No problem for drug dealers: Nagarsabha President Maula Saab
ಗಂಗಾವತಿ:ನಗರದ ಕೆಲವು ಕಡೆ ಕೆಲವು ವ್ಯಕ್ತಿಗಳು ಅಸಹಜವಾಗಿ ಔಷಧ ಸೇವನೆ ಮಾಡುತ್ತಿರುವ ಬಗ್ಗೆ ವರದಿಗಳು ಬಂದಿದ್ದು, ಇದರಿಂದ ಕಾನೂನು ಪ್ರಕಾರ ವ್ಯವಹರಿಸುವ ಔಷಧ ವ್ಯಾಪಾರಿಗಳಿಗೆ ತೊಂದರೆ ಕೊಡುವುದು ಬೇಡ ಎಂದು ನಗರ ಸಭಾ ಅಧ್ಯಕ್ಷ ಮೌಲಾ ಸಾಬ್ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಔಷಧೀಯ ಭವನದಲ್ಲಿ ಎಂಟಿ ಬಯೋಟಿಕ್ ದುರುಪಯೋಗಗಳ ಕುರಿತು ಪ್ರಕಟಿಸಲಾದ ‘ಪೋಷ್ಟರ’ ಬಿಡುಗಡೆ ಮಾಡಿ ಅವರು ಮಾತನಾಡುತ್ತಿದ್ದರು. ಜನರ ಜೀವ ಉಳಿಸುವ ಔಷಧ ವ್ಯಾಪಾರಿಗಳಿಗೆ ವಿನ್ಹ ಕಾರಣ ತೊಂದರೆಯಾಗಬಾರದು.ಅಧಿಕಾರಿಗಳು, ಆರೋಪಿಗಳನ್ನು ಪತ್ತೆ ಹಚ್ಚಬೇಕು ಎಂದವರು ಒತ್ತಾಯಿಸಿದರು.
ನಗರ ಸಭೆಯ ಸ್ಯಾನಿಟರಿ ಇನ್ಸಪೆಕ್ಟರ್ ಅವರ ಮೂಲಕ ಔಷಧ ವ್ಯಸನಿಗಳ ಪತ್ತೆಗೆ ಸಹಕಾರ ನೀಡಬೇಕು ಎಂದು ಔಷಧ ವ್ಯಾಪಾರಿಗಳ ಸಂಘದ ಅಧ್ಯಕ್ಷ ಅಶೋಕಸ್ವಾಮಿ ಹೇರೂರ ನಗರ ಸಭೆ ಅಧ್ಯಕ್ಷರು, ಮತ್ತು ಸದಸ್ಯರನ್ನು ಕೋರಿದರು.ಸತ್ಯಾ ಸತ್ಯತೆಯನ್ನು ಪತ್ತೆ ಹಚ್ಚಲು ಔಷಧ ವ್ಯಾಪಾರಿಗಳು ಮುಂದಾಗ ಬೇಕೆಂದು ಅವರು ಕರೆ ನೀಡಿದರು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯರುಗಳಾದ ಮನೋಹರ ಸ್ವಾಮಿ, ಉಸ್ಮಾನ್ ಬಿಚ್ಕತ್ತಿ , ಸೋಮನಾಥ್ ಭಂಡಾರಿ,ನವೀನ್ ಮಾಲಿ ಪಾಟೀಲ್, ವಾಸುದೇವ್ ನವಲಿ, ಪರಶುರಾಮ್ ಮಡ್ಡೇರ್ ಸೇರಿದಂತೆ ಪ್ರಮುಖರಾದ ರಾಜಪ್ಪ ಸಿದ್ದಾಪುರ, ಸೋಮ್ನಾಥ್ ಕಂಪ್ಲಿ ಮತ್ತು ಸಹಾಯಕ ಔಷಧ ನಿಯಂತ್ರಕರಾದ ವೆಂಕಟೇಶ ರಾಠೋಡ ಕಾರ್ಯಕ್ರಮದಲ್ಲಿ ಹಾಜರಿದ್ದರು.
ಕಾರ್ಯಕ್ರಮದಲ್ಲಿ ಬಳ್ಳಾರಿ ವಿಜಯನಗರ ವೈದ್ಯಕೀಯ ಮಹಾ ವಿದ್ಯಾಲಯದಲ್ಲಿ ಎಮ್.ಬಿ.ಬಿ.ಎಸ್.ಪದವಿ ಪಡೆದು,ವೈಧ್ಯಕೀಯ ಸ್ನಾತಕೋತ್ತರ ಪದವಿ ಪ್ರವೇಶ ಪರೀಕ್ಷೆಯಲ್ಲಿ ರಾಷ್ಟ್ರ ಮಟ್ಟದಲ್ಲಿ 1734 ನೇ ರ್ಯಾಂಕ ಪಡೆದ ಎಚ್.ವಿ.ಫ಼ಾರ್ಮಾ ಮಾಲೀಕರಾದ ಫ಼ಾರ್ಮಾಸಿಸ್ಟ ಎಸ್. ನಾಗರಾಜ ಮತ್ತು ಶ್ರೀಮತಿ ಲತಾ ಅವರ ಪುತ್ರ ಡಾ.ಎಸ್.ಪ್ರಜ್ವಲ್ ಅವರನ್ನು ಮತ್ತು ಸುಜಾತಾ ಮೆಡಿಕಲ್ ಸ್ಟೊರ್ಸ್ ಮಾಲೀಕರಾದ ಮರೆಗೌಡ ಮಾಲಿ ಪಾಟೀಲ್ ಮತ್ತು ಶ್ರೀಮತಿ ಸುಜಾತಾ ಇವರ ಪುತ್ರಿ ಶೃತಿ ಬೂದಗುಂಪಾ ಡಾಕ್ಟರೇಟ್ ಪದವಿಗೆ ಭಾಜನರಾಗಿರುವುದಕ್ಕೆ ಅವರನ್ನು ಸನ್ಮಾನಿಸಲಾಯಿತು. 200 ಕ್ಕೂ ಹೆಚ್ಚು ಜನ ಔಷಧ ವ್ಯಾಪಾರಿಗಳು ಸಭೆಯಲ್ಲಿ ಹಾಜರಿದ್ದರು.
Under the leadership of Gangavati Rashtriya Basavadal, program started at Kalyan Kranti Samsmarane Kathapathana A 3, Rinsharanaramane.
ಗಂಗಾವತಿ:ನಗರದ ರಾಷ್ಟ್ರೀಯ ಬಸವದಳದವರ ನೇತೃತ್ವದಲ್ಲಿ ಕಲ್ಯಾಣ ಕ್ರಾಂತಿ ಸಂಸ್ಮರಣೆ ಕಥಾಪಠಣ ಅಕ್ಟೋಬರ್ 3, ಗುರುವಾರದಿಂದ ಜರುಗಲಿದೆ. ಕ್ರಿ.ಶ.12ನೇ – ಶತಮಾನದಲ್ಲಿ ಕಲ್ಯಾಣಕ್ರಾಂತಿ ಅಪೂರ್ವ – ದಿಟ್ಟ ಹೆಜ್ಜೆಯ ಹೋರಾಟದ ಫಲಶೃತಿ ಭಾರತ ದೇಶದ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಇಬ್ಬರು ವರ್ಣೀಯರ ನಡುವೆ ನಂಟಸ್ಥಿಕೆ, ಬಸವಣ್ಣನವರ ನೇತೃತ್ವದಲ್ಲಿ ಜರುಗಿತ್ತು. ಆಘಟನೆಗೆ ಬಸವಣ್ಣನವರನ್ನು ಗಡಿಪಾರು ಮಾಡಲಾಯಿತು. ಹರಳಯ್ಯ, ಮಧುವರಸ, ಶೀಲವಂತರನ್ನು ಎಹೋಟಿ ಶಿಕ್ಷೆಗೆ ಗುರಿಪಡಿಸಲಾಯಿತು.
