Education is essential for building a strong society... Jagannath Alampalli
ಗಂಗಾವತಿ.. ದೇಶದ ಪ್ರಗತಿ ಶಿಕ್ಷಣದ ಮೇಲೆ ಅವಲಂಬಿತವಾಗಿವೆ. ಸದುರ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರಿಗೂ ಶಿಕ್ಷಣ ಅವಶ್ಯವಾಗಿದೆ ಎಂದು. ಸರ್ ಎಂ ವಿಶ್ವೇಶ್ವರಯ್ಯ ಶಿಕ್ಷಣ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಜಗನ್ನಾಥ ಆಲಂಪಲ್ಲಿ ಹೇಳಿದರು. ಅವರು ಸಮೀಪದ ಶ್ರೀ ರಾಮನಗರದ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಲಿಟಲ್ ಹಾರ್ಟ್ ಶಾಲೆಯ ಸಂಯುಕ್ತ ಆಶಯದಲ್ಲಿ ಆಯೋಜಿಸಿದ ಶಿಕ್ಷಕರ ದಿನಾಚರಣೆ ಸಮಾರಂಭವನ್ನು ವೇದಿಕೆಯಲ್ಲಿನ ಗಣ್ಯರು ಸರ್ವಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿ ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾಗಿದ್ದು ಇವತ್ತು ದೇಶದಲ್ಲಿ ವಿಜ್ಞಾನ ತಂತ್ರಜ್ಞಾನ. ಮತ್ತಿತರ ಯಾವುದೇ ಕ್ಷೇತ್ರದಲ್ಲಿ ಯಾರೇ ಸಾಧನೆ ಮಾಡಿದರು ಸಹ ಅದರ ಹಿಂದೆ ಶಿಕ್ಷಕರ ಶ್ರಮ ಕಾಣಬಹುದಾಗಿದೆ ಎಂದು ಹೇಳಿದರು. ಲಿಟಲ್ ಹಾರ್ಟ್ಸ್ ಶಾಲೆಯ ಮುಖ್ಯ ಗುರು. ಪ್ರಿಯಕುಮಾರಿ ಮಾತನಾಡಿ ಶಿಕ್ಷಣದಿಂದ ಮಾತ್ರ ಸಮಾಜದಲ್ಲಿ ಉನ್ನತ ಸ್ಥಾನ ಪಡೆದುಕೊಳ್ಳಲು ಸಾಧ್ಯ ಇದಕ್ಕೆ ಶಿಕ್ಷಕರ ಪ್ರಾಮಾಣಿಕ ಸೇವೆ ಅವಶ್ಯವಾಗಿದೆ ಎಂದರು. ಇದೇ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ವೆಂಕಟ ಕೃಷ್ಣ. ಪಾರ್ಥಸಾರಥಿ. ಇಬ್ರಾಹಿಂ. ಸ್ವಾಮಿ ವಿವೇಕಾನಂದ ಶಾಲೆಯ ಮುಖ್ಯ ಗುರು. ರಜಿನಿ ಆಲಂಪಲ್ಲಿ ಶೈಲಿಜಾ ಆಲಂಪಲ್ಲಿ ರಾಮ್ ರಾವ್ ಆಲಮ್ಪಲ್ಲಿ ಸೇರಿದಂತೆ ಇತರರು ಸಮಾರಂಭವನ್ನು ಕುರಿತು ಮಾತನಾಡಿದರು. ಇದಕ್ಕೂ ಪೂರ್ವದಲ್ಲಿ ಎರಡು ಶಾಲೆಯ ಶಿಕ್ಷಕರಿಗಾಗಿ ವಿವಿಧ ಸ್ಟೇಷನ್ ಗೇಮ್ ಕ್ರೀಡೆ ನೆರೆದ ಜನಸ್ತೋಮವನ್ನು ವಿಶೇಷವಾಗಿ ಆಕರ್ಷಿಸಿತು. ಇದಕ್ಕೂ ಪೂರ್ವದಲ್ಲಿ ವಿದ್ಯಾರ್ಥಿಗಳು ಉಭಯ ಶಾಲೆ ಶಿಕ್ಷಕರನ್ನು ಪುಷ್ಪವನ್ನು ಸಮರ್ಪಿಸುವುದರ ಮೂಲಕ ವೇದಿಕೆಗೆ ಆಹ್ವಾನಿಸಿದರು.