Breaking News
ನಾಳೆ ಬೆಂಗಳೂರು ವಿವಿ: ಶಿಕ್ಷಣ ವಿಭಾಗದಲ್ಲಿ ಸುಗ್ಗಿ ಸಂಭ್ರಮ ಆಯೋಜನೆ

ನಾಳೆ ಬೆಂಗಳೂರು ವಿವಿ: ಶಿಕ್ಷಣ ವಿಭಾಗದಲ್ಲಿ ಸುಗ್ಗಿ ಸಂಭ್ರಮ ಆಯೋಜನೆ

Bangalore University tomorrow: Harvest festival organized in the Education Department

ಬೆಂಗಳೂರು: ಜ.19: ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣದಲ್ಲಿರುವ ಶಿಕ್ಷಣ ವಿಭಾಗದಿಂದ ಆಯೋಜಿಸಿರುವ ‘ಸುಗ್ಗಿ ಸಂಭ್ರಮ’, ಸಂಸ್ಕೃತಿ, ಶ್ರಮ ಮತ್ತು ಸಡಗರ ಕಾರ್ಯಕ್ರಮವನ್ನು ಸೋಮವಾರ ಬೆಳಗ್ಗೆ 10.30ಕ್ಕೆ ಶಿಕ್ಷಣ ವಿಭಾಗದಲ್ಲಿ ಆಚರಿಸಲಾಗುತ್ತದೆಂದು ಶಿಕ್ಷಣ ವಿಭಾಗದ ಸಹಾಯಕ ಪ್ರಾಧ್ಯಾಪಕರು ಹಾಗೂ ಸಂಯೋಜಕರಾದ ಡಾ. ವಾಣಿಶ್ರೀ ಕೊಪ್ಪದರವರು ತಿಳಿಸಿದ್ದಾರೆ.

ಇದೇ ಸಂದರ್ಭದಲ್ಲಿ ಸುಗ್ಗಿ ಸಂಭ್ರಮದ ಅಂಗವಾಗಿ ವಿವಿಧ ರೀತಿಯ ಕಾರ್ಯಕ್ರಮಗಳಾದ ಇದೇ ಮಂಗಳವಾರದಂದು ಹಿರಿಯ ಪ್ರಶಿಕ್ಷಾಣಾರ್ಥಿಗಳಿಂದ ಕಿರಿಯ ಪ್ರಶಿಕ್ಷಾಣಾರ್ಥಿಗಳಿಗೆ ಸಾಂಸ್ಕೃತಿಕ ಸ್ಪರ್ಧೆ, ಬುಧವಾರದಂದು ಕ್ರೀಡಾ ಸ್ಪರ್ಧೆಗಳು ನಡೆಯಲಿದೆ.

ಈ ಕಾರ್ಯಕ್ರಮವನ್ನು ಗೌರವ ಉಪಸ್ಥಿತಿಯಲ್ಲಿ ಶಿಕ್ಷಣ ವಿಭಾಗ ಡಾ. ವಾಣಿಶ್ರೀ ಕೊಪ್ಪದರವರು, ಸಹಾಯಕ ಪ್ರಾಧ್ಯಾಪಕರು ಹಾಗೂ ಸಂಯೋಜಕರು, ಡಾ. ಎಂ.ಸಿ. ಎರ್ರಿಸ್ವಾಮಿ, ಪ್ರಾಧ್ಯಾಪಕರು ಮತ್ತು ಬೆಂಗಳೂರು ವಿವಿಯ ವಿವಿಧ ಬೋಧಕ – ಬೋಧಕೇತರ ಸಿಬ್ಬಂದಿ ವರ್ಗದವರು, ಸಂಶೋಧನಾರ್ಥಿಗಳು, ಶಿಕ್ಷಣ ವಿಭಾಗದ ಪ್ರಥಮ ಮತ್ತು ದ್ವಿತೀಯ ವರ್ಷದ ಎಂ.ಇಡಿ ಪ್ರಶಿಕ್ಷಾಣಾರ್ಥಿಗಳು‌ ಮತ್ತಿತರರು ಭಾಗವಹಿಸಲಿದ್ದಾರೆಂದು ಶಿಕ್ಷಣ ವಿಭಾಗದ ಸಂಯೋಜಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಲ್ಲು ಉಜ್ಜಲು ಯಾವ ಪೇಸ್ಟ್ ಒಳ್ಳೆಯದು?

