Breaking News

ರೈಲ್ವೆ ನಿಲ್ದಾಣದ ಹೊಸಕಟ್ಟಡ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲಾಗುವುದು: ಕೇಂದ್ರ ಸಚಿವ ವಿ.ಸೋಮಣ್ಣ ಭರವಸೆ

Various demands including new construction of railway station will be fulfilled: Union Minister V. Somanna assured

ಜಾಹೀರಾತು

ರಾಯಚೂರು: ರೈಲ್ವೆ ಪ್ರಯಾಣದಲ್ಲಿ ಹಿರಿಯ ನಾಗರಿಕರಿಗೆ 50% ರಿಯಾಯಿತಿಯನ್ನು ಪುನರ್ ಪ್ರಾರಂಭಿಸಬೇಕು ಹಾಗೂ ರಾಯಚೂರು ರೈಲು ನಿಲ್ದಾನದ ಹೊಸ ಕಟ್ಟಡ ನಿರ್ಮಾಣವನ್ನು ಅಮೃತ ಭಾರತ ನಿಲ್ದಾಣ ಯೋಜನೆಯಲ್ಲಿ ಪ್ರಾರಂಭಿಸಬೇಕೆನ್ನುವ ಬೇಡಿಕೆ ಸೇರಿದಂತೆ 17 ಬೇಡಿಕೆಗಳ ಮನವಿ ಪತ್ರವನ್ನು ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣನವರಿಗೆ ಮಂಗಳವಾರ(ಸೆ.3) ರಂದು ಸಲ್ಲಿಸಲಾಯಿತು.

ಇತರ ಬೇಡಿಕೆಗಳು ಇಂತಿವೆ.
ಸಿಂಧನೂರಿನಿಂದ ರಾಯಚೂರುವರೆಗಿನ ಹೊಸ ರೈಲು ಮಾರ್ಗದ ಬಾಕಿ ಕಾಮಗಾರಿಯನ್ನು ತ್ವರಿತಗೊಳಿಸಬೇಕು. ಗದಗದಿಂದ ವಾಡಿವರೆಗಿನ ಹೊಸ ರೈಲು ಮಾರ್ಗದ ಬಾಕಿ ಕಾಮಗಾರಿಗೆ ವೇಗವನ್ನು ಕಲ್ಪಿಸಬೇಕು. ರಾಯಚೂರಿನಿಂದ ಯರ್ಮರಸ್‌ಗೆ ಗುಡ್ ಶಿಫ್ಟಿಂಗ್ ಮಾಡಬೇಕು.
ಸೋಲಾಪುರ – ಗುಂತಕಲ್ ಪ್ಯಾಸೆಂಜರ್,
ಕಾಕಿನಾಡ – ರಾಯಚೂರು ವಿಶೇಷ ಟ್ರೈವೀಕ್ಲಿ ಎಕ್ಸ್‌ಪ್ರೆಸ್‌, ಬೆಳಗಾವಿ – ಮನಗೂರು ಎಕ್ಸ್‌ಪ್ರೆಸ್‌
ನಾಂದೇಡ್- ರಾಯಚೂರು – ಪರ್ಭಾನಿ ಎಕ್ಸ್‌ಪ್ರೆಸ್ (ಪ್ರಸ್ತುತ ತಾಂಡೂರು – ರಾಯಚೂರು ನಡುವೆ ಭಾಗಶಃ ರದ್ದುಗೊಳಿಸಲಾಗಿದೆ)ಈ ರೈಲುಗಳ ಸಂಚಾರವನ್ನು ಪುನರ್ ಪ್ರಾರಂಭಿಸಬೇಕು.
ಮಚ್ಲಿಪಟ್ಟಣಂ – ಮಂತ್ರಾಲಯಂ ವಿಶೇಷ ತ್ರಿವಾರ ಎಕ್ಸ್‌ಪ್ರೆಸ್ ಪ್ರಾರಂಭಿಸಬೇಕು.
ಗೋರಖ್‌ಪುರ-ಯಶವಂತಪುರ ಎಕ್ಸ್‌ಪ್ರೆಸ್ ರೈಲು ರಾಯಚೂರಿನಲ್ಲಿ ನಿಲುಗಡೆಯಾಗಬೇಕು. ಯಶವಂತಪುರ- ಬಿಕಾನೇರ್ ಎಕ್ಸ್‌ಪ್ರೆಸ್ ಅನ್ನು ರಾಯಚೂರು ಮೂಲಕ ತಿರುಗಿಸಬೇಕು.
ರಾಯಚೂರು – ಕಾಚೇಗೌಡ ರೈಲಿನ ಸಮಯವನ್ನು ಸಂಜೆಯಿಂದ ಮುಂಜಾನೆಗೆ ಬದಲಾಯಿಸಬೇಕು. ಪ್ಲಾಟ್‌ಫಾರ್ಮ್‌ನಲ್ಲಿ ಆಹಾರ ಟ್ರ್ಯಾಕ್,, ಎಸ್ಕಲೇಟರ್‌ಗಳು, ಪ್ರಯಾಣಿಕರ ರೈಲು ಸೇವೆಯ ಪ್ರಾಥಮಿಕ ನಿರ್ವಹಣೆಗಾಗಿ ಪಿಟ್‌ಲೈನ್ ವ್ಯವಸ್ಥೆ ಕಲ್ಪಿಸಬೇಕು. ಪ್ರಸ್ತುತ ರಾಯಚೂರು ರೈಲು ನಿಲ್ದಾಣದಲ್ಲಿ ಕೇವಲ 3 ಪ್ಲಾಟ್ ಫಾರಂಗಳಿದ್ದು ಅಗತ್ಯವಿರುವ ಹೆಚ್ಚುವರಿ ಪ್ಲಾಟ್‌ಫಾರ್ಮ್ 4 ಮತ್ತು 5 ನಿರ್ಮಿಸಬೇಕೆಂದು ಮನವಿಯಲ್ಲಿ ವಿನಂತಿಸಲಾಗಿದೆ.

