
ಚಿತ್ತೂರು ಜಿಲ್ಲೆಯಲ್ಲಿ ಹಕ್ಕಿ ಜ್ವರ ಪತ್ತೆ: ಕೊಪ್ಪಳ ಜಿಲ್ಲೆಯಲ್ಲಿ ತೀವ್ರ ನಿಗಾ ವಹಿಸಲು ಸೂಚನೆ
ಕೋಳಿ ಫಾರಂ ಮಾಲೀಕರು ಮತ್ತು ಅಧಿಕಾರಿಗಳು ಎಚ್ಚರಿಕೆ ವಹಿಸಿ: ಡಾ. ಸುರೇಶ ಬಿ. ಇಟ್ನಾಳ್
Bird flu detected in Chittoor district: Koppal district advised to maintain close vigil

ಕೊಪ್ಪಳ ಫೆಬ್ರವರಿ 20, (ಕರ್ನಾಟಕ ವಾರ್ತೆ): ಪಕ್ಕದ ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ ಕೋಳಿ ಶೀತ ಜ್ವರ (ಹಕ್ಕಿ ಜ್ವರ) ಪ್ರಕರಣ ಧೃಡಪಟ್ಟಿರುವ ಹಿನ್ನೆಲೆಯಲ್ಲಿ, ಕೊಪ್ಪಳ ಜಿಲ್ಲೆಯಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿ. ಕೋಳಿ ಫಾರಂ ಮಾಲೀಕರು ಹಾಗೂ ಸಂಬAಧಿಸಿದ ಅಧಿಕಾರಿಗಳು ಎಚ್ಚರಿಕೆಯಿಂದ ಕಾರ್ಯನಿರ್ವಹಿಸಿ ಎಂದು ಜಿಲ್ಲಾಧಿಕಾರಿ ಸುರೇಶ ಬಿ. ಇಟ್ನಾಳ್ ಅವರು ಸೂಚನೆ ನೀಡಿದರು.
ಶುಕ್ರವಾರದಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಿಂದ ಕೋಳಿ ಶೀತ ಜ್ವರದ ರೋಗೋದ್ರೇಕದ ಕುರಿತು ಮುಂಜಾಗ್ರತೆ ವಹಿಸುವ ಕುರಿತು ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಪ್ರಾಣಿ ಜನ್ಯ ರೋಗಗಳ ತುರ್ತು ನಿರ್ವಹಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೊಪ್ಪಳ ಜಿಲ್ಲೆಯಲ್ಲಿ ಒಟ್ಟು 25 ಮೊಟ್ಟೆ ಉತ್ಪಾದನಾ ಕೋಳಿ ಫಾರಂಗಳು ಹಾಗೂ 14 ಮಾಂಸ ಉತ್ಪಾದನಾ ಕೋಳಿ ಫಾರಂಗಳು ಕಾರ್ಯನಿರ್ವಹಿಸುತ್ತಿದ್ದು, ಕೋಳಿ ಶೀತ ಜ್ವರ ಹರಡುವಿಕೆ ತಡೆಯಲು ತೀವ್ರ ನಿಗಾವಹಿಸುವುದು ಅತ್ಯಗತ್ಯವಾಗಿದೆ. ಪಕ್ಕದ ರಾಜ್ಯದಲ್ಲಿ ರೋಗೋದ್ರೇಕ ಕಂಡುಬAದಿರುವುದರಿAದ, ಜಿಲ್ಲೆಯ ಪಶುವೈದ್ಯಕೀಯ ಇಲಾಖೆ, ಸ್ಥಳೀಯ ಸಂಸ್ಥೆಗಳು ಹಾಗೂ ಕೋಳಿ ಫಾರಂ ಮಾಲೀಕರು ಪೂರ್ಣ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದರು.
