ಕ್ಷಿಪ್ರ ಕಾರ್ಯಾಚರಣೆ, ಕಳ್ಳತನವಾದ 6 ಘಂಟೆಗಳಲ್ಲಿ ಆರೋಪಿತರ ಬಂಧನ

H.Mallikarjun
H.Mallikarjun - Kalyanasiri
2 Min Read
ಜಾಹೀರಾತು
Swift operation, suspects arrested within 6 hours of theft

ಕ್ಷಿಪ್ರ ಕಾರ್ಯಾಚರಣೆ, ಕಳ್ಳತನವಾದ 6 ಘಂಟೆಗಳಲ್ಲಿ ಆರೋಪಿತರ ಬಂಧನ

ಜಾಹೀರಾತು


ಗಂಗಾವತಿ.ಜು.8 ಉಪ ವಿಭಾಗಕುಷ್ಟಗಿ ಪಟ್ಟಣದ ಅಪ್ರಾಪ್ತ ಬಾಲಕನಿಗೆ ಆರೋಪಿತರು ಸಿಗರೇಟ ಸೇದುವ ಕೆಟ್ಟ ಅಭ್ಯಾಸ ಬೆಳಿಸಿ ಮನೆಯಿಂದ ಬಂಗಾರದ ಒಡವೆಗಳನ್ನು ಬಲವಂತವಾಗಿ ತರಿಸಿಕೊಂಡು ಬಗ್ಗೆ ಕುಷ್ಟಗಿ ಠಾಣೆಯಲ್ಲಿ ದಾಖಲಾದ ಪ್ರಕರಣ ಸಂ:124/2026 ಕಲಂ: 308(2), 351(2) ಸಹಿತ 3(5) ಬಿ.ಎನ್.ಎಸ್ ನೇದ್ದರ ಪ್ರಕರಣ ಹಾಗೂ ಇತರೆ ಕಳ್ಳತನದ ಪ್ರಕರಣಗಳಾದ 15/2026 ಮತ್ತು 19/2026 ನೇದ್ದರ ಪ್ರಕರಣಗಳಲ್ಲಿಯ ಆರೋಪಿತರ ಪತ್ತೆ ಕುರಿತು ಮಾನ್ಯ ಜಿಲ್ಲಾ ಪೊಲೀಸ್ ಅಧೀಕ್ಷಕರು ಕೊಪ್ಪಳ ಡಾ.ರಾಮ ಎಲ್, ಅರಸಿದ್ದಿ ಐ.ಪಿ.ಎಸ್ ಹಾಗೂ ಮಾನ್ಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ಹೇಮಂತ ಕುಮಾರ ಐಪಿಎಸ್ ಹಾಗೂ ಜೆ.ಎಸ್ ನ್ಯಾಮಗೌಡರ್, ಡಿ.ಎಸ್.ಪಿ ಗಂಗಾವತಿ ರವರ

