
Another Blood Donor Saves a Life: Sannik Shows His Humanity by Donating Blood for the 74th Time
ಮತ್ತೊಂದು ಜೀವ ಉಳಿಸಿದ ರಕ್ತದಾನಿ: 74ನೇ ಬಾರಿ ರಕ್ತದಾನ ಮಾಡಿ ಮಾನವೀಯತೆ ಮೆರೆದ ಸನ್ನಿಕ್

,

ನಗರದ ಪ್ರಸಿದ್ಧ ರಕ್ತದಾನಿ ಮತ್ತು ಸ್ನೇಹಜೀವಿ ಶ್ರೀ ಸನ್ನಿಕ್ ಅಣ್ಣಾ ಅವರು ಕರೆ ಬಂದ ತಕ್ಷಣ ಸ್ಪಂದಿಸಿ, ಆಸ್ಪತ್ರೆಗೆ ಧಾವಿಸಿ ತಮ್ಮ B ಪಾಸಿಟಿವ್ (B+) ರಕ್ತವನ್ನು ದಾನ ಮಾಡಿದ್ದಾರೆ. ಇದು ಇವರ 74ನೇ ರಕ್ತದಾನ ಎಂಬುದು ವಿಶೇಷ.
ತುರ್ತು ಕರೆಗೆ ತಕ್ಷಣದ ಸ್ಪಂದನೆ:
ಇಂದು ಗರ್ಭಿಣಿ ಹೆಣ್ಣುಮಗಳೊಬ್ಬರ ಪರಿಸ್ಥಿತಿ ಅತ್ಯಂತ ಗಂಭೀರವಾಗಿದ್ದು, ತುರ್ತಾಗಿ ಬಿ ಪಾಸಿಟಿವ್ ರಕ್ತದ ಅಗತ್ಯವಿತ್ತು. ಈ ವಿಷಯ ತಿಳಿದ ತಕ್ಷಣ ಕಾರ್ಯಪ್ರವೃತ್ತರಾದ ಸನ್ನಿಕ್ ಅವರು, ಯಾವುದೇ ಹಿಂಜರಿಕೆಯಿಲ್ಲದೆ ಆಸ್ಪತ್ರೆಗೆ ಬಂದು ರಕ್ತದಾನ ಮಾಡುವುದರ ಮೂಲಕ ಗರ್ಭಿಣಿ ಮತ್ತು ಮಗುವಿನ ಜೀವ ಉಳಿಸಲು ನೆರವಾಗಿದ್ದಾರೆ.
ಗೋಪಿ ರಕ್ತ ಭಂಡಾರದಿಂದ ಕೃತಜ್ಞತೆ:
ಸನ್ನಿಕ್ ಅವರ ಈ ನಿರಂತರ ಮಾನವೀಯ ಕಾರ್ಯವನ್ನು ಶ್ಲಾಘಿಸಿರುವ ‘ಗೋಪಿ ರಕ್ತ ಭಂಡಾರ’ ಸಂಸ್ಥೆಯು, ಅವರಿಗೆ ಕೋಟಿ ಕೋಟಿ ವಂದನೆಗಳು ಹಾಗೂ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸಿದೆ.
“ರಕ್ತದಾನವು ಮೂರು ಜೀವಗಳಿಗೆ ವರದಾನವಾಗುತ್ತದೆ. ಪ್ರಚಾರಕ್ಕಾಗಿ ಇರಲಿ ಅಥವಾ ಇತರರಿಗೆ ಪ್ರೇರಣೆಯಾಗಲಿ, ಪ್ರತಿಯೊಬ್ಬರೂ ರಕ್ತದಾನ ಮಾಡಲು ಮುಂದೆ ಬರಬೇಕು. ರಕ್ತದಾನದ ಜೊತೆಗೆ ನೇತ್ರದಾನವೂ ಅತ್ಯಂತ ಶ್ರೇಷ್ಠ ದಾನವಾಗಿದೆ” ಎಂದು ಹೆಳಲು ಹೆಮ್ಮೆ ಅನಿಸುತ್ತದೆ.
