Breaking News

ಹಿರೇ ಬೇರಿಗೆಯಲ್ಲಿ ಸ್ಮಾರಕಗಳ ಹೊಸ ಶೋಧ:

New discovery of monuments at Hire Berege:


ಜಾಹೀರಾತು

ಸಿಂಧನೂರು,ಅ20: ಭಾರತ ದೇಶದ ಅನೇಕ ನಗರ, ಪಟ್ಟಣ ಮತ್ತು ಗ್ರಾಮಗಳಲ್ಲಿ ಅಂದು ರಾಜ್ಯ ಭಾರ ಮಾಡುತ್ತಿದ್ದ ಚಕ್ರವರ್ತಿಗಳು, ಮಹಾಂಡಳೇಶ್ವರರು, ಮಹಾ ಸಾಮಂತರು ಮತ್ತು ಇನ್ನಿತರೆ ಪ್ರಮುಖ ವ್ಯಕ್ತಿಗಳು ತಾವು ಮಾಡಿದ ಜನಪರ ಕೆಲಸ ಕಾರ್ಯಗಳಿಗಾಗಿ ಹಲವು ಸ್ಮಾರಕಗಳನ್ನು ನಿರ್ಮಿಸಿ ಅಮರರಾಗಿದ್ದಾರೆ. ಆದರೆ ಇತ್ತೀಚಿನ ದಿನಮಾನಗಳಲ್ಲಿ ಸ್ವಾರ್ಥತೆ, ಸ್ವಜನಪಕ್ಷಪಾತ ಮೊದಲಾದವುಗಳು ಹೆಚ್ಚಿಗೆಯಾಗಿದ್ದರಿಂದ ಹಿಂದಿನ ಕಾಲದ ಕುರುಹುಗಳ ಬಗ್ಗೆ ಅನೇಕ ಜನರು ಮೌಢ್ಯತೆಗಳನ್ನಿಟ್ಟುಕೊಂಡು ಅವುಗಳನ್ನು ಹಾಳುಗೆಡುವುತ್ತಿದ್ದಾರೆಯೇ ಹೊರತು, ರಕ್ಷಿಸುವಗೊಡವೆಗೆ ಹೋಗಿರುವುದಿಲ್ಲ. ಅನೇಕ ಕುರುಹುಗಳಲ್ಲಿ ನಮ್ಮ ಹಿಂದಿನ ತಲೆಮಾರಿನ ಚರಿತ್ರೆ ಅಡಗಿರುತ್ತದೆಯೆಂಬ ಭಾವನೆ ಇರದೆ ಸಣ್ಣತನದ ವಿಚಾರಗಳು ಬಹುಪಾಲು ಗ್ರಾಮಗಳ ಜನರಲ್ಲಿ ಕಂಡು ಬರುತ್ತದೆ.
ರಾಯಚೂರು ಜಿಲ್ಲೆಯ ಹಲವು ಗ್ರಾಮಗಳಲ್ಲಿ ಅನೇಕ ಸ್ಮಾರಕಗಳು ಬೆಳಕಿಗೆ ಬಂದಿವೆ. ಆದರೆ ಇಂತಹ ಬೆಳಕಿಗೆ ಬಾರದೇ ಇರುವಂತಹ ಹಿರೇ ಬೇರಿಗೆ ಗ್ರಾಮವು ತಾಲ್ಲೂಕು ಕೇಂದ್ರವಾದ ಸಿಂಧನೂರು ನಗರದಿಂದ ವಾಯುವ್ಯ ದಿಕ್ಕಿಗೆ ೩೦ ಕಿ.