Excessive addiction guarantees a trip to the funeral pyre: Daanakai

ಅತಿಯಾದ ಚಟದಿಂದ ಛಟ್ಟ ಕಟ್ಟುವದು ಗ್ಯಾಂರಟಿ : ದಾನಕೈ

ಯಲಬುರ್ಗಾ: ಮೊದಲು ಮೋಜು ಮಸ್ತಿಗಾಗಿ ಪ್ರಾರಂಭವಾದ ಚಟ ,ನಿರಂತರ ಹವ್ಯಾಸವಾಗಿ ಬೆಳೆದು ಅತಿಯಾದ ಚಟದಿಂದ ಛಟ್ಟಕಟ್ಟಿ ನಮ್ಮ ಪೋಟೋ ಗೋಡೆಗೆ ಬೀಳುವದು ಗ್ಯಾರಂಟಿ ಆದ್ದರಿಂದ ಚಟಗಳಿಗೆ ದಾಸರಾಗಬೇಡಿ ಎಂದು ಅಖೀಲ ಕರ್ನಾಟಕ ಕೊಪ್ಪಳ ಜಿಲ್ಲಾ ಜನಜಾಗೃತಿ ಸಮತಿ ಸದಸ್ಯ ಶರಣಬಸಪ್ಪ ದಾನಕೈ ಅವರು ಅ.5 ರಂದು ತಾಲೂಕಿನ ಬಳೊಟಗಿ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಹಾಗು ಜಿಲ್ಲಾ ಜನಜಾಗೃತಿ ಸಮಿತಿ ಸಹಯೋಗದಲ್ಲಿ ಶಾಲಾ ಕಾಲೇಜು ವಿಧ್ಯಾರ್ಥಿಗಳಿಗೆ ಸ್ವಾಸ್ಥ್ಯ ಸಂಕಲ್ಪ ಜಾಗೃತಿ ಕಾರ್ಯಕ್ರಮ ಅಂಗವಾಗಿ ದೀಪ ಬೆಳಗಿಸಿ ಮಾತನಾಡಿದರು.
ಮಾದಕ ಸೇವನೆ ಮಾಡುವದರಿಂದ ಆರೋಗ್ಯ ಹಾಳಾಗಿ ಅನೇಕ ಕಾಯಿಲೆಗಳನ್ನು ಹೊಂದಿ ಚಿಕ್ಕ ವಯಸ್ಸಿನಲ್ಲಿ ಜೀವನವನ್ನು ಕಳೆದುಕೊಳ್ಳುತ್ತಾರೆ ಆದ್ದರಿಂದ ಕೆಟ್ಟ ಹವ್ಯಾಸಗಳಿಂದ ದೂರವಿರಬೇಕು ಎಂದು ಜಿಲ್ಲಾ ಜನಜಾಗೃತಿ ಸಮಿತಿ ಸದಸ್ಯ ವೀರಣ್ಣ ನಿಂಗೋಜಿ ಹೇಳಿದರು. ಆರೋಗ್ಯದ ಬಗ್ಗೆ ಗಮನಹರಿಸಬೇಕು ಅಂದಾಗ ಉತ್ತಮ ಆರೋಗ್ಯವಂತರಾಗಿ ಇರುವದಕ್ಕೆ ಸಾದ್ಯವಾಗುತ್ತದೆ ಎಂದು ಬಳೋಟಗಿಯ ಆರೋಗ್ಯ ನೀರಿಕ್ಷಕ ಡಿ.ಎಸ್.ರಾಠೋಡ ಅವರು ಮಾಹಿತಿ ನೀಡಿದರು . ಸ.ಪ.ಪೂರ್ವ ಕಾಲೇಜಿನ ಉಪನ್ಯಾಸಕ ಹನುಮೇಶ ಮುಗನೂರ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮೇಲ್ವಿಚಾರಕಿ ಕಾವ್ಯ ಸಿರಿಗೇರಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಸೇವಾ ಪ್ರತಿನಿಧಿ ಮಂಜುಳಾ ಯರಿಗೇರಿ,ವಿಎಲ್. ಟಿ ಮಂಜುನಾಥ ಪಾಟೀಲ್ ‘ ಒಕ್ಕೂಟದ ಅಧ್ಯಕ್ಷೆ ಶೈಲಾ ಹಾಗು ಕಾಲೇಜಿನ ಉಪನ್ಯಾಸಕರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿಧ್ಯಾರ್ಥಿ ಅನೀತಾ ಮುಗನೂರ ನಿರೂಪಿಸಿದರು.
