ಮಾ.4ರಂದು ‘ನೂರೊಂದು ಹೆಜ್ಜೆಗಳು’ ಕೃತಿ ಲೋಕಾರ್ಪಣೆ

Mallikarjun
1 Min Read

One Hundred Steps' to be launched on March 4th




ಮಾ.4ರಂದು ‘ನೂರೊಂದು ಹೆಜ್ಜೆಗಳು’ ಕೃತಿ ಲೋಕಾರ್ಪಣೆ


ಗಂಗಾವತಿ : ಕಾವ್ಯಲೋಕ ಸಂಘಟನೆ ಪ್ರಕಟಿಸಿರುವ ‘ನೂರೊಂದು ಹೆಜ್ಜೆಗಳು’ ರಾಜ್ಯಮಟ್ಟದ ಕವನ ಸಂಕಲನವನ್ನು ಮಾ.4ರಂದು ಶನಿವಾರ ಬೆಂಗಳೂರಿನಲ್ಲಿ ನಡೆಯುವ ಸಮಾರಂಭದಲ್ಲಿ ಲೋಕಾರ್ಪಣೆ ಗೊಳಿಸಲಾಗುವುದು ಎಂದು ಕಾವ್ಯಲೋಕ ಗೌರವ ಅಧ್ಯಕ್ಷ ಡಾ.ಶಿವಕುಮಾರ ಮಾಲಿ ಪಾಟೀಲ್ ತಿಳಿಸಿದ್ದಾರೆ.
ಮಾ.4ರಂದು ಮಧ್ಯಾಹ್ನ 3ಗಂಟೆಗೆ ಬೆಂಗಳೂರಿನ ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ತಿನ ಆವರಣದ ಕೃಷ್ಣರಾಜ ಪರಿಷತ್ ಸಭಾಂಗಣದಲ್ಲಿ ವಂದೇ ಮಾತರಂ ಲಲಿತಕಲಾ ಅಕಾಡಮಿಯು ಆಯೋಜಿಸಿರುವ ಬಸವ ಜಯಂತಿ, ಕಾಯಕಯೋಗಿ ಬಸವಶ್ರೀ ಹಾಗೂ ಶಿವ ಶರಣೆ ಅಕ್ಕಮಹಾದೇವಿ ರಾಜ್ಯ ಪ್ರಶಸ್ತಿ ಪ್ರದಾನ ಅದ್ದೂರಿ ಸಮಾರಂಭದಲ್ಲಿ ಕಾವ್ಯಲೋಕದ ‘ನೂರೊಂದು ಹೆಜ್ಜೆಗಳು’ ರಾಜ್ಯಮಟ್ಟದ ಕವನ ಸಂಕಲನ ಲೋಕಾರ್ಪಣೆ ಗೊಳ್ಳುತ್ತದೆ.
ನಿವೃತ್ತ ಲೋಕಾಯುಕ್ತ ಹಾಗೂ ಸುಪ್ರೀಂ ಕೋರ್ಟ್ ವಿಶ್ರಾಂತ ನ್ಯಾಯಾಧೀಶ ಸಂತೋಷ ಹೆಗ್ಡೆ, ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ, ಚಿತ್ರ ನಟಿ ಭವ್ಯಾ ಪಟೇಲ್, ವಿಜಯನಗರ ಶಾಸಕ ಎಂ.ಕೃಷ್ಣಪ್ಪ, ಗೋವಿಂದರಾಜ ನಗರ ಶಾಸಕ ಪ್ರಿಯಕೃಷ್ಣ, ದೇವಿ ಉಪಾಸಕಿ ಡಾ.ಅನು ಅಮ್ಮ, ಡಾ.ಪೂರ್ಣಿಮಾ ತವಗ, ನಿರ್ಮಾಪಕ ಡಾ.ಮಹೇಶಗೌಡ, ಮಧುರ ಅಶೋಕ ಕುಮಾರ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಳ್ಳುವರು ಎಂದು ತಿಳಿಸಿದ್ದಾರೆ.

Total Views: 0
Share This Article