
ಉತ್ತಮ ಮಾರ್ಗದಲ್ಲಿ ನಡೆಯುವುದೇ ಧರ್ಮ, ಸಾಮೂಹಿಕ ವಿವಾಹಗಳಿಂದ ಆರ್ಥಿಕ ಹೊರೆ ಕಮ್ಮಿ:ಡಾ.ಯತೀಂದ್ರ ಸಿದ್ದರಾಮಯ್ಯ
ನೂತನ ರಥೋತ್ಸವ, ವಾಣಿಜ್ಯ ಸಂಕೀರ್ಣಕ್ಕೆ ಶಂಕುಸ್ಥಾಪನೆ.
೧೨ಜೋಡಿ ಸಾಮೂಹಿಕ ವಿವಾಹ.
Religion is the best path to follow, mass marriages reduce financial burden: Dr. Yathindra Siddaramaiah


ಗಂಗಾವತಿ: ಉತ್ತಮ ಮಾರ್ಗದಲ್ಲಿ ನಡೆಯುವುದೇ ಧರ್ಮ, ಪ್ರತಿಯೊಬ್ಬರೂ ಧರ್ಮ ಮಾರ್ಗದಲ್ಲಿ ನಡೆಯುವ ಮೂಲಕ ಸುಂದರ ಬದುಕನ್ನು ಕಟ್ಟಿಕೊಳ್ಳಬೇಕು ಸಾಮೂಹಿಕ ವಿಭಾಗಗಳಿಂದ ಆರ್ಥಿಕ ಅವರೇ ಕಮ್ಮಿಯಾಗುತ್ತದೆ ಎಂದು ವಿಧಾನ ಪರಿಷತ್ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ಹೇಳಿದರು.
ಅವರು ಸಮೀಪದ ಹೊಸಳ್ಳಿ ಗ್ರಾಮದ ಶ್ರೀ ಶಿವಸಿದ್ಧ ಬೀರಲಿಂಗೇಶ್ವರ ದೇವಸ್ಥಾನದ ನೂತನ ರಥೋತ್ಸವ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮದ ವೇದಿಕೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಹೊಸಳ್ಳಿ ಗ್ರಾಮಸ್ಥರು ಧರ್ಮ ಜಾಗೃತಿಗೊಂಡು ದೇವಾಲಯ ರಥೋತ್ಸವ ಸಾಮೂಹಿಕ ವಿವಾಹ ಹೀಗೆ ಜನಕ್ಕೆ ಉಪಯೋಗವಾಗುವ ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತಾ ಬಂದಿದ್ದು ಉತ್ತಮ ಮಾರ್ಗವಾಗಿದೆ ಈ ಹಿಂದೆ ನಮ್ಮ ತಂದೆಯವರು

ಈ ದೇವಸ್ಥಾನದ ನಿರ್ಮಾಣಕ್ಕೆ ಭೂಮಿ ಪೂಜೆಯನ್ನು ನೆರವೇರಿಸಿದರು ಈಗ ನೂತನ ರಥೋತ್ಸವ ಸಿದ್ಧಗೊಂಡಿದ್ದು ಇದರ ಲೋಕಾರ್ಪಣೆಗೆ ನಾನು ಆಗಮಿಸಿದ್ದೇನೆ ಈ ಗ್ರಾಮಕ್ಕೆ ಒಳ್ಳೆಯದಾಗಲಿ ಜೊತೆಗೆ ಸಚಿವ ಶಿವರಾಜ್ ತಂಗಡಿಗೆ ಅವರು ತಮ್ಮ ಇಲಾಖೆಯಿಂದ ದೇವಸ್ಥಾನದ ವಾಣಿಜ್ಯ ಮಳಿಗೆ ನಿರ್ಮಾಣಕ್ಕೆ 50 ಲಕ್ಷ ರೂಪಾಯಿ ಹಣ ಮಂಜೂರು ಮಾಡಿದ್ದು ನಾನು ಸಹ ನನ್ನ ವಿವೇಚನಾ ನಿಧಿಯಿಂದ ಹತ್ತು ಲಕ್ಷ ರೂಪಾಯಿ ಹಣವನ್ನು ಮಂಜೂರು ಮಾಡುತ್ತಿದ್ದೇನೆ, ಪ್ರತಿಯೊಬ್ಬರು ಧರ್ಮಚರಣೆಯನ್ನು ತಮ್ಮ ತಮ್ಮ ಮನಗಳಲ್ಲಿ ಮಾಡಿಕೊಂಡು ಮಕ್ಕಳಿಗೆ ಶೈಕ್ಷಣಿಕ ವ್ಯವಸ್ಥೆ ಕಲ್ಪಿಸುವ ಮೂಲಕ ಮುಖ್ಯ ವಾಹಿನಿಗೆ ಬರಬೇಕು. ದುಶ್ಚಟಗಳಿಂದ ದೂರವಿದ್ದರೆ ಅದೇ ಉತ್ತಮ ಜೀವನವಾಗಿದೆ. ರಾಜ್ಯ ಸರ್ಕಾರ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಅತ್ಯುತ್ತಮವಾಗಿ ಕೆಲಸ ಮಾಡುತ್ತಿದ್ದು ಜನ ಉಪಯೋಗಿ ಯೋಜನೆಗಳನ್ನು ಗ್ಯಾರಂಟಿ ಯೋಜನೆಗಳ ಮೂಲಕ ಅನುಷ್ಠಾನ ಮಾಡಲಾಗುತ್ತಿದೆ. ಸರ್ಕಾರದ ಮುಖ್ಯ ಉದ್ದೇಶ ಜನಸಾಮಾನ್ಯರನ್ನು ಆರ್ಥಿಕವಾಗಿ ಅಭಿವೃದ್ಧಿ ಮಾಡುವುದಾಗಿದೆ. ಆ ಮೂಲಕ ಅತ್ಯುತ್ತಮ ಜೀವನ ಕಲ್ಪಿಸುವ ಯೋಜನೆಗಳನ್ನು ಗ್ಯಾರಂಟಿ ಮೂಲಕ ಜಾರಿಗೊಳಿಸಲಾಗಿದೆ ಎಂದರು.
ಮಾಜಿ ಸಂಸದ ಕೆ ವಿರುಪಾಕ್ಷಪ್ಪ ಮಾತನಾಡಿ ಹೊಸಳ್ಳಿ ಗ್ರಾಮಸ್ಥರು ಜಾಗೃತಿಗೊಂಡಿದ್ದಾರೆ ಎಲ್ಲಾ ಜನಾಂಗದವರು ಇಲ್ಲಿ ಸೇರಿ ಗ್ರಾಮದಲ್ಲಿ ದೇವಸ್ಥಾನಗಳನ್ನು ಮತ್ತು ಸಮುದಾಯ ಭವನಗಳನ್ನು ಕಟ್ಟಿಸಿಕೊಳ್ಳಲು ಪಕ್ಷತೀತ ಜಾತ್ಯತೀತವಾಗಿ ಮುಖಂಡರನ್ನು ನಿರಂತರವಾಗಿ ಭೇಟಿಯಾಗಿ ಅನುದಾನವನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರತಿ ವರ್ಷ ಉಚಿತ ಸಾಮೂಹಿಕ ವಿವಾಹಗಳನ್ನು ಏರ್ಪಡಿಸುವ ಮೂಲಕ ಆರ್ಥಿಕವಾಗಿ ಹಿಂದುಳಿದವರಿಗೆ ನೆರವಾಗುವ ಕಾರ್ಯ ಮುಂದೆಯೂ ಸಹ ಎಲ್ಲರೂ ಸಂಘಟಿತರಾಗಿ ತಮ್ಮ ತಮ್ಮ ಸಮಾಜಗಳನ್ನು ಬೆಳೆಸುವಂತೆ ಕರೆ ನೀಡಿದರು.