ಮೀ ದೂರದಲ್ಲಿದೆ. ಈ ಗ್ರಾಮದಲ್ಲಿ ಕಲ್ಲೇಶ್ವರ [ಶಾಸನೋಕ್ತ ಸ್ವಯಂಭೂ ಕಲಿದೇವರು], ಆಂಜನೇಯ, ಮಾಟೂರಣ್ಣ, ಲಕ್ಕಮ್ಮ, ದ್ಯಾವಮ್ಮ, ಊರ ಹೊರಗಿನ ಜಾದುಗುಡ್ಡದಲ್ಲಿ ಹನುಮಂತ ದೇಗುಲ, ಗವಿ ಮೊದಲಾದ ಅವಶೇಷಗಳು ಕಾಣಬರುತ್ತಿವೆ. ಹಾಗೆಯೇ ಗ್ರಾಮದಲ್ಲಿ ಪ್ರಮುಖವಾಗಿ ಕಾಳ ಬೈರವ, ಗಣೇಶ, ಗಜಲಕ್ಷಿö್ಮ ಶಿಲ್ಪಗಳಿವೆ. ಗ್ರಾಮದ ಊರ ಹೊರಗೆ[ಪೂರ್ವ] ಇರುವ ಅಮರೇಗೌಡ ತಂದೆ ಯಂಕನಗೌಡರ ಜಮೀನಿನಲ್ಲಿರುವ [ಸವೇ ನಂಬರ್-೧೭೯] ತುರುಗೋಳ್ ವೀರಗಲ್ಲು ಶಾಸನವು ಕ್ರಿ.ಶ. ೮-೯ನೇ ಶತಮಾನದ ರಾಷ್ಟçಕೂಟ ಅರಸರ ಕಾಲದ್ದಾಗಿದೆ. ಈ ಕಣಶಿಲೆಯ ಚಪ್ಪಡಿಕಲ್ಲಿನಲ್ಲಿ ಹತ್ತು ಸಾಲುಗಳಿಂದ ರಚಿತಗೊಂಡ ಅಕ್ಷರಗಳಿದ್ದು, ಅವು ಮಾಸಿ ಹೋಗಿವೆ. ಇದು ಮೂರು ಹಂತಗಳಿAದ ರಚಿತಗೊಂಡಿದ್ದು, ಶಿಲ್ಪದ ಕೆಳಭಾಗ (ಮೊದಲನೇ ಹಂತ)ದಲ್ಲಿ ಗೋವುಗಳನ್ನು ಕದ್ದುಕೊಂಡು ಹೋಗುತ್ತಿದ್ದ ವ್ಯಕ್ತಿಗಳೊಂದಿಗೆ ವೀರನು ಬಿಲ್ಲನ್ನಿಡಿದು ಹೋರಾಡುತ್ತಿದ್ದಾನೆ. ಇಲ್ಲಿನ ವೀರನ ಕೆಳಭಾಗದಲ್ಲಿ ಅನೇಕ ವೀರರು ಹೋರಾಟದಲ್ಲಿ ಮಡಿದ ದೇಹಗಳು ಧರೆಯಲ್ಲಿ ಉರುಳಿಬಿದ್ದದ್ದು ಕಾಣಬರುತ್ತವೆ. ಹಾಗೆಯೇ ದೊಡ್ಡ ವೀರನ ಹಿಂಬದಿಯಲ್ಲಿ ಗೋವುಗಳು ಬಿಡಿಸಿಕೊಂಡು ಬಂದವುಗಳು ಹಿಂತಿರುಗಿ ಬರುವ ಸನ್ನಿವೇಶದಲ್ಲಿವೆ. ಇದರ ಮೇಲ್ಭಾಗದ ಎರಡನೆಯ ಹಂತದಲ್ಲಿ ಹೋರಾಟ ಮಾಡಿ ವೀರಮರಣವನ್ನಿಪ್ಪಿದ ವೀರನನ್ನು ಅಪ್ಸರೆಯರು ಸ್ವರ್ಗಲೋಕಕ್ಕೆ ಎತ್ತಿಕೊಂಡು ಹೋಗುತ್ತಿದ್ದಾರೆ. ಮೂರನೆಯ ಹಂತ (ಕೊನೆಯ)ದ ಸ್ವರ್ಗ ಲೋಕದಲ್ಲಿ ವೀರನು ಪೀಠದ ಮೇಲೆ ಕುಳಿತಿದ್ದಾನೆ. ಈತನ ಎಡಭಾಗದಲ್ಲಿ ಚೌರದಾರಿಯರು ಚೌರವನ್ನು ಬೀಸುವ ಬಂಗಿಯಲ್ಲಿದ್ದಾರೆ. ಇದರ ಮೇಲ್ಬಾಗದಲ್ಲಿ ಸೂರ್ಯ ಚಂದ್ರರ ಶಿಲ್ಪಗಳಿವೆ.