ಹಲ್ಲು ಉಜ್ಜಲು ಯಾವ ಪೇಸ್ಟ್ ಒಳ್ಳೆಯದು?

Which paste is good for brushing teeth?

ನೀವು ಟೂತ್‌ಪೇಸ್ಟ್ ಅನ್ನು ಆಯ್ಕೆ ಮಾಡುವಾಗ ನಿಮ್ಮಿಗೆ ಕೆಲವು ಮೂಲಭೂತ ವಿಷಯಗಳನ್ನು ಅರ್ಥಮಾಡಿಕೊಳ್ಳಬೇಕು. ಟೂತ್‌ಪೇಸ್ಟ್ ನಿಮ್ಮ ಹೈಜೀನ್‌ನ ಒಂದು ಭಾಗ ಮಾತ್ರವಾಗಿದೆ ಮತ್ತು ನಿಮ್ಮ ಹಲ್ಲುಗಳ ಮೇಲೆ ಮೂಲಭೂತವಾಗಿ 10% ರಿಂದ 20% ಪರಿಣಾಮವನ್ನು ಮಾತ್ರ ಬೀರುತ್ತದೆ.ಹೆಣಮುಖದ ಕೆಲವು ಉತ್ತಮ ಗುಣಗಳು ಹೀಗಿವೆ:

1. ಮೃದುಗೊಳಿಸುವ ಸಾಮರ್ಥ್ಯ, ಪೌಡರ್ ಹೋಲಿದ ಖಡಬಳಿಕೆಯಿಲ್ಲದೆ ಇರಬೇಕು

2. ಹಲ್ಲುಗಳಲ್ಲಿ ಕಾಲಕ್ರಮೇಣ ಉಂಟಾಗುವ ‘ಟಾರ್ಟಾರ್’ ಅಥವಾ ಹಳದಿ ಠೇವಣಿಗಳನ್ನು ತಡೆಯುವ ಸಾಮರ್ಥ್ಯ

