Breaking News

ವಿಜಯನಗರ ಕಾಲುವೆಗಳ ಆಧುನಿಕರಣ ಕಾಮಗಾರಿಗೆ ಮಾಜಿ ಶಾಸಕ ಪರಣ್ಣ ಮುನುವಳ್ಳಿ ಪರಿಶೀಲನೆ

Former MLA Paranna Munuvalli inspected the modernization work of Vijayanagara canals

ಜಾಹೀರಾತು

ಗಂಗಾವತಿ: ವಿಜಯನಗರ ಕಾಲುವೆ ಗಳ ಆಧುನಿಕರಣ ಕಾಮಗಾರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಹಯೋಗದೊಂದಿಗೆ ಎಸ್ ಬಿಎಚ್ (ಎಡಿಬಿ) ಅನುದಾನದಲ್ಲಿ 2019 ರಲ್ಲಿ ವಿಜಯನಗರ ಕಾಲುವೆಗಳನ್ನು ಅಭಿವೃದ್ಧಿಪಡಿಸಬೇಕು, ರೈತರಿಗೆ ಸಹಕಾರ ನೀಡಬೇಕು ಎಂಬ ನಿಟ್ಟಿನಲ್ಲಿ ಈ ಹಿಂದೆ ನಾನು ಶಾಸಕನಾಗಿದ್ದಾಗ ನಮ್ಮ ಬಿಜೆಪಿ ಸರ್ಕಾರ  ಇದನ್ನು ಘೋಷಣೆ ಮಾಡಿತ್ತು. ಈ ಕಾಮಗಾರಿಯನ್ನು ಟೆಂಡರ್ ಮೂಲಕ ಆರ್.ಎನ್.ಶೆಟ್ಟಿ ಅವರಿಗೆ ನೀಡಲಾಗಿದೆ, ಈ ಕಾಮಗಾರಿಯಲ್ಲಿ ಸಾಣಪುರದಿಂದ ಹಿಡಿದು ಸಂಗಾಪುರದವರೆಗೆ ಒಟ್ಟು ಕಾಮಗಾರಿ 19.5 ಕಿಲೋಮೀಟರ್ ಗಳ ವರೆಗೆ ಇದ್ದು, ಸುಮಾರು 3800 ಎಕರೆ ರೈತರು ಇದನ್ನು ಬಳಕೆ ಮಾಡಿಕೊಳ್ಳುತ್ತಾರೆ, ಈ ಕಾಮಗಾರಿ 2019 ರಿಂದ ಪ್ರಾರಂಭ ಗೊಳ್ಳಬೇಕಾಗಿತ್ತು, ಆದರೆ ಅನಿರೀಕ್ಷಿತವಾಗಿ ಕರೋನ ಸಾಂಕ್ರಾಮಿಕ ರೋಗ ಉಲ್ಬಣಗೊಂಡಿದ್ದರಿಂದ, ಎರಡು ವರ್ಷಗಳ ಕಾಲ ಕಾಲುವೆಯ ಕಾಮಗಾರಿ ನೆನೆಗುದಿಗೆ ಬಿದ್ದು, ಕಳೆದ ಸಾಲಿನಿಂದ ಕೆಲಸ ಪ್ರಾರಂಭವಾಗಿದೆ. ಆದರೆ, ಇದುವರೆಗೂ ಕಾಮಗಾರಿ ಕುದುರೆ ಓಟದಲ್ಲಿ ಇರಬೇಕಾದದ್ದು ಆಮೆಗತಿಯಲ್ಲಿ ಸಾಗುತ್ತಿದೆ. ಈಗಾಗಲೇ ಮಾರ್ಚ್ ತಿಂಗಳಿಗೆ ಈ ಕಾಮಗಾರಿ ಅಂತ್ಯಗೊಳ್ಳಬೇಕಾಗಿತ್ತು, ಆದರೆ ಸರ್ಕಾರ ಸೆಪ್ಟೆಂಬರ್ 31ರವರೆಗೆ ಮುಗಿಸಿಕೊಡಲು ಮುಂದುವರಿಸಿದ್ದಾರೆ. ಆದರೆ ಕಾಮಗಾರಿ ತ್ವರಿತಗತಿಯಲ್ಲಿ ಆಗಬೇಕಾಗಿದೆ, ಏಕೆಂದರೆ ಮುಂದಿನ ತಿಂಗಳು ರೈತರಿಗೆ ನೀರು ಬಿಡಲು ತಯಾರು ನಡೆಸುತ್ತಿದ್ದು, ಕಾಮಗಾರಿ  ವಿಳಂಬದಿಂದ ರೈತರ ಫಸಲು ಬೆಳೆಯಲು ತೊಂದರೆಯಾಗುವ ಲಕ್ಷಣಗಳು ಕಾಣುತ್ತಿದೆ ಎಂದು ಮಾಜಿ ಶಾಸಕ ಪರಣ್ಣ ಮುನವಳ್ಳಿ ಹೇಳಿದರು. ಅವರು ಇಂದು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಎಚ್.ಎಂ.ಸಿದ್ದರಾಮಯ್ಯ ಸ್ವಾಮಿ ಇವರ ಜೊತೆಗೂಡಿ ವಿಜಯನಗರ  ಕಾಲುವೆಗಳ ಆಧುನಿಕರಣ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾದ ಸಂಗಾಪುರ, ಮಲ್ಲಾಪುರ, ಆನೆಗೊಂದಿ, ಬಂಡೆಬಸಪ್ಪ ಕ್ಯಾಂಪ್ ಭಾಗಗಳಲ್ಲಿ ವೀಕ್ಷಿಸಿ ಇಷ್ಟೊತ್ತಿಗಾಗಲೇ ಕಾಮಗಾರಿ ಪೂರ್ಣ ಪ್ರಮಾಣದಲ್ಲಿ ಮುಗಿಯಬೇಕಾಗಿತ್ತು.ಗುತ್ತಿಗೆದಾರ ಮತ್ತು ಸರ್ಕಾರದ ಬೇಜವಾಬ್ದಾರಿತನದಿಂದ ಕಾಮಗಾರಿ ಮಂದಗತಿಯಲ್ಲಿ ಸಾಗಿದೆ. ಈ ದೊಡ್ಡ ಮಟ್ಟದ ಕಾಮಗಾರಿ ನನ್ನ ಅವಧಿಯಲ್ಲಿ ಪ್ರಾರಂಭವಾಗಿತ್ತು ಎಂದು ನೆನಪಿಸಿದರು. 

