ಅಥಣಿ: ದೇಸಾಯಿ ಸರ್ಕಲ್ ದತ್ತ ಮಂದಿರ ಕಾಂಪ್ಲೆಕ್ಸ್ ಮುಂದಿನ ಅಪಾಯಕಾರಿ ಚರಂಡಿ — ಪುರಸಭೆ, ತಹಶೀಲ್ದಾರರಿಗೆ ಮತ್ತೆ ಮನವಿ: ತಕ್ಷಣದ ಕ್ರಮಕ್ಕೆ ಆಗ್ರಹ

H.Mallikarjun
H.Mallikarjun - Kalyanasiri
2 Min Read





Athani: Dangerous drain in front of the Datta Mandir complex at Desai Circle — Renewed appeal to the Town Municipality and Tahsildar; immediate action demanded.

ಅಥಣಿ: ದೇಸಾಯಿ ಸರ್ಕಲ್ ದತ್ತ ಮಂದಿರ ಕಾಂಪ್ಲೆಕ್ಸ್ ಮುಂದಿನ ಅಪಾಯಕಾರಿ ಚರಂಡಿ — ಪುರಸಭೆ, ತಹಶೀಲ್ದಾರರಿಗೆ ಮತ್ತೆ ಮನವಿ: ತಕ್ಷಣದ ಕ್ರಮಕ್ಕೆ ಆಗ್ರಹ

ಜಾಹೀರಾತು

ಅಥಣಿ :   ಪಟ್ಟಣದ ಅತ್ಯಂತ ಜನನಿಬಿಡ ಪ್ರದೇಶವಾದ ದೇಸಾಯಿ ಸರ್ಕಲ್ ಎದುರಿಗಿರುವ ದತ್ತ ಮಂದಿರ ಕಾಂಪ್ಲೆಕ್ಸ್ ಮುಂಭಾಗದಲ್ಲಿರುವ ಬೃಹತ್ ಚರಂಡಿಯ (ಗಟರ್) ಮುಚ್ಚಳಿಕೆ ಸಂಪೂರ್ಣವಾಗಿ ಮುರಿದುಬಿದ್ದು ಬಲಿಪೀಠವಾಗಿ ಮಾರ್ಪಟ್ಟಿದ್ದರೂ, ಪುರಸಭೆ ಹಾಗೂ ತಾಲೂಕು ಆಡಳಿತ ಕಣ್ಣಿದ್ದು ಕುರುಡನಂತೆ ವರ್ತಿಸುತ್ತಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.?

ಹೋರಾಟಗಾರ ಸಾಮಾಜಿಕ ಹಾಗೂ ಮಹೇಶ್ ಎಮ್ ಶರ್ಮಾ ಕರ್ನಾಟಕ ಪರಿಶಿಷ್ಟ ಜಾತಿ–ಪರಿಶಿಷ್ಟ ಪಂಗಡ ಮಹಿಳಾ ಸಬಲೀಕರಣ ಹೋರಾಟ ಸಮಿತಿ (ರಿ.), ರಾಜ್ಯ ಮಾಧ್ಯಮ ವಕ್ತಾರರು ಮಾತನಾಡುತ್ತಾ
ಈ ಅಪಾಯಕಾರಿ ಸ್ಥಿತಿಯ ಕುರಿತು ದಿನಾಂಕ 04.03.2023 ರಂದೇ ಪುರಸಭೆ ಕಾರ್ಯಾಲಯಕ್ಕೆ ಲಿಖಿತ ಮನವಿ ಸಲ್ಲಿಸಿ ಗಮನ ಸೆಳೆಯಲಾಗಿತ್ತು. ಆದರೆ, ವರ್ಷ ಕಳೆದರೂ ಯಾವುದೇ ಕ್ರಮ ಕೈಗೊಳ್ಳದ ಕಾರಣ, ಇಂದು ಪುರಸಭೆ ಮುಖ್ಯಾಧಿಕಾರಿಗಳಿಗೆ ಹಾಗೂ ಅಥಣಿ ತಹಶೀಲ್ದಾರರಿಗೆ ಮತ್ತೊಮ್ಮೆ ಮನವಿ ಪತ್ರ ಸಲ್ಲಿಸಿ ತಕ್ಷಣ ಹೊಸ ಚರಂಡಿ ನಿರ್ಮಾಣ ಹಾಗೂ ದೃಢವಾದ ಮುಚ್ಚಳಿಕೆ ಅಳವಡಿಕೆಗೆ ಆಗ್ರಹಿಸಲಾಯಿತು.