3. ಹಲ್ಲುಗಳನ್ನು ಹಳದಿ ರಂಜನ ಮುಕ್ತವಾಗಿ ಬಿಳಿಗೊಳಿಸುವುದು

4. ಹಲ್ಲು ಮತ್ತು ಹಲ್ಲುಮೂಳೆಯ ಸ್ಥಳವನ್ನು ನವೀಕರಿಸಿ, ನರ್ವ್ ಬಹಿರ್ಗಮನವನ್ನು ತಪ್ಪಿಸುವುದುಎಲ್ಲಾ ವಾಣಿಜ್ಯಿಯಿಂದ ನಿರ್ಮಿತ ಟೂತ್‌ಪೇಸ್ಟ್‌ಗಳು ಕಂಪನಿಗಳ ಲಾಭಕ್ಕಾಗಿ ಮಾತ್ರ ರೂಪಿಸಲಾಗಿದೆ – ಹರ್ಬಲ್ ಆಗಿರುತ್ತವಾ ಅಥವಾ ಬೇರೆ ರೀತಿಯಾಗಿರುತ್ತವಾ ಇರಲಿ.ಎಲ್ಲಾ ‘ಟೂತ್‌ಪೇಸ್ಟ್’ ಆರೋಗ್ಯಕರವಾಗಿದೆ ಎಂಬ ಎಲ್ಲಾ ಹೇಳಿಕೆಗಳು ತಪ್ಪು.ಇಂದಿನ ತಲೆಮಾರಿನವರು ಹಲ್ಲು ಆರೈಕೆಗೆ ತುಂಬಾ ಹಣ ಖರ್ಚು ಮಾಡುತ್ತಿದ್ದಾರೆ.ನಿನ್ನ ಅಜ್ಜೀ ವಿಶ್ವಾಸಿಸಿದ್ದದ್ದರಿಂದ ಏನಾದರೂ ಬಳಸಬೇಡಿ, ಕಾಲ ಬದಲಾಗಿದೆ, ಆಹಾರ ಮತ್ತು ಜೀವನಶೈಲಿ ಬದಲಾಗಿದೆ.ನಾನು ಜಾಹೀರಾತು ಮಾಡದ ಟೂತ್‌ಪೇಸ್ಟ್ ಅನ್ನು ಬಳಸುತ್ತೇನೆ. ಇದರಲ್ಲಿ ಮೂರುವಿಡಕ್ಕೂ ಕ್ರಿಯೆಗಳಿದ್ದವು – ನಾನು ನನ್ನ ಹಲ್ಲು ಕ್ಲೀನಿಂಗ್ ಗಾಗಿ ಸಹ ದಂತರೋಗ ತಜ್ಞರನ್ನು ಭೇಟಿ ಮಾಡುವುದಿಲ್ಲ.ಚೆನ್ನಾದ ದವಡೆಯ ಆರೋಗ್ಯವು ಸರಿಯಾದ ಬ್ರಷಿಂಗ್ ತಂತ್ರಜ್ಞಾನದಿಂದ ಅವಲಂಬಿತವಾಗಿದೆಇದಕ್ಕಾಗಿ ದಿನಕ್ಕೆ 2 ಬಾರಿ ಬ್ರಶಿಂಗ್ ಮಾಡುವುದರ ಜೊತೆಗೆ ಫ್ಲಾಸಿಂಗ್ ಸಹ ಮಾಡಬೇಕು. “ಮೃದು” ಹಲ್ಲುತೊಳಕೆ ಬ್ರಷ್‌ಗಳನ್ನು ಮಾತ್ರ ಬಳಸಬೇಕು.ಮತ್ತು ಪ್ರತಿಯೊಂದು 120 ದಿನಗಳಿಗೊಮ್ಮೆ ಬದಲಾವಣೆ ಮಾಡಬೇಕು.

ಕೇಂದ್ರ ಕೈಗಾರಿಕಾ ಭದ್ರತಾ ಪಡೆ ಗೆ ಸುದೀಪ್ ಮಸ್ಕಿ ಆಯ್ಕೆ 

ಕೇಂದ್ರ ಕೈಗಾರಿಕಾ ಭದ್ರತಾ ಪಡೆ ಗೆ ಸುದೀಪ್ ಮಸ್ಕಿ ಆಯ್ಕೆ 

Sudeep Muski selected for Central Industrial Security Force

ಗಂಗಾವತಿ :- ನಗರದ 18 ವಾರ್ಡ್ ವಡ್ಡರ ಓಣಿಯ ನಿವಾಸಿಗಳಾದ ಬಸವರಾಜ್ ಮಸ್ಕಿ ನಂದಿನಿ ಮಸ್ಕಿ ಇವರ ಸುಪುತ್ರ ಸುದೀಪ್ ಮಸ್ಕಿ CISF ಆರ್ಮಿ ( ಕೇಂದ್ರ ಕೈಗಾರಿಕಾ ಭದ್ರತಾ ಪಡೆ ) ಆಯ್ಕೆಯಾಗಿದ್ದಾನೆ. ಈ ವೇಳೆ ಸ್ನೇಹಿತರ ಬಳಗದಿಂದ ಸುದೀಪ್ ಮಸ್ಕಿ ಇವರನ್ನು ಸನ್ಮಾನಿಸಿ ಅಭಿನಂದಿಸಿದರು.

 ಈ ಸಂದರ್ಭದಲ್ಲಿ ಭರತ, ಶ್ಯಾಮ್ ಸುಂದರ್, ಗಿರೀಶ್, ಜಾಯಿದ್,  ಆಕಾಶ್,  ಸಂಕೇತ್, ಚೇತನ್, ಚನ್ನ,  ಉಪಸ್ಥಿತರಿದ್ದರು.

