ಸೋಮವಾರದಂದು ನಿವೃತ್ತ ಸೈನಿಕನಿಗೆ ಅದ್ದೂರಿ ಮೆರವಣಿಗೆ

Mallikarjun
1 Min Read
ಜಾಹೀರಾತು

ಕೊಪ್ಪಳ : ಭಾರತೀಯ ಸೇನೆಯಲ್ಲಿ 22 ವರ್ಷಗಳ ಸುದೀರ್ಘ ಸೇವೆಯನ್ನು ಸಲ್ಲಿಸಿ ನಿವೃತ್ತರಾಗಿ ತಮ್ಮ ಊರಿಗೆ ಆಗಮಿಸುತ್ತಿರುವ ಕುಕನೂರು ತಾಲೂಕಿನ ಅರಕೇರಿ ಗ್ರಾಮದ ಯೋಧ ಬಸವರಾಜ ಕೆಂಚರೆಡ್ಡಪ್ಪ ಭಾವಿಕಟ್ಟಿ ಅವರಿಗೆ ಗ್ರಾಮದಲ್ಲಿ ಅದ್ದೂರಿ ಸ್ವಾಗತ ಹಮ್ಮಿಕೊಳ್ಳಲಾಗಿದೆ.

ಜಾಹೀರಾತು

ಭಾನಾಪೂರು ಗ್ರಾಮದಿಂದ ಸ್ವಗ್ರಾಮ ಅರಕೇರಿಯುವರಿಗೆ ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ಆಹ್ವಾನಿಸಿಕೊಳ್ಳಲಾಗುವುದು, ಹಾಗೂ ಮದ್ಯಾಹ್ನ ಗ್ರಾಮದಲ್ಲಿ ಅನ್ನ ಸಂತರ್ಪಣೆ ಕಾರ್ಯಕ್ರಮ ನಡೆಯಲಿದೆ ಎಂದು ಗ್ರಾಮಸ್ಥರು ತಿಳಿಸಿದರು.

ಕೊಟ್ : ಒಬ್ಬ ಮಾಜಿ ಸೈನಿಕ 22 ವರ್ಷಗಳ ಕಾಲ ದೇಶ ಸೇವೆ ಮಾಡಿ ಹತ್ತಾರು ಕಷ್ಟಗಳನ್ನ ಎದುರಿಸಿ ಯಶಸ್ವಿ ಮುಗಿಸಿ ಇಂದು ಸ್ವಗ್ರಾಮಕ್ಕೆ ಆಗಮಿಸುತ್ತಿರುವ ಇವರಿಗೆ ಅದ್ದೂರಿಯಾಗಿ ಸ್ವಾಗತಿಸಿ, ನಿವೃತ್ತಿ ಜೀವನದ ಪ್ರತಿ ಹೆಜ್ಜೆಗೂ ನಾವು ಜೊತೆಗಿರುತ್ತೇವೆ.

ವೀರೇಶ್ ರೆಡ್ಡಿ ಇಮ್ಮಡಿ
ಅರಕೇರಿ ಗ್ರಾಮದ ಮುಖಂಡ.

Total Views: 0
Share This Article