ಸಂಸದ ರಾಜಶೇಖರ ಹಿಟ್ನಾಳ್ ಮಾತನಾಡಿ ಹೊಸಳ್ಳಿ ಗ್ರಾಮಸ್ಥರು ಗ್ರಾಮದಲ್ಲಿ ದೇವಾಲಯ ಹಾಗೂ ನೂತನ ರಥವನ್ನು ನಿರ್ಮಿಸಿ ಜೊತೆಗೆ ಸಾಮೂಹಿಕ ವಿವಾಹಗಳನ್ನು ಏರ್ಪಡಿಸಿ ಧರ್ಮ ಕಾರ್ಯ ಮಾಡಿದ್ದು ಇದು ಮುಂದುವರೆಯಲಿ. ತಮ್ಮ ಮಕ್ಕಳನ್ನು ತಪ್ಪದೇ ಶಾಲೆಗೆ ಕಳಿಸಿ ಶೈಕ್ಷಣಿಕವಾಗಿಯೂ ಮುಖ್ಯವಾಗಿ ಬರುವ ಕಾರ್ಯ ಮಾಡಬೇಕು ತಮ್ಮ ಅನುದಾನದಲ್ಲಿ ಇಡೀ ಕ್ಷೇತ್ರ ಜನತಾ ಜನಪದವಾದ ಕಾರ್ಯಗಳನ್ನು ಮಾಡಲಾಗುತ್ತದೆ. ಗಂಗಾವತಿ ಕ್ಷೇತ್ರಕ್ಕೂ ತಮ್ಮ ಅನುಮಾನದಲ್ಲಿ ಸಿಂಹ ಪಾಲನ್ನು ಮೀಸಲಿಡುವ ಭರವಸೆ ನೀಡಿದರು.
ಶಾಸಕ ರಾಘವೇಂದ್ರ ಹಿಟ್ನಾಳ್ ಮಾತನಾಡಿ ಗ್ರಾಮದಲ್ಲಿ ನೂತನವಾಗಿ ದೇವಸ್ಥಾನ ಮತ್ತು ಬೀರಲಿಂಗೇಶ್ವರ ರಥೋತ್ಸವ ಕಾರ್ಯಕ್ರಮ ಯಶಸ್ವಿಯಾಗಿ ನಡೆದಿದೆ ಸರ್ವ ಸಮಾಜದವರು ಇದರಲ್ಲಿ ಪಾಲ್ಗೊಂಡಿರುವುದು ಸಂತೋಷ ನಮ್ಮ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆ ಮುಖಾಂತರ ಜನರು ಆರ್ಥಿಕವಾಗಿ ಸದೃಢರಾಗುವಂತೆ ಮಾಡುತ್ತಿದೆ. ಹಾವೇರಿಯಲ್ಲಿ ಜರುಗಿದ ಸಾವಿರ ದಿನಗಳ ಕಾರ್ಯಕ್ರಮದಲ್ಲಿ 2.20 ಲಕ್ಷ ಫಲಾನುಭವಿಗಳಿಗೆ ಭೂಮಿ ಹಕ್ಕು ಪತ್ರವಿರಿಸಲಾಗಿದೆ.ಗ್ಯಾರಂಟಿ ಯೋಜನೆಗಳಿಗೆ 60ಸಾವಿರ ಕೋಟಿ ಖರ್ಚು ಮಾಡುವ ಜೊತೆಗೆ ಅಭಿವೃದ್ಧಿ ಕಾರ್ಯಗಳು ಸಾವಿರಾರು ಕೋಟಿಗಳನ್ನು ಸರಕಾರ ಖರ್ಚು ಮಾಡುತ್ತಿದೆ ವಿಪಕ್ಷದವರು ಹೊಟ್ಟೆ ಕಿಚ್ಚಿನಿಂದಾಗಿ ಗ್ಯಾರಂಟಿ ಯೋಜನೆಗಳ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ.2028ಕ್ಕೂ ಕಾಂಗ್ರೆಸ್ ಸರಕಾರ ಬಂದು ಇನ್ನಷ್ಟು ಜನಪರವಾದ ಯೋಜನೆಗಳನ್ನು