Free tailoring training for adolescent girls launched by the Reeds organization in Hanavala village.

ರೀಡ್ಸ್ ಸಂಸ್ಥೆಯಿಂದ ಹಣವಾಳ ಗ್ರಾಮದಲ್ಲಿ ಕಿಶೋರಿಯರಿಗೆಉಚಿತ ಹೊಲಿಗೆ ತರಬೇತಿಗೆ ಚಾಲನೆ.

ಗಂಗಾವತಿ: ಇಂದು ಆಗಸ್ಟ್-7 ಶುಕ್ರವಾರ ರೀಡ್ಸ್ ಸಂಸ್ಥೆ ವತಿಯಿಂದ ಹಣವಾಳ ಗ್ರಾಮದಲ್ಲಿ ಕಿಶೋರಿಯರಿಗೆ ಉಚಿತವಾಗಿ ಹೋಲಿಗೆ ತರಬೇತಿಯನ್ನು ಸಂಸ್ಥೆಯ ಪ್ರಜಾಕ್ಟ್ ಮ್ಯಾನೇಜರ್ ಆದ ಮಲ್ಲೇಶಪ್ಪ ಜಾದವ್, ಗಂಗಾವತಿ ತಾಲೂಕಿನ ಕೋ ಆಡಿನೇಟರ್ ಸುರೇಶ್ ಮತ್ತು PRICBO ಪ್ರೊಜೆಕ್ಟ್ ತಾಲೂಕು ಕೋಆರ್ಡಿನೇಟರ್ (NRLM) ಕೀರ್ತಿ, ಹಣವಾಳ ಗ್ರಾಮ ಪಂಚಾಯತಿ LCRP ಶಿವಲೀಲಾ ಜಗದೀಶ್ ಮತ್ತು ಹೊಲಿಗೆ ತರಬೇತಿ ಶಿಕ್ಷಕಿಯಾದ ಬಸಮ್ಮ ಶರಣಪ್ಪ ಹಣವಾಳ (ರೋಟರಿ ರೈಸ್ ಬೌಲ್ ಅಧ್ಯಕ್ಷೆ) ಇವರ ಸಮ್ಮುಖದಲ್ಲಿ ರಿಬ್ಬನ್ ಕಟ್ ಮಾಡುವುದರ ಮೂಲಕ ತರಬೇತಿಯನ್ನು ಪ್ರಾರಂಭಿಸಲಾಯಿತು.
ತರಬೇತಿಗೆ ಚಾಲನೆ ನೀಡಿದ ಮಾತನಾಡಿದ ಸಂಸ್ಥೆಯ ವ್ಯವಸ್ಥಾಪಕ ಮಲ್ಲೇಶಪ್ಪ ಜಾಧವ ಮಾತನಾಡಿ, ನಮ್ಮ ರೀಡ್ಸ್ ಸಂಸ್ಥೆಯು ಸುಮಾರು ವರ್ಷಗಳಿಂದ ಹಿಂದುಳಿದ, ಬಡ ವರ್ಗದ ಮಹಿಳೆಯರಿಗೆ ಉಚಿತವಾಗಿ ಹೊಲಿಗೆ ತರಬೇತಿ ನೀಡುತ್ತಾ, ಹೊಲಿಗೆ ಯಂತ್ರಗಳನ್ನು ನೀಡುತ್ತಾ ಅವರ ಸ್ವಾವಲಂಬಿ ಜೀವನಕ್ಕೆ ಆಸರೆಯಾಗುತ್ತಿದೆ. ಈ ಉಚಿತ ಹೊಲಿಗೆ ತರಬೇತಿಯನ್ನು ಬಡ ವರ್ಗದ ಮಹಿಳೆಯರು ಸದುಪಯೋಗಪಡಿಸಿಕೊಳ್ಳಬೇಕೆಂದು ಕರೆ ನೀಡಿದರು.
