ಮಾಜಿ ಶಾಸಕರಾದ ಪರಣ್ಣಮುನವಳ್ಳಿಯವರ ನೇತೃತ್ವದಲ್ಲಿ ಸದಸ್ಯತ್ವ,ಮಹಾಸಂಪರ್ಕ ಅಭಿಯಾನ

H.Mallikarjun
H.Mallikarjun - Kalyanasiri
1 Min Read

Membership, Mahasamparka Abhiyan led by former MLA Parannamunavalli

ಜಾಹೀರಾತು

ಗಂಗಾವತಿ: ಇಂದು ಸದಸ್ಯತ್ವ ಅಭಿಯಾನ 2024 ರ ಅಡಿಯಲ್ಲಿ ಮಹಾಸಂಪರ್ಕ ಅಭಿಯಾನ ದ ಗಂಗಾವತಿ ನಗರದ ವಿವಿಧೆಡೆಯಲ್ಲಿ ಸಂಚರಿಸಿ ಮಾಜಿ ಶಾಸಕರಾದ ಪರಣ್ಣ ಮುನವಳ್ಳಿಯವರ ನೇತೃತ್ವದಲ್ಲಿ ಸದಸ್ಯತ್ವ ಮಾಡಿಸಲಾಯಿತು.
ವಿಶೇಷವಾಗಿ ನವಜೀವನಕ್ಕೆ ಕಾಲಿಟ್ಟ ದಂಪತಿಗಳಿಗೆ ಅಭಿಯಾನದ ಬಗ್ಗೆ ತಿಳಿಸಿದಾಗ ಅವರುಯ ಕೂಡಾ ಸ್ವಯಂ ಪ್ರೇರಿತರಾಗಿ ಸದಸ್ಯತ್ವ ಹೊಂದಲು ಒಪ್ಪಿಕೊಂಡಾಗ ಆರತಕ್ಷತೆ ಕಾರ್ಯಕ್ರಮದಲ್ಲೇ ನೂತನ ವಧುವರರು ಸದಸ್ಯತ್ವ ಪಡೆದುಕೊಂಡರು.
ಬಳ್ಳಾರಿ ಜಿಲ್ಲಾಧ್ಯಕ್ಷರಾದ ಅನಿಲ ನಾಯ್ಡುರವರು, ಕೊಪ್ಪಳ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವು ಅರಿಕೇರಿ, ಪ್ರಮುಖರಾದ ಮಂಜುನಾಥ ಸಂಗಾಪುರ, ಯಮನೂರಪ್ಪ ನಾಯಕ, ಮಂಜುನಾಥ ಭೋವಿ, ಬಾಲು, ಬಸವಪ್ರಭು, ಪ್ರಧಾನ ಕಾರ್ಯದರ್ಶಿಗಳಾದ ಸಂಗಯ್ಯ ಸ್ವಾಮಿ, ಶ್ರೀನಿವಾಸ ಧೂಳಾಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ರುದ್ರೇಶ, ಉಪಸ್ಥಿತರಿದ್ದರು.

Total Views: 0
Share This Article