ಈ ಎಲ್ಲಾ ಬಲಿದಾನವಾದುದು ಸ್ವಾರ್ಥಕ್ಕಾಗಿ ಅಲ್ಲ ಮತ್ತು ಹೆಣ್ಣು ಹೊನ್ನು ಮಣ್ಣಿನ ಆಸಿಗೆಅಲ್ಲ ಇವೆಲ್ಲವೂ ಸಮಾನತೆಯನ್ನು ಸಾಧಿಸಲಿಕ್ಕೆ ಎಂಬ ಅಂಶವನ್ನು ಬಿಂಬಿಸುವ ಉದ್ದೇಶವೇ ಕಲ್ಯಾಣ ಕ್ರಾಂತಿ ಸಂಸ್ಮರಣೆ ಕಥಾ ಪಠಣದ ಉದ್ದೇಶ. ಅಕ್ಟೋಬರ್ 03 ರಿಂದ 11 ಅಕ್ಟೋಬರ್ ವರೆಗೆ ಸಂಜೆ 6 ರಿಂದ 7.30 ರವರೆಗೆ ಶರಣರ ಮನೆಯಲ್ಲಿ ಕಲ್ಯಾಣ ಕ್ರಾಂತಿ ಕಥಾಪಠಣ ಜರುಗಲಿದೆ. 12ನೇ ಅಕ್ಟೋಬರ್ ದಂದು ಶನಿವಾರ ಬೆಳಿಗ್ಗೆ 9 ಗಂಟೆಗೆ ಮಂಟಪದಲ್ಲಿ ಕಲ್ಯಾಣ ಕ್ರಾಂತಿಯ ಕಥಾ ಪಠಣ ಮಂಗಲ ಸಮಾರೋಪ ಹಾಗೂ ಬಸವ ಧರ್ಮ ವಿಜಯೋತ್ಸವ ಜರುಗಲಿದೆ.ಎಂದು ಅಧ್ಯಕ್ಷ ದೀಲಿಪ್ ವಂದಾಲ ತಿಳಿಸಿದ್ದಾರೆ.
Young people for a strong India: Manjula Lokaye Naik
ಗಂಗಾವತಿ: ಸರ್ಕಾರಿ ಜೂನಿಯರ್ ಕಾಲೇಜ್ ಗಂಗಾವತಿಯ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರ-೨೦೨೪ರ ಕಾರ್ಯಕ್ರಮ ರಾಮದುರ್ಗ (ಗೂಗಿಬಂಡಿ) ಯಲ್ಲಿ ಸೆಪ್ಟೆಂಬರ್-೨೯ ರಂದು ಸಂಜೆ ಅಧಿಕೃತವಾಗಿ ಸಸಿ ನೆಡುವುದರೊಂದಿಗೆ ಉದ್ಘಾಟನೆಗೊಂಡಿತು. ಏಳು ದಿನಗಳವರೆಗೆ ನಡೆಯುವ ಈ ಶಿಬಿರದ ಉದ್ಘಾಟನೆಯನ್ನು ಸಂಗಾಪುರ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶ್ರೀಮತಿ ಮಂಜುಳಾ ಲೋಕೇನಾಯಕ್ ರವರು ಉದ್ಘಾಟಿಸಿ ಮಾತನಾಡುತ್ತಾ “ನಾನು ಕಾಲೇಜುವರೆಗೂ ಓದಿದ್ದೇನೆ ಆದರೆ ನಾನು ಎನ್.ಎಸ್.ಎಸ್ ಶಿಬಿರ ಸೇರಲಿಲ್ಲ. ಅಂತಹ ಅವಕಾಶ ನನಗೆ ಸಿಗಲಿಲ್ಲ. ಎನ್.ಎಸ್.ಎಸ್ ಅಂದ್ರೆ ಏನು ಅಂತ ನನಗೆ ಗೊತ್ತಿತ್ತು. ಇಂಥ ಅವಕಾಶ ನಿಮಗೆ ಸಿಕ್ಕಿದ್ದು, ತುಂಬಾ ಖುಷಿಯಾಗಿರತಕ್ಕಂತ ವಿಚಾರ. ನೀವೆಲ್ಲರೂ ಕೂಡ ಇದರ ಸದುಪಯೋಗಪಡಿಸಿಕೊಳ್ಳಬೇಕು. ನಿಮ್ಮ ವ್ಯಕ್ತಿತ್ವ ವಿಕಸನ ಇದರಲ್ಲಿದೆ. ನಾಡು-ನುಡಿಗಾಗಿ ಸೇವೆ ಸಲ್ಲಿಸುವ ಕೆಲಸ, ಸೇವೆಯೇ ಬಾಳುವೆ ಎಂಬ ಸಂದೇಶವನ್ನು ಸಾರುವ ಈ ಶಿಬಿರ ಯಶಸ್ವಿಯಾಗಲಿ. ಗ್ರಾಮದ ಪರವಾಗಿ ನಿಮಗೆ ಎಲ್ಲಾ ರೀತಿಯಿಂದ ಸಹಕಾರ ನೀಡುತ್ತೇವೆ” ಎಂದು ಹೇಳಿದರು. ಅದಕ್ಕೂ ಮೊದಲು ಎನ್.ಎಸ್.ಎಸ್ ಧ್ವಜಾರೋಹಣ ನಡೆಯಿತು. ಎನ್.ಎಸ್.ಎಸ್ ಪ್ರತಿಜ್ಞಾವಿಧಿಯನ್ನು ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷರಾದ ಸೋಮಶೇಖರಗೌಡ ಇವರು ನಡೆಸಿಕೊಟ್ಟರು. ಪ್ರಾಸ್ತಾವಿಕವಾಗಿ ಡಾ. ಲಿಂಗಣ್ಣ ಜಂಗಮರಹಳ್ಳಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಚಾರ್ಯರಾದ ಬಸಪ್ಪ ನಾಗೋಲಿಯವರು “ದೇಶ ಕಟ್ಟುವ ಕೆಲಸ, ಗಾಂಧೀಜಿಯವರ ಆಶಯದ ಈ ಚಿಂತನೆಗಳು ನಾಡಿನಾದ್ಯಂತ ಬಿತ್ತರಿಸಬೇಕು, ಗ್ರಾಮದ ಉದ್ಧಾರವೇ ಎನ್.ಎಸ್.ಎಸ್ ಧ್ಯೇಯವಾದ್ದರಿಂದ ಗ್ರಾಮದಡೆಗೆ ಮಕ್ಕಳನ್ನು ಕರೆದುಕೊಂಡು ಹೋಗಿ, ಅಲ್ಲಿ ವಸತಿ ಸಹಿತ ಶಿಬಿರಗಳನ್ನು ಮಾಡಿ ಹೊಸ ಅನುಭವಗಳನ್ನು ಪಡೆದುಕೊಳ್ಳುವಂತೆ ಮಾಡಿ ಮಕ್ಕಳ ವ್ಯಕ್ತಿತ್ವ ವಿಕಸನವನ್ನು ಮಾಡುವುದು ಮತ್ತು ಅವರು ಬದುಕುವ ಹೊಸ ಮಾರ್ಗಗಳನ್ನು ಕಂಡುಕೊಳ್ಳುವ ಹಲವಾರು ಚಿಂತನ ವಿಷಯಗಳನ್ನು ಹಮ್ಮಿಕೊಳ್ಳುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ” ಎಂದು ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಎರಡು ಎನ್.ಎಸ್.ಎಸ್ ಘಟಕದ ೪೫ ವಿದ್ಯಾರ್ಥಿನಿಯರು ಮತ್ತು ೫೫ ವಿದ್ಯಾರ್ಥಿಗಳು ಸೇರಿ ಒಟ್ಟು ೧೦೦ ಶಿಬಿರಾರ್ಥಿಗಳು ಭಾಗವಹಿಸಿದ್ದರು. ಕಾರ್ಯಕ್ರಮಾಧಿಕಾರಿಗಳಾದ ರುದ್ರೇಶ್ ತಬಾಲಿ, ಬಸವನದುರ್ಗ ಶಾಲೆಯ ಮುಖ್ಯ ಗುರುಗಳಾದ ಛತ್ರಪ್ಪ ತಂಬೂರಿ, ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, ರಾಮದುರ್ಗ ಗೂಗಿಬಂಡಿಯ ಎಸ್‌ಡಿಎಂಸಿ ಅಧ್ಯಕ್ಷರಾದ ನಾಗರಾಜ್ ಬಾಲಪ್ಪ ಹಾಗೂ ಮುಖ್ಯೋಪಾಧ್ಯಾಯರಾದ ಶ್ರೀನಿವಾಸ್ ಕೆ.ಎಸ್ ರವರು, ಗ್ರಾಮ ಪಂಚಾಯತ್ ಸದಸ್ಯರು, ಎಸ್.ಡಿ.ಎಂ.ಸಿ ಸದಸ್ಯರು, ಊರಿನ ಮುಖಂಡರು ಭಾಗವಹಿಸಿದ್ದರು. ಕೊನೆಯಲ್ಲಿ ಕಾಲೇಜಿನ ಗ್ರಂಥಪಾಲಕರಾದ ರಮೇಶ ಗಬ್ಬೂರ್ ವಂದಿಸಿದರು.
