
ಸೂರ್ಯನಾಯಕನ ತಾಂಡವನ್ನು ಕಂದಾಯ ಗ್ರಾಮವನ್ನಾಗಿ ಘೋಷಿಸಲು ಮನವಿ.
Request to declare Suryanayakana Tanda as a revenue village.

ಗಂಗಾವತಿ: ಸೂರ್ಯನಾಯಕನ ತಾಂಡವನ್ನು ಲಂಬಾಣಿ ತಾಂಡ ಕಂದಾಯ ಗ್ರಾಮವನ್ನಾಗಿ ಘೋಷಿಸಬೇಕೆಂದು ಆಗ್ರಹಿಸಿ ಅಖಿಲ ಕರ್ನಾಟಕ ಬಂಜಾರ್ ಲಂಬಾಣಿ ಸೇವಾಲಾಲ್ ಸಮಾಜದ ವತಿಯಿಂದ ಮನವಿ ಸಲ್ಲಿಸಲಾಯಿತು.
ಸಮಾಜದ ಸೂರ್ಯನಾಯಕನ ತಾಂಡದ ಕಾರ್ಯಾಧ್ಯಕ್ಷರಾದ ಬಾಲಾಜಿ ಚವ್ಹಾಣ ಅವರ ನೇತೃತ್ವದಲ್ಲಿ, ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಿಗಿ ಹಾಗೂ ಗಂಗಾವತಿ ಕ್ಷೇತ್ರದ ಶಾಸಕ ಗಾಲಿ ಜನಾರ್ದನ್ ರೆಡ್ಡಿ ಅವರಿಗೆ ಮನವಿ ನೀಡಲಾಯಿತು.
ಈ ಕುರಿತು ಜಿಲ್ಲಾ ಹಾಗೂ ಗ್ಯಾರಂಟಿ ಸಭೆಯಲ್ಲಿ ಜಿಲ್ಲಾಧಿಕಾರಿಗಳಿಗೆ ಅಗತ್ಯ ನಿರ್ದೇಶನ ನೀಡಲಾಗಿದೆ ಎಂದು ತಿಳಿದುಬಂದಿದೆ.
ಅದರಂತೆ ತಾಲೂಕು ತಹಶೀಲ್ದಾರರು, ತಾಲೂಕು ಪಂಚಾಯಿತಿ ಅಧಿಕಾರಿಗಳು, ಪಿಡಿಓ, ಕಂದಾಯ ನಿರೀಕ್ಷಕರು ಹಾಗೂ ಗ್ರಾಮ ಲೆಕ್ಕಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ತಾಂಡದ ಮಾಜಿ ಸದಸ್ಯರಾದ ಗೌರಮ್ಮ, ಶಂಕರ್ ನಾಯಕ್, ಕಟ್ಟಿಮನಿ ಹನುಮಂತಪ್ಪ ನಾಯಕ, ಕಾರ್ಬಾರಿ ಶಕ್ರಪ್ಪ, ಶಿವಣ್ಣ, ಶಂಕ್ರಪ್ಪ ಡಾಬು, ಎಸ್.ಪಿ. ಗೋಪಾಲಕೃಷ್ಣ ಸೇರಿದಂತೆ ತಾಂಡದ ಮುಖಂಡರು, ಹಿರಿಯರು, ಮಹಿಳೆಯರು ಮತ್ತು ಸ್ಥಳೀಯ ನಿವಾಸಿಗಳು ಭಾಗವಹಿಸಿ ಮಾನ್ಯ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.
ತಾಂಡವನ್ನು ಕಂದಾಯ ಗ್ರಾಮವನ್ನಾಗಿ ಘೋಷಿಸಿದಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ವೇಗ ಸಿಗಲಿದ್ದು, ಸರ್ಕಾರಿ ಯೋಜನೆಗಳ ಸೌಲಭ್ಯಗಳು ಸಮರ್ಪಕವಾಗಿ ಲಭಿಸುವುದಾಗಿ ಗ್ರಾಮಸ್ಥರು ತಿಳಿಸಿದ್ದಾರೆ.