ಇದೇ ಗ್ರಾಮದ ಇನ್ರ‍್ನೆಂದು ಶಾಸನ ಶಿಲ್ಪವು ರಾಮಪ್ಪ ನಾಯ್ಕೋಡಿ (ಕುರುಬರು)ಯವರ ಜಮೀನಿನ (ಸರ್ವೆ ನಂಬರ್-೦೨)ಲ್ಲಿ ಕಪ್ಪು ಶಿಲೆಯಲ್ಲಿದ್ದು, ಕ್ರಿ.ಶ. ೧೧-೧೨ನೇ ಶತಮಾನಕ್ಕೆ ಸೇರುತ್ತದೆ. ಇದರಲ್ಲಿ ಕಲ್ಯಾಣ ಚಾಳುಕ್ಯ ಅರಸ ಆರನೇ ವಿಕ್ರಮಾದಿತ್ಯನು ರಾಜ್ಯಭಾರ ಮಾಡುವ ಕಾಲದಲ್ಲಿ, ಈತನ ಕೈ ಕೆಳಗೆ ಅಧಿಕಾರಿಗಳಾಗಿ ಬೂಬೆಯ ನಾಯಕ, ಹಂಪೆಯನಾಯಕ, ಓಬನಾಯಕರಿದ್ದರೆಂದು ಪ್ರಸ್ತಾಪಿಸುತ್ತದೆ. ಹಾಗೆಯೇ ಶಾಸನ ಮುಂದುವರಿದು ಕೆರೆ, ಮತ್ತರು, ಕಮ್ಮಟದಾಚಾರ್ಯ, ಮುಮ್ಮ್ಮರಿದಂಡರು, ಬಡಿಗರು ಮೊದಲಾದ ವಿಷಯಗಳಿವೆ.
ಇಲ್ಲಿನ ಕುರುಹುಗಳ ಕ್ಷೇತ್ರ ಕಾರ್ಯದಲ್ಲಿ ಡಾ.ಶ್ರೀಮತಿ ಪದ್ಮಜಾದೇಸಾಯಿ, ಶ್ರೀ ಭೀರಪ್ಪ ಬಾವಿತಾಳ ಕುರಕುಂದಾ, ಹುಸೇನ್‌ಸಾಬ್ ಉಮಲೂಟಿ, ಹಾಗೂ ಸ್ಥಳೀಯರಾದ ನಾಗನಗೌಡ ಪಾಟೀಲ, ಶ್ರೀ ರಾಮಣ್ಣ ಹಿರೇ ಬೇರಿಗೆ, ಡಾ.ಅರುಣಕುಮಾರ, ಮಧುಸೂಧನ, ಶಿವಲಿಂಗಪ್ಪ ಹೂಗಾರ, ಪುಟ್ಟರಾಜ ಅಣುವಾಳ ಮೊದಲಾದವರು ನೆರವಾಗಿದ್ದರೆಂದು ಸಂಶೋಧಕ ಹಾಗೂ ಇತಿಹಾಸ ಉಪನ್ಯಾಸಕ ಡಾ.ಚನ್ನಬಸಪ್ಪ ಮಲ್ಕಂದಿನ್ನಿಯವರು ಪತ್ರಿಕೆಗೆ ತಿಳಿಸಿದ್ದಾರೆ.

About Mallikarjun

Check Also

ವೈದ್ಯ ಸೇವಾರತ್ನ ಪ್ರಶಸ್ತಿ ಪುರಸ್ಕೃತರಾದ ಡಾ.ಶರಣ ಬಸವರಾಜ ದೇವರಡ್ಡಿ ಅವರಿಗೆ ವನಸಿರಿ ಫೌಂಡೇಶನ್ ವತಿಯಿಂದ ಸನ್ಮಾನ

Vaidya Sevaratna awardee Dr. Sharan Basavaraja Devaradi felicitated by Vanasiri Foundation ಇತ್ತೀಚೆಗೆ ಬೆಂಗಳೂರಿನ ನಯನ ಸಭಾಂಗಣದಲ್ಲಿ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.