ಶಶಿಕುಮಾರ್ ವಿ. ಅವರಿಗೆ ಪಿಎಚ್.ಡಿ ಪದವಿ ಪ್ರದಾನ

ಶಶಿಕುಮಾರ್ ವಿ. ಅವರಿಗೆ ಪಿಎಚ್.ಡಿ ಪದವಿ ಪ್ರದಾನ

Shashikumar V. conferred with PhD degree

ಬೆಂಗಳೂರು. ಜ.18: ಬೆಂಗಳೂರು ವಿಶ್ವವಿದ್ಯಾಲಯ ವ್ಯಾಪ್ತಿಯ ಕನಕಪುರದ ಎಸ್. ಕರಿಯಪ್ಪ ರೂರಲ್ ಕಾಲೇಜು ಸ್ನಾತಕೋತ್ತರ ಮತ್ತು ಸಂಶೋಧನಾ ಕೇಂದ್ರದ ಇತಿಹಾಸ ವಿಭಾಗದ ಸಂಶೋಧನಾ ವಿದ್ಯಾರ್ಥಿ ಶಶಿಕುಮಾರ್ ವಿ. ಅವರಿಗೆ ಪಿಎಚ್.ಡಿ ಪದವಿ ಲಭಿಸಿದೆ.

ಇವರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಸಿಂಗರಹಳ್ಳಿ ಗ್ರಾಮದ ಗ್ರಾಮದ ರೈತಾಪಿ ಕುಟುಂಬಕ್ಕೆ ಸೇರಿದ ಲೇಟ್ ವೆಂಕಟಸ್ವಾಮಪ್ಪ ಹಾಗೂ ಶ್ರೀಮತಿ ರತ್ನಮ್ಮ ದಂಪತಿಯ ಪುತ್ರರಾದ ಶಶಿಕುಮಾರ್ ವಿ. ರವರು ಪ್ರಸ್ತುತ ಬೆಂಗಳೂರು ವಿವಿಯಲ್ಲಿ ಬಿಎ ಆನರ್ಸ್ ಇತಿಹಾಸ ವಿಭಾಗದ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಬೆಂಗಳೂರು ವಿವಿಯ ವ್ಯಾಪ್ತಿಯ ಕನಕಪುರದ ಎಸ್. ಕರಿಯಪ್ಪ ರೂರಲ್ ಕಾಲೇಜು ಸ್ನಾತಕೋತ್ತರ ಮತ್ತು ಸಂಶೋಧನಾ ಕೇಂದ್ರದ ಇತಿಹಾಸ ವಿಭಾಗದ ಸಂಶೋಧನಾ ವಿದ್ಯಾರ್ಥಿ ಶಶಿಕುಮಾರ್ ವಿ. ರವರು ಬೆಂಗಳೂರು ವಿವಿಯ ವ್ಯಾಪ್ತಿಯ ಕನಕಪುರದ ಎಸ್. ಕರಿಯಪ್ಪ ರೂರಲ್ ಕಾಲೇಜು ಸ್ನಾತಕೋತ್ತರ ಮತ್ತು ಸಂಶೋಧನಾ ಕೇಂದ್ರದ ಇತಿಹಾಸ ವಿಭಾಗದ ಪ್ರಾಧ್ಯಾಪಕ ಡಾ. ಗೋವಿಂದಪ್ಪ ಎಂ. ರವರ ಮಾರ್ಗದರ್ಶನದಲ್ಲಿ ಮಂಡಿಸಿದ “ಹೆಳವರ ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ಅಧ್ಯಯನ (ವಿಶೇಷವಾಗಿ ಅವಿಭಜಿತ ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಸಂಬಂಧಿಸಿದಂತೆ) : ಸ್ವಾತಂತ್ಯೋತ್ತರ ಕಾಲಘಟ್ಟ ವಿಶ್ಲೇಷಣೆ” ಎಂಬ ಸಂಶೋಧನಾ ಮಹಾಪ್ರಬಂಧಕ್ಕೆ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಗಿದೆ ಎಂದು ಬೆಂಗಳೂರು ವಿಶ್ವವಿದ್ಯಾಲಯವು ಪ್ರಕಟಣೆಯಲ್ಲಿ ತಿಳಿಸಿದೆ.