ಕೋಳಿಗಳಲ್ಲಿ ಅಸಹಜ ಸಾವಿನ ಪ್ರಕರಣಗಳು ಕಂಡುಬAದರೆ ತಕ್ಷಣವೇ ಹತ್ತಿರದ ಪಶುವೈದ್ಯಾಧಿಕಾರಿಗಳಿಗೆ ಮಾಹಿತಿ ನೀಡಬೇಕು. ರೋಗಪೀಡಿತ ಕೋಳಿಗಳನ್ನು ಆರೋಗ್ಯಕರ ಕೋಳಿಗಳಿಂದ ಬೇರ್ಪಡಿಸುವುದು ಮತ್ತು ಸತ್ತ ಕೋಳಿಗಳನ್ನು ಸುರಕ್ಷಿತವಾಗಿ ಹೂತು ಹಾಕುವ ಕ್ರಮಗಳನ್ನು ಅನುಸರಿಸುವುದು ಕಡ್ಡಾಯವಾಗಿದೆ. ಜನವಸತಿ ಪ್ರದೇಶದಿಂದ ಕೋಳಿ ಫಾರಂಗಳನ್ನು ದೂರವಿಡುವುದು ಹಾಗೂ ಜನರು ಕೋಳಿ ಮತ್ತು ಅದರ ಉತ್ಪನ್ನಗಳನ್ನು ಮುಟ್ಟಿದ ನಂತರ ಸಾಬೂನಿನಿಂದ ಕೈ ತೊಳೆಯುವುದು ಅತ್ಯಂತ ಮುಖ್ಯವಾಗಿದೆ ಎಂದು ಅವರು ಹೇಳಿದರು.
ಕೋಳಿ ಮಾಂಸ ಮತ್ತು ಮೊಟ್ಟೆಗಳನ್ನು ಕನಿಷ್ಠ 70 ಡಿಗ್ರಿ ಸೆಂಟಿಗ್ರೇಡ್ ಉಷ್ಣಾಂಶದಲ್ಲಿ ಹತ್ತು ನಿಮಿಷಗಳ ಕಾಲ ಚೆನ್ನಾಗಿ ಬೇಯಿಸಿ ಸೇವಿಸುವುದರಿಂದ ಯಾವುದೇ ಸೋಂಕಿನ ಅಪಾಯ ತಪ್ಪಿಸಬಹುದು. ಸಾರ್ವಜನಿಕರು ಯಾವುದೇ ರೀತಿಯ ಆತಂಕಕ್ಕೊಳಗಾಗದೆ ಮುಂಜಾಗ್ರತಾ ಕ್ರಮಗಳನ್ನು ಪಾಲಿಸುವಂತೆ ಅವರು ಮನವಿ ಮಾಡಿದರು.
ಕೋಳಿ ಫಾರಂ ಮಾಲೀಕರಿಗೆ ವಿಶೇಷ ಸೂಚನೆ ನೀಡಿದ ಜಿಲ್ಲಾಧಿಕಾರಿಗಳು, ಕೋಳಿಗಳಲ್ಲಿ ರೋಗ ಲಕ್ಷಣಗಳು ಕಂಡುಬAದರೆ ಅಥವಾ ಹೆಚ್ಚಿನ ಸಂಖ್ಯೆಯಲ್ಲಿ ಸಾವಿನ ಪ್ರಕರಣಗಳು ಸಂಭವಿಸಿದರೆ ತಕ್ಷಣವೇ ಪಶುವೈದ್ಯ ಇಲಾಖೆಗೆ ಮಾಹಿತಿ ನೀಡಬೇಕು. ಫಾರಂ ಪ್ರದೇಶಕ್ಕೆ ವಲಸೆ ಪಕ್ಷಿಗಳು ಪ್ರವೇಶಿಸದಂತೆ ಕ್ರಮ ಕೈಗೊಳ್ಳಬೇಕು ಮತ್ತು ಫಾರಂ ಕೆಲಸಗಾರರಲ್ಲಿ ರೋಗದ ಬಗ್ಗೆ ಅರಿವು ಮೂಡಿಸಬೇಕು ಎಂದು ಹೇಳಿದರು.