ಅನುಷ್ಠಾನ ಮಾಡಲಾಗುತ್ತದೆ ಎಂದರು. ಕಾರ್ಯಕ್ರಮದಲ್ಲಿ ಪೂಜ್ಯರಾದ ಡಾ. ಕೊಟ್ಟೂರು ಮಹಾಸ್ವಾಮಿಗಳು,ಹೆಬ್ಬಾಳದ ನಾಗಭೂಷಣ ಶಿವಾಚಾರ್ಯ ಮಹಾಸ್ವಾಮಿಗಳು, ತುರ್ವಿಹಾಳ ಮಹಾದೇವ ಗುರುವಿನ ಸ್ವಾಮಿಗಳು, ಕೊಳಗೇರಿ ಅಭಿವೃದ್ಧಿ ಮಂಡಳಿ ನಿರ್ದೇಶಕ ರಾಮಕೃಷ್ಣ ರೊಳ್ಳಿ,
ಲಲಿತಾರಾಣಿ ಶ್ರೀರಂಗದೇವರಾಯಲು,ನೆಕ್ಕಂಟಿ ಸೂರಿಬಾಬು, ಜಿಲ್ಲಾ ಗ್ಯಾರಂಟಿ ಕಮಿಟಿ ಅಧ್ಯಕ್ಷ ರೆಡ್ಡಿ ಶ್ರೀನಿವಾಸ್,ದೇವಪ್ಪ ಕಟ್ಟಿಮನಿ, ವೆಂಕಟ ಕೃಷ್ಣ ನಾನಿ, ನಾಗವೇಣಿ, ತಿಪ್ಪೇರುದ್ರಸ್ವಾಮಿ, ಫಕೀರಯ್ಯ, ಎಮ್ಮಿ ಪಕೀರಪ್ಪ,ಡ್ಯಾಗಿ ರುದ್ರೇಶ,ಅಯ್ಯಣ್ಣ ರಾಯಚೂರು, ವಿಠಲಾಪೂರ ಯಮನಪ್ಪ,ಕೆ.ನಾಗೇಶಪ್ಪ,ಬೆಟ್ಟಪ್ಪ ಬೆಣಕಲ್,ಗುರುಪಾದಯ್ಯಸ್ವಾಮಿ,ಎಸ್ಟಿ ಈರಣ್ಣ, ದಾದೆಸಾಬ,ಶಾಮೀದ್ ಸಾಬ,ಮೋರಿ ದುರುಗಪ್ಪ, ವಿರೂಪಾಕ್ಷಪ್ಪ ರೇಷ್ಮಿ, ಲಿಂಗಪ್ಪ ದೊಡ್ಮನಿ,ಮರಿಯಪ್ಪ ಕಲ್ಗುಡಿ,
ನೀಲಕಂಠಪ್ಪ ದೇವರಮನಿ,
ಮೆಟ್ರಿ ವೆಂಕಟೇಶ, ಬಲ್ಕುಂದಿ ನಾಗಪ್ಪ, ಅಯ್ಯಪ್ಪ, ಕುಬೇರಪ್ಪ,ಗೀತಾ ವಿಕ್ರಮ, ಜ್ಯೋತಿ, ಕವಿತಾ ಮೆಟ್ರಿ,ರೇಖಾ,ಬಸವರಾಜ ಕಟ್ಟಿ,ರೇಣುಕನಗೌಡ,ಸೋಮನಾಥ ಪಟ್ಟಣಶೆಟ್ಟಿ,ಉಪ್ಪಾರ ವಿಠೋಭಾ,ವಿಷ್ಣು ಜೋಶಿ ಹಾಗೂ ಶ್ರೀ ಶಿವಸಿದ್ದ ಬೀರಲಿಂಗೇಶ್ವರ ದೇವಾಲಯ ಸೇವಾ ಸಮಿತಿ,ಸಂಗೊಳ್ಳಿ ರಾಯಣ್ಣ ಯುವಕ ಸಂಘದ ಪದಾಧಿಕಾರಿಗಳು, ಗ್ರಾಮದ ಸರ್ವ ಸಮಾಜ ಬಾಂಧವರಿದ್ದರು.12 ಸಾಮೂಹಿಕ ವಿವಾಹಗಳು ಜರುಗಿದವು.
ಬಾಕ್ಸ್
ಹೊಸಳ್ಳಿಯಲ್ಲಿ ಸಂಗೊಳ್ಳಿ ರಾಯಣ್ಣ ವಾಣಿಜ್ಯಮಳಿಗೆ ನಿರ್ಮಾಣಕ್ಕೆ ಆರ್ಥಿಕ ನೆರವು ಘೋಷಣೆ ಮಾಡಿದ ಬಸಮ್ಮ ರಾಜೂರು ಇವರನ್ನು ಸನ್ಮಾನಿಸಲಾಯಿತು.




