ಕೃಷಿ ತಂತ್ರಜ್ಞಾನ ಕಂಪನಿ ಸಿನ್ ಜೆಂಟಾ ಸಿಎಸ್ ಆರ್‌ ನಿಧಿಯಿಂದ ಮೇವಿನ ಬೀಜಗಳ ಕಿಟ್ ಖರೀದಿ

H.Mallikarjun
H.Mallikarjun - Kalyanasiri
2 Min Read
ಜಾಹೀರಾತು





Procurement of fodder seed kits using CSR funds from the agricultural technology company Syngenta.

ಕೃಷಿ ತಂತ್ರಜ್ಞಾನ ಕಂಪನಿ ಸಿನ್ ಜೆಂಟಾ ಸಿಎಸ್ ಆರ್‌ ನಿಧಿಯಿಂದ ಮೇವಿನ ಬೀಜಗಳ ಕಿಟ್ ಖರೀದಿ

ಸಂಸದರಾದ ರಾಜಶೇಖರ ಹಿಟ್ನಾಳ ಅವರಿಂದ ಸುಧಾರಿತ ಮೇವಿನ ಬೀಜಗಳ ಕಿಟ್ ವಿತರಣೆ

ಕೊಪ್ಪಳ, ನ. 16 : ಬರಗಾಲದ ಸಂದರ್ಭದಲ್ಲಿ ಜಾನುವಾರಗಳ ನಿರ್ವಹಣೆಗೆ ಅತ್ಯುಪಯುಕ್ತವಾದ,  ಮುಖ್ಯವಾಗಿ ಜಾನುವಾರುಗಳಿಗೆ ವರ್ಷಪೂರ್ತಿ ಪೌಷ್ಟಿಕಯುಕ್ತ ಹಸಿರು ಮೇವು ಕೊಡುವ ಮತ್ತು ಹಾಲಿನ ಇಳುವರಿ ಹೆಚ್ಚಿಸುವ ಉದ್ದೇಶದ ಮೇವಿನ ಬೀಜಗಳ ಕಿಟ್ ಗಳನ್ನು ಸಂಸದರಾದ ಕೆ ರಾಜಶೇಖರ ಹಿಟ್ನಾಳ ಅವರು ರೈತರಿಗೆ ವಿತರಿಸಿದರು.
ಜಿಲ್ಲಾ ಪಂಚಾಯತನ ಜೆ‌ ಹೆಚ್ ಪಟೇಲ್ ಸಭಾಂಗಣದಲ್ಲಿ ನವೆಂಬರ್ 16ರಂದು ನಡೆದ ಕಾರ್ಯಕ್ರಮದಲ್ಲಿ ಕುಕನೂರ, ಯಲಬುರ್ಗಾ, ಕುಷ್ಟಗಿ, ಕನಕಗಿರಿ, ಕಾರಟಗಿ ಹಾಗೂ ಗಂಗಾವತಿ ಮತ್ತು ಕೊಪ್ಪಳ ತಾಲೂಕುಗಳಿಂದ ಆಗಮಿಸಿದ ತಲಾ 25 ಜನ ರೈತರಿಗೆ ಹಾಗೂ 50 ರೈತ ಮಹಿಳೆಯರಿಗೆ ಇದೆ ಸಂದರ್ಭದಲ್ಲಿ ಮೇವಿನ ಕಿಟ್ ವಿತರಿಸಲಾಯಿತು.
ಈ ವೇಳೆ ಮಾತನಾಡಿದ ಸಂಸದರು, ಭಾರತವು ಕೃಷಿ ಪ್ರಧಾನ ದೇಶವಾಗಿದೆ. ಕೃಷಿಕರೇ ನಮ್ಮ ಬೆನ್ನೆಲುಬು. ಪ್ರಸಕ್ತ ವರ್ಷ ಮಳೆ ಕೊರತೆ ಎಲ್ಲೆಡೆ ಕಾಣಿಸಿದೆ. ಇದಕ್ಕೆ ಕೊಪ್ಪಳ ಜಿಲ್ಲೆ ಸಹ ಹೊರತಾಗಿಲ್ಲ. ಜಿಲ್ಲೆಯ ರೈತರಿಗೆ ಅನುಕೂಲವಾಗಲೆಂದು ಮೇವು ಕಿಟ್ ವಿತರಣೆ ಮಾಡುತ್ತಿದ್ದೇವೆ.‌ ಬರಗಾಲದ ಸಂದರ್ಭದಲ್ಲಿ ಜಾನುವಾರುಗಳ ಸಾಕಣೆಗೆ ಈ ಮೇವಿನ ಬೀಜಗಳ‌‌ ಕಿಟ್ ಗಳು ಸಂಜೀವಿನಿಯಿದ್ದಂತೆ ಎಂದು ತಿಳಿಸಿದರು.
*ಜಿಲ್ಲಾಡಳಿತದಿಂದ ಹೆಮ್ಮೆಯ ಕೆಲಸ*: ಜಿಲ್ಲಾಧಿಕಾರಿಗಳಾದ ಸುರೇಶ ಇಟ್ನಾಳ ಅವರು ಜಿಲ್ಲೆಯ ರೈತರ ಬಗ್ಗೆ ವಿಶೇಷ ಮುತುವರ್ಜಿ ಪಶುಪಾಲನಾ ಇಲಾಖೆಯ ಸಮನ್ವಯದ ಮೂಲಕ ಖಾಸಗಿ ಕಂಪನಿಗಳ ಸಿಎಸ್ ಆರ್ ನಿಧಿಯಿಂದ ಮೇವಿನ ಕಿಟ್ ಖರೀದಿಗೆ ಕ್ರಮ ವಹಿಸಿದ್ದಾರೆ. ಜಿಲ್ಲಾಡಳಿತ ಹೆಮ್ಮಯ ಕೆಲಸ ಮಾಡಿದೆ. ವಿಶ್ವದ ಅತಿ ದೊಡ್ಡ ಕೃಷಿ ತಂತ್ರಜ್ಞಾನ ಕಂಪನಿಯಾದ ಸಿನ್ ಜೆಂಟಾ ಅವರು ನೀಡಿದ 10 ಲಕ್ಷ ರೂ ಗಳ ಸಿಎಸ್ ಆರ್‌ ನಿಧಿಯ ಮೂಲಕ ಮೇವಿನ ಕಿಟ್ ಖರೀದಿಸಿ ರೈತರಿಗೆ ಕೊಡಿಸಿ ಕ್ರಾಂತಿಕಾರಿ ಕೆಲಸ ಮಾಡಿದ್ದಾರೆ. ಇದರಿಂದ ಬರ ನಿರ್ವಹಣೆಗೆ ಅನುಕೂಲವಾಗಿದೆ ಎಂದು ಸಮಾರಂಭದಲ್ಲಿ ಸರ್ವೋದಯ ಐಆರ್‌ಡಿಎಸ್ ಅಧ್ಯಕ್ಷರಾದ‌ ನಾಗರಾಜ್ ದೇಸಾಯಿ ಅವರು ತಿಳಿಸಿದರು.
*ದನ ಸಾಕಣೆಗೆ ಅನುಕೂಲ:*
ನಮ್ಮ ಮನೆಯಲ್ಲಿ 10 ದನಗಳಿವೆ. ಇವುಗಳನ್ನು ಸಾಕಲು ಈ ಮೇವಿನ ಬೀಜಗಳು ಸಾಕಷ್ಟು ಉಪಯೋಗಕ್ಕೆ ಬರುತ್ತವೆ. ಮೇವಿನ ಬೀಜಗಳನ್ನು ನೆಟ್ಟ ಮೇಲೆ 40 ದಿನಕ್ಕೆ ಮೇವು ಸಿಗುತ್ತದೆ ಎಂದು ಮೇವು ಕಿಟ್ ಪಡೆದುಕೊಂಡ ಲಕಮಾಪುರದ ರೈತ ನಾಗಪ್ಪ ಮುದ್ಲಾಪುರ ಅವರು ತಿಳಿಸಿದರು.
*ಹಾಲು ಉತ್ಪನ್ನಕ್ಕೆ ಸಹಕಾರಿ:*
ಈ ಬೀಜಗಳನ್ನು ಬಿತ್ತಿದ ನಂತರ ತಿಂಗಳ‌ ಮೇಲೆ ಕಟಾವಿಗೆ ಬರುತ್ತದೆ. ನೀರು ಹರಿಸುವುದು ಮತ್ತು ಕಟಾವಿನ ಆಧಾರದ ಮೇಲೆ ಉತ್ತಮ ಇಳುವರಿ ಬರುತ್ತದೆ. ನಮ್ಮ ಮನೆಯಲ್ಲಿ 12 ದನಗಳಿದ್ದು ಈ ಮೇವಿನಿಂದಾಗಿ ಹಾಲು ಉತ್ಪನ್ನಕ್ಕೆ ಸಹಕಾರಿಯಾಗಿದೆ ಎಂದು ಒದಗನಾಳದ ರೈತ ಹುಚ್ಚಪ್ಪ ಮೆಳ್ಳಿಕೇರಿ ತಿಳಿಸಿದರು.
ಈ ಸಂದರ್ಭದಲ್ಲಿ ಸಿಂಜೆಂಟಾ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ಕರ್ನಾಟಕ ವಿಭಾಗೀಯ ವ್ಯವಸ್ಥಾಪಕರಾದ ಪ್ರವೀಣ್ ಕುಮಾರ್ ಕೆ., ಕೊಪ್ಪಳ ಜಿಲ್ಲಾಧಿಕಾರಿಗಳಾದ ಡಾ. ಸುರೇಶ್ ಬಿ. ಇಟ್ನಾಳ್, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ವರ್ಣಿತ್ ನೇಗಿ, ಸಿಂಜೆಂಟಾ ಇಂಡಿಯಾ ಪ್ರೈ.ಲಿ. ಹುಬ್ಬಳ್ಳಿ ವಲಯದ ವ್ಯವಹಾರ ವ್ಯವಸ್ಥಾಪಕರಾದ ಮಲ್ಲಿಕಾರ್ಜುನ ಕೋರಿ, ಪಶುಸಂಗೋಪನಾ ಇಲಾಖೆ ಉಪನಿರ್ದೇಶಕರಾದ ಡಾ. ಪಿ.ಎಂ. ಮಲ್ಲಯ್ಯ ಸೇರಿದಂತೆ ಏಳು ತಾಲ್ಲೂಕುಗಳ ಪಶು ವೈದ್ಯಾಧಿಕಾರಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು, ರೈತರು ಹಾಗೂ ರೈತ ಮಹಿಳೆಯರು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
Total Views: 0
Share This Article
Leave a Comment