ಪ್ರಾಣಾಪಾಯದ ಭೀತಿಯಲ್ಲಿ ನಾಗರಿಕರು:?
ಸದರಿ ಕಾಂಪ್ಲೆಕ್ಸ್ ಅಡಿಯಲ್ಲಿ ಜೆರಾಕ್ಸ್ ಅಂಗಡಿಗಳು, ಚಹಾ ಹೋಟೆಲ್, ಮೆಡಿಕಲ್ ಶಾಪ್ ಹಾಗೂ ಹಲವಾರು ವಾಣಿಜ್ಯ ಮಳಿಗೆಗಳಿದ್ದು, ದಿನನಿತ್ಯ ನೂರಾರು ಗ್ರಾಹಕರು, ಹಿರಿಯ ನಾಗರಿಕರು ಮತ್ತು ಮಹಿಳೆಯರು ಇದೇ ಮಾರ್ಗವಾಗಿ ಸಂಚರಿಸುತ್ತಾರೆ. ಮುರಿದುಬಿದ್ದ ಗಟರ್ ಮುಚ್ಚಳಿಕೆಯಿಂದಾಗಿ ಈಗಾಗಲೇ ಹಲವು ಹಿರಿಯ ನಾಗರಿಕರು ಮತ್ತು ಮಹಿಳೆಯರು ಕಾಲು ಜಾರಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ. ಪ್ರಸ್ತುತ ಮಳೆ ಪ್ರಾರಂಭವಾಗಿರುವುದರಿಂದ ಚರಂಡಿಯ ಸಿಮೆಂಟ್ ಮುಚ್ಚಳಿಕೆ ಸಂಪೂರ್ಣವಾಗಿ ಹಸಿಯಾಗಿ, ಯಾವುದೇ ಕ್ಷಣದಲ್ಲಿ ಒಳಗಡೆ ಕುಸಿದುಬೀಳುವ ಅಪಾಯದಲ್ಲಿದೆ.
ಚುನಾವಣೆ ಭರವಸೆ ಮಾತ್ರ, ಸಮಸ್ಯೆಗೆ ಸ್ಪಂದನೆ ಇಲ್ಲ:
“ಚುನಾವಣೆಗಳು ಬಂದಾಗ ‘ಅಭಿವೃದ್ಧಿ ಮಾಡುತ್ತೇವೆ’ ಎಂದು ಕೇವಲ ಮಾತಿನಲ್ಲಿ ಭರವಸೆ ನೀಡುವ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು, ಸಾರ್ವಜನಿಕರ ಜೀವಕ್ಕೆ ಕಂಟಕವಾಗಿರುವ ಇಂತಹ ನಿತ್ಯದ ಸಮಸ್ಯೆಗಳನ್ನು ಬಗೆಹರಿಸಲು ವಿಫಲರಾಗಿದ್ದಾರೆ.? ಭಯದಿಂದ ಸಂಚರಿಸಬೇಕಾಗಿದೆ?

ದೃಶ್ಯಾವಳಿಗಳನ್ನು ವೀಕ್ಷಿಸಿದರೆ ಇಲ್ಲಿನ ಭೀಕರ ಹಾಗೂ ಭ್ರಷ್ಟ ಆಡಳಿತ ವ್ಯವಸ್ಥೆಯ ನೈಜ ಚಿತ್ರಣ ಕಣ್ಣಿಗೆ ಎದ್ದು ಕಾಣುತ್ತದೆ” ಎಂದು ಸಾರ್ವಜನಿಕರು ಹಾಗೂ .
​ಅನಾಹುತ ಸಂಭವಿಸುವ ಮುನ್ನ ಜಾಗೃತರಾಗಿ:
ಯಾವುದೇ ದೊಡ್ಡ ಅನಾಹುತ ಅಥವಾ ಜೀವಹಾನಿ ಸಂಭವಿಸುವ ಮುನ್ನವೇ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಮತ್ತು ತಹಶೀಲ್ದಾರರು ಸ್ಥಳಕ್ಕೆ ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ತಕ್ಷಣವೇ ಹೊಸ ಚರಂಡಿ ನಿರ್ಮಾಣ ಮಾಡಿ ಸುಸಜ್ಜಿತ ಮುಚ್ಚಳಿಕೆಗಳನ್ನು ಅಳವಡಿಸಿ ಸಾರ್ವಜನಿಕರ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು, ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದು ಎಚ್ಚರಿಸಲಾಗಿದೆ.

ಸಂಬಂಧಪಟ್ಟ ಅಧಿಕಾರಿಗಳು ಪುರಸಭೆ ಅಧಿಕಾರಿಗಳು ತಹಶೀಲ್ದಾರ್ ಸಾಹೇಬರು ತಾಲೂಕಾ ಆಡಳಿತ ಜಿಲ್ಲಾಡಳಿತ ರಾಜ್ಯ ಸರ್ಕಾರ ರಾಜ್ಯ ಸರ್ಕಾರದ ಸಚಿವರು ಕೇಂದ್ರ ಸರ್ಕಾರ ಕೇಂದ್ರ ಸರ್ಕಾರದ ಸಚಿವರು ಮುಖ್ಯಮಂತ್ರಿಗಳು ಪ್ರಧಾನ ಮಂತ್ರಿಗಳು ರಾಜ್ಯಪಾಲರು ರಾಷ್ಟ್ರಪತಿಗಳು ಗಟರ್ಗೆ ಮುಚ್ಚಳಿಕೆಯನ್ನು ಅಳವಡಿಸಿ ಅಥವಾ ಹೊಸ ಘಟಕ ನಿರ್ಮಾಣ ಮಾಡಿ ಸರಿಪಡಿಸಿ ಕೊಡುತ್ತಾರೆ ಅಥವಾ ಯಥಾಸ್ಥಿತಿ ಮುಂದುವರಿಸುತ್ತಾರೆ

Total Views: 0
Share This Article