
ರಾಯಚೂರು ಜಿಲ್ಲಾ ಘಟಕ ರಚನೆಗೆ ಜಿಲ್ಲಾ ಸಂಚಾಲಕರ ನೇಮಕಕ್ಕೆ ಸೂಚನೆ
Directive to appoint a district convener for the formation of the Raichur district unit.
ಪತ್ರಕರ್ತರನ್ನು ಸಂಘಟಿಸಿ ಸಂಘದ ಬಲವರ್ಧನೆಗೆ ಒತ್ತು
ಸಿಂಧನೂರು: ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘದ ರಾಯಚೂರು ಜಿಲ್ಲಾ ಘಟಕ ರಚಿಸುವ ಕುರಿತು ಸಿಂಧನೂರಿನ ಸನ್ಮಾನ ಹೋಟೆಲ್‌ನಲ್ಲಿ ಮಹತ್ವದ ಸಭೆ ನಡೆಯಿತು.
ಸಂಘದ ರಾಜ್ಯ ಸಮಿತಿ ಸದಸ್ಯ ಹೆಚ್. ಮಲ್ಲಿಕಾರ್ಜುನ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ರಾಯಚೂರು ಜಿಲ್ಲೆಯಲ್ಲಿ ಸಂಘದ ಘಟಕವನ್ನು ಬಲಪಡಿಸುವುದು, ಜಿಲ್ಲೆಯ ವಿವಿಧ ತಾಲೂಕು ಹಾಗೂ ಹೋಬಳಿ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತರನ್ನು ಸಂಘಟಿಸುವುದು ಮತ್ತು ಸಂಘಟನಾ ಚಟುವಟಿಕೆಗಳನ್ನು ವಿಸ್ತರಿಸುವ ಕುರಿತು ಸಮಗ್ರವಾಗಿ ಚರ್ಚಿಸಲಾಯಿತು.
ರಾಯಚೂರು ಜಿಲ್ಲಾ ಘಟಕ ರಚನೆಗೆ ಅಗತ್ಯವಿರುವ ಜಿಲ್ಲಾ ಸಂಚಾಲಕರನ್ನು ನೇಮಕ ಮಾಡುವ ಕುರಿತು ರಾಜ್ಯ ಸಮಿತಿ ಅಧ್ಯಕ್ಷರಿಗೆ ಪ್ರಸ್ತಾವನೆ ಸಲ್ಲಿಸಿ, ಸೂಕ್ತ ವ್ಯಕ್ತಿಯನ್ನು ನೇಮಕ ಮಾಡುವಂತೆ ಮನವಿ ಮಾಡಲು ಸಭೆಯಲ್ಲಿ ನಿರ್ಧರಿಸಲಾಯಿತು.
ಜಿಲ್ಲೆಯಾದ್ಯಂತ ಕಾರ್ಯನಿರ್ವಹಿಸುತ್ತಿರುವ ಮಾಧ್ಯಮ ಪ್ರತಿನಿಧಿಗಳನ್ನು ಒಂದೇ ವೇದಿಕೆಯಡಿ ಸಂಘಟಿಸಿ, ಪತ್ರಕರ್ತರ ಹಿತಾಸಕ್ತಿ, ಸಮಸ್ಯೆಗಳ ಪರಿಹಾರ ಹಾಗೂ ಸಂಘದ ಸಂಘಟನಾ ಬಲವರ್ಧನೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು.
ಈ ಸಭೆಯಲ್ಲಿ ಶರಭಯ್ಯ ಸ್ವಾಮಿ ಹಿರೇಮಠ, ಕನಕರಾಯ ನಾಯಕ್ (ರತ್ನಾಪುರ), ಅಮರಯ್ಯ ಸ್ವಾಮಿ ಹಿರೇಮಠ, ಪಂಪಾಪತಿ (ಎಂ. ತಿಡಿಗೋಳ), ವಿಶ್ವನಾಥ್ ರೆಡ್ಡಿ, ರವಿ ನಾಯಕ್, ಚೆಲುವೇಶ ರೆಡ್ಡಿ ಸೇರಿದಂತೆ ತಾಲೂಕು ಹಾಗೂ ಹೋಬಳಿ ಮಟ್ಟದ ವರದಿಗಾರರು ಉಪಸ್ಥಿತರಿದ್ದರು.




