Breaking News

ಪೌರ ನೌಕರರ ಅನಿರ್ದಿಷ್ಟಾವಧಿ ಮುಷ್ಕರ,ಅಧಿಕಾರಿಗಳಿಂದಮುಷ್ಕರಕ್ಕೆನಿರ್ಲಕ್ಷ್ಯ..?

Indefinite strike by civic employees, officials indifferent to the strike..?

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

“ಪಟ್ಟಣ ಪಂಚಾಯಿತಿ ಆಡಳಿತಕ್ಕೆ, ಮುಷ್ಕರದ ಹಿನ್ನೆಲೆಯಲ್ಲಿ ಸ್ಥಳೀಯ ಸಾರ್ವಜನಿಕರಿಗೆ ಅಡಚಣೆ

ಪಟ್ಟಣ ಪಂಚಾಯಿತಿ ಅಧಿಕಾರಿಗಳಿಂದ ಮುಷ್ಕರಕ್ಕೆನಿರ್ಲಕ್ಷ್ಯ..?

ಕೊಟ್ಟೂರು : ರಾಜ್ಯ ಸರ್ಕಾರಿ ನೌಕರರೆಂದು ಪರಿಗಣಿಸುವುದು ಸೇರಿದಂತೆ ೧೯ ಬೇಡಿಕೆಗಳನ್ನು ಈಡೇರಿಸುವಂತೆ ಸರಕಾರಕ್ಕೆ ಮನವಿ ಮಾಡಿದ್ದರೂ ಸ್ಪಂದಿಸದ ಹಿನ್ನೆಲೆಯಲ್ಲಿ ನೀರು ಸರಬರಾಜು ಹೊರತುಪಡಿಸಿ ಉಳಿದೆಲ್ಲ ಸೇವೆಗಳನ್ನು ಬಂದ್ ಮಾಡಿ ಮೇ ೨೭ ರಿಂದ ಅನಿರ್ದಿಷ್ಟಾವಧಿ ಮುಷ್ಕರ ಕೈಗೊಳ್ಳಲಾಗಿದೆ ಎಂದು ರಾಜ್ಯ ಪೌರ ನೌಕರರ ಸಂಘದ ತಾಲೂಕು ಅಧ್ಯಕ್ಷ ಎಂ.ಕೊಟ್ರೇಶ್ ಮಂಗಳವಾರ  ತಿಳಿಸಿದರು. ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದರು. ನಮ್ಮ ಸಂಘದಿಂದ ಈಗಾಗಲೇ ಅನೇಕ ಬಾರಿ ಸರಕಾರಕ್ಕೆ ನಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಗಮನ ಸೆಳೆದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ನಮ್ಮ ಸಂಘದ ಕಾರ್ಯಕಾರಿಣಿ ಸಭೆಯಲ್ಲಿ ತೀರ್ಮಾನಿಸಿದಂತೆ ಹಾಗೂ ಮೊದಲೇ ಸರ್ಕಾರಕ್ಕೆ ತಿಳಿಸಿದಂತೆ ಈ ಮುಷ್ಕರವನ್ನು ರಾಜ್ಯಾದ್ಯಂತ ನಡೆಸಲಾಗುತ್ತಿದೆ ಎಂದರು. ಖಾಲಿ ಇರುವ ನೌಕರರ ಹುದ್ದೆಗಳ ನೇಮಕಾತಿ, ಘನತ್ಯಾಜ್ಯ ವಿಲೇವಾರಿ ನಿರ್ವಹಣೆ ವಾಹನಗಳಿಗೆ ಚಾಲಕರ ಹುದ್ದೆಗಳನ್ನು ಮಂಜೂರು ಮಾಡುವುದು, ಖಾಯಂ ಆಕೌಂಟೆಂಟ್ ಹುದ್ದೆ ಮತ್ತು ಇತರೆ ೧೯ ಬೇಡಿಕೆಗಳನ್ನು ಈಡೇರಿಸಲು ಸರಕಾರಕ್ಕೆ ಒತ್ತಾಯಿಸಲಾಗಿದೆ.

ಮೇ ೨೭ರಂದು ಕೊಟ್ಟೂರು ಪಪಂ ಕಚೇರಿ ಮುಂಭಾಗದಲ್ಲಿ ಸಂಘದ ಪೌರಕಾರ್ಮಿಕರು ಸೇರಿದಂತೆ ಪದಾಧಿಕಾರಿಗಳು, ಪೌರ ಕಾರ್ಮಿಕ ಸದಸ್ಯರು ಮುಷ್ಕರದಲ್ಲಿ ಪಾಲ್ಗೊಂಡಿದ್ದರು. ಕಚೇರಿ ಕೆಲಸಗಳು ಸೇರಿ ಎಲ್ಲ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.ಈ ಮುಷ್ಕರದ ಹಿನ್ನೆಲೆಯಿಂದ ಸ್ಥಳೀಯ ಸಾರ್ವಜನಿಕರಿಗೆ
ಅಡಚಣೆ ಉಂಟಾಗಲಿದೆ.