ಗ್ರಾಮಗಳಲ್ಲಿ ಕೋಳಿಗಳು ಅಥವಾ ವಲಸೆ ಪಕ್ಷಿಗಳು ಅಸಹಜವಾಗಿ ಸತ್ತರೆ ತಕ್ಷಣವೇ ಪಶುವೈದ್ಯ ಇಲಾಖೆಗೆ ಮಾಹಿತಿ ನೀಡಬೇಕು. ಕೆರೆ, ಕಟ್ಟೆ, ನದಿ ಹಾಗೂ ನೀರಿನ ತೊರೆಗಳಲ್ಲಿ ಸತ್ತ ಪಕ್ಷಿಗಳು ಕಂಡುಬAದರೆ ಕೂಡಲೇ ವರದಿ ಮಾಡಬೇಕು ಎಂದು ಅವರು ತಿಳಿಸಿದರು. ಗ್ರಾಮ ಪ್ರತಿನಿಧಿಗಳು ಮತ್ತು ಸಾರ್ವಜನಿಕರು ಈ ಬಗ್ಗೆ ಜಾಗೃತರಾಗಿದ್ದು, ರೋಗ ನಿಯಂತ್ರಣಕ್ಕೆ ಸಹಕರಿಸಬೇಕು ಎಂದು ಕರೆ ನೀಡಿದರು.
ಹಕ್ಕಿ ಜ್ವರ ಅನುಮಾನ ಉಂಟಾದಲ್ಲಿ 24 ಗಂಟೆಗಳೊಳಗೆ ಪಶುವೈದ್ಯರ ತಂಡಗಳನ್ನು ರಚಿಸಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಅಗತ್ಯವಿದ್ದಲ್ಲಿ ಹಿಕ್ಕೆ, ರಕ್ತ ಹಾಗೂ ಸತ್ತ ಕೋಳಿಗಳ ಮಾದರಿಗಳನ್ನು ಸಂಗ್ರಹಿಸಿ ಭೋಪಾಲ್‌ನ ರಾಷ್ಟಿçÃಯ ಉನ್ನತ ಭದ್ರತಾ ಪ್ರಾಣಿ ರೋಗ ಸಂಶೋಧನಾ ಸಂಸ್ಥೆಗೆ ಕಳುಹಿಸಿ ಪರೀಕ್ಷೆ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮ್ ಎಲ್.ಅರಸಿದ್ದಿ, ಡಿಎಫ್‌ಒ ನಿರ್ಮಲಾ, ಕೊಪ್ಪಳ ಪಶು ಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆಯ ಉಪನಿರ್ದೇಶಕರು(ಆಡಳಿತ )ಡಾ. ಪಿ.ಎಂ.ಮಲ್ಲಯ್ಯ, ಕೊಪ್ಪಳ ಪಶು ಪಾಲನಾ ಮತ್ತು ಪಶು ವ್ಯದ್ಯ ಸೇವಾ ಇಲಾಖೆಯ ಉಪನಿರ್ದೇಶಕರು(ಪಾಲಿಕ್ಲಿನಿಕ)ಡಾ. ಶರಣಬಸಪ್ಪ ರೋಣ, ಕಾರಟಗಿ ಪಶು ಚಿಕಿತ್ಸಾಲಯ ಬೆನ್ನೂರ ಪಶು ವೈದ್ಯಧಿಕಾರಿ ಡಾ.ಲಕ್ಮಣ ನಾಯ್ಕ, ಯಲಬುರ್ಗಾ ಮುಖ್ಯ ಪಶು ವೈಧ್ಯಾಧಿಕಾರಿ(ಆಡಳಿತ) ಡಾ. ಪ್ರಕಾಶ ಚೂರಿ ಹಾಗೂ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಮಿತಿಯ ಸದಸ್ಯರುಗಳು ಮತ್ತು ಕೊಪ್ಪಳ ಜಿಲ್ಲೆಯ ಕೋಳಿ ಫಾರಂಗಳ ಮಾಲೀಕರು ಉಪಸ್ಥಿತರಿದ್ದರು.




