Karnataka Media State Award Winner: Sharanbasappa.K. Danakai

ಕರ್ನಾಟಕ ಮಾಧ್ಯಮ ರಾಜ್ಯ ಪ್ರಶಸ್ತಿ ಪುರಸ್ಕಾರ ಪಡೆದ : ಶರಣಬಸಪ್ಪ.ಕೆ. ದಾನಕೈ

ಬೆಂಗಳೂರ : ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘ ದ ಯಲಬುರ್ಗಾ ತಾಲೂಕು ಘಟಕದ ಗೌರವ ಅಧ್ಯಕ್ಷ ,ಹಿರಿಯ ಪತ್ರಕರ್ತ, ಸಾಹಿತಿ ಶರಣಬಸಪ್ಪ. ಕೆ.ದಾನಕೈ ಅವರ ಪತ್ರಿಕಾ ಸೇವೆಗೆ ಅವರನ್ನು ಗುರುತಿಸಿ ಕರ್ನಾಟಕ ಮಾಧ್ಯಮ ರತ್ನ ಪ್ರಶಸ್ತಿ ಪುರಸ್ಕಾರ ನೀಡಿ ಅ.8 ರಂದು ಬೆಂಗಳೂರಿನ ನೆಲಮಂಗಲದ ಪುಷ್ಪ ಭೈರೇಗೌಡ ಕನ್ವೇಷನ್ ಹಾಲ್ ನಲ್ಲಿ ಜರುಗಿರುವ 4 ನೇ ರಾಜ್ಯ ಮಟ್ಟದ ಪತ್ರಕರ್ತರ ಸಮ್ಮೇಳನದಲ್ಲಿ ನೆನಪಿನ ಕಾಣಿಕೆ ಪ್ರಶಸ್ತಿ ಪತ್ರವನ್ನು ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ ಹೆಗಡೆ ಅವರು ನೀಡಿ ಸನ್ಮಾನಿಸಿ ಗೌರವಿಸಿದರು. ಈ ವೇಳೆ ಶಿವಾನಂದ ಆಶ್ರಮದ ರಾಮನಾಥ ಸ್ವಾಮೀಜಿ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾಧಿ ನಾರಯಣಸ್ವಾಮಿ, ಕಾನಿಪ ಧ್ವನಿ ಸಂಘದ ರಾಜ್ಯ ಅಧ್ಯಕ್ಷ ಬಂಗ್ಲೆ ಮಲ್ಲಿಕಾರ್ಜುನ, ರಾಜ್ಯ ಉಪಾಧ್ಯಕ್ಷ ಡಾ.ಎಸ್.ಎಸ್.ಪಾಟೀಲ ಹಾಗು ಸಂಸದರು,ಶಾಸಕರು ಹಾಗು ವಿವಿಧ ಜಿಲ್ಲೆಯ ಕಾ.ನಿ.ಪ ಧ್ವನಿ ಸಂಘಟನೇಯ ಜಿಲ್ಲಾ ಹಾಗು ತಾಲೂಕಿನ ಪದಾಧಿಕಾರಿಗಳು ಮತ್ತು ಕಲಾವಿದರು ಭಾಗವಹಿಸಿ ಕರ್ನಾಟಕ ಮಾಧ್ಯಮ ರತ್ನ ಪ್ರಶಸ್ತಿ ಪಡೆದ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಶರಣಬಸಪ್ಪ. ಕೆ.ದಾನಕೈ ಅವರಿಗೆ ಸನ್ಮಾನಿಸಿದರು.ಈ ವೇಳೆ ರಾಜ್ಯದ ವಿವಿಧ ಜಿಲ್ಲೆಯ ಎರಡು ಸಾವಿರ ಅಧಿಕ ಪತ್ರಕರ್ತರು ಭಾಗವಹಿಸಿ ಸಮ್ಮೇಳನವನ್ನು ಯಶಸ್ವಿಗೋಳಿಸಿದರು.
