
Bhoomipuja for construction of Srishaila Mallikarjuna temple

ಶ್ರೀಶೈಲ ಮಲ್ಲಿಕಾರ್ಜುನ ದೇವಸ್ಥಾನ ನಿರ್ಮಾಣಕ್ಕೆ ಭೂಮಿಪೂಜೆ

ಮೂಡಲಗಿ: ಪಟ್ಟಣದ ಲಕ್ಷ್ಮಿ ನಗರದಲ್ಲಿ ನಿರ್ಮಿಸುತ್ತಿರುವ ಶ್ರೀಶೈಲ್ ಮಲ್ಲಿಕಾರ್ಜುನ ದೇವಸ್ಥಾನ ನಿರ್ಮಿಸುವುದಕ್ಕಾಗಿ ಕಂಕಣಬದ್ಧರಾಗಿದ್ದು ದೇವಸ್ಥಾನದ ಗೋಪುರ ಕಳಸ ಮುಗಿಯುವವರೆಗೆ ಭಕ್ತರ ಸಂಕಲ್ಪವು ಈಡೇರಲಿ’ ಎಂದು ಭಾಗೋಜಿಕೊಪ್ಪ, ಮುನ್ಯಾಳ ರಂಗಾಪೂರದ ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಇಲ್ಲಿಯ ಮೂಡಲಗಿಯ ಲಕ್ಷ್ಮಿ ನಗರದ ಪುಟಾಣಿ ಪ್ಲಾಟ್ದಲ್ಲಿ ನೂತನವಾಗಿ ನಿರ್ಮಿಸಲಿರುವ ಶ್ರೀಶೈಲ್ ಮಲ್ಲಿಕಾರ್ಜುಜನ ದೇವಸ್ಥಾನದ ಕಟ್ಟಡ ನಿರ್ಮಾಣ ಕಾಮಗಾರಿಯ ಭೂಮಿ ಪೂಜೆಯನ್ನು ಸೋಮವಾರ ನೆರವೇರಿಸಿ ಮಾತನಾಡಿದ ಅವರು ದೇವಸ್ಥಾನದ ನಿರ್ಮಾಣದಲ್ಲಿ ಜಾತಿ, ಮತ, ಪಂಥ, ಧರ್ಮ, ಮೇಲು, ಕೀಳು ಎನ್ನುವ ಬೇಧಭಾವ ಇಲ್ಲದೆ ದೇವರ ಕಾರ್ಯ ಸಾಗಲಿ. ಮಾನವ ಧರ್ಮ ಒಂದೇ ಎನ್ನು ಭಾವ ಎಲ್ಲರಲ್ಲಿ ಇರಲಿ ಎಂದರು.
ದೇವಸ್ಥಾನಗಳು ಕೇವಲ ಪೂಜೆ, ನೈವೇದ್ಯಕ್ಕೆ ಸೀಮಿತವಾಗಿರದೆ ದೇವಸ್ಥಾನವು ಭಕ್ತರಿಗೆ ಶಾಂತಿ, ನೆಮ್ಮದಿಯ ತಾಣವಾಗಬೇಕು ಎಂದರು.
ಇಟ್ನಾಳದ ಸಿದ್ದೇಶ್ವರ ಸ್ವಾಮೀಜಿ ಮಾತನಾಡಿ ಎಲ್ಲ ಭಕ್ತರು ಸೇರಿ ಮಲ್ಲಿಕಾರ್ಜುನ ದೇವಸ್ಥಾನವನ್ನು ನಿರ್ಮಿಸುವ ಮಾಡಿಕೊಂಡಿರುವ ಸಂಕಲ್ವವು ಯಶಸ್ಸು ಆಗಲಿ ಎಂದರು.
ಸುಣಧೋಳಿಯ ಶಿವಾನಂಧ ಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು. ಸವೋತ್ತಮ ಜಾರಕಿಹೊಳಿ ಅತಿಥಿಯಾಗಿ ಭಾಗವಹಿಸಿದ್ದರು.
ಶ್ರೀಶೈಲ ಮಲ್ಲಿಕಾರ್ಜುನ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಚೇತನ ನಿಶಾನಿಮಠ, ಉಪಾಧ್ಯಕ್ಷ ಪ್ರಕಾಶ ಪುಟಾಣಿ, ಬಣಜಿಗ ಸಮಾಜ ಸಂಘದ ಅಧ್ಯಕ್ಷ ಶಿವಪ್ಪ ಭುಜನ್ನವರ, ಜಯಾನಂತ ಪಾಟೀಲ, ಅನ್ವರ ನದಾಫ, ರಾಮಪ್ಪ ಹಂದಿಗುಂದ, ಈರಪ್ಪ ಬನ್ನೂರ, ಸುಭಾಷ ಅವಟಿ, ಕೆ.ಬಿ. ಪಾಟೀಲ, ಸಂಗಪ್ಪ ಅಂಗಡಿ, ಮಲ್ಲಪ್ಪ ಯಮಕಣಮರಡಿ, ಈರಪ್ಪ ಭಾಗೋಜಿ, ಪ್ರಕಾಶ ಮಾದರ, ಮಹಾದೇವ ಶೆಕ್ಕಿ, ರುದ್ರಪ್ಪ ಬಳಿಗಾರ, ಹಣಮಂತ ಮಾಲಗಾರ, ಸಿದ್ದಪ್ಪ ಪಟಾಣಿ ಇದ್ದರು.
ವರದಿ: ಈಶ್ವರ ಢವಳೇಶ್ವರ ಮೂಡಲಗಿ.


