ಶುಗರ್ ಪೇಶಂಟ್ ದಿನಕ್ಕೆ ಎಷ್ಟು ಬಾರಿ ಊಟ ಮಾಡಬೇಕು ಏನೇನು ಉಣ್ಣ ಬೇಕು?

Mallikarjun
1 Min Read
How many times a day should a diabetic patient eat and what foods should they eat?




ಶುಗರ್ ಪೇಶಂಟ್ ದಿನಕ್ಕೆ ಎಷ್ಟು ಬಾರಿ ಊಟ ಮಾಡಬೇಕು ಏನೇನು ಉಣ್ಣ ಬೇಕು?

ಮೊದಲಿಗೆ ಈ ಶುಗರ್ ಪೇಷಂಟ್ ಅನ್ನೋದನ್ನ ಬಿಡಿ.ಡಯಾಬಿಟಿಸ್ ಅನ್ನೋದು ಒಂದು ಜೀವನ ಶೈಲಿ ಅಷ್ಟೆ.ನಿಮ್ಮ ಜೀವನಶೈಲಿಯಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಳ್ಳಿ

1.ದಿನನಿತ್ಯ ಒಂದು ಗಂಟೆ ನಡೆಯಿರಿ, ಬೆಳಿಗ್ಗೆ ಆದರೆ ಅತ್ಯುತ್ತಮ

2.ನಿಮ್ಮ ಊಟದಲ್ಲಿ ಹಸಿತರಕಾರಿ ಹೆಚ್ಚು ಬಳಸಿ ಸೌತೆಕಾಯಿ , ಹೆಸರು ಬೇಳೆ, ಕಡ್ಲೆ ಬೇಳೆ ಕೋಸಂಬರಿ ಗಳು, ನವಿಲು ಕೋಸು ಪಲ್ಯ (ಬೇಯಿಸಿದ್ದಲ್ಲ) ತಿನ್ನಿ.

3.ನಿಮ್ಮ ಊಟ ತಿಂಡಿ ಗಳನ್ನು ಎರಡು ಭಾಗಗಳಾಗಿ ಮಾಡಿಕೊಂಡು ಅರ್ಧ ಒಮ್ಮೆ ತಿಂದರೆ ಎರಡು ಗಂಟೆ ಬಿಟ್ಟು ಉಳಿದರ್ಧ ತಿನ್ನಿ.

4.ಸಂಜೆಯ ಊಟ ಏಳು ರಿಂದ ಎಂಟು ಗಂಟೆಯ ಒಳಗೆ ಮುಗಿಸಿ.

5.ಬೆಳಗ್ಗೆ ಸೂರ್ಯೋದಯಕ್ಕೆ ಮುಂಚೆ ಏಳಿ.

6.ನೇರವಾಗಿ ಸಿಹಿತಿನ್ನಬೇಡಿ.ಇದಿಷ್ಟು ನಾನು ಈಗ ಮಾಡುತ್ತಿರುವುದು ನನಗೆ ಡಯಾಬಿಟಿಸ್ ಬಂದು ಹದಿನಾಲ್ಕು ವರ್ಷ ವಾಯಿತು.ಈ ಸಲಹೆಗಳು ನಿಮಗೆ ಉಪಯುಕ್ತ ವಾಗಬಹುದೆಂದು ಕೊಂಡಿದ್ದೇನೆ.ಒಳ್ಳೆಯದಾಗಲಿ

Total Views: 0
Share This Article