ಹುಲಿಗಿಯ ತಂಗಭದ್ರ ಹೊಳೆಯ ಹತ್ತಿರದಲ್ಲಿ ಅನಾಮಧೇಯ ಶವ ಪತ್ತೆ

H.Mallikarjun
H.Mallikarjun - Kalyanasiri
1 Min Read


Unidentified body found near the Tungabhadra River in Huligi

ಹುಲಿಗಿಯ ತಂಗಭದ್ರ ಹೊಳೆಯ ಹತ್ತಿರದಲ್ಲಿ ಅನಾಮಧೇಯ ಶವ ಪತ್ತೆ


ಕೊಪ್ಪಳ ಜುಲೈ 03 (ಕರ್ನಾಟಕ ವಾರ್ತೆ): ಹುಲಿಗಿಯ ತಂಗಭದ್ರ ಹೊಳೆಯ ಹತ್ತಿರದಲ್ಲಿ ಅನಾಮಧೇಯ ವ್ಯಕ್ತಿಯ ಶವ ಪತ್ತೆಯಾಗಿದ್ದು, ಮೃತನ ವಾರಸುದಾರರ ಪತ್ತೆಗೆ ಮುನಿರಾಬಾದ್ ಪೋಲಿಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಜೂನ್ 16 ರಂದು ಮಧ್ಯಾಹ್ನ 2.30 ಗಂಟೆ ಸುಮಾರಿಗೆ ಹುಲಿಗಿಯ ತಂಗಭದ್ರ ಹೊಳೆಯ ಹತ್ತಿರದಲ್ಲಿ ಸುಮಾರು 60 ರಿಂದ 65 ವರ್ಷದ ಅನಾಮಧೇಯ ವ್ಯಕ್ತಿಯು ಯಾವುದೋ ಖಾಯಿಲೆಯಿಂದ ಅಸ್ವಸ್ಥನಾಗಿ ಮೃತಪಟ್ಟಿದ್ದು, ಮೃತದೇಹವನ್ನು ಕೊಪ್ಪಳ ಜಿಲ್ಲಾ ಆಸ್ಪತ್ರೆಯ ಕೋಲ್ಡ್ ಸ್ಟೋರೆಜ್‌ನಲ್ಲಿ ಇರಿಸಲಾಗಿದೆ. ಮೃತನ ಹೆಸರು, ವಿಳಾಸ ಮತ್ತು ವಾರಸುದಾರರ ಪತ್ತೆಯಾಗಿರುವುದಿಲ್ಲ.
ಈ ಮೃತನ ವ್ಯಕ್ತಿ ಬಗ್ಗೆ ಯಾರಿಗಾದರು ಮಾಹಿತಿ ಇದ್ದಲ್ಲಿ ಅಥವಾ ಯಾರಾದರು ವಾರಸುದಾರರಿದ್ದಲ್ಲಿ ಕೊಪ್ಪಳ ಎಸ್.ಪಿ ದೂ.ಸಂ: 08539-230111, ಕೊಪ್ಪಳ ಡಿ.ಎಸ್.ಪಿ ದೂ.ಸಂ: 08539-222433, ಕೊಪ್ಪಳ ಸಿ.ಪಿ.ಐ ದೂ.ಸಂ: 08539221333 ಅಥವಾ ಮುನಿರಾಬಾದ್ ಪಿ.ಎಸ್.ಐ ದೂ.ಸಂ: 08539-270333 ಗೆ ಸಂರ್ಪಕಿಸುವAತೆ ಮುನಿರಾಬಾದ್ ಪೋಲಿಸ್ ಠಾಣೆಯ ಪೋಲಿಸ್ ಸಬ್ ಇನ್ಸಪೆಕ್ಟರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಾಹೀರಾತು
Total Views: 0
Share This Article