ಉಪ ಮುಖ್ಯಮಂತ್ರಿಗಳಿAದ ಕೊಪ್ಪಳ, ಯಲಬುರ್ಗಾ,  ಕುಷ್ಟಗಿ ತಾಲೂಕಿನಲ್ಲಿ ಸಂಚಾರ; ಬರ ಪರಿವೀಕ್ಷಣೆ

H.Mallikarjun
H.Mallikarjun - Kalyanasiri
3 Min Read
ಜಾಹೀರಾತು

Deputy Chief Minister’s tour in Koppal, Yalburgi, Kushtagi taluks; inspecting the flood situation

ಉಪ ಮುಖ್ಯಮಂತ್ರಿಗಳಿAದ ಕೊಪ್ಪಳ, ಯಲಬುರ್ಗಾ,
ಕುಷ್ಟಗಿ ತಾಲೂಕಿನಲ್ಲಿ ಸಂಚಾರ; ಬರ ಪರಿವೀಕ್ಷಣೆ
ಕೊಪ್ಪಳ ಅಕ್ಟೋಬರ್ 08 (ಕರ್ನಾಟಕ ವಾರ್ತೆ): ಉಪ ಮುಖ್ಯಮಂತ್ರಿಗಳಾದ ಡಾ.ಜಿ. ಪರಮೇಶ್ವರ ಅವರು ಅಕ್ಟೋಬರ್ 08ರಂದು ಕೊಪ್ಪಳ ಜಿಲ್ಲೆಗೆ ಭೇಟಿ ನೀಡಿ ಬರ ಪರಿವೀಕ್ಷಣೆ ನಡೆಸಿದರು.
ಬರದ ತೀವ್ರತೆ ಹಿನ್ನೆಲೆಯಲ್ಲಿ, ಕೊಪ್ಪಳ ಸಂಸದರಾದ ಕೆ.ರಾಜಶೇಖರ ಹಿಟ್ನಾಳ, ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ ಅವರೊಂದಿಗೆ ಸಂಚಾರ ಆರಂಭಿಸಿದ ಉಪ ಮುಖ್ಯಮಂತ್ರಿಗಳು, ಮೊದಲಿಗೆ ಕೊಪ್ಪಳ ತಾಲೂಕಿನ ವಣಬಳ್ಳಾರಿಗೆ ಭೇಟಿ ನೀಡಿ ರೈತರಾದ ಶಿವಪ್ಪ ಮುದುಕಪ್ಪ ಗೌಡ್ರ ಅವರ ಹೊಲದಲ್ಲಿನ ಮೆಕ್ಕೆಜೋಳ, ತೊಗರಿ ಬೆಳೆ ಹಾಗೂ ಬಿ ಕೃಷ್ಣಮೂರ್ತಿ ಮತ್ತು ಡಿ ಹೊಸಳ್ಳಿ ಸೀಮಾ ಅವರ ಹೊಲದಲ್ಲಿನ ತೊಗರಿ ಮತ್ತು ಹುರುಳಿ ಬೆಳೆಯ ವೀಕ್ಷಣೆ ನಡೆಸಿದರು. ಬಳಿಕ ಯಲಬುರ್ಗಾ ತಾಲೂಕಿನ ಗುನ್ನಾಳ ಗ್ರಾಮಕ್ಕೆ ತೆರಳಿ ಗ್ರಾಮದ ರೈತರಾದ ಮಹೇಶ ಹನುಮಂತಯ್ಯ ಅವರ ಹೊಲದಲ್ಲಿನ ತೊಗರಿ ಬೆಳೆ, ಚನ್ನಬಸವ್ವ ಈಶಪ್ಪ ಉಳ್ಳಾಗಡ್ಡಿ ಅವರ ಹೊಲದಲ್ಲಿನ ಮೆಕ್ಕೆಜೋಳದ ಬೆಳೆಯ ವೀಕ್ಷಣೆ ನಡೆಸಿದರು. ಬಳಿಕ ಕುಷ್ಟಗಿ ತಾಲೂಕಿಗೆ ಸಂಚರಿಸಿ, ತಾಲೂಕಿನ ನಂದಾಪುರ ಗ್ರಾಮಕ್ಕೆ ತೆರಳಿ ರೈತರಾದ ಕರಡಪ್ಪ ಚನ್ನಬಸಪ್ಪ ಅವರ ಹೊಲದಲ್ಲಿನ ತೊಗರಿ ಬೆಳೆಯ ವೀಕ್ಷಣೆ ನಡೆಸಿದರು. ಬೆಳೆಹಾನಿಯ ಪ್ರಮಾಣದ ಬಗ್ಗೆ ಜಿಲ್ಲಾಧಿಕಾರಿಗಳಾದ ಡಾ.ಸುರೇಶ ಇಟ್ನಾಳ ಹಾಗೂ ಕೃಷಿ ಅಧಿಕಾರಿಗಳು ಉಪ ಮುಖ್ಯಮಂತ್ರಿಗಳಿಗೆ ಮಾಹಿತಿ ನೀಡಿದರು.
ರೈತರಿಂದ ಅಹವಾಲು: ಈ ವರ್ಷ ಮಳೆಯಾಗದೇ ಬೆಳೆಗಳು ಸರಿಯಾಗಿ ಬಂದಿಲ್ಲ. ಮಳೆಯಾಗದೇ ಕಾಳು ಕಟ್ಟಿಲ್ಲ. ಬೆಳೆನಷ್ಟಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಇದೆ ವೇಳೆ ರೈತರು ಉಪ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದರು.
