
Magalamani urges action to prevent sewage from flowing on the main road of Hosakera village.
ಹೊಸಕೇರಾ ಗ್ರಾಮದ ಮುಖ್ಯ ರಸ್ತೆಯ ಮೇಲೆ ಚರಂಡಿ ನೀರು ಹರಿಯದಂತೆ ಕ್ರಮವಹಿಸಲು ಮ್ಯಾಗಳಮನಿ ಒತ್ತಾಯ.

ಗಂಗಾವತಿ ,4:ತಾಲೂಕಿನ ಹೊಸಕೇರಾ ಗ್ರಾಮದಲ್ಲಿರುವ ಮುಖ್ಯರಸ್ತೆಯ ಮೇಲೆ ಚರಂಡಿ ನೀರು ಹರಿಯುತ್ತಿದೆ ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಕೂಡಲೇ ಕ್ರಮವಹಿಸಬೇಕು ಎಂದು ಸರ್ವಾ0ಗೀಣ ಅಭಿವೃದ್ಧಿ ಹೋರಾಟ ಸಮಿತಿಯ ಸಂಸ್ಥಾಪಕ ಅಧ್ಯಕ್ಷ ಬಸವರಾಜ ಮ್ಯಾಗಳಮನಿ ಗ್ರಾಮ ಪಂಚಾಯತ್ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

ಅವರು ಗುರುವಾರ ರಂದು ತಾಲೂಕ ಅಧ್ಯಕ್ಷ ಜಡಿಯಪ್ಪ ಹಂಚಿನಾಳ ಹಾಗೂ ಹೊಸಕೇರಾ ಗ್ರಾಮದ ಹಿರಿಯರು ಯುವಕರೊಂದಿಗೆ ಗ್ರಾಮಪಂಚಾಯಿತಿಗೆ ತೆರಳಿ ಕಾರ್ಯದರ್ಶಿ ವಿರುಪಯ್ಯ ಸ್ವಾಮಿಯೊಂದಿಗೆ ಮಾತನಾಡಿ, ಮಲ, ಮೂತ್ರ, ಬಟ್ಟೆ, ಪಾತ್ರೆ ತೊಳೆದ ಚರಂಡಿ ನೀರು ಬಸವೇಶ್ವರ ದೇವಸ್ಥಾನದಿಂದ ದುರ್ಗಮ್ಮ ದೇವಸ್ಥಾನದ ವರೆಗೆ ಸುಮಾರು 200 ಮೀಟರ್ ಉದ್ದ ಮುಖ್ಯ ರಸ್ತೆಯ ಮೇಲೆ ಹತ್ತು ವರ್ಷಗಳಿಂದ ಹರಿಯುತ್ತಿದೆ. ಗ್ರಾಮದ ಜನರು ಮಡಿಯಿಂದ ದೇವಸ್ಥಾನಗಳಿಗೆ ಹೋಗಬೇಕಾದರೂ ಮತ್ತು ಸುತ್ತಲಿನ ಜನರು ಕೂಡ ಇದೆ ಗಲೀಜು ನೀರಿನ ಮೇಲೆಯೇ ಹೋಗಬೇಕಾಗಿದೆ.
ಇದರಿಂದ ಎಲ್ಲರಿಗೂ ತೊಂದರೆಯಾಗುತ್ತಿದೆ. ಸರ್ಕಾರದಲ್ಲಿ ಪ್ರಭಾವ ಹೊಂದಿರುವ ಸಚಿವರ ಸ್ವ ಕ್ಷೇತ್ರದಲ್ಲಿಯೇ ಇಂತಹ ಸಮಸ್ಯೆ ಇರುವದು ತಲೆತಾಗ್ಗಿಸುವ ವಿಚಾರವಾಗಿದೆ ಕೂಡಲೇ ಸಮಸ್ಯೆ ಬಗೆ ಹರಿಸಬೇಕು.
ತಿಂಗಳು ಸಮಯ ನೀಡುತ್ತಿದ್ದೇವೆ ಯಾವ ಕ್ರಮ ಕೈಗೊಂಡಿದ್ದೀರಿ ಎಂಬುದರ ಮಾಹಿತಿಯನ್ನು ಸಂಘಕ್ಕೆ ಹಾಗೂ ಗ್ರಾಮದವರ ಗಮನಕ್ಕೆ ತರಬೇಕೆಂದು ಮ್ಯಾಗಳಮನಿ ಒತ್ತಾಯಿಸಿದರು. ಈ ಸಂದರ್ಭದಲ್ಲಿ ವಿಜಯಕುಮಾರ್ ಕಲ್ಮನಿ, ಪಂಪನಗೌಡ, ಲಕ್ಷ್ಮಿಕಾಂತ್, ಬಸವರಾಜ, ಶಿವಲಿಂಗಪ್ಪ, ವಿನಾಯಕ, ಪ್ರಸನ್ನ, ಬಸವರಾಜ, ರವಿಕುಮಾರ್, ಆಂಜನೇಯ, ಕೃಷ್ಣಪ್ಪ, ಹನುಮನಗೌಡ, ಮತ್ತಿತರರು ಇದ್ದರು.
