ಮಾದಪ್ಪನ ಸನ್ನಿಧಿಯಲ್ಲಿ ಚಿರತೆ ದಾಳಿ ಬಾಲಕ ಸಾವು ಇದು ಭಕ್ತರಿಗೆ ಎಚ್ಚರಿಕೆ ಘಂಟೆ

H.Mallikarjun
H.Mallikarjun - Kalyanasiri
1 Min Read
ಜಾಹೀರಾತು




Leopard attack in the presence of Madappa, boy dies, this is a warning bell for devotees

ಮಾದಪ್ಪನ ಸನ್ನಿಧಿಯಲ್ಲಿ ಚಿರತೆ ದಾಳಿ ಬಾಲಕ ಸಾವು ಇದು ಭಕ್ತರಿಗೆ ಎಚ್ಚರಿಕೆ ಘಂಟೆ

ಜಾಹೀರಾತು


ವರದಿ:ಬಂಗಾರಪ್ಪ .ಸಿ .
ಹನೂರು :ರಾಜ್ಯದ ಪ್ರಸಿದ್ದ ಯಾತ್ರ ಸ್ಥಳವಾದ
ಶ್ರೀ ಮಲೆ ಮಹದೇಶ್ವರ ಬೆಟ್ಟದ ನಾಗಮಲೆಯಲ್ಲಿ ನಡೆದ ಚಿರತೆ ದಾಳಿಯಲ್ಲಿ ಬೆಂಗಳೂರು ಮೂಲದ 10 ವರ್ಷದ ಬಾಲಕ ಹರ್ಷಿತ್ ದುರ್ಮರಣಕ್ಕೀಡಾದ ಘಟನೆ ರಾಜ್ಯದ ಜನರನ್ನು ಬೆಚ್ಚಿಬೀಳಿಸಿದೆ. ದೇವರ ದರ್ಶನಕ್ಕೆ ಕುಟುಂಬದವರ. ಜೊತೆಯಲ್ಲಿ ಆಗಮಿಸಿದ ಪುಟ್ಟ ಬಾಲಕನ ಮೇಲೆ ಚಿರತೆಯು ದಾಳಿಯಾಗಿರಯವುದು , ಅತ್ಯಂತ ಬೇಸರದ ಮತ್ತು ಮಾದಪ್ಪನ ಭಕ್ತರು ತಲೆ ತಗ್ಗಿಸುವ ಸಂಗತಿಯಾಗಿದೆ.
ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಶ್ರೀ ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆದ ಘಟನೆಯು ಕೇವಲ ಒಂದು ದುರಂತವಲ್ಲ, ಭಕ್ತರ,ಸುರಕ್ಷತೆ ವಿಚಾರದಲ್ಲಿ ಸರ್ಕಾರ ಮತ್ತು ಅರಣ್ಯ ಇಲಾಖೆಯ ನಿರ್ಲಕ್ಷ್ಯಕ್ಕೆ ಸ್ಪಷ್ಟ ಉದಾಹರಣೆಯಾಗಿದೆ. ಇತ್ತೀಚಿನ ದಿನಗಳಲ್ಲಿ ಕಾಡುಪ್ರಾಣಿಗಳು ಜನವಸತಿ ಹಾಗೂ ಯಾತ್ರಾ ಮಾರ್ಗಗಳತ್ತ ಬರುತ್ತಿರುವ ಘಟನೆಗಳು ಹೆಚ್ಚಾಗುತ್ತಿದ್ದರೂ, ನಾಗಮಲೆಯಂತಹ ಕಾಲುನಡಿಗೆ ದಾರಿಗಳಲ್ಲಿ ಸಮರ್ಪಕ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಭಕ್ತರು ಸಂಚರಿಸುವ ಪ್ರದೇಶಗಳಲ್ಲಿ ಸಿಸಿಟಿವಿ ಅಳವಡಿಕೆ, ಎಚ್ಚರಿಕೆ ಫಲಕಗಳು ಅಳವಡಿಸಬೇಕೆಂದು ಅರಣ್ಯ ಸಿಬ್ಬಂದಿ ಹೆಚ್ಚಳ ಹಾಗೂ ರಾತ್ರಿ ಪಾಳಿಯ ಕಾವಲು ವ್ಯವಸ್ಥೆ ಕಡ್ಡಾಯವಾಗಬೇಕಿತ್ತು. ಆದರೆ ಒಂದು ಮಗು ಜೀವ ಕಳೆದುಕೊಂಡ ಬಳಿಕ ಮಾತ್ರ ವ್ಯವಸ್ಥೆ ಎಚ್ಚರಗೊಳ್ಳುತ್ತಿರುವುದು ಆಡಳಿತದ ಹೊಣೆಗಾರಿಕೆಯನ್ನು ಪ್ರಶ್ನಿಸುವಂತಾಗಿದೆ.

ಮೃತ ಬಾಲಕನ ಕುಟುಂಬಕ್ಕೆ ಸರ್ಕಾರ ತಕ್ಷಣ ಪರಿಹಾರ ನೀಡಬೇಕು. ಜೊತೆಗೆ ಇಂತಹ ಘಟನೆಗಳು ಮರುಕಳಿಸದಂತೆ ಕಟ್ಟುನಿಟ್ಟಿನ ಹಾಗೂ ಶಾಶ್ವತ ಕ್ರಮಗಳನ್ನು ಜಾರಿಗೆ ತರಬೇಕು. ಭಕ್ತರ ಜೀವ ರಕ್ಷಣೆ ಪ್ರತಿಯೊಂದು ಇಲಾಖೆಯ ಮೊದಲ ಆದ್ಯತೆಯಾಗಬೇಕು ಎಂಬುದೇ ಈ ದುರ್ಘಟನೆ ನೀಡಿರುವ ದೊಡ್ಡ ಸಂದೇಶವಾಗಿದೆ.

Total Views: 1
Share This Article