     ಈ ಸಂದರ್ಭದಲ್ಲಿ.ಸಿದ್ದರಾಮಯ್ಯ ಸ್ವಾಮಿ, ರೈತ ಮುಖಂಡರಾದ ಭತ್ತದ ಚಂದ್ರಶೇಖರ್,ಲಿಂಗಪ್ಪ ಜನಾದ್ರಿ, ಮಣಿ, ಯಮನೂರಪ್ಪ, ಎಚ್. ಎಮ್.ವೀರಭದ್ರಯ್ಯ ಸ್ವಾಮಿ, ಲೋಕೇಶ್, ನಾಗೇಶ್, ಹಿರಿಯ ಅಭಿಯಂತರ ಅಮರೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

About Mallikarjun

Check Also

ಎಸ್ಸಿ ಎಸ್ಟಿ ಮೀನುಗಾರರಿಗೆ ವಾಹನ ಖರೀದಿಸಲು ಸಹಾಯಧನಕ್ಕಾಗಿ ಅರ್ಜಿ ಆಹ್ವಾನ

Applications invited for subsidy for SC/ST fishermen to purchase vehicles ಕೊಪ್ಪಳ ಆಗಸ್ಟ್ 30 (ಕರ್ನಾಟಕ ವಾರ್ತೆ): …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.