ಬರದ ತೀವ್ರತೆ ಹೆಚ್ಚಿದೆ: ಈ ವೇಳೆ ಉಪ ಮುಖ್ಯಮಂತ್ರಿಗಳು ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಬರದ ತೀವ್ರತೆ ಹೆಚ್ಚಿದೆ. ಬೆಳೆಗಳು ಸಂಪೂರ್ಣ ಹಾಳಾಗಿ ರೈತರು ಕಂಗಾಲಾಗಿದ್ದಾರೆ. ಬರಿ ಪರಿಸ್ಥಿತಿಯ ದುಸ್ಥಿತಿಯನ್ನು ಖುದ್ದಾಗಿ ನೋಡಲು ತಾವು ಕೊಪ್ಪಳ ಸೇರಿದಂತೆ ಬೇರೆ ಬೇರೆ ಜಿಲ್ಲೆಗಳಲ್ಲಿ ಸಂಚರಿಸುತ್ತಿರುವುದಾಗಿ ಹೇಳಿದರು.
ರಾಜ್ಯದ 240 ತಾಲೂಕುಗಳ ಪೈಕಿ ಈಗಾಗಲೇ 217 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಕೊಪ್ಪಳ ಜಿಲ್ಲೆ ಜೊತೆಗೆ ಪಕ್ಕದ ಜಿಲ್ಲೆಗಳಾದ ವಿಜಯನಗರ, ಬಳ್ಳಾರಿ, ರಾಯಚೂರು ಸೇರಿದಂತೆ ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಮೈಸೂರು ಭಾಗಕ್ಕೆ ಹೋಲಿಸಿದರೆ ಬರದ ತೀವ್ರತೆ ಹೆಚ್ಚಿದೆ. ವಿಜಯನಗರ ಜಿಲ್ಲೆಯಲ್ಲಿ ಶೇ.98ರಷ್ಟು ಬೆಳೆಗಳು ಹಾನಿಗೀಡಾಗಿವೆ. ಕೊಪ್ಪಳ ಜಿಲ್ಲೆಯಲ್ಲಿನ ಎಲ್ಲಾ ಕಡೆಗಳಲ್ಲೂ ಬೆಳೆಗಳು ಮಳೆಯಿಲ್ಲದೆ ಹಾಳಾಗಿವೆ. ನಮ್ಮ ರಾಜ್ಯವು ಅತ್ಯಂತ ಕೆಟ್ಟದಾದ ಬರದ ಪರಿಸ್ಥಿತಿ ಎದುರಿಸುತ್ತಿದೆ. ರೈತರು ಸಾಲ ತೀರಿಸದ ದುಸ್ಥಿತಿಯಲ್ಲಿದ್ದು, ತಲೆ ಮೇಲೆ ಕೈಹೊತ್ತು ಕೂಡುವಂತಾಗಿದೆ. ನಮ್ಮ ಸರ್ಕಾರ ಬರ ನಿರ್ವಹಣೆ, ಕುಡಿವ ನೀರು ಪೂರೈಕೆಗೆ ಒತ್ತು ನೀಡಿದೆ. ರೈತರಿಗೆ ನೆರವು ಮತ್ತು ಕೂಲಿ ಕೆಲಸ ಒದಗಿಸಲು ನಮ್ಮ ಸರ್ಕಾರ ಕ್ರಮ ಜರುಗಿಸುತ್ತಿದೆ ಎಂದು ತಿಳಿಸಿದರು.
ಬರದಿಂದಾಗಿ ಬೆಳೆ ಕಳೆದುಕೊಂಡಿರುವ ರೈತರಿಗೆ ಬೆಳೆವಿಮೆ ಹಣವನ್ನು ಶೀಘ್ರ ಒದಗಿಸಲು ಸರ್ಕಾರ ಕ್ರಮಕೈಗೊಳ್ಳುತ್ತಿದೆ. ಅರ್ಹ ರೈತರಿಗೆ ವಿಮಾ ಪರಿಹಾರ ಸಕಾಲಕ್ಕೆ ದೊರೆಯಬೇಕು ಎಂಬುದು ನಮ್ಮ ಸರ್ಕಾರದ ಉದ್ದೇಶವಾಗಿದೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ವರ್ಣಿತ್ ನೇಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಸಾಹಿಲ್ ಬಾಗ್ಲಾ, ಅಪರ ಜಿಲ್ಲಾಧಿಕಾರಿಗಳಾದ ಸಿದ್ರಾಮೇಶ್ವರ, ಜಂಟಿ ಕೃಷಿ ನಿರ್ದೇಶಕರಾದ ಜಿ.ಡಿ. ಕೃಷ್ಣಮೂರ್ತಿ, ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕರಾದ ಕೃಷ್ಣ ಉಕ್ಕುಂದ್, ಪಶುಪಾಲನಾ ಇಲಾಖೆಯ ಉಪನಿರ್ದೇಶಕರಾದ ಡಾ.ಪಿ.ಎಂ. ಮಲ್ಲಯ್ಯ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು, ತಹಶೀಲ್ದಾರರು ಹಾಗೂ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಉಪಸ್ಥಿತರಿದ್ದರು.
Total Views: 0
ಜಾಹೀರಾತು
Share This Article