Breaking News

ಕೆಎಲ್ ಇ ಕಾಲೇಜು ಕ್ರೀಡಾಕೂಟಕ್ಕೆ:ಹುಣಸಿಮರ ನಾಶ,ಸ್ಥಳೀಯ ನಿವಾಸಿಗಳಿಂದಾಕ್ರೋಶ

For KLE College Games: Destruction of Hunasimara,,, Outrage from local residents

ಜಾಹೀರಾತು


ವರದಿ : ಪಂಚಯ್ಯ ಹಿರೇಮಠ

ಕೊಪ್ಪಳ : ಐತಿಹಾಸಕ ಹಿನ್ನೇಲೆಯುಳ್ಳ ಪಟ್ಟಣದ 19ನೇ ವಾರ್ಡ್ ಗುದ್ನೇಶ್ವರ ಮಠದಲ್ಲಿ ನೂರಾರು ವರ್ಷ ಇತಿಹಾಸವಿರುವ ಹುಣಸೆ ಮರಗಳಿದ್ದು, ಅವುಗಳನ್ನು ಯಾರು ಸ್ವಂತಕ್ಕೆ ಉಪಯೋಗಿಸದಂತೆ ಕಾನೂನು ನಿರ್ಬಂಧ ಹೆರಲಾಗಿತ್ತು. ಆದರೆ ಏಕಾ ಏಕಾ ಕೆಎಲ್ ಇ ಕಾಲೇಜಿನವರು ಯಾವ ನಿರ್ಭಂದವು ಇಲ್ಲದೇ ಕ್ರೀಡಾ ಕೂಟದ ನೆಪದಲ್ಲಿ ಮರಗಳ ಮಾರಣ ಹೋಮ ಮಾಡಲು ಹೊರಟಿದ್ದಾರೆ ಎಂದು ಗುದ್ನೇಪ್ಪನಮಠದ ಸಮಿತಿ ಅಧ್ಯಕ್ಷ ರುದ್ರಯ್ಯ ವೀರಪಣ್ಣವರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮಾಧ್ಯಮದೊಂದಿಗೆ ಮಾತನಾಡಿದ ಅವರು ಈ ಮಠಕ್ಕೆ ನೂರಾರು ವರ್ಷಗಳ ಇತಿಹಾಸವಿದ್ದು ಗುದ್ನೇಶ್ವರ ಸ್ವಾಮಿಯು ಬಿತ್ತಿದನೆಂದು, ಅವುಗಳು ಮುಂದೆ ಕಾಲಕ್ರಮೇಣ ಬೃಹತ್ ಮರಗಳಾಗಿ ಬೆಳದಿದ್ದು, ಅವುಗಳಿಂದ ಬರುವ ಹುಣಸಿಹಣ್ಣಿನ ಆದಾಯವನ್ನು ತಾಲೂಕಾಡಳಿತವು ತೆಗೆದುಕೊಳ್ಳುತ್ತಾ, ಜಾತ್ರಾ ಮಹೋತ್ಸವದಂತಹ ಕಾರ್ಯಕ್ರಮಗಳನ್ನು ನಡೆಸುತಿತ್ತು.

ಮಠಕ್ಕೆ ಸಂಬಂಧಿಸಿದಂತೆ ಸುಮಾರು ಆರರಿಂದ ಎಂಟುನೂರು ಮರಗಳಿದ್ದು, ಅವುಗಳು ಬಹಳ ಹಿಂದಿನವಾಗಿದ್ದು ಕೇಲವೊಂದಿಷ್ಟು ತಾವೇ ನೆಲಕ್ಕೂರುಳಿ, ಇನ್ನೂ ನಾಲ್ಕೈದು ನೂರು ಮರಗಳು ಉಳಿದದ್ದು, ಅವುಗಳನ್ನು ಪ್ರತಿ ವರ್ಷ ಹರಾಜು ಮಾಡಲಾಗುತ್ತದೆ ಎಂದರು.

ಈ ಮರಗಳನ್ನು ಯಾರೇ ಕಡಿಯುವುದಾಗಲಿ, ಹುಣಸಿಹಣ್ಣು ಹರಿಯುವುದಾಗಲಿ, ಮಾಡಿದರೇ ಕಾನೂನು ಕ್ರಮ ಕೈಗೊಳ್ಳಲಾಗುತ್ತಿತ್ತು ಆದರೆ. ತಾಲೂಕಾಡಳಿತ ಹಾಗೂ ಕಮಿಟಿಯವರಿಗೆ ಈ ವಿಷಯವನ್ನು ತಿಳಿಸದೇ ಮರಗಳನ್ನು ನೆಲಕ್ಕೂರುಳಿಸಿದ್ದು ಸಾರ್ವಜನಿಕರ ಹಾಗೂ ಪರಿಸರ ಪ್ರೇಮಿಗಳಿಗೆ ಆಕ್ರೋಶವನ್ನುಂಟು ಮಾಡಿದೆ.

