Breaking News

ರಾಜ್ಯಮಟ್ಟದ ಡ್ಯಾನ್ರ‍್ಸ್ ಕ್ರಿಕೆಟ್ ಪಂದ್ಯಾವಳಿಗೆ ನಗರಸಭೆ ಅಧ್ಯಕ್ಷರಿಂದ ಚಾಲನೆಕ್ರೀಡೆಗಳು ಮನಷ್ಯನ ಆಯುಷ್ಯ ಆರೋಗ್ಯ ವೃದ್ಧಿಸುತ್ತವೆ : ಜಿ.ಶ್ರೀಧರ

State-level Dancers Cricket Tournament launched by Municipal Council President Sports increase mental health and longevity: G. Sridhar

ಜಾಹೀರಾತು
Screenshot 2025 05 24 17 21 02 63 E307a3f9df9f380ebaf106e1dc980bb6


ಗಂಗಾವತಿ: ಪ್ರಾಣಿ, ಪಕ್ಷಿಗಳು ನಿತ್ಯ ಚಟುವಟಿಕೆಯಲ್ಲಿರಿಂದ ರೋಗರುಜಿನಿಗಳಿಗೆ ಒಳಗಾಗುವುದಿಲ್ಲ ಮನುಷ್ಯನ ಸೋಮಾರಿತನ ಆರೋಗ್ಯ ಏರುಪೇರಿಗೆ ಮುಖ್ಯ ಕಾರಣವಾಗುತ್ತಿದ್ದು, ಆಯುಷ್ಯ ವೃದ್ಧಿಗೆ, ಕ್ರೀಯಾಶೀಲರಾಗಿರಲು ಆಟೋಗಳಲ್ಲಿ ತೊಡಗಿಕೊಳ್ಳಬೇಕು ಎಂದು ಖ್ಯಾತ ವಾಣಿಜ್ಯೋದ್ಯಮಿ ಜಿ.ಶ್ರೀಧರ ಹೇಳಿದರು.
ನಗರದ ಶ್ರೀ ಚನ್ನಬಸವ ಕಲಾ ಮಂದಿರದಲ್ಲಿ ಶುಕ್ರವಾರ ಇಲ್ಲಿನ ನೃತ್ಯ ಕಲಾವಿದರ ಸಂಘ

