ಚಹಾ ಕುಡಿಯುವ ದಿಂದ ನಮ್ಮ ಆರೋಗ್ಯ ಕೆಟ್ಟದಂತೆ ಎಲ್ಲ ತಿಳಿದಿದ್ದರು ಯಾಕೆ ಜನರು ಚಾಹಾವನ್ನು ಇಷ್ಟಪಡುತ್ತಾರೆ?

H.Mallikarjun
H.Mallikarjun - Kalyanasiri
2 Min Read
ಜಾಹೀರಾತು
Everyone knows that drinking tea is bad for our health. Why do people like tea?




ಚಹಾ ಕುಡಿಯುವ ದಿಂದ ನಮ್ಮ ಆರೋಗ್ಯ ಕೆಟ್ಟದಂತೆ ಎಲ್ಲ ತಿಳಿದಿದ್ದರು ಯಾಕೆ ಜನರು ಚಾಹಾವನ್ನು ಇಷ್ಟಪಡುತ್ತಾರೆ?

ಜಾಹೀರಾತು


ಕಾಫಿ, ಚಹಾ ಸೇವನೆ ಒಳ್ಳೆಯದೋ, ಕೆಟ್ಟದ್ದೋ ಈ ಪ್ರಶ್ನೆಗೆ ಉತ್ತರಿಸುವ ಹೊತ್ತಿಗಾಗಲೇ ನನ್ನ ಈ ಅಭ್ಯಾಸಕ್ಕೆ ಬರೋಬ್ಬರಿ 55 ವರ್ಷಗಳೇ ಕಳೆದಿವೆ. ಮೊನ್ನೆಯಷ್ಟೇ ಕಾರ್ಯ ನಿಮಿತ್ತ ಬೆಂಗಳೂರು ನಗರದ ಮಲ್ಲೇಶ್ವರಮ್ ಕಡೆ ಸುತ್ತಾಡುವಾಗ ಕಾಣಿಸಿದ್ದು ಅಲ್ಲಿಯ ಕಿರಿದಾದ ಜನಪ್ರಿಯ ಕಾಫಿ /ಚಹಾ ದುಕಾನು. ಅಲ್ಲಿಯ ಪಟ್ಟಿ ನೋಡಿ ನನಗೇ ಅಚ್ಚರಿ. ಸುಲೇಮಾನ್ ಚಹಾ, ನಿಂಬೆ ಚಹಾ, ಜಿಂಜರ್ ಚಹಾ, ಮಸಾಲಾ ಚಹಾ, ಶುಂಠಿ ಚಹಾ ವಗೈರೆ ವಗೈರೆ….ಹಿಂದೆಲ್ಲಾ ನಾವು ಸೇವಿಸಿದ್ದು ಮಸಾಲಾ, ಅಥವಾ ಖಡಕ್ ಚಹಾ ರುಚಿಯೇ ಹೆಚ್ಚು.ಸಕ್ಕರೆ ಅಭಾವ ಇದ್ದಾಗ ಬೆಲ್ಲದಚಹಾ.ನನ್ನ ಬದುಕಿನ ಬಹುಪಾಲು ಪಯಣ ಚಹಾ, ಕಾಫಿ, ಕುಡಿಯುತ್ತಾ, ಅನ್ಯರಿಗೆ ಕುಡಿಸುತ್ತಾ ಕಳೆದು ಹೋಗಿದೆ. ಕಾರಣ ನಮ್ಮದು ಹೋಟೆಲ್ ಉದ್ಯಮ. ಮುಂಜಾನೆ ಆರರಿಂದ ಸಂಜೆಯ ತನಕ ಸೇವನೆ ಮಾಡುತಿದ್ದ ಚಹಾ ಲೆಕ್ಕಕ್ಕೆ ಸಿಗದ್ದು.ಬೆಂಗಳೂರು ನಗರ ಪ್ರವೇಶ ಮಾಡಿದ ನಂತರವೂ ಇದು ಮುಂದುವರಿದದ್ದು ಪತ್ರಿಕಾ ರಂಗದಲ್ಲಿ . ಅಲ್ಲಿಯೂ ಅದೇ ಹವ್ಯಾಸ ಮುಂದುವರಿಯಿತು. ಇಂದಿಗೂ ಕಾಫಿ, ಚಹಾ ಎರಡೂ ನಿತ್ಯಜೀವನದ ಅನಿವಾರ್ಯ ಹವ್ಯಾಸ .ಇದರಿಂದ ಅದೆಷ್ಟು ಒಳ್ಳೆಯದಾಯಿತೋ ತಿಳಿಯದು. ಹಾನಿ ಏನೂ ಆದಂತಿಲ್ಲ.