ಮನವಿ ಸ್ವೀಕರಿಸಿ ಮಾತನಾಡಿದ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮವಣ್ಣ ಅವರು, ನೂತನ ರೈಲ್ವೆ ನಿಲ್ದಾಣ ಸೇರಿದಂತೆ ಎಲ್ಲ ಬೇಡಿಕೆಗಳು ಸೂಕ್ತ ಹಾಗೂ ಯೋಗ್ಯವಾಗಿದ್ದು ಎಲ್ಲವನ್ನು ಈಡೇರಿಸುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಶಾಸಕ ಡಾ.ಶಿವರಾಜ್ ಪಾಟೀಲ್, ಮಾಜಿ ಸಚಿವ ಕೆ.ಶಿವನಗೌಡ ನಾಯಕ, ಮಾಜಿ ಶಾಸಕರಾದ ಬಸನಗೌಡ ಬ್ಯಾಗವಾಟ್, ಗಂಗಾಧರ ನಾಯಕ, ಮುಖಂಡರಾದ ತ್ರಿವಿಕ್ರಮಜೋಷಿ ರೈಲ್ವೆ ಸಲಹಾ ಸಮಿತಿ ಮಾಜಿ ಸದಸ್ಯ ಡಾ. ಬಾಬುರಾವ್ ಸೇರಿದಂತೆ ಇತರರು ಇದ್ದರು.

About Mallikarjun

Check Also

ಎಸ್ಸಿ ಎಸ್ಟಿ ಮೀನುಗಾರರಿಗೆ ವಾಹನ ಖರೀದಿಸಲು ಸಹಾಯಧನಕ್ಕಾಗಿ ಅರ್ಜಿ ಆಹ್ವಾನ

Applications invited for subsidy for SC/ST fishermen to purchase vehicles ಕೊಪ್ಪಳ ಆಗಸ್ಟ್ 30 (ಕರ್ನಾಟಕ ವಾರ್ತೆ): …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.