Gangavati’s Neelkantheswara Camp Housing Board’s attempt to grab space condemned: Shankar Ailey
ಗಂಗಾವತಿ: ಗಂಗಾವತಿ ನಗರದ ೨೫ನೇ ವಾರ್ಡ್ ನೀಲಕಂಠೇಶ್ವರ ಕ್ಯಾಂಪ್‌ನಲ್ಲಿನ ಕರ್ನಾಟಕ ಹೌಸಿಂಗ್ ಬೋರ್ಡ್ ಕಾಲೋನಿಯ ಸ.ನಂ. ೧೯೪, ೧೯೫ & ೧೯೬ ಹಾಗೂ ಇತರ ಹಿಸ್ಸಾಗಳಲ್ಲಿ ಮಾನ್ಯ ಲೋಕೋಪಯೋಗಿ ಇಲಾಖೆ ಗಂಗಾವತಿ ಇವರ ನಿರ್ವಹಣೆಯಲ್ಲಿ ೧೯ ವಸತಿ ಗೃಹಗಳು ಇದ್ದು, ಕೋಟ್ಯಾಂತರ ಸದರಿ ಕೋಟ್ಯಾಂತರ ರೂಪಾಯಿಯ ಮೌಲ್ಯಗಳ ಆಸ್ತಿಗಳನ್ನು ಕೆಲವೊಂದು ಖಾಸಗಿ ಪ್ರಭಾವಿ ವ್ಯಕ್ತಿಗಳು ತಮ್ಮ ಹೆಸರಿಗೆ ನೋಂದಣಿ ಮಾಡಿಸಿಕೊಳ್ಳಲು ಹೊಂಚು ಹೂಡಿರುವುದನ್ನು ಖಂಡಿಸುತ್ತೇವೆ ಎಂದು ಕರ್ನಾಟಕ ರಕ್ಷಣಾ ಸೇನೆ ಕೊಪ್ಪಳ ಜಿಲ್ಲಾ ಉಸ್ತುವಾರಿ ಅಧ್ಯಕ್ಷರಾದ ಶಂಕರ ಐಲಿ ಪ್ರಕಟಣೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು. ಅವರು ಇಂದು ಹೌಸಿಂಗ್ ಬೊರ್ಡ್ ಜಾಗೆಯನ್ನು ಕಬಳಿಸಲು ಪ್ರಯತ್ನಿಸುತ್ತಿರುವವರ ವಿರುದ್ಧ ಶಿಸ್ತು ಕ್ರಮಕ್ಕಾಗಿ ಆಗ್ರಹಿಸಿ ಸರ್ಕಾರಕ್ಕೆ ಹಾಗೂ ವಿವಿಧ ಇಲಾಖೆಗಳಿಗೆ ಪತ್ರ ಸಲ್ಲಿಸಿ ಮಾತನಾಡಿದರು. ಕರ್ನಾಟಕ ಹೌಸಿಂಗ್ ಬೋರ್ಡ್ನ ಗೃಹಗಳು ಶೀಥಿಲಗೊಂಡಿದ್ದು ಇನ್ನೂ ಕೆಲವು ಬಳಕೆಯಲ್ಲಿರುತ್ತವೆ. ಈಗಾಗಲೇ ಭೂಗಳ್ಳರು ಗಂಗಾವತಿ ನ್ಯಾಯಾಲಯದಲ್ಲಿ ತಮ್ಮ ಹೆಸರಿನಲ್ಲಿ ಧಾವೆ ಹಾಕಿಸಿಕೊಂಡು ಇತರ ಖಾಸಗಿ ವ್ಯಕ್ತಿಗಳ ಹೆಸರಿನಲ್ಲಿ ಆಸ್ತಿಯನ್ನು ಲಪಟಾಯಿಸಲು ಸಂಚು ಮಾಡಿರುತ್ತಾರೆ. ಸದರಿ ನ್ಯಾಯಾಲಯವು ಅವರ ಧಾವೆಯನ್ನು ತಿರಸ್ಕರಿಸಿದ್ದರೂ, ಸದರಿ ಪ್ರಭಾವಿ ಖಾಸಗಿ ವ್ಯಕ್ತಿಗಳು ಮುಂದಿನ ಘನ ನ್ಯಾಯಾಲಯಕ್ಕೆ ಮೊರೆ ಹೊಗಲು ಸಿದ್ಧರಿರುತ್ತಾರೆ. ಕಾರಣ ಕೋಟ್ಯಾಂತರ ರೂಪಾಯಿ ಮೌಲ್ಯದ ಸರ್ಕಾರಿ ಆಸ್ತಿಗಳನ್ನು ಕಬಳಿಸಲು ಹೊಂಚು ಹಾಕಿ ಸಂಚು ರೂಪಿಸಿರುವ ಇಂತಹ ವ್ಯಕ್ತಿಗಳ ಮೇಲೆ ಕಾನೂನು ಕ್ರಮ ಜರುಗಿಸಬೇಕು ಮತ್ತು ಸದರಿ ೧೯ ಲೋಕೋಪಯೋಗಿ ಇಲಾಖೆಯ ನಿರ್ವಹಣೆ ವಸತಿ ಗೃಹಗಳನ್ನು ಅಭಿವೃದ್ಧಿಗೊಳಿಸಿ ಸರ್ಕಾರದ ಅಧೀನದಲ್ಲಿ ಇಟ್ಟುಕೊಳ್ಳಬೇಕು. ಇಲ್ಲವಾದಲ್ಲಿ ಇಂತಹ ಕುಳಗಳು ಸಂಚು ರೂಪಿಸಿ ಸರ್ಕಾರಿ ಆಸ್ತಿಗಳನ್ನು ಕಬಳಿಸಿಕೊಳ್ಳಲಿದ್ದಾರೆ. ಇನ್ನೂ ಕೆಲವು ಖಾಸಗಿ ವ್ಯಕ್ತಿಗಳು ಕರ್ನಾಟಕ ಗೃಹ ಮಂಡಳಿ ನಿಗಮದ ಬೊಟ್ಟಿ ದಾಖಲೆಗಳನ್ನು ಸೃಷ್ಟಿಸಿಕೊಂಡು ೧೯೯೭- ೯೮ನೇ ಸಾಲಿನಲ್ಲಿ ಪುರಸಭೆ ಗಂಗಾವತಿಯಲ್ಲಿ ನೇರ ನೋಂದಣಿ ಮಾಡಿಸಿಕೊಂಡು ತಮ್ಮ ಮನಬಂದAತೆ ನಕಾಶೆಯನ್ನು ರೂಪಿಸಿಕೊಂಡು ಬೃಹತ್ತಾಕಾರದ ವಾಣಿಜ್ಯ/ವಸತಿ ಕಟ್ಟಡಗಳನ್ನು ನಿರ್ಮಿಸಿಕೊಂಡಿರುತ್ತಾರೆ. ಸದರಿಯವರು ನಿರ್ಮಿಸಿಕೊಂಡಿರುವ ಕಟ್ಟಡಗಳ ಬಗ್ಗೆ ಸಂಪೂರ್ಣವಾಗಿ ಪರಿಶೀಲನೆಗೆ ಒಳಪಡಿಸಿ, ಸ್ಥಳ ಪರಿಶೀಲನೆ ಮಾಡಿಸಿ ಸಂಬAಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಸರ್ಕಾರದ ಸ್ವಾಧೀನಕ್ಕೆ ತೆಗೆದುಕೊಳ್ಳುವಂತೆ ಆದೇಶ ನೀಡಲು ಸರ್ಕಾರಕ್ಕೆ ಆಗ್ರಹಿಸಿದರು. ಈ ಸಂದರ್ಭದಲ್ಲಿ ವಾರ್ಡಿನ ಮುಖಂಡರಾದ ಚಂದ್ರಪ್ಪ ಐಲಿ, ಬಸವರಾಜ ಐಲಿ, ವೆಂಕಟೇಶ ಡಿ.ಎನ್., ಮಹೆಬೂಬ ಸೇರಿದಂತೆ ಇತರರು ಉಪಸ್ಥಿತರಿದ್ದರು.