ಮಾರ್ಗದರ್ಶನದಲ್ಲಿ, ವಿಶ್ವನಾಥ ಹಿರೇಗೌಡರ ಸಿ.ಪಿ.ಐ ಕುಷ್ಟಗಿ ವೃತ್ತ ರವರ ನೇತೃತ್ವದಲ್ಲಿ ಅಧಿಕಾರಿಗಳಾದ ಶ್ರೀ ಹನಮಂತಪ್ಪ ತಳವಾರ ಪಿ.ಎಸ್.ಐ, ಪುಂಡಪ್ಪ ಪಿ.ಎಸ್.ಐ ಕುಷ್ಟಗಿ ಠಾಣೆ, ಹಾಗೂ ಸಿಬ್ಬಂದಿಯವರಾದ ಶ್ರೀಧರ ಹೆಚ್.ಸಿ. 48, ಅಮರೇಶ ಹೆಚ್.ಸಿ. 168, ಪರಶುರಾಮ ಪಿ.ಸಿ. 388, ಹನಮಂತ ಪಿ.ಸಿ. 612, ಮಂಜುನಾಥ ಪಿ.ಸಿ. 91, ಪ್ರಶಾಂತ ಪಿ.ಸಿ. 161, ಶಿವರಾಜ ಪಿ.ಸಿ. 458, ಕುಷ್ಟಗಿ ಪೊಲೀಸ್ ಠಾಣೆ ಹಾಗೂ ಕೊಪ್ಪಳ ಜಿಲ್ಲಾ ಸಿಡಿಆರ್ ವಿಭಾಗದ ಪ್ರಸಾದ್ ಹಾಗೂ ಮಂಜುನಾಥ ಪೊಲೀಸ್ ಸಿಬ್ಬಂದಿಯವರನ್ನೊಳಗೊಂಡ ಒಂದು ತಂಡ ರಚನೆ ಮಾಡಿ ಕ್ಷೀಪ್ರಗತಿಯಲ್ಲಿ ಕಾರ್ಯಾಚರಣೆ ಕೈಗೊಂಡು ತನಿಖೆಯಲ್ಲಿ ವೈಜ್ಞಾನಿಕ ತಂತ್ರಜ್ಞಾನವನ್ನು ಬಳಕೆ ಮಾಡಿಕೊಂಡು ಪ್ರಕರಣ ದಾಖಲಾದ 6 ಗಂಟೆ ಅವದಿಯೊಳಗೆ ಆರೋಪಿತರಾದ 01] ನವೀನ ಕಲಾಲ್ ಸಾ. ತೆಗ್ಗಿನ ಓಣಿ ಕುಷ್ಟಗಿ 02] ಬಸವರಾಜ ಅಂಗಡಿ ಸಾ. ತೆಗ್ಗಿನ ಓಣಿ ಕುಷ್ಟಗಿ 3] ರಾಜಮಹ್ಮದ್ 4] ಬಸವರಾಜ ರವರಿಗೆ ದಸ್ತಗಿರಿ ಮಾಡಿ ಆರೋಪಿತರಿಂದ ಒಟ್ಟು 150 ಗ್ರಾಂ ತೂಕದ ಬಂಗಾರದ ಆಭರಣ ಹಾಗೂ 180 ಗ್ರಾಂ ಬೆಳ್ಳಿಯ ಆಭರಣ ಒಟ್ಟು ಅಂ.ಕಿ.22,00,000/-ರೂ ಬೆಲೆಬಾಳುವುದನ್ನು ಜಪ್ತಿಪಡಿಸಿಕೊಂಡು ಆರೋಪಿತರಿಗೆ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದು ಇರುತ್ತದೆ. ತನಿಖಾ ತಂಡದ ಕಾರ್ಯವನ್ನು ಮಾನ್ಯ ಜಿಲ್ಲಾ ಪೊಲೀಸ್ ಅಧೀಕ್ಷಕರು ಕೊಪ್ಪಳ ರವರು ಪ್ರಶಂಶಿಸಿ ಬಹುಮಾನ ಘೋಶಿಸಿದ್ದು ಇರುತ್ತದೆ.

ಗಂಗಾವತಿ ಉಪವಿಭಾಗದಲ್ಲಿ ದಾಖಲಾದ 05 ಪ್ರಕರಣಗಳಲ್ಲಿ ಒಟ್ಟು 07 ಜನ ಆರೋಪಿತರನ್ನು ದಸ್ತಗಿರಿ ಮಾಡಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದೂ, ಅಲ್ಲದೇ ಅವರಿಂದ ಒಟ್ಟು 250 ಗ್ರಾಂ ಬಂಗಾರದ ಆಭರಣಗಳು ಹಾಗೂ 1630 ಗ್ರಾಂ ಬೆಳ್ಳಿಯ ಆಭರಣಗಳು ಒಟ್ಟು 41,00,000=00 ರೂ ಬೆಲೆಬಾಳುವುದನ್ನು ಜಪ್ತ ಪಡಿಸಿಕೊಂಡಿದ್ದು ಇರುತ್ತದೆ.

Total Views: 0
Share This Article