Breaking News

ಗುಡೇಕೋಟೆ ಹಾವು ಕಚ್ಚಿ : ರೈತ ಸಾವು.

Gudekote snake bite : Farmer dies.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಗುಡೇಕೋಟೆ :- ತಮ್ಮ ಹೊಲದಲ್ಲಿ ಧನಗಳಿಗೆ ಹುಲ್ಲು ಕೊಯ್ಯುವಾಗ ರೈತನೋರ್ವನಿಗೆ ಎಡಗೈ ಮದ್ಯದ ಬೆರಳಿಗೆ ವಿಷಜಂತು ಹಾವೊಂದು ಕಚ್ಚಿದ ಪರಿಣಾಮ ಮೃತಪಟ್ಟ ಘಟನೆ ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಗುಡೇಕೋಟೆ ಗ್ರಾಮದಲ್ಲಿ ಗುರುವಾರ ಜರುಗಿದೆ.

ಗುಡೇಕೋಟೆ ಎಂ.ಚಂದ್ರಪ್ಪ (27) ಎಂಬ ರೈತನೇ ಹಾವು ಕಚ್ಚಿದ ಪರಿಣಾಮ ಮೃತಪಟ್ಟ ದುರ್ದೈವಿಯಾಗಿದ್ದಾನೆ. ಈತನು ಲಿಂಗನಹಳ್ಳಿ ತಾಂಡದ ಬಳಿ ಇರುವ ಇವರ ಜಮೀನಿನಲ್ಲಿ ಗುರುವಾರ ಸಂಜೆ 4.30 ಗಂಟೆ ಸುಮಾರಿಗೆ ಧನಗಳಿಗೆ ಹುಲ್ಲು ಕೊಯ್ಯುವಾಗ ಅಲ್ಲೇ ಎಲ್ಲೋ ಹುಲ್ಲಿನೊಳಗಿದ್ದ ಇದ್ದ ವಿಷಜಂತು ಹಾವೊಂದು ಕಚ್ಚಿದ ಪರಿಣಾಮ ತಕ್ಷಣ ಆತನನ್ನು ಗುಡೇಕೋಟೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಯಿತಾದರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುತ್ತಾನೆಂದು ಮೃತನ ಹೆಂಡತಿ ಶಾಂತಮ್ಮ ನವರು ನೀಡಿದ ದೂರಿನಂತೆ ಗುಡೇಕೋಟೆ ಪೊಲೀಸ್ ಠಾಣೆಯ ಪಿಎಸ್ಐ ಸುಬ್ರಮಣ್ಯಂ ಜಿ. ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

About Mallikarjun

Check Also

ಜಿಲ್ಲಾ ಕಾಂಗ್ರೆಸ್‌ಗೆ ಕಾರ್ಯದರ್ಶಿಯಾಗಿ ವಿಶಾಲಾಕ್ಷಿ ನೇಮಕ

Vishalakshi appointed as secretary of District Congress ಕೊಪ್ಪಳ: ತಾಲೂಕಿನ ಕಿನ್ನಾಳ ಗ್ರಾಮದ ವಿಶಾಲಾಕ್ಷಿ ವಿರೇಶ ತಾವರಗೇರಿ ಅವರನ್ನು …

Leave a Reply

Your email address will not be published. Required fields are marked *