ಪತ್ರಕರ್ತರ ದಿನಾಚರಣೆ ಅಂಗವಾಗಿ ಪೂರ್ವಭಾವಿ ಸಭೆ ಕರೆಯಲಾಗಿದೆ : ಅಧ್ಯಕ್ಷರಾದ ಬಂಗಾರಪ್ಪ

H.Mallikarjun
H.Mallikarjun - Kalyanasiri
1 Min Read
ಜಾಹೀರಾತು

A preliminary meeting has been called on the occasion of Journalists’ Day: President Bangarappa

ಜಾಹೀರಾತು


ವರದಿ : ಬಂಗಾರಪ್ಪ ‌.
ಹನೂರು : ಪತ್ರಕರ್ತರಾದವರು ಹೆಚ್ಚು ಸಮಾಜದ ಅಂಕುಡೊಂಕುಗಳನ್ನು ತಿದ್ದುತ್ತ ಮಾದರಿಯಾಗಬೇಕು ಪತ್ರಕರ್ತರಾದವರಿಗೆ ಸಮಯ ಪ್ರಜ್ಞೆಯಿರಬೇಕು ಎಂದು ಕರ್ನಾಟಕ ಪತ್ರಕರ್ತರ ಸಂಘದ ಹನೂರು ಘಟಕದ ಅಧ್ಯಕ್ಷರಾದ ಬಂಗಾರಪ್ಪ ತಿಳಿಸಿದರು .
ಹನೂರು ಪಟ್ಟಣದಲ್ಲಿನ ಕರ್ನಾಟಕ ಪತ್ರಕರ್ತರ ಸಂಘದ ಕಛೇರಿಯಲ್ಲಿ ಇದೇ ತಿಂಗಳು ಪತ್ರಕರ್ತರ ದಿನಾಚರಣೆ ಮಾಡುವ ಕುರಿತು ಸಹೋದ್ಯೋಗಿ ಪತ್ರಕರ್ತರ ಜೊತೆಯಲ್ಲಿ ಚರ್ಚಿಸಲಾಯಿತು, ಅಲ್ಲದೆ ಸಮಾಜದಲ್ಲಿ ಸಾದನೆ ಮಾಡಿರುವ ವ್ಯಕ್ತಿಗಳನ್ನು ಗುರುತಿಸಿ ಸನ್ಮಾನಿಸುವ ಕಾರ್ಯ ಮಾಡಬೇಕು ಜೋತೆಯಲ್ಲಿ ನಾವು ಇತರರಿಗೆ ಮಾದರಿಯಾಗ ಬೇಕು ಇಂದಿನ ದಿನಗಳಲ್ಲಿ ಪತ್ರಿಕಾರಂಗವು ಸಾರ್ವಜನಿಕ ರಂಗದಲ್ಲಿ ಕೆಲವು ವಿಷಯಗಳ ಆದಾರದಲ್ಲಿ ಚರ್ಚೆಯಲ್ಲಿದೆ ,ನಮ್ಮ ವರದಿಗಳು ಸತ್ಯಕ್ಕೆ ಹತ್ತಿರವಿರಬೇಕು ಎಂದು ತಿಳಿಸಿದರು . ಇದೇ ಸಂದರ್ಭದಲ್ಲಿ ಪತ್ರಕರ್ತರ ಸಂಘದ ಖಜಾಂಚಿ ಚೇತನ್ ಕುಮಾರ್ ,ಕಾರ್ಯದರ್ಶಿ ಬಸವರಾಜು ,ಉಪಾಧ್ಯಕ್ಷ ಸತೀಶ್ ಕುಮಾರ್ ,ಸಂಘಟನ ಕಾರ್ಯದರ್ಶಿ ಶಾರುಖ್ ಖಾನ್ ,ಸದಸ್ಯರುಗಳಾದ ಅಜೀತ್ ,ಪ್ರಸನ್ನಕುಮಾರ್ ,ಕಾರ್ತಿಕ್ ,ರವಿಕುಮಾರ್ ಸೇರಿದಂತೆ ಇನ್ನಿತರರು ಹಾಜರಿದ್ದರು .

Total Views: 0
Share This Article