ಆಯೋಜಿಸಿರುವ ಡ್ಯಾನ್ರ‍್ಸ್ ಕ್ರಿಕೆಟ್ ಲೀಗ್ ೨೦೨೫, ನಟರಾಜ್ ಕಪ್ ಸೀಸನ್ ೦೧ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು, ನೃತ್ಯಕಲಾವಿದರ ಸಂಘ ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾವಳಿ ಗಂಗಾವತಿಯಲ್ಲಿ ಆಯೋಜಿಸಿರುವುದು ಅನುಕರಣೀಯ ಸಂಗತಿ ಹಲವರ ಸ್ಪೂರ್ತಿ ಪಡೆಯಲು ಇದು ಕಾರಣವಾಗಲಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜೋಗದ ನಾರಾಯಣಪ್ಪ ನಾಯಕ ಮಾತನಾಡಿ, ದೇಹ ಮನಸ್ಸು ಸದೃಢವಾಗಿದ್ದರೆ ಸಮರ್ಥ ಸಮಾಜ ನಿರ್ಮಾಣವಾಗುತ್ತದೆ ಕ್ರೀಡೆಗಳು ಅವಶ್ಯ ಎಂದರು.
ಕಾಡಾ ಮಾಜಿ ಅಧ್ಯಕ್ಷ ತಿಪ್ಪೆರುದ್ರಸ್ವಾಮಿ ಮಾತನಾಡಿ, ನೃತ್ಯ ಹಾಗು ಕ್ರೀಡೆ ಒಂದು ನಾಣ್ಯದ ಎರಡು ಮುಖಗಳು ವ್ಯಾಯಾಮಕ್ಕೆ ಎರಡು ದಿವ್ಯಾಔಷಧಿ ಕ್ಷೇತ್ರ ಹೊರತು ಪಡಿಸಿ ನೃತ್ಯ ಕಲಾವಿದರು ಕ್ರಿಕೆಟ್ ಆಯೋಜಿಸಿರುವುದು ಮೆಚ್ಚುಗೆಯ ಕಾರ್ಯ ಎಂದರು.
ಬಿಜೆಪಿ ಯುವ ಮುಖಂಡ ಸಂಗಮೇಶ್ ಸುಗ್ರೀವಾ ಮಾತನಾಡಿ, ಸೋಲೆ ಗೆಲುವಿಗೆ ಸೋಪಾನವಾಗಿದ್ದು, ನೃತ್ಯ ಕಲಾವಿದರೊಂದಿಗೆ ನನಗೆ ನಿರಂತರ ಒಡನಾಟವಿದೆ, ಯಾವಾಗಲು ಜೊತೆಗಿರುತ್ತೇನೆ ಅಲ್ಲದೆ ಸ್ಪರ್ಧೆಯ ಎರಡನೇ ಬಹುಮಾನದ ಮೊತ್ತ ಭರಿಸುವೆ ಎಂದು ಘೋಷಿಸಿದರು.
ಖ್ಯಾತ ಮಕ್ಕಳ ತಜ್ಞ ಡಾ.ಅಮರ್ ಇತರರು ಮಾತನಾಡಿದರು.
ನಗರಸಭೆ ಅಧ್ಯಕ್ಷೆ ಹೀರಾಬಾಯಿ ನಾಗರಾಜ್ ಸಿಂಗ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಕ್ರಿಕೆಟ್ ತಂಡಗಳು ವಿಭಿನ್ನ ನೃತ್ಯದ ಮೂಲಕ ತಮ್ಮ ಲೋಗೋ ಪ್ರದರ್ಶಿಸಿದ್ದು ಗಮನ ಸೆಳೆಯಿತು. ವೇದಿಕೆಯಲ್ಲಿ ಗಣ್ಯರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಕಲಾವಿದ ಹಾಗು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಗಂಗಾವತಿ ತಾಲೂಕು ಅಧ್ಯಕ್ಷ ನಾಗರಾಜ್ ಇಂಗಳಗಿ, ನಗರಸಭೆ ಸದಸ್ಯ ನವೀನ್ ಕುಮಾರ್ ಮಾಲಿಪಾಟೀಲ್, ಲಿಟಲ್ ಹಾರ್ಟ್ಸ್ ಶಾಲೆಯ ಪ್ರಧಾನ ಕಾರ್ಯದರ್ಶಿ ಜಗನ್ನಾಥ ಆಲಂಪಲ್ಲಿ, ಸೇಂಟ್‌ಪಾಲ್ಸನ ಕಾಲೇಜಿನ ಸರ್ವೇಶ್ ವಸ್ತçದ, ಮಹಾನ್ ಕಿಡ್ಸ್ನ ನೇತ್ರಾಜ್, ಬೇಥಾಲ್ ಸ್ಕೂಲ್‌ನ ಸುಜಾತ್‌ರಾಜ್, ಹಿರಿಯ ಕ್ರಿಕೆಟ್ ಆಟಗಾರ ಯಾಸೀನ್, ಜನಜಾಗೃತಿ ಸಮಿತಿ ಅಧ್ಯಕ್ಷ ಗಣೇಶ್ ಮಚ್ಚಿ, ಸಂತೋಷ್ ಆಲ್ಕೋಡ್, ಕಾನಿಪ ಪ್ರಧಾನ ಕಾರ್ಯದರ್ಶಿ ಹಾಗು ಡ್ಯಾನ್ಸ್ ಮಾಸ್ಟರ್‌ಗಳಾದ ದೇವರಾಜ್, ಮೋಜಸ್ ಪಾಲ್, ಸಂತೋಷ್, ರಾಘವೇಂದ್ರ, ಹರ್ಷವರ್ಧನ, ಶಂಕರ್ ಕುರುಗೋಡು, ರವಿ ಸುಂದರ್, ಮಂಜುನಾಥ್, ರಾಮಕೃಷ್ಣ, ಸಿದ್ದು, ನಾಗರಾಜ್ ಮೌನೇಶ್, ನಿಸಾರ್, ಶಂಕರ್ ಐಲಿ, ಕ್ಯಾಟ್ ಸಂತೋಷ್, ಬೆಂಗಳೂರು ಜಗ್ಗಾ ಸುಭಾಷ್ ಇತರರಿದ್ದರು.

About Mallikarjun

Check Also

screenshot 2025 11 11 19 38 54 04 e307a3f9df9f380ebaf106e1dc980bb6.jpg

ಜಿಲ್ಲೆಯ ಯಾವುದೇ ಧಾರ್ಮಿಕ ಮಂದಿರಗಳಲ್ಲಿ ಬಾಲ್ಯ ವಿವಾಹ ಜರುಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ : ಡಾ. ಸುರೇಶ ಇಟ್ನಾಳ

It is our duty to ensure that child marriage does not take place in any …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.