Congress youth leader Ravi Bosaraju visits Harijanwad
ವಿವಿಧ ಪ್ರಗತಿ ಕಾಮಗಾರಿಗಳ ವೀಕ್ಷಿಸಿದ ರವಿ ಬೋಸರಾಜು
ನಮ್ಮ ಸುತ್ತಮುತ್ತಲಿನ ವಾತಾವರಣವನ್ನು ನಾವೇಲ್ಲರು ಸ್ವಚ್ಛತೆಯಿಂದ ಕಾಪಾಡಬೇಕು
ನಗರದ ಹರಿಜನವಾಡ ಬಣಾವಣೆಯಲ್ಲಿ ನಡೆಯುತ್ತಿರುವ ಸ್ವಚ್ಛತೆಯ ಚರಂಡಿ ಸಿಸಿ ರಸ್ತೆ ಸೇರಿದಂತೆ ವಿವಿಧ ಕಾಮಗಾರಿಗಳನ್ನು ಕಾಂಗ್ರೆಸ್ ರಾಜ್ಯ ಯುವ ಮುಖಂಡರಾದ ರವಿ ಬೋಸ್ರಾಜು ಅವರು ಭೇಟಿ ನೀಡಿ ಕಾಮಗಾರಿಗಳನ್ನು ವೀಕ್ಷಿಸಿದರು
ನಮ್ಮ ಸುತ್ತಮುತ್ತಲಿನ ವಾತಾವರಣ ಸ್ವಚ್ಛಂದದಿಂದ ಕೂಡಿರಬೇಕೆಂದರೆ ನಾವೆಲ್ಲರೂ ಕಸವನ್ನು ಎಲ್ಲೆಂದರಲ್ಲಿ ಬಿಸಾಕಬಾರದು ನಗರ ಸಭೆ, ಸೂಚಿಸಿದ ಸ್ಥಳಕ್ಕೆ ನೀವೆಲ್ಲರೂ ತ್ಯಾಜ್ಯವನ್ನು ಹಾಕಬೇಕು, ಅಲ್ಲದೆ ಮನೆಮನೆಗೆ ಬರುವ ನಗರಸಭೆ ತ್ಯಾಜ್ಯ ವಿಲೇವಾರಿ ವಾಹನಗಳಿಗೆ ತ್ಯಾಜ್ಯ ವಸ್ತುಗಳನ್ನ ನೀಡಿ ಸುತ್ತಲಿನ ವಾತಾವರಣವನ್ನು ಸ್ವಚ್ಛತೆಯಿಂದ ಕಾಪಾಡಬೇಕೆಂದು ಸಾರ್ವಜನಿಕರಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಉಪಾಧ್ಯಕ್ಷರಾದ ಸಾಜಿದ್ ಸಮೀರ್, ಬಿ ರಮೇಶ್, ನರಸಿಂಹಲು ಮಾಡಿಗಿರಿ, ವಾಹಿದ್, ಮಹೇಶ್ ಪಾಟೀಲ್, ಈರಣ್ಣ ಭಂಡಾರಿ ತೇಜಪ್ಪ ಕಾಂಗ್ರೆಸ್ ಯುವ ಅಧ್ಯಕ್ಷರಾದ ಅರುಣ್ ದೋತರಬಂಡಿ, ರಾಜೇಶ್ ಭೀಮರಾಯ್ ಅಲಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
Rahul Ratnam Pandey promises site inspection for construction of toilet in Anegundi on Oct-2: Sindhu D
ಗಂಗಾವತಿ: ತಾಲೂಕಿನ ಆನೆಗುಂದಿ ಗ್ರಾಮವು ಐತಿಹಾಸಿಕ, ಪುರಾಣ, ಪೌರಾಣಿಕ ಹಾಗೂ ವಿಶ್ವ ಪಾರಂಪರಿಕ ಪ್ರಸಿದ್ಧ ಪ್ರದೇಶವಾಗಿದ್ದು, ಈ ಪ್ರದೇಶಕ್ಕೆ ದೇಶ-ವಿದೇಶಗಳಿಂದ ಹಲವಾರು ಪ್ರವಾಸಿಗರು ಬಂದು ವೀಕ್ಷಿಸಿ ಹೋಗುವಂತಹ ಸ್ಥಳವಾಗಿರುತ್ತದೆ. ದುರಂತವೇನೆAದರೆ, ಆನೆಗುಂದಿ ಭಾಗದಲ್ಲಿ ಸಾರ್ವಜನಿಕರಿಗೆ ಶೌಚಾಲಯ ಇರುವುದಿಲ್ಲ. ಈ ಬಗ್ಗೆ ಸಾಕಷ್ಟು ಬಾರಿ ಜಿಲ್ಲಾಡಳಿತಕ್ಕೆ, ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದರೂ ಪ್ರಯೋಜನವಾಗಿರುವುದಿಲ್ಲ. ಈಗ ಜಿಲ್ಲಾ ಪಂಚಾಯತ್‌ನ ಸಿ.ಇ.ಓ ಆದ ರಾಹುಲ್ ರತ್ನಂ ಪಾಂಡೆ ಅವರು ಆನೆಗೊಂದಿಯಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಾಣಕ್ಕೆ ಸ್ಥಳ ಪರಿಶೀಲಿಸಲು ಅಕ್ಟೋಬರ್-೨ ರಂದು ಭೇಟಿ ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದು ಪರಿಸರ ಪ್ರೇಮಿಯಾದ ಕೇಂದ್ರೀಯ ವಿದ್ಯಾಲಯದ ೮ನೇ ತರಗತಿ ವಿದ್ಯಾರ್ಥಿನಿ ಸಿಂಧು ಡಿ ರವರು ಹರ್ಷ ವ್ಯಕ್ತಪಡಿಸಿದರು. ಈ ಭಾಗದಲ್ಲಿ ಶಾರ್ವಜನಿಕ ಶೌಚಾಲಯ ಇಲ್ಲದೇ ಸುತ್ತ-ಮುತ್ತಲಿನ ಪ್ರದೇಶದಲ್ಲಿರುವ ಹೋಟೆಲ್‌ಗೆ ಹೋಗಿ ಶೌಚಾಲಯ ಉಪಯೋಗಿಸಿಕೊಂಡು ಬರುವ ಸ್ಥಿತಿ ಬಂದೊದಗಿರುತ್ತದೆ. ಪ್ರಸ್ತುತ ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ರತ್ನಂ ಪಾಂಡೆ ಅವರು ಶೌಚಾಲಯ ನಿರ್ಮಾಣಕ್ಕೆ ಮುಂದಾಗಲು ಭರವಸೆ ನೀಡಿದ್ದು, ಈ ಭಾಗದ ಸಾರ್ವಜನಿಕರಿಗೆ, ಪ್ರವಾಸಿಗರಿಗೆ ಹರ್ಷದಾಯಕವಾಗಿದೆ. ಶೌಚಾಲಯ ನಿರ್ಮಾಣ ಕಾರ್ಯಕ್ಕೆ ಅಕ್ಟೋಬರ್-೨ ಬೆಳಿಗ್ಗೆ ೧೧ ರವರೆಗೆ ಕಾಯ್ದು, ಒಂದು ವೇಳೆ ಮಾತು ತಪ್ಪಿದಲ್ಲಿ ಬೆಳಿಗ್ಗೆ ೧೧ ಗಂಟೆಯ ನಂತರ ಪ್ರತಿಭಟನೆ ನಡೆಸಲಗುವುದು
Association does not support illegal drug business-Ashoswamiherur.
