
World Labor Day celebrated at Bapireddy camp
The role of workers is important in the progress of the country: Shivakumar

ಬಾಪಿರೆಡ್ಡಿ ಕ್ಯಾಂಪಿನಲ್ಲಿ ವಿಶ್ವ ಕಾರ್ಮಿಕ ದಿನಾಚರಣೆ
ದೇಶದ ಪ್ರಗತಿಯಲ್ಲಿ ಕಾರ್ಮಿಕರ ಪಾತ್ರ ಪ್ರಮುಖವಾಗಿದೆ: ಶಿವಕುಮಾರ್

ಗಂಗಾವತಿ : ಪ್ರತಿ ಕ್ಷೇತ್ರದಲ್ಲೂ ದುಡಿಯುವ ವರ್ಗದ ಮೇಲೆ ಆ ಕ್ಷೇತ್ರದ ಅಭಿವೃದ್ಧಿ ಪೂರಕವಾಗಿದ್ದು, ದೇಶದ ಔನ್ನತಿಗೆ ಕಾರ್ಮಿಕರ ಪ್ರಮಾಣಿಕ ಶ್ರಮ ಪ್ರಮುಖ ಎಂದು ಶ್ರಮ ಜೀವಿ ಕಟ್ಟಡ ಮತ್ತು ಇತರೆ ನಿರ್ಮಾಣ ಸೇವಾ ಸಂಘದ ರಾಜ್ಯಧ್ಯಕ್ಷ ಶಿವುಕುಮಾರ್ ಹೇಳಿದರು.
ಅವರು, ಶ್ರಮ ಜೀವಿ ಕಟ್ಟಡ ಮತ್ತು ಇತರೆ ನಿರ್ಮಾಣ ಸೇವಾ ಸಂಘವು ಸಮೀಪ ಬಾಪಿರೆಡ್ಡಿ ಕ್ಯಾಂಪಿನಲ್ಲಿ ಆಯೋಜಸಿದ್ದ ವಿಶ್ವ ಕಾರ್ಮಿಕರ ದಿನಾಚರಣೆ ಹಾಗು ಪಿಯುಸಿ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಸರಕಾರವು ಕಾರ್ಮಿಕರ ಬೇಡಿಕೆಗಳಿಗೆ ಸ್ಪಂದಿಸಬೇಕು, ಶ್ರಮಿಕರ ಜೀವನಮಟ್ಟ ಸುಧಾರಣೆಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದರು.
ಕೊಪ್ಪಳ ಜಿಲ್ಲಾಧ್ಯಕ್ಷ ಪಂಪಾಪತಿ ಇಂಗಳಗಿ ಮಾತನಾಡಿ, ಕಾರ್ಮಿಕರು ತಮ್ಮ ಸೌಲಭ್ಯಗಳನ್ನು ಪಡೆಯಲು ಸಂಘಕ್ಕೆ ಭೇಟಿ ನೀಡಬೇಕು, ಹಲವು ಸೌಲಭ್ಯ ಪಡೆಯದೆ ಅನೇಕರು ಸಾಕಷ್ಟು ಸಂಕಷ್ಟ ಎದುರಿಸುತ್ತಿದ್ದು, ತಿಳುವಳಿಕೆಯ ಕೊರತೆಯಿದೆ ಪ್ರತಿಯೊಬ್ಬರು ಎಲ್ಲರ ಜಾಗೃತಿಗೆ ದುಡಿಯಬೇಕಿದೆ ಎಂದರು.
ಈ ಸಂದರ್ಭದಲ್ಲಿ ಪ್ರತಿಭಾನ್ವಿತ ಕೆ. ಸಂಜನಾ, ಸಂಜಿತ ಕುಮಾರ್ ಇಂಗಳಗಿ, ಹರ್ಷವರ್ಧನ್, ಅನುಷಾ, ಶಹಬುದ್ದೀನ್, ಇರ್ಫಾನ್, ಗಾಯತ್ರಿ, ಅಯೋಸ್ತೀರ್, ರಾಣಿ, ಲತಾ, ಪ್ರೇಮ್ ಕುಮಾರ್, ಸಲೀಮ್, ಐಶ್ವರ್ಯ, ಭರತ್ ಸೇರಿದಂತೆ ಅನೇಕ ಪಿಯು ಮಕ್ಕಳನ್ನು ಸನ್ಮಾನಿಸಿ ಪ್ರಶಸ್ತಿ ಪತ್ರ ನೀಡಿ ಸನ್ಮಾನಿಸಲಾಯಿತಲ್ಲದೆ , ಹಿರಿಯ ಕಾರ್ಮಿಕರನ್ನೂ ಸನ್ಮಾನಿಸಲಾಯಿತು. ಕಾರ್ಮಿಕ ದಿನಾಚರಣೆ ಪಯುಕ್ತ ಹಿರಿಯ ಕಾರ್ಮಿಕರಾದ ಪರಶುರಾಮ್ ಮೇಸ್ತಿç, ಬಾಬು ಮೇಸ್ತಿç, ಬಸವರಾಜ್ ಮೇಸ್ತಿç, ನಾಗೇಶ್ ರಾವ್ ಮೇಸ್ತಿç, ಹನುಮಂತ ಮೇಸ್ತಿç, ವೀರೇಶ್ ಮೇಸ್ತಿç, ರಹೀಮ್ ಸಾಬ್ ಮೇಸ್ತಿç, ಸಂಗಪ್ಪ ಮೇಸ್ತಿç, ಷರೀಪ್ ಮೇಸ್ತಿç, ಸುಕುಮುನಿ ಮೇಸ್ತಿç, ಮಾರೇಶ್ ಮೇಸ್ತಿç, ರಾಮ್ ಮೇಸ್ತಿç, ಸೀಮಾನ್ ಮೇಸ್ತಿç, ಅಬ್ರಾ ಮೇಸ್ತಿç, ರವಿ ಮೇಸ್ತಿç, ಸಂಗಪ್ಪ ಮೇಸ್ತಿç, ಶಾಮಣ್ಣ ಮೇಸ್ತಿç, ಹನುಮಂತ ಮೇಸ್ತಿç, ಎಲ್ಲಪ್ಪ ಮೇಸ್ತಿç, ದುರುಗಪ್ಪ ಮೇಸ್ತಿç, ವೀರೇಶ್ ಹಣವಾಳ್, ರಾಘವೇಂದ್ರ ಮೇಸ್ತಿç, ಹುಲುಗಯ್ಯ ಮೇಸ್ತಿç, ಚಂದ್ರು ಮೇಸ್ತಿç ಹಾಗು ಇಮಾಮ್ ಮೇಸ್ತಿç ಇವರನ್ನು ಗೌರವಿಸಲಾಯಿತು.
ತಾಲೂಕು ವಕೀಲರ ಸಂಘದ ಉಪಾಧ್ಯಕ್ಷ ಪ್ರಕಾಶ್ ಕುಷ್ಠಗಿ, ಗ್ರಾಪಂ ಮಾಜಿ ಉಪಾಧ್ಯಕ್ಷ ರಾಜೇಶ್ ಹೇರೂರ್, ಕಾರಟಗಿ ತಾಲೂಕು ಅಧ್ಯಕ್ಷ ಬಾಬು ಮೇಸ್ತಿç ಇತರರಿದ್ದರು.
