Letter to Yalaburga MLA Rayareddy Shri in support of Koppal bandh call on 24th Feb.

ಕೊಪ್ಪಳ : ದಿ.24.02 ರಂದು ಎಂ ಎಸ್ ಪಿ ಎಲ್ ಕಾರ್ಖಾನೆ ನಿರ್ಮಾಣ ವಿರೋಧಿಸಿ ಕೊಪ್ಪಳ ಬಂದ್ ಕರೆಗೆ ಬೆಂಬಲಿಸಿ ಯಲಬುರ್ಗಾ ಶಾಸಕರು ಮತ್ತು ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರಾದಂತ ಬಸವರಾಜ ರಾಯರೆಡ್ಡಿ ಅವರು ಶ್ರೀ ಗಳಿಗೆ ಪತ್ರ ರವಾನಿಸಿದರು.
ನಗರದ ಸಮೀಪ ರೂ. 54.00 ಸಾವಿರ ಕೋಟಿಗಳ ವೆಚ್ಚದಲ್ಲಿ ಬೃಹತ್ ಕಬ್ಬಿಣ, ಉಕ್ಕು ಕಾರ್ಖಾನೆಯಾದ MSPL ಬಲ್ಡೋಟಾ ಕಾರ್ಖಾನೆಯನ್ನು ಸ್ಥಾಪಿಸಲು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದಿಂದ ಅನುಮತಿ ನೀಡಿದ್ದು, ಅದನ್ನು ಸ್ಥಾಪನೆ ಮಾಡಿದರೆ ಕೊಪ್ಪಳ ನಗರದ ಸುತ್ತಮುತ್ತಲಿನ ಗ್ರಾಮಗಳ ಪರಿಸರಕ್ಕೆ ವಾಯು ಮಾಲಿನ್ಯವಾಗುವುದರಿಂದ ಜನ-ಜಾನುವಾರುಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆಂಬುದು ನಮಗೆಲ್ಲರಿಗು ತಿಳಿದಿರುವ ವಿಷಯವಾಗಿದೆ.
ಜನ-ಜಾನುವಾರುಗಳ ಆರೋಗ್ಯದ ಹಿತದೃಷ್ಟಿಯಿಂದ ಸದರಿ ಕಾರ್ಖಾನೆಯನ್ನು ಬೇರೆಯಡಗೆ ಸ್ಥಳಾಂತರಿಸುವುದು ಸೂಕ್ತವೆಂಬುದು ಕೂಡ ನನ್ನ ಅಭಿಪ್ರಾಯವಾಗಿರುತ್ತದೆ. ಈ ಹಿನ್ನಲೆಯಲ್ಲಿ ತಾವು ತಮ್ಮ ನೇತೃತ್ವದಲ್ಲಿ ದಿನಾಂಕ : 24.02.2025 ಸೋಮವಾರ ದಿವಸ ಕೊಪ್ಪಳ ಬಂದ್‌ಗೆ ಕರೆ ನೀಡಿರುವುದು ಸರಿಯಾಗಿರುತ್ತದೆ ಎಂದರು.
ಈ ಬಂದ್‌ಗೆ ನನ್ನ ಮತ್ತು ನನ್ನ ಕ್ಷೇತ್ರದ ಜನಗಳ ಸಂಪೂರ್ಣ ಬೆಂಬಲವಿದ್ದು, ಸದರಿ ಬಂದ್‌ನಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ನನ್ನ ಕ್ಷೇತ್ರದ ಜನರಲ್ಲಿ ನಾನು ವಿನಂತಿಸಿಕೊಳ್ಳುತ್ತೇನೆ ಎಂದು ರಾಯರೆಡ್ಡಿಯವರು ಬರೆದಿದ್ದಾರೆ.
ಈ ಕಾರ್ಖಾನೆಯನ್ನು ಬೇರೆಯೆಡೆಗೆ ಸ್ಥಳಾಂತರಿಸುವಂತೆ ಕೊಪ್ಪಳ ಶಾಸಕರಾದ ರಾಘವೇಂದ್ರ ಹಿಟ್ನಾಳ, ಸಂಸದರಾದ ರಾಜಶೇಖರ ಹಿಟ್ನಾಳ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿಗಳು, ಹಿಂದುಳಿದ ವರ್ಗ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದ ಶಿವರಾಜ ತಂಗಡಗಿ ಹಾಗೂ ಇತರೆ ಮಂತ್ರಿಗಳೊಂದಿಗೆ ಸೇರಿ ಸನ್ಮಾನ್ಯ ಸಿಎಂ ಸಿದ್ದರಾಮಯ್ಯನವರ ಜೊತೆ ಮಾತನಾಡಿ ಕಾರ್ಖಾನೆ ಸ್ಥಳಾಂತರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆಂದು ಮತ್ತು ತಮ್ಮ ನೇತೃತ್ವದಲ್ಲಿ ಹಮ್ಮಿಕೊಂಡಿರುವ ಕೊಪ್ಪಳ ಬಂದ್ ಕಾರ್ಯಕ್ರಮವು ಯಶಸ್ವಿಯಾಗಲೆಂದು ಹಾರೈಸಿತ್ತೇನೆ ಎಂದು ತಿಳಿಸಿ ಬರೆದಿದ್ದಾರೆ.