ಗಂಗಾವತಿ: ಮಾನಸಿಕ ರೋಗಿಗಳ ಔಷಧಗಳನ್ನು ಬೇಕಾ ಬಿಟ್ಟೆಯಾಗಿ ಮಾರಾಟ ಮಾಡಿದರೆ,ಔಷಧ ವ್ಯಾಪಾರಿಗಳ ಸಂಘದಿಂದ ಯಾವುದೇ ಬೆಂಬಲ ಸಿಗುವುದಿಲ್ಲ ಎಂದು ಕೊಪ್ಪಳ ಜಿಲ್ಲಾ ಔಷಧ ವ್ಯಾಪಾರಿಗಳ ಸಂಘದ ಅಧ್ಯಕ್ಷ ಮತ್ತು ಸುವರ್ಣ ಕರ್ನಾಟಕ ಔಷಧ ವ್ಯಾಪಾರಿಗಳ ಸಂಘದ ಕಾನೂನು ಘಟಕದ ಅಧ್ಯಕ್ಷ ಅಶೋಕಸ್ವಾಮಿ ಹೇರೂರ ಔಷಧ ವ್ಯಾಪಾರಿಗಳಿಗೆ ಎಚ್ಚರಿಸಿದ್ದಾರೆ.
ನಗರದ ಔಷಧೀಯ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ‘ವರ್ಲ್ಡ್ ಫ಼ಾರ್ಮಾಸಿಸ್ಟ ಡೇ’ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ನಮ್ಮಲ್ಲಿ ನಾರ್ಕೋಟಿಕ್ ಔಷಧಗಳು ಇರುವುದಿಲ್ಲ. ಸೈಕೋಟ್ರೊಪಿಕ್ ಔಷಧಗಳು ಮಾತ್ರ ಇರುತ್ತವೆ. ಮಾನಸಿಕ ಅಸ್ವಸ್ಥತೆ ಇರುವ ರೋಗಿಗಳಿಗೆ ಅವು ತಜ್ಞ ವೈಧ್ಯರ ಸಲಹಾ ಚೀಟಿಯ ಆಧಾರದ ಮೇಲೆ ಮಾತ್ರ ಮಾರಾಟವಾಗ ಬೇಕು ಎಂದು ಅವರು ತಾಕೀತು ಮಾಡಿದರು.
ಮತ್ತು ಬರಿಸುವ ಔಷಧಗಳನ್ನು ಮಾರಾಟ ಮಾಡುತ್ತಿರುವ ಅಪಾದನೆಯ ಮೇಲೆ,ಈಗಾಗಲೇ ಬಳ್ಳಾರಿ ನಗರದಲ್ಲಿನ ಮೆಡಿಕಲ್ ಸ್ಟೊರ್ಸ್ ಒಂದರ ಪರವಾನಿಗೆ ರದ್ದು ಮಾಡಲಾಗಿದೆ.ಇಡೀ ರಾಜ್ಯದಲ್ಲಿ ಅಧಿಕಾರಿಗಳು ತಂಡ ರಚಿಸಿಕೊಂಡು, ಎಲ್ಲಾ ಔಷಧ ಅಂಗಡಿಗಳ ಪರೀವಿಕ್ಷಣೆಗೆ ಬರುತ್ತಾರೆ.ಆದ್ದರಿಂದ ಎಚ್ಚರದಿಂದ ಔಷಧ ವ್ಯಾಪಾರ ಮಾಡುವುದು ಔಷಧ ವ್ಯಾಪಾರಿಗಳಿಗೆ ಅನಿವಾರ್ಯ.ನಿಯಮ ಮೀರಿ ನಿರ್ದಿಷ್ಟ ಔಷಧಗಳನ್ನು ಮಾರಾಟ ಮಾಡಿದರೆ,ಶಿಕ್ಷೆಗೆ ಗುರಿಯಾಗುತ್ತೀರಿ ಎಂದವರು ಹೇಳಿದರು.
ಯಾರೋ ಒಬ್ಬಿಬ್ಬರು ಮಾಡುವ ಅವ್ಯವಹಾರದಿಂದಾಗಿ, ನಿಯಮನುಸಾರ ಔಷಧ ವ್ಯಾಪಾರ ಮಾಡುವ ಔಷಧ ವ್ಯಾಪಾರಿಗಳ ಹೆಸರು ಕೆಡುತ್ತಿದೆ.ಬೇರೆ ಬೇರೆ ಜಿಲ್ಲೆಗಳಿಂದ ಇಂತಹ ಔಷಧಗಳು ನಮ್ಮ ಜಿಲ್ಲೆಯಲ್ಲಿ ನುಸುಳಿರುವ ಸಾಧ್ಯತೆಗಳೂ ಇವೆ.ಆನ್ ಲೈನ್ ಮೂಲಕ ನಕಲಿ ಪ್ರಿಸ್ಕ್ರಿಪ್ಷನ್ ಆಧಾರದ ಮೇಲೆ ಇಂತಹ ಔಷಧಗಳು ನಮ್ಮಲ್ಲಿ ವ್ಯಸನಿಗಳಿಗೆ ಮತ್ತು ಬರಿಸುವ ಔಷಧಗಳು ತಲುಪುತ್ತಿರುವ ಅವಕಾಶಗಳು ಇವೆ. ಅಂತಹವರ ಬಗ್ಗೆ ಮಾಹಿತಿ ಲಭ್ಯವಾದರೆ,ಸಂಘದ ಮುಖ್ಯಸ್ಥರಿಗೆ ಅಥವಾ ಪೋಲೀಸ್ ಅಧಿಕಾರಿಗಳಿಗೆ ತಿಳಿಸಿ ಎಂದವರು ಸೂಚಿಸಿದರು.
ಇಡೀ ದೇಶದಲ್ಲಿಯೇ ಅತ್ಯುತ್ತಮ ಹೆಸರು ಗಳಿಸಿದ ಔಷಧ ವ್ಯಾಪಾರಿಗಳ ಸಂಘ ನಮ್ಮದು.ಅದಕ್ಕಾಗಿ ಜಾಗ್ರತೆ ವಹಿಸಿ ಎಂದು ತಿಳಿಸಿದರು.
200 ಕ್ಕೂ ಹೆಚ್ಚು ಜನ ಔಷಧ ವ್ಯಾಪಾರಿಗಳು ಭಾಗವಹಿಸಿದ್ದ ಈ ಸಮಾರಭದ ವೇದಿಕೆಯ ಮೇಲೆ ಕೊಪ್ಪಳ ವೃತ್ತದ ಸಹಾಯಕ ಔಷಧ ನಿಯಂತ್ರಕರಾದ ವೆಂಕಟೇಶ ರಾಠೋಡ,ಫ಼ಾರ್ಮಾಸಿಸ್ಟಗಳಾದ ವೀರಣ್ಣ ಕಾರಂಜಿ ಕಾರಟಗಿ,ಪಾಂಡುರಂಗ ಜನಾದ್ರಿ ಕನಕಗಿರಿ, ಆಭೀದ ಹುಸೇನ್,ಹನುಮ ರೆಡ್ಡಿ, ಸೂಳೆಕಲ್ ಮಂಜುನಾಥ,ಗಣೇಶ ಗಂಗಾವತಿ ಹಾಜರಿದ್ದರು.
ಸೇ೦ಟ್ ಫ಼ಾಲ್ಸ್ ಡಿ ಫ಼ಾರ್ಮಸಿ ಕಾಲೇಜಿನ ಪ್ರಾಚಾರ್ಯ ಮಂಜುನಾಥ ಹಿರೇಮಠ ಬೂದಗುಂಪಾ ಕಾರ್ಯವನ್ನು ನಿರೂಪಿಸಿದರು.
Violation of rules, legal action:Assistant Drug Controller Venkatesh Rathoda.
ಗಂಗಾವತಿ:ವೈಧ್ಯರ ಸಲಹಾ ಚೀಟಿ ಇಲ್ಲದೇ,ನಿರ್ದಿಷ್ಟ ಪಡಿಸಿದ ಔಷಧಗಳ ಮಾರಾಟ ಮಾಡಿದರೆ,ಔಷಧ ಕಾಯ್ದೆ-1940 ಮತ್ತು ನಿಯಮ-1945 ರ ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಕೊಪ್ಪಳ ವೃತ್ತದ ಸಹಾಯಕ ಔಷಧ ನಿಯಂತ್ರಕ ವೆಂಕಟೇಶ ರಾಠೋಡ ಎಚ್ಚರಿಸಿದರು.
