ಲಿಂಗಾಯತ ಧರ್ಮದ ಭಾವನೆಗಳಿಗೆ ಧಕ್ಕೆ: ರವಿ ಹಂಜ, ವಿಶ್ವವಾಣಿ ಸಂಪಾದಕರ ವಿರುದ್ಧ ಕ್ರಮಕ್ಕೆ ಡಾ. ಶಶಿಕಾಂತ ಪಟ್ಟಣ ಆಗ್ರಹ

H.Mallikarjun
H.Mallikarjun - Kalyanasiri
1 Min Read
ಜಾಹೀರಾತು

Hurt to Lingayat religious sentiments: Dr. Shashikanta Pattana demands action against Ravi Hanja and the editor of Vishwavani.

ಲಿಂಗಾಯತ ಧರ್ಮದ ಭಾವನೆಗಳಿಗೆ ಧಕ್ಕೆ: ರವಿ ಹಂಜ, ವಿಶ್ವವಾಣಿ ಸಂಪಾದಕರ ವಿರುದ್ಧ ಕ್ರಮಕ್ಕೆ ಡಾ. ಶಶಿಕಾಂತ ಪಟ್ಟಣ ಆಗ್ರಹ

ಜಾಹೀರಾತು
ಜಾಹೀರಾತು


ಆಕ್ಷೇಪಾರ್ಹ ಲೇಖನ, ವಿಡಿಯೋಗಳ ಕುರಿತು ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ


ರಾಮದುರ್ಗ/ಪುಣೆ: ವಿಶ್ವವಾಣಿ ದಿನಪತ್ರಿಕೆ ಹಾಗೂ ವಿಶ್ವವಾಣಿ ಟಿವಿ ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ಲಿಂಗಾಯತ ಧರ್ಮದ ನಂಬಿಕೆ, ಶ್ರದ್ಧೆ, ಸಿದ್ಧಾಂತ ಹಾಗೂ ಬಸವಣ್ಣನವರ ವಿಚಾರಧಾರೆಗಳಿಗೆ ಧಕ್ಕೆ ಉಂಟುಮಾಡುವಂತಹ ವಿಚಾರಗಳನ್ನು ಪ್ರಸಾರ ಮಾಡಲಾಗುತ್ತಿದೆ ಎಂದು ಆರೋಪಿಸಿ, ರವಿ ಹಂಜ ಹಾಗೂ ವಿಶ್ವವಾಣಿ ಮಾಧ್ಯಮ ಸಮೂಹದ ಸಂಪಾದಕ ವಿಶ್ವೇಶ್ವರ ಭಟ್ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಡಾ. ಶಶಿಕಾಂತ ಪಟ್ಟಣ ಅವರು ಪೊಲೀಸ್ ಇಲಾಖೆಗೆ ಮನವಿ ಸಲ್ಲಿಸಿದ್ದಾರೆ.


ಕಳೆದ ಕೆಲವು ವರ್ಷಗಳಿಂದ ರವಿ ಹಂಜ ಅವರು ವಿಶ್ವವಾಣಿ ದಿನಪತ್ರಿಕೆ ಮತ್ತು ವಿಶ್ವವಾಣಿ ಟಿವಿ ಮೂಲಕ ಪ್ರಕಟಿಸುತ್ತಿರುವ ಲೇಖನಗಳು ಹಾಗೂ ಪ್ರಸಾರವಾಗುತ್ತಿರುವ ವಿಚಾರಗಳು ಲಿಂಗಾಯತ ಧರ್ಮದ ನಂಬಿಕೆ ಮತ್ತು ಬಸವಭಕ್ತರ ಧಾರ್ಮಿಕ ಭಾವನೆಗಳಿಗೆ ನೋವುಂಟುಮಾಡುತ್ತಿವೆ ಎಂಬುದು ಅವರ ಆರೋಪವಾಗಿದೆ.
ಕರ್ನಾಟಕ ಸರ್ಕಾರವು ಬಸವಣ್ಣನವರನ್ನು ರಾಜ್ಯದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿ ಗೌರವಿಸಿದೆ. ಬಸವಣ್ಣನವರ ಸಮಾನತೆ, ಕಾಯಕ, ದಾಸೋಹ ಮತ್ತು ಮಾನವೀಯ ಮೌಲ್ಯಗಳು ಸಮಾಜಕ್ಕೆ ದಾರಿದೀಪವಾಗಿವೆ. ಇಂತಹ ಮಹಾನ್ ಚಿಂತಕರ ತತ್ವಾದರ್ಶಗಳ ಕುರಿತು ಜವಾಬ್ದಾರಿಯುತ ಚರ್ಚೆ ನಡೆಯಬೇಕು. ಆದರೆ ಯಾವುದೇ ಧರ್ಮದ ನಂಬಿಕೆಗಳಿಗೆ ಧಕ್ಕೆ ಉಂಟುಮಾಡುವ ಹಾಗೂ ಸಾಮಾಜಿಕ ಸಾಮರಸ್ಯಕ್ಕೆ ಭಂಗ ತರುವಂತಹ ವಿಚಾರಗಳ ಪ್ರಸಾರಕ್ಕೆ ಅವಕಾಶ ನೀಡಬಾರದು ಎಂದು ಅವರು ಮನವಿಯಲ್ಲಿ ತಿಳಿಸಿದ್ದಾರೆ.
ಸಂಬಂಧಪಟ್ಟ ಲೇಖನಗಳು, ವಿಡಿಯೋಗಳು ಹಾಗೂ ಸಾಮಾಜಿಕ ಜಾಲತಾಣಗಳ ಪ್ರಸಾರಗಳನ್ನು ಸಮಗ್ರವಾಗಿ ಪರಿಶೀಲಿಸಿ, ಆರೋಪಗಳಲ್ಲಿ ಸತ್ಯಾಂಶ ಕಂಡುಬಂದಲ್ಲಿ ಸಂಬಂಧಪಟ್ಟವರ ವಿರುದ್ಧ ಪ್ರಕರಣ ದಾಖಲಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಡಾ. ಶಶಿಕಾಂತ ಪಟ್ಟಣ ಅವರು ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದ್ದಾರೆ.

Total Views: 2
Share This Article
Leave a Comment