ಪಡಿತರ ಅಕ್ಕಿ ಅಕ್ರಮ ಸಾಗಾಟ ಆರೋಪ – ಲಾರಿ ವಶಕ್ಕೆ.

Mallikarjun
1 Min Read

Lorry seized on charges of illegally transporting ration rice.

ಪಡಿತರ ಅಕ್ಕಿ ಅಕ್ರಮ ಸಾಗಾಟ ಆರೋಪ – ಲಾರಿ ವಶಕ್ಕೆ.

ಗಂಗಾವತಿ: ಅನ್ನಭಾಗ್ಯ ಯೋಜನೆಯ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಲಾರಿಯೊಂದನ್ನು ಕನ್ನಡಪರ ಸಂಘಟನೆಗಳು ವಡ್ಡರಹಟ್ಟಿ ಕ್ಯಾಂಪ್ ಹತ್ತಿರವಿರುವ ವಿ.ಆರ್.ಎಲ್ ಆಫೀಸ್ ಮುಂಭಾಗದಲ್ಲಿ ಲಾರಿಯನ್ನು ತಡೆದು 112 ಸಹಾಯವಾಣಿ ಮೂಲಕ ಪೊಲೀಸರಿಗೆ ಒಪ್ಪಿಸಿದ್ದಾರೆ.

ಮಾನ್ವಿಯಿಂದ ಕೂಕನಪಳ್ಳಿ ಕಡೆಗೆ ತೆರಳುತ್ತಿದ್ದ ಲಾರಿಗಳಲ್ಲಿ ಅಕ್ರಮ ಪಡಿತರ ಅಕ್ಕಿ ಸಾಗಣೆ ನಡೆಯುತ್ತಿದೆ, ಎಂಬ ಖಚಿತ ಮಾಹಿತಿಯ ಮೇರೆಗೆ ಲಾರಿಯನ್ನು ಕಂಡು ಶಂಕೆ ವ್ಯಕ್ತಪಡಿಸಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಲಾರಿಯನ್ನು ತಡೆದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಆಹಾರ ಇಲಾಖೆ ಮತ್ತು ಪೊಲೀಸರ ಸಮ್ಮುಖದಲ್ಲಿ ಪರಿಶೀಲನೆ ನಡೆಸಿದಾಗ, 50ಕೆ.ಜಿ. ತೂಕದ ಸುಮಾರು 700 ಅಕ್ಕಿ ಚೀಲ ಇವೆ ಎಂದು ಅಂದಾಜಿಸಲಾಗಿದೆ,ಅಂದರೆ 35 ಟನ್ ಅಕ್ಕಿಯಲ್ಲಿ ಪಿಡಿಎಸ್ ಅಕ್ಕಿ ಇರುವ ಶಂಕೆ ವ್ಯಕ್ತವಾಗಿದೆ, ದಾಖಲೆಗಳ ಪರಿಶೀಲನೆ ಮುಂದುವರಿದಿದೆ ಎಂದು ಮಾಹಿತಿ ಲಭ್ಯವಾಗಿದೆ.

ಆರೋಪ: ಮಾನ್ವಿ ಮೂಲದ ಪ್ರಭಾವಿ ವ್ಯಕ್ತಿಯ ರೈಸ್ ಮಿಲ್‌ನಿಂದ ಪಡಿತರ ಅಕ್ಕಿ ಪಾಲಿಶ್ ಮಾಡಿ ಬೇರೆ ರಾಜ್ಯಗಳಿಗೆ ಹೆಚ್ಚಿನ ದರಕ್ಕೆ ಮಾರಾಟ ಮಾಡಲಾಗುತ್ತಿದೆ ಎಂದು ಡಾllರಾಜಕುಮಾರ್ ಅಭಿಮಾನಿಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಖಾದರ್ ಭಾಷಾ ಆರೋಪಿಸಿದ್ದಾರೆ, ಅಕ್ರಮ ದಂಧೆಯಲ್ಲಿ ತೊಡಗಿದವರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸಂಬಂಧಪಟ್ಟ ಇಲಾಖೆಯವರಿಗೆ ಜಿಲ್ಲಾಧ್ಯಕ್ಷ ಖಾದರ್ ಭಾಷಾ ಅವರು ಒತ್ತಾಯಿಸಿದ್ದಾರೆ.

ಕ್ರಮ: ಪ್ರಕರಣ ಕುರಿತು ತನಿಖೆ ನಡೆಯುತ್ತಿದ್ದು, ಅಕ್ರಮ ಸಾಬೀತಾದರೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಡಿವೈಎಸ್‌ಪಿ ಜೆ.ಎಸ್‌. ನ್ಯಾಮಗೌಡರ್ ತಿಳಿಸಿದ್ದಾರೆ.

Share This Article
Leave a Comment