ರವಿವಾರ ನಗರದ ಔಷಧೀಯ ಭವನದಲ್ಲಿ ಹಮ್ಮಿ ಕೊಳ್ಳಲಾಗಿದ್ದ ಔಷಧ ವ್ಯಾಪಾರಿಗಳ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.ಕೆಲವು ವ್ಯಸನಿಗಳು,ಅಮಲು ಬರಿಸುವಂತಹ ಸೈಕೊಟ್ರೊಪಿಕ್ ಔಷಧಗಳನ್ನು ಅಸಹಜ ಸೇವನೆಯ ಮೂಲಕ ದೇಹಕ್ಕೆ ಸೇರಿಸಿಕೊಳ್ಳುವ ವರದಿಗಳು ಗಂಗಾವತಿಯಲ್ಲಿ ಕಂಡು ಬರುತ್ತಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿತ್ತು.ಈ ಕಾರಣಕ್ಕಾಗಿ ಬಳ್ಳಾರಿ ವಿಭಾಗ ವ್ಯಾಪ್ತಿಯ ಸಹಾಯಕ ಔಷಧ ನಿಯಂತ್ರಕರ ಮತ್ತು ಔಷಧ ಪರಿವೀಕ್ಷಕರ ತಂಡದಿಂದ ಔಷಧ ಅಂಗಡಿಗಳ ಮೇಲೆ ಧಿಡೀರ್ ದಾಳಿ ನಡೆಸಲಾಗಿದೆ,ಈ ಸಂದರ್ಭದಲ್ಲಿ ಕಂಡು ಬಂದ ನ್ಯೂನ್ಯತೆಗಳ ಬಗ್ಗೆ ಕ್ರಮ ಕೈಗೊಳ್ಳುವ ಪ್ರಕ್ರೀಯೆ ನಡೆದಿದೆ ಎಂದು ತಿಳಿಸಿದರು.
ಔಷಧ ಮಾರಾಟ ಮಳಿಗೆಗಳಲ್ಲಿ ರಿಜಿಸ್ಟರ್ಡ್ ಫ಼ಾರ್ಮಾಸಿಸ್ಟ ಗೈರು ಹಾಜರಿ ಕಂಡು ಬಂದರೆ,ಅಂತಹ ಅಂಗಡಿಗಳ ಪರವಾನಿಗೆ ರದ್ದು ಗೊಳಿಸಲಾಗುವುದು ಎಂದು ರಾಠೋಡ ಎಚ್ಚರಿಸಿದರು.
ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಔಷಧ ಅಂಗಡಿಗಳ ಪರಿವೀಕ್ಷಣೆ ನಡೆಸಲಾಗುವುದು, ನೂನ್ಯತೆಗಳು ಕಂಡು ಬಂದಲ್ಲಿ ನಿರ್ಧಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದರು.
ವರದಿ : ಬಂಗಾರಪ್ಪ ,ಸಿ . ಹನೂರು :ಅಮಲು ರೋಗಿಗಳನ್ನೂದ್ದೇಶಿಸಿ ಮಾತನಾಡಿದ ಶ್ರೀ ಸಾಲೂರು ಶ್ರೀ ಗಳಾದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿಗಳು ನಮ್ಮ ಮಠದಂತೆ , ಸುತ್ತುರು ಮಠವು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಬಹು ಎತ್ತರಕ್ಕೆ ಬೆಳೆದು ನಿಂತಿದೆ, ನಿಮ್ಮ ಚಟವನ್ನು ಹತ್ತಿಕುವ ರೀತಿಯಲ್ಲಿ ಸಮಾಜದ ಮೇಲೆ ಉತ್ತಮ ಪ್ರಭಾವ ಬೀರುವಂತ ಕಾರ್ಯಗಳನ್ನು ಮಾಡುವ ಮೂಲಕ ಮುಖ್ಯವಾಹಿನಿಗೆ ಅಮಲುರೋಗಿಗಳು ಬರಬೇಕು , ಕಾರ್ಯಗಾರ ಮುಗಿದ ಮೇಲೆ ದೇಹದ ಚಟುವಟಿಕೆಗಳನ್ನು ಸಹ ಬದಲಾಯಿಸಿಕೊಳ್ಳಬೇಕು . ಹನೂರಿನಲ್ಲಿ ನಡೆದ ಶಿಬಿರದ ವಿದ್ಯಾರ್ಥಿಗಳು ಎಲ್ಲಾರು ವ್ಯಸನ ಮುಕ್ತರಾಗಬೇಕು,ಮನುಷ್ಯನಿಗೆ ಪ್ರತಿ ಕ್ಷಣವು ಅಮೂಲ್ಯವಾಗಿದೆ ಎಂದು ತಿಳಿಸಿದರು .
ತಾಲ್ಲೂಕಿನ ವಾಸವಿ ಕಲ್ಯಾಣ ಮಂಟಪದಲ್ಲಿ ಜಗದ್ಗುರು ಶ್ರೀ ವಿರಾಸಿಂಹಾಸನ ಮಹಾಸಂಸ್ಥಾನ ಮಠ ಹಾಗೂ ಶ್ರೀ ಸುತ್ತೂರು ಜೆಎಸ್ಎಸ್ ಮಹಾವಿಧ್ಯಪೀಠ ಮೈಸೂರ್ ಇವರ ಸಹಯೋಗದೊಂದಿಗೆ ಉಚಿತ ಕುಡಿತ ಬಿಡಿಸುವ ಶಿಬಿರ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸುತ್ತುರು ಶ್ರೀ ಶ್ರೀ ದೇಶಿಕೇಂದ್ರ ಸ್ವಾಮೀಜಿಗಳು ಮಾತನಾಡಿ ಅನೇಕ ಧರ್ಮದವರು ಎರಡಾಗಿರುವುದನ್ನು ನಾವು ಕಾಣಬಹುದು ಕಾರಣ ಕೆಲವು ಕಲ್ಪನೆಗಳನ್ನು ತಪ್ಪು ಎಂದು ಕೆಲವರು ಹೆಳಿದರೆ,ಇನ್ನು ಕೆಲವರು ಸತ್ಯ ಎಂದು ಹೆಳುವುದು . ಸಮಾಜದಲ್ಲಿ ಯಾರು ಕುಡಿತಕ್ಕೊಳಾಗುತ್ತಾರೊ ಅವರ ಮನಸ್ಥಿತಿಯನ್ನು ನೋಡಿದರೆ ಜೀವನ ಸುದಾರಿಸಲು ಅಸಾದ್ಯವಾಗಿರುತ್ತದೆ , ಕುಡಿಯುವುದರಿಂದ ಮತ್ತು ಧೂಮಪಾನ ಸೇವನೆ ಮಾಡುವುದರಿಂದ ಅವರ ಉಸಿರಾಟಕ್ಕೆ ಬಹಳ ತೊಂದರೆಯಾಗುತ್ತದೆ ಅದ್ದರಿಂದ ದೇಹದ ಮೇಲೆ ಅಡ್ಡ ಪರಿಣಾಮಗಳು ಬೀರುತ್ತವೆ ,ಇಂದಿನ ಯುವಕರು ಪಟ್ಟಣಗಳಲ್ಲಿ ಸಿಗುವ ಮದ್ಯಪಾನ ಔಷದಿಗಳನ್ನು ತೆಗೆದುಕೊಂಡು ಕೆಟ್ಟ ಚಟದ ದಾಸರಾಗುತ್ತಿದ್ದಾರೆ .ದಿವಂಗತ ಮಾಜಿ ಸಚೀವರಾದ ಅಜೀಜ್ ಸೇಠ್ ನಮ್ಮ ಮಠದ ಪರಮ ಭಕ್ತರು ಅವರು ಸಹ ಧೂಮಪಾನ ದಾಸರಾಗಿದ್ದರು ಅಂತಹವರು ಕೊನೆಗೆ ಉಸಿರಾಟದ ಸಮಸ್ಯೆಯಿಂದ ಬಳಲಿ ಸಾವನಪ್ಪಿದ್ದರು ,ಕುಡಿತದ ದಾಸರಾಗಲು ನೀವು ಬಹಳ ಸುಲಭವಾಗಿರುತ್ತದೆ, ಆದರೆ ಅದರಿಂದ ಹೊರಗಡೆ ಬರಲು ಸಾಕಷ್ಟು ಸಮಯ ಬೇಕಾಗುತ್ತದೆ , ದುಶ್ಚಟದಿಂದ ದುರವಿದ್ದಷ್ಟು ಬದುಕಿನಲ್ಲಿ ಸಂತೋಷದಿಂದ ನೆಮ್ಮದಿಯಿಂದ ಬದುಕಲು ಸಾದ್ಯವಾಗುತ್ತದೆ, ,ಸರ್ಕಾರಗಳು ಸಹ ಕಠಿಣ ಕ್ರಮ ತೆಗೆದುಕೊಳ್ಳಬೇಕು ,ಇತ್ತಿಚಿನ ದಿನಗಳಲ್ಲಿ ಮಹಿಳೆಯರು ಸಹ ಧೂಮಪಾನ ಮದ್ಯಪಾನ ದಾಸರಾಗುತ್ತಿದ್ದಾರೆ. ಸರ್ಕಾರದಿಂದ ಮಧ್ಯ ದಿಂದಲೆ ಅತಿ ಹೆಚ್ಚು ಆದಾಯ ಬರುತ್ತದೆ,ಇಂದಿನಿಂದ ನೀವು ಸಂಕಲ್ಪ ಮಾಡಬೇಕು ಎಲ್ಲಾವು ಸಾಧ್ಯವಾಗುತ್ತದೆ ,ನಿಮ್ಮ ಆತ್ಮಸಾಕ್ಷಿಯ ಅನುಗುಣವಾಗಿ ನಡೆದುಕೊಳ್ಳಬೇಕು ಎಂದು ಹಿತ ವಚನ ನೀಡಿದರು .
