ಕಾದಂಬರಿಗಳನ್ನು ಓದುವ ಮೂಲಕ ಅಲ್ಲಿರುವ ಮಾನವೀಯ ಮೌಲ್ಯಗಳನ್ನು ಮಕ್ಕಳಲ್ಲಿ ಬೆಳೆಸಬೇಕು ಎನ್ನುವ ಕಾರಣಕ್ಕೋಸ್ಕರ ಈ ಕಮ್ಮಟವನ್ನ ಹಮ್ಮಿಕೊಳ್ಳಲಾಗಿದೆ. ಇದರ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ಉತ್ತಮ ನಾಗರಿಕರಾಗಿ ಸಮಾಜದಲ್ಲಿ ಸೇವೆ ಮಾಡಬೇಕೆಂಬುದು ಈ ಕಮ್ಮಟದ ಉದ್ದೇಶವಾಗಿದೆ ಎಂದರು.
ಕುವೆAಪು ಭಾಷಾ ಭಾರತಿ ಪ್ರಾಧಿಕಾರದ ಸದಸ್ಯರಾದ ಕರಿಯಪ್ಪ ಮಳಗಿ ಇವರು ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಪ್ರತಿ ವರ್ಷವೂ ವಿಶ್ವವಿದ್ಯಾಲಯ ಮತ್ತು ಪದವಿ ಕಾಲೇಜಿನಲ್ಲಿ ನಡೆಯುವ ಈ ಕಾರ್ಯಕ್ರಮವನ್ನು, ಪ್ರಥಮ ಬಾರಿಗೆ ಪದವಿ ಪೂರ್ವ ವಿದ್ಯಾರ್ಥಿಗಳಲ್ಲಿಯೂ ಓದಿನ ಆಸಕ್ತಿಯನ್ನು ಬೆಳೆಸಬೇಕೆಂಬ ಉದ್ದೇಶದಿಂದ ಹಮ್ಮಿಕೊಳ್ಳಲಾಗಿದೆ. ಕನ್ನಡ ಸಾಹಿತ್ಯದಲ್ಲಿರುವ ಮಾನವೀಯ ಮೌಲ್ಯಗಳನ್ನು ಪರಿಚಯಿಸಬೇಕು ಎನ್ನುವ ಕಾರಣಕ್ಕೋಸ್ಕರ ಇದು ಕುವೆಂಪು ಭಾಷಾ ಭಾರತೀಯ ವಿಸ್ತರಣಾ ಕಾರ್ಯಕ್ರಮವಾಗಿದೆ ಎಂದರು.
ಕಮ್ಮಟದ ಸಂಪನ್ಮೂಲ ವ್ಯಕ್ತಿಗಳಾದ ಹಂಪಿ ವಿಶ್ವವಿದ್ಯಾಲಯದ ಅಧ್ಯಾಪಕರಾದ ಡಾ. ವೆಂಕಟಗಿರಿ ದಳವಾಯಿ ಅವರು ಕಮ್ಮಟವನ್ನು ಎರಡು ದಿನಗಳ ಕಾಲ ನಡೆಸಿಕೊಡಲು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದಾರೆ. ಅದೇ ರೀತಿ ಕುವೆಂಪು ಭಾಷಾ ಭಾರತಿ ಸದಸ್ಯರಾದ ಕಥೆಗಾರ ಗಂಗಾಧರಯ್ಯ ರವರು, ಜಾಜಿ ದೇವೆಂದಪ್ಪ ಮತ್ತು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಸದಸ್ಯರಾದ ರಮೇಶ ಗಬ್ಬೂರ್ ರವರು ಹಾಗೂ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ಶಾಂತಪ್ಪ ಅವರು ಕಾರ್ಯಕ್ರಮದಲ್ಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಕಾಲೇಜಿನ ಪ್ರಾಚಾರ್ಯರಾದ ಬಸಪ್ಪ ನಾಗೋಲಿ ರವರು ಮಾತನಾಡುತ್ತಾ ಇಂಥ ಕಾರ್ಯಕ್ರಮವನ್ನು ನಮ್ಮ ಕಾಲೇಜಿಗೆ ನೀಡಿದ ಕುವೆಂಪು ಭಾಷಾ ಭಾರತಿಗೆ ಅಭಿನಂದನೆಗಳನ್ನು ತಿಳಿಸಿದರು. ಪಿಯುಸಿ ವಿದ್ಯಾರ್ಥಿಗಳಿಗೆ ಓದಿನಲ್ಲಿ ಆಸಕ್ತಿ ಇರಲ್ಲ, ಓದಿನಲ್ಲಿ ಅಧ್ಯಯನಶೀಲತೆಯ ಕೊರತೆ ಇರುತ್ತದೆ. ಹಾಗಾಗಿ ಇಂತಹ ಕಾರ್ಯಕ್ರಮಗಳನ್ನು ಇಲ್ಲಿಗೆ ನೀಡಬಾರದು ಎಂಬ ಮನೋಭಾವನೆ ತೊರೆದು ಈ ಮಕ್ಕಳಲ್ಲಿಯೂ ಕೂಡ ಅಧ್ಯಯನಶೀಲತೆ ಅಳವಡಿಸಿಕೊಳ್ಳಬೇಕೆನ್ನುವ ಕಾರಣಕ್ಕಾಗಿ ಕುವೆಂಪು ಭಾಷಾ ಭಾರತಿ ಇಂಥ ಉತ್ತಮ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ತುಂಬಾ ಸಂತೋಷಕರ ವಿಚಾರ ಎಂದರು.
ಈ ಕಾರ್ಯಕ್ರಮದ ಸಂಚಾಲಕರಾದ ಡಾ. ಲಿಂಗಣ್ಣ ಜಂಗಮರಳ್ಳಿ ಎಲ್ಲರನ್ನು ಸ್ವಾಗತಿಸಿದರು. ಉಪನ್ಯಾಸಕಿ ಶ್ರೀಮತಿ ರಮಾ ಇವರು ಕಾರ್ಯಕ್ರಮದ ನಿರೂಪಣೆಯನ್ನು ಮಾಡಿದರು. ಕೊನೆಯಲ್ಲಿ ಕನ್ನಡ ಉಪನ್ಯಾಸಕರಾದ ಡಾ. ರುದ್ರೇಶ ಇವರು ವಂದನಾರ್ಪಣೆ ಸಲ್ಲಿಸಿದರು.

About Mallikarjun

Check Also

ಶ್ರೀ ಶಾರದಾಂಬೆಗೆ ಶರನ್ನವರಾತ್ರಿಯ ಸಂಭ್ರಮ.

Sharannavarathri celebrations for Shri Sharadambrama ಗಂಗಾವತಿ: ಸರ್ವ ಜನಾಂಗದ ಮಹಿಳೆಯರ ಪಾಲ್ಗೊಳ್ಳುವಿಕೆಯಿಂದಾಗಿ ಶಾರದಾ ಶರನ್ನವರಾತ್ರಿಯ ಪ್ರಥಮ ದಿನದಂದು ದಾಖಲೆಯ …

Leave a Reply

Your email address will not be published. Required fields are marked *