ಮತ್ತೊಂದು ವಿಶೇಷವೆಂದರೆ 1953 ರಲ್ಲಿ ಭಾರತ ಸರಕಾರ ಸ್ಥಾಪಿಸಿದ ಭಾರತೀಯ ಚಹಾ ಮಂಡಳಿ ಅಂದು ಎವರೆಸ್ಟ್ ಶಿಖರ ಏರಿದ ಎಡ್ ಮಂಡ್ ಹಿಲರಿ, ಹಾಗೂ ತೆಂಝಿನ್ಗ್ ಅವರ ಸಾಹಸಗಾಥೆಯನ್ನು ಚಹಾ ಅಭ್ಯಾಸ ದೊಂದಿಗೆ ಸಮೀಕರಿಸಿ ಪ್ರಕಟಿಸಿದ ಜಾಹಿರಾತು ಮೇಲಿನ ಚಿತ್ರದಲ್ಲಿದೆ.ಅಂದರೆ ಚಹಾ ಮಹಿಮೆ ಆ ಕಾಲದಲ್ಲಿಯೂ ಪ್ರಚಾರದಲ್ಲಿ ಇತ್ತು ಎನ್ನಬಹುದು.ಮೇ 21, ಈ ದಿನವನ್ನು ವಿಶ್ವ ಚಹಾ ದಿನ ಎಂದು ಆಚರಿಸಲಾಗುತ್ತಿದೆ.ಭಾರತ ಚಹಾ ಮಂಡಳಿ ಪ್ರಕಾರ ಭಾರತದ 15 ರಾಜ್ಯಗಳಲ್ಲಿ ಚಹಾ ಬೆಳೆಯಲಾಗುತ್ತಿದ್ದು ಜಗತ್ತಿನ ಒಟ್ಟು ಚಹಾ ಬೆಳೆಯ 30 ಪ್ರತಿಶತ ನಮ್ಮ ದೇಶದ ಕೊಡುಗೆ. ದೇಶದಲ್ಲಿ ಒಟ್ಟು 1567 ಟೀ ಎಸ್ಟೇಟ್ ಗಳು ಇದ್ದು 249318 ಸಣ್ಣ ಚಹಾ ಬೆಳೆಗಾರರಿದ್ದು ನಮ್ಮ ಒಟ್ಟಾರೆ ಉತ್ಪಾದನೆಯ ಶೇಕಡಾ 70 ಭಾಗ ದೇಶದಲ್ಲಿಯೇ ಬಳಕೆಯಾಗುತ್ತಿದೆ ಎಂದರೆ ನಮ್ಮಲ್ಲಿ ಚಹಾ ಪಡೆದ ಜನಪ್ರಿಯತೆ ಗಮನಿಸಿ.ಉತ್ಪಾದನೆ ಹೆಚ್ಚಾದ ಹಾಗೆ ಅದರ ಸ್ವಾದ, ರೂಪ ಕೂಡಾ ಬದಲಾಗಿದೆ.

(ಇದು ತೈವಾನ್ ಮೂಲದ ಮಿಲ್ಕ್ ಟೀ. ಅರ್ಥಾತ್ ಇಂಸ್ಟಂಟ್ ಚಹಾ. ಒಂದು ಕಪ್ ಬಿಸಿನೀರಿಗೆ ಈ ಪುಡಿ ಮಿಶ್ರಣ ಮಾಡಿದರೆ ಆರೋಗ್ಯ ಭರಿತ ಚಹಾ ಸಿದ್ಧ. ಆದರೆ ರುಚಿಯಲ್ಲಿ ಇದು ಟೀ ಎಂಬ ಭಾವನೆ ಅಪ್ಪಿ ತಪ್ಪಿಯೂಬಾರದು)ಸರಳವಾಗಿ ಹೇಳುವುದಾದರೆ ಮಿತವಾದ ಸೇವನೆ ಉತ್ತಮ.ಕಲಬೆರಕೆ ಚಹಾ ಪುಡಿ ಹಾನಿಕಾರಕವೇ.ಈ ಎಚ್ಚರಿಕೆ ಮಾತ್ರ ಅಗತ್ಯ.

Total Views: 1
Share This Article