ಈ ಕುರಿತು ಇಲ್ಲಿನ ನಿವಾಸಿಗಳು ಮಾತನಾಡಿ ಈ ಹಿಂದೆ ನಮ್ಮ ಜಮೀನಿನಲ್ಲಿ ನಾವು ಕೃಷಿ ಚಟುವಟಿಕೆ ಕೈಗೊಂಡಾಗ ಸುಖಾ ಸುಮ್ಮನೆ, ಹುಣಸೆಮರಗಳನ್ನು ಕಡಿದಿದ್ದಿರೀ ಎಂದು ಆರ್ ಐ ನಮ್ಮ ಗ್ರಾಮದವರ ಮೇಲೆ ಎಫ್ ಆಯ್ ಆರ್ ದಾಖಲಿಸಿ ನಮ್ಮ ಮೇಲೆ ಕೇಸ್ ಮಾಡಿದ್ದರು, ಆದರೆ ಇಂದು ಕ್ರೀಡಾಕೂಟದ ನೆಪಗಳಿಂದ ಹಾಗೂ ಕೆ ಎಲ್ ಇ ಕಾಲೇಜಿನ ಕೇಲವೊಂದಿಷ್ಟು ಸದಸ್ಯರ ಹಾಗೂ ಮುಖಂಡರ ಮಾತುಗಳನ್ನು ಕೇಳಿ, ಕಾಲೇಜು ಪ್ರಾಚಾರ್ಯರು ಮುಂದೆ ನಿಂತು ಹುಣಸೆಮರಗಳನ್ನು ನೆಲಕೂರುಳಿಸಿದರು ಸ್ಥಳೀಯ ತಾಲೂಕ ಆಡಳಿತವಾಗಲಿ ಕಾನೂನು ಕ್ರಮ ಕೈಗೊಳ್ಳಲು ಮುಂದಾಗುತ್ತಿಲ್ಲಾ ಎಂದು ದೂರಿದರು.

ಈ ಸರ್ವೆ ನಂಬರ್ ಮೇಲೆ ಕೊರ್ಟ್ ಸ್ಟೇ ಇದ್ದರು ಸಹಿತ ಕಾನೂನು ಉಲ್ಲಂಘನೆಯಲ್ಲಿ ತೊಡಗಿದ್ದಾರೆ, ಮರಗಳನ್ನು ರಕ್ಷಿಸಿ ಫೋಸಿಸ ಬೇಕಾದ ಇವರೇ ಈ ರೀತಿ ವರ್ತನೆ ತೋರಿಸುವುದು ಸರಿಯೇ ಎಂದು ಪ್ರಶ್ನೀಸಿದರು.

ಈ ಕುರಿತು ಪ್ರಾಚಾರ್ಯ ಅರುಣ ಮಾತನಾಡಿ ನಮ್ಮ ಕಾಲೇಜಿನ ಕ್ರೀಡಾ ಕೂಟದ ಅಂಗವಾಗಿ ಸ್ವಚ್ಚತೆ ಮಾಡುತ್ತಿದ್ದೆವೆ, ನಾವು ಮರಗಳಿಗೆ ಯಾವುದೇ ದಕ್ಕೆಯನ್ನುಂಟು ಮಾಡಿಲ್ಲಾ ಎಂದು ಸಮರ್ಥನೆ ನೀಡಿದರು.

ಈ ಸಂದರ್ಭದಲ್ಲಿ ಸಿದ್ದಲಿಂಗಯ್ಯ ಬಂಡಿ, ಶರಣಯ್ಯ ಹುಣಸಿಮರದ, ಜಗನ್ನಾಥ ಭೋವಿ, ಸಂಗಯ್ಯ ಬಂಡಿ, ರುದ್ರಯ್ಯ ಬಂಡಿ, ರುದ್ರಯ್ಯ ಓಲಿ, ಶರಣಯ್ಯ ಹೂವಿನಾಳ, ರುದ್ರಯ್ಯ ನಾಗಣ್ಣವರ್, ಈರಯ್ಯ ನಾಗಣ್ಣವರ್ ಇದ್ದರು.

About Mallikarjun

Check Also

ಕುಷ್ಟಗಿ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟ: ನೋಂದಣಿಗೆ ಸೂಚನೆ

Kushtagi Taluk Level Dasara Games: Notice for registration ಕೊಪ್ಪಳ ಆಗಸ್ಟ್ 29 (ಕರ್ನಾಟಕ ವಾರ್ತೆ): 2025-26ನೇ ಸಾಲಿನ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.