ಶಾಸಕರಾದ ಎಮ್ ಆರ್ ಮಂಜುನಾಥ್ ಮಾತನಾಡಿ ಜನರ ಆರೋಗ್ಯ ಮತ್ತು ದೇಹದಲ್ಲಿನ ಭಾಗಗಳು ಕುಡಿತದಿಂದ ಹಾನಿಕಾರಕವಾಗಿರುತ್ತದೆ ಎಂಬುದನ್ನು ಎಲ್ಲಾ ಗಣ್ಯ ವ್ಯಕ್ತಿಗಳ ತಮ್ಮ ಅನಿಸಿಕೆಗಳನ್ನು ಸವಿ ವಿಸ್ತಾರವಾಗಿ ತಿಳಿಸಿದ್ದಾರೆ . ದಿನ ನಿತ್ಯ ತಮ್ಮಬಳಿ ಬರುವ ವ್ಯಕ್ತಿಗಳಿಗೆ ತಿಳುವಳಿಕೆಗಳನ್ನು ಹೆಳುತ್ತ ಈ ದುಶ್ಚಟದಿಂದ ದೂರವಿರಬೇಕು ,ಸಂಸಾರ ಸಾಗಿಸಲು ಮಹಿಳೆಯರಿಗೆ ಬಹಳ ಕಷ್ಟವಾಗುತ್ತದೆ , ನೀವುಗಳು ಮಹಿಳೆಯರ ಮನಸ್ಥಿತಿಯನ್ನು ಬದಾಲಾಯಿಸಿ ಅವರ ಮನ ಪರಿವರ್ತನೆ ಮಾಡಬೇಕು ,ಸರ್ಕಾರದ ಆದಾಯ ನೋಡುವುದಾದರೆ ಸಾಮಾನ್ಯ ಜನರ ಜೀವನದಲ್ಲಿ ಬಹಳಷ್ಟು ಏರುಪೇರಾಗುತ್ತಿದೆ , ಇಂತಹ ವಿಷಯಗಳ ಕಡೆ ಸರ್ಕಾರಗಳು ಬಹಳ ಗಂಭೀರವಾಗಿ ಘಮನ ಹರಿಸಬೇಕು ,ನಮಗೆ ಭಗವಂತ ಕೊಟ್ಟಿರುವ ದೇಹವನ್ನು ಸಂಪೂರ್ಣವಾಗಿ ಅತೋಟಿಗೆ ತಂದು ಮುಂದಿನ ದಿನಗಳಲ್ಲಿ ಜೀವನ ಶೈಲಿಯನ್ನು ಬದಲಾಯಿಸುಕೊಂಡು ನಡೆಯಬೇಕು ಎಂದರು. ಕಾರ್ಯಕ್ರಮದಲ್ಲಿ ಆಗಮಿಸಿ ಹಿತವಚನ ನೀಡಿದ ಪರಿಮಳ ನಾಗಪ್ಪನವರು ಅಮಲು ರೋಗಿಗಳಿಗೆ ಇದೊಂದು ಸುವರ್ಣಾವಕಾಶ ನಿಮಗೆ ಸಿಕ್ಕಿದ್ದು ಬರಿ ಕಾರ್ಯಗಾರವಲ್ಲ ಇದೊಂದು ಜೀವನ ಶೈಲಿ ಇಲ್ಲಿ ಮಧ್ಯವನ್ನು ತ್ಯೆಜಿಸಿ ನಂತರ ಹೊರಗಡೆ ಅದರ ದಾಸರಾಗಬಾರದು , ನಿಮ್ಮನ್ನೆ ನಂಬಿ ಕುಟುಂಬವು ಹಲವಾರು ಕುಟುಂಬಗಳು ಆಶ್ರಯ ಪಡೆದಿದೆ ಆದ್ದರಿಂದ ನಿವು ಪ್ರಮುಖ ವ್ಯಕ್ತಿಗಳಾಗಿ ಜೀವನವನ್ನು ಸಾರ್ಥಕ ಪಡಿಸಿಕೊಳ್ಳಬೇಕು ಎಂದು ಕಿವಿ ಮಾತು ಹೇಳಿದ್ದಾರೆ . ಮಾನಶ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳಾದ ಡಾಕ್ಟರ್ ದತ್ತೇಶ್ ಕುಮಾರ್ ಮಾತನಾಡಿ ನಮ್ಮ ಭಾಗದಲ್ಲಿ ಮೊದಲಿಗೆ ಶಿಕ್ಷಣದ ಕ್ರಾಂತಿಯನ್ನು ಮಾಡಿದವರು ಜೆಎಸ್ ಎಸ್ ಸಂಸ್ಥೆಯವರು . ಪ್ರತಿನಿತ್ಯ ಲಕ್ಷಾಂತರ ವಿದ್ಯಾರ್ಥಿಗಳು ವಿದ್ಯಾಬ್ಯಾಸ ಮಾಡುತ್ತಿದ್ದಾರೆ , ಶಿಕ್ಷಣ ,ಅನ್ನ ,ಆಶ್ರಯ ,ನೀಡುವುದರ ಜೊತೆಯಲ್ಲಿ ಸಾಮೋಹಿಕ ವಿವಾಹ ಮತ್ತು ಕುಡಿತ ಬಿಡಿಸುವ ಹಲವಾರು ಶಿಬಿರಗಳನ್ನು ಹಮ್ಮಿಕೊಂಡಿರುವುದು ಶ್ಲಾಘನೀಯ ನಮ್ಮ ದೇಶದಲ್ಲಿ ನೂರು ಜನರಿಗೆ ಹದಿನೆಂಟು ಪರ್ಶೆಂಟ್ ಜನ ಪುರುಷರು ಕುಡಿತದ ದಾಶರಾಗುತ್ತಿದ್ದಾರೆ ಇನ್ನೂ ,ಎರಡು ಪರ್ಶೇಂಟ್ ಮಹಿಳೆಯರು ಸಹ ಕುಡಿತಕ್ಕೆ ದಾಸರಾಗಿದ್ದಾರೆ ಎಂದು ಸರ್ವೆಯಲ್ಲಿನ ಮಾಹಿತಿ ಸಿಕ್ಕಿದೆ ,ಇಂತಹ ಸಾಮಾಜಿಕ ಕಾರ್ಯಕ್ಕೆ ಮಠದ ಕೊಡುಗೆ ಅಪಾರವಾದದ್ದು ಎಂದರು . ಮಹದೇಶ್ವರ ಕ್ಷೇತ್ರದ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ Ae ರಘು ರವರು ಮಾತನಾಡಿ ಜೆ ಎಸ್ ಎಸ್ ಸಂಸ್ಥೆಗಳು ಇಂತಹ ಉಚಿತ ಶಿಬಿರಗಳನ್ನು ಹಮ್ಮಿಕೊಂಡಿರುವುದು ಬಹಳ ಸಂತೋಷದ ವಿಷಯ ಸಾಮಾಜಿಕ ಭದ್ರತೆ ನೀಡುವ ಜವಾಬ್ದಾರಿಗಳನ್ನು ಹೊಂದಿದೆ ಇಂದು ಯುವ ಸಮೂಹವು ಗೆದ್ದರು ಪಾರ್ಟಿ ಸೋತರು ಪಾರ್ಟಿ ಎಂಬಾಂತಾಗಿದೆ , ಮನುಷ್ಯನ ದೇಹವು ಎಂಬತ್ನಾಲ್ಕು ಕೋಟಿ ಜೀವ ರಾಶಿಗಳನ್ನು ದಾಟಿ ಬಂದ ದೇಹವಾಗಿದೆ , ಈಗಾಗಲೇ ಹಲವರು ಕುಡಿತದಿಂದ ಇಡಿ ಕುಟುಂಬವನ್ನೆ ಬಲಿ ಕೊಟ್ಟಿರುತ್ತಾರೆ ,ಮಾನವ ಬೆಳೆದೆಂತಲ್ಲ ಒಂದಿಲ್ಲೊಂದು ಚಟಕ್ಕೆ ದಾಸರಾಗಿದ್ದೆವೆ ,ಹಿರಿಯರ ಜೀವನ ಮೌಲ್ಯಯುತವಾಗಿತ್ತು . ನಾನು ಸತ್ತರೆ ದೇಹವೆ ಮಣ್ಣಾಗುತ್ತದೆ ಏನೆ ಸಂಪಾದನೆ ಮಾಡಿದರು ವ್ಯರ್ಥ , ಸಂಸ್ಕಾರವಂತರಾಗದಿದ್ದರೆ ಅದು ನಶ್ವರ ,ಬಸವಣ್ಣನವರು ದೇಹವನ್ನು ದೇವಾಲಯಕ್ಕೆ ಹೋಲಿಸುತ್ತಿದ್ದಾರೆ .ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಪಟ್ಟಣ ಪಂಚಾಯತಿ ಅಧ್ಯಕ್ಷರಾದ ಮಮ್ತಾಜ್ ಭಾನು , ಅಯೋಜಕರಾದ ಜೆ ಎಸ್ ಎಸ್ ಸಂಸ್ಥೆಯ ಪದಾಧಿಕಾರಿಗಳು ,ಸಾಮಾಜಿಕ ಹೋರಾಟಗಾರ ವಿನೋದ್ ,ಪಟ್ಟಣ ಪಂಚಾಯತಿ ಸದಸ್ಯರಾದ ಸೋಮ ಶೇಖರ್ , ವೀರ ಶೈವ ಅಧ್ಯಕ್ಷರಾದ ಸೋಮಶೇಖರ್ .ಡಾಕ್ಟರ್ ಮಂಜುನಾಥ್ . ವೆಂಕಟೆಗೌಡ ,ಕ್ರಿಷ್ಣ ,ರೈತ ಮುಖಂಡ ಮೂರ್ತಿ, ಸೇರಿದಂತೆ ಶಿಬಿರಾರ್ತಿಗಳು ಹಾಗೂ ಅವರ ಕುಟುಂಬಸ್ಥರು,ಸ್ವಾಮೀಜಿಗಳು ಹಾಜರಿದ್ದರು .
4th Remembrance of Rajur Panchakshara Swami : Monthly Shivanubhava
ವರದಿ : ಪಂಚಯ್ಯ ಹಿರೇಮಠ,, ಕೊಪ್ಪಳ : ಜಿಲ್ಲೆಯ ಕುಕನೂರು ತಾಲೂಕಿನ ರಾಜೂರ ಶರಣಬಸವೇಶ್ವರ ಸುಕ್ಷೇತ್ರದ ಪಂಚಾಕ್ಷರ ಶಿವಾಚಾರ್ಯ ಮಹಾಸ್ವಾಮಿಗಳ 4ನೇ ವರಾಷದ ಪುಣ್ಯಸ್ಮರಣೋತಾಸವ ಹಾಗೂ ಪಂಚಾಕ್ಷರ ಬೆಳಕು 48ನೇ ಮಾಸಿಕ ಶಿವಾನುಭವ ಕಾರ್ಯಕ್ರಮಗಳು ದಿ.02,10.2024ರಂದು ನಡೆಯಲಿವೆ.
ಕಾರ್ಯಕ್ರಮದಂದು ಬೆಳಗ್ಗೆ 6 ಗಂಟೆಗೆ ಪಂಚಾಕ್ಷರ ಮಹಾಸ್ವಾಮಿಗಳ ಕರ್ತೃಗದ್ದುಗೆಗೆ ವಿಷೇಶ ರುದ್ರಾಭಿಷೇಕ ನಂತರ ಬೆಳಗ್ಗೆ 9ಗಂಟೆಗೆ ಕುಂಭ ಕಳಸ ಸಕಲ ವಾಧ್ಯಗಳೊಂದಿಗೆ ಪೂಜ್ಯರ ಭಾವ ಚಿತ್ರ ಮೆರವಣಿಗೆ ನಡೆಯುವುದು.
11-20ಕ್ಕೆ ಪೂಜ್ಯರ ಪುಣ್ಯ ಸ್ಮರಣೆ ಹಾಗೂ 48 ನೇ ಶಿವಾನುಭವ ಮತ್ತು ಧರ್ಮ ಸಭೆ ಜರುಗುವುದು.
ಧರ್ಮ ಸಭೆಯ ಸಾನಿಧ್ಯವನ್ನು ಯಲಬುರ್ಗಾ ಶ್ರೀಧರ ಮುರುಡಿ ಮಠದ ಬಸವಲಿಂಗೇಶ್ವರ ಸ್ವಾಮಿಗಳು ವಹಿಸುವರು.
ಕಾರ್ಯಕ್ರಮದ ಸಮ್ಮುಖವನ್ನು ಗುಳೇದಗುಡ್ಡದ ಅಮರೇಶ್ವರ ಬೃಹನ್ಮಠ ಕೋಟಿಕಲ್ಲು ಡಾ.ನೀಲಕಂಠ ಮಹಿಸ್ವಾಮಿಗಳು ಹಾಗೂ ಗುಳೇದಗುಡ್ಡದ ಒಪ್ಪತ್ತೇಶ್ವರ ಮಹಾ ಸ್ವಾಮಿಗಳು ವಹಿಸುವರು.
ನೇತೃತ್ವವನ್ನು ಹರ್ಲಾಪೂರ ಅಭಿನವ ಕೊಟ್ಟೂರೇಶ್ವರ ಸ್ವಾಮಿಗಳು, ಎಸ್.ಎಚ್ ವೆಂಕಟಾಪೂರ,ಜಿಗೇರಿ, ಹೊಸೂರನ ಗುರುಸಿದ್ದೇಶ್ವರ ಮಹಾಸ್ವಾಮಿಗಳು, ಗದಗನ ವೀರೇಶ್ವರ ಪುಣಾಶ್ರಮದ ಡಾ. ಕಲ್ಲಯ್ಯಜ್ಜನವರು ನೇತೃತ್ವ ವಹಿಸುವರು.
ನಂತರ ಮಧ್ಯಾಹ್ನ 1ಗಂಟೆಗೆ ಭಕ್ತಾಧಿಗಳಿಗೆ ಅನ್ನ ಸಂತರ್ಪಣಾ ಕಾರ್ಯಕ್ರಮಗಳು ನಡೆಯುವವು.
ವಿಶೇಷ ಸೂಚನೆ : ಭಕ್ತಾದಿಗಳೆಲ್ಲರೂ ಪುಣ್ಯಸ್ಮರಣೆಯಲ್ಲಿ ಭಾಗಿಯಾಗಿ ಪೂಜ್ಯರ ಶಿಲಾಮಂಟಪದ ಕಾರ್ಯ ನಡೆದಿದ್ದು ತನು-ಮನ-ಧನ ಸೇವೆಗೈದು ಲಿಂಗೈಕ್ಕೆ ಪೂಜ್ಯ ಪಂಚಾಕ್ಷರಪ್ಪವರ ಕೃಪೆಗೆ ಪಾತ್ರರಾಗಬೇಕೆಂದು ಈ ಮೂಲಕ ಪತ್ರಿಕಾ ಪ್ರಕಟಣೆಯಲ್ಲಿ ರಾಜೂರ ಸಮಸ್ತ ಸದ್ಭಕ್ತ ಮಂಡಳಿಯವರು ತಿಳಿಸಿದ್ದಾರೆ.