ಸಂಘದ ಉಪಾಧ್ಯಕ್ಷ ಎಚ್.ಶಂಕ್ರಪ್ಪ, ಕಾರ್ಯದರ್ಶಿ ಎ.ಮಂಜುನಾಥ, ಖಜಾಂಚಿ ಎಸ್.ಪರುಸಪ್ಪ, ಸಂಘಟನಾಕಾರ್ಯದರ್ಶಿ ಎನ್.ವಿಜಯಕುಮಾರ, ಬಿ.ರವಿ, ಬಿ.ರಮೇಶ ನಿರ್ದೇಶಕರಾದ ಸುಭದ್ರಮ್ಮ, ಸುಮಿತ್ರಮ್ಮ, ಒಟ್ಟು ೬೦ ಜನ ಪೌರಕಾರ್ಮಿಕರು ಮುಷ್ಕರದಲ್ಲಿ ಭಾಗವಹಿಸಿದ್ದರು.

ಕೊಟ್ -1
ಪೌರಕಾರ್ಮಿಕರ ಅನಿರ್ದಿಷ್ಟಾವಧಿ ಮುಷ್ಕರದ ಬಗ್ಗೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳನ್ನು  ಮುಷ್ಕರದ ಹಿನ್ನೆಲೆಯಲ್ಲಿ ಸ್ಥಳೀಯ ಆಡಳಿತಕ್ಕೆ ಅಡಚಣೆ ಉಂಟಾಗಿತ್ತದೆ ಇದರ
ಬಗ್ಗೆ ತಮ್ಮ ಅಭಿಪ್ರಾಯವೇನು ಎಂದು ಸುದ್ದಿಗಾರರು ಸಂಪರ್ಕಿಸಿದಾಗ,  ನಮ್ಮ ಪ.ಪಂ. ಅಧ್ಯಕ್ಷರನ್ನು ಸಂಪರ್ಕಿಸಿ ಪ್ರತಿಕ್ರಿಯಿಸಲಾಗುವುದು ಎಂದು ಹೇಳುವ ಮೂಲಕ ಪೌರಕಾರ್ಮಿಕರ ಮುಷ್ಕರದ ಕುರಿತು ಅಧ್ಯಕ್ಷರ ಮೇಲೆ ಹೊತ್ತುಹಾಕಿ ನಿರ್ಲಕ್ಷ್ಯ ತೋರಿದ್ದಾರೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಅಧ್ಯಕ್ಷರ ಕೈ ಗೊಂಬೆ ಆಗಿದ್ದಾರೆಯೇ ?ಈ ಬಗ್ಗೆ ರಾಜ್ಯಾಧ್ಯಕ್ಷ ಕೆ.ಪ್ರಭಾಕರ ಈ ವಿಷಯದ ಬಗ್ಗೆ ನಮ್ಮ ಸಂಘಟನೆಯ ಪೌರಕಾರ್ಮಿಕರಿಗೆ ತೊಂದರೆಯಾದಲ್ಲಿ ಮೇಲಾಧಿಕಾರಿಗಳಿಗೆ ತಿಳಿಸಲಾಗುವುದು ಎಂದರು.

ಕೊಟ್ -2
ಪೌರಕಾರ್ಮಿಕ ಮಹಿಳಾ ಇಲ್ಲಿಯವರೆಗೂ ಖಾಲಿ ನಿವೇಶನ ವಿಲ್ಲ ಮೂಲಭೂತ ಸೌಕರ್ಯಗಳು ಇಲ್ಲದೆ ಪರದಾಡುವಂಥ ಪರಿಸ್ಥಿತಿಯಾಗಿದೆ ಮತ್ತು ಹೊರಗುತ್ತಿಗೆ ನೌಕರರನ್ನು ಸರ್ಕಾರಿ ನೌಕರರಾಗಿ ಖಾಯಂ ಗೊಳಿಸಬೇಕೆಂದು ಸರ್ಕಾರಕ್ಕೆ ಸುಭದ್ರಮ್ಮ ಆಗ್ರಹಿಸಿದರು

ಕೊಟ್ -2
ಕೊಟ್ಟೂರು ಪಟ್ಟಣ ಪಂಚಾಯಿತಿ ಪೌರಕಾರ್ಮಿಕ ಸಿಬ್ಬಂದಿಯ ಕುಟುಂಬದ ಮಕ್ಕಳಿಗೆ  ವಿದ್ಯಾಭ್ಯಾಸ ಮತ್ತು ಇತರೇ ಸೌಲಭ್ಯ ಗಳನ್ನು ಸರ್ಕಾರದಿಂದ ಯಾವುದೇ ರೀತಿ ಸೌಲಭ್ಯ ಪಡೆದಿಲ್ಲ. ಐದು ವರ್ಷಗಳಾಗಿದೆ ಎಂದು ಹೆಸರು ಹೇಳಲು ಇಚ್ಛಿಸದ ವಿದ್ಯಾರ್ಥಿ,ಸಿಬ್ಬಂದಿ ವರ್ಗದವರು ಪತ್ರಿಕೆಗೆ ತಿಳಿಸಿದರು

About Mallikarjun

Check Also

ಜಿಲ್ಲಾ ಕಾಂಗ್ರೆಸ್‌ಗೆ ಕಾರ್ಯದರ್ಶಿಯಾಗಿ ವಿಶಾಲಾಕ್ಷಿ ನೇಮಕ

Vishalakshi appointed as secretary of District Congress ಕೊಪ್ಪಳ: ತಾಲೂಕಿನ ಕಿನ್ನಾಳ ಗ್ರಾಮದ ವಿಶಾಲಾಕ್ಷಿ ವಿರೇಶ ತಾವರಗೇರಿ ಅವರನ್ನು …

Leave a Reply

Your email address will not be published. Required fields are marked *