ಗಂಗಾವತಿ: ವಿಕಲಚೇತನರಿಗೆ ಉಚಿತ ಯಂತ್ರಚಾಲಿತ ದ್ವಿಚಕ್ರ ವಾಹನಕ್ಕಾಗಿ ಅರ್ಜಿ ಆಹ್ವಾನ

H.Mallikarjun
H.Mallikarjun - Kalyanasiri
1 Min Read
ಜಾಹೀರಾತು

Gangavathi: Applications invited for free motorized two-wheelers for persons with disabilities




ಗಂಗಾವತಿ: ವಿಕಲಚೇತನರಿಗೆ ಉಚಿತ ಯಂತ್ರಚಾಲಿತ ದ್ವಿಚಕ್ರ ವಾಹನಕ್ಕಾಗಿ ಅರ್ಜಿ ಆಹ್ವಾನ

ಜಾಹೀರಾತು
ಜಾಹೀರಾತು

ಕೊಪ್ಪಳ, ನವೆಂಬರ್ 16: ಗಂಗಾವತಿ ತಾಲೂಕು ಪಂಚಾಯತಿಯಿAದ 2025-26ನೇ ಸಾಲಿನಲ್ಲಿ ಕೊಪ್ಪಳ ಜಿಲ್ಲಾ ವ್ಯಾಪ್ತಿಯ ದೈಹಿಕ ವಿಕಲಚೇತನರು ಶೇ.75 ಕ್ಕಿಂತ ಹೆಚ್ಚಿನ ವಿಕಲತೆ ಹೊಂದಿದ್ದು, ಸೊಂಟದ ಕೆಳಗೆ ಅಂದರೆ ಎರಡು ಕಾಲುಗಳಲ್ಲಿ ಸ್ವಾಧೀನ ಕಳೆದುಕೊಂಡಿರುವ, ಎರಡು ಕೈಗಳು ಸ್ವಾಧೀನದಲ್ಲಿರುವ ಹಾಗೂ ಇತರೆ ಎಲ್ಲಾ ರೀತಿಯಲ್ಲಿ ಸದೃಢವಾಗಿರುವವರು ದೈಹಿಕ ವಿಕಲಚೇತನರಿಗೆ ಜೀವಿತ ಕಾಲದಲ್ಲಿ ಒಂದು ಬಾರಿ ಇಲಾಖೆಯಿಂದ ಯಂತ್ರಚಾಲಿತ ದ್ವಿ-ಚಕ್ರ ವಾಹನ ನೀಡಲು ಗ್ರಾಮೀಣ ಪ್ರದೇಶದ ಅರ್ಹ ವಿಕಲಚೇತನರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ಕುಟುಂಬದ ವಾರ್ಷಿಕ ವರಮಾನ 02 ಲಕ್ಷದ ಒಳಗಿರಬೇಕು ಹಾಗೂ ಫಲಾನುಭವಿಗಳು 20 ರಿಂದ 59 ವರ್ಷ ವಯೋಮಾನ ದೊಳಗಿನವರಾಗಿರಬೇಕು ಹಾಗೂ ಅಂಗವಿಕಲರ ಗುರುತಿನ ಚೀಟಿ/ಯು.ಡಿ.ಐ.ಡಿ ಕಾರ್ಡ್, ಜಾತಿ ಮತ್ತು ಆದಾಯ ಪ್ರಮಾಣ ಪತ್ರ (02 ಲಕ್ಷ ಒಳಗಿರಬೇಕು). ವಾಸಸ್ಥಳ ಸ-ಕ್ಷಮ ಪ್ರಾಧಿಕಾರದಿಂದ ಪಡೆದಿರಬೇಕು (10 ವರ್ಷ), ಜನ್ಮ ದಿನಾಂಕದ ದಾಖಲೆ ಕಡ್ಡಾಯ, ಸ್ಥಳೀಯ ಸಂಸ್ಥೆಗಳಿAದ ಈ ಹಿಂದೆ ಯಾವುದೇ ಅನುದಾನದಲ್ಲಿ ಯಂತ್ರಚಾಲಿತ ದ್ವಿ-ಚಕ್ರ ವಾಹನ ಪಡೆದಿಲ್ಲವೆಂದು ರೂ.50 ಛಾಪಾಕಾಗದ ನೋಟರಿ ದೃಢೀಕರಣ ಪ್ರಾಮಾಣ ಪತ್ರ, ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ಬಿಪಿಎಲ್ ಕಾರ್ಡ್ ನೊಂದಿಗೆ ಅರ್ಹ ಫಲಾನುಭವಿಗಳು ದಾಖಲೆಗಳೊಂದಿಗೆ ನವೆಂಬರ್ 30 ರ ಒಳಗಾಗಿ ಖುದ್ದಾಗಿ ತಾಲೂಕು ಪಂಚಾಯತಿ ಕಛೇರಿಗೆ ತಪ್ಪದೇ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಗಂಗಾವತಿ ತಾಲೂಕಿನ ಎಂ.ಆರ್.ಡಬ್ಲೂ ಹಾಗೂ ಪಂಚಾಯತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ವಿ.ಆರ್.ಡಬ್ಲೂ ಇವರನ್ನು ಸಂಪರ್ಕಿಸಲು ಗಂಗಾವತಿ ತಾಲೂಕು ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Total Views: 0
Share This Article
Leave a Comment