Breaking News
ಪುಸ್ತಕಗಳು ಜ್ಞಾನದ ದಿಗಂತವನ್ನುವಿಸ್ತರಿಸುತ್ತವೆ:ಡಾ.ಕೆ.ರವೀಂದ್ರನಾಥ

Books expand the horizon of knowledge. : Dr. K. Rabindranath.

ಗಂಗಾವತಿ, ಪುಸ್ತಕಗಳು ಮನುಷ್ಯನ ನಿಜವಾದ ಸ್ನೇಹಿತರು ಅವು ಮಾನವರ ಬದುಕಿನಲ್ಲಿ ಅಪಾರ ಪ್ರಭಾವವನ್ನು ಬೀರಿವೆ. ಪುಸ್ತಕಗಳನ್ನು ಓದುವುದರಿಂದಮನಸ್ಸಿಗೆವ್ಯಾಯಾಮವಾಗುತ್ತದೆ.ಓದುವ ಹವ್ಯಾಸ ಬೆಳೆಸಿಕೊಳ್ಳುವುದರಿಂದ ಧನಾತ್ಮಕ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬಹುದು ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಮತ್ತು ಹಿರಿಯ ವಿದ್ವಾಂಸ ಡಾ. ರವೀಂದ್ರನಾಥ ಅಭಿಪ್ರಾಯಪಟ್ಟರು. ಅವರು ಇಂದು ಕನ್ನಡ ಪುಸ್ತಕ ಪ್ರಾಧಿಕಾರ ಮತ್ತು ಹೆಚ್. ಆರ್ ಸರೋಜಮ್ಮ ಬಾಲಕಿಯರ ಪದವಿಪೂರ್ವಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ಜರುಗಿದ ನನ್ನ ಮೆಚ್ಚಿನ ಪುಸ್ತಕ ಅಭಿಪ್ರಾಯ ಮಂಡನೆ ಮತ್ತು ಉಪನ್ಯಾಸ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದರು. ಕಾರ್ಯಕ್ರಮವನ್ನು ಉದ್ಘಾಟಿಸಿದ ಮಾಜಿ ಸಂಸದ ಎಸ್. ಶಿವರಾಮಗೌಡ ಅವರು ಪುಸ್ತಕಗಳು ಜ್ಞಾನದ ಹಸಿವನ್ನು ನೀಗಿಸುವ ಅಮೃತಫಲಗಳಿದ್ದಂತೆ ಹಾಗಾಗಿ ವಿದ್ಯಾರ್ಥಿಗಳು ನಿರಂತರ ಪುಸ್ತಕ ಓದುವ ಮೂಲಕ ತಮ್ಮ ಬದುಕನ್ನು ಸುಂದರಗೊಳಿಸಿಕೊಳ್ಳಬೇಕೆಂದರು‌ ವಿದ್ಯಾರ್ಥಿಗಳಲ್ಲಿ ಪುಸ್ತಕ ಓದುವ ಸಂಸ್ಕೃತಿ ಬೆಳಸಲು ಇಂಥ ಕಾರ್ಯಕ್ರಮ ಹಮ್ಮಿಕೊಂಡಿರುವುದು ಉತ್ತಮ ಎಂದರು. ಸಮಾರಂಭದ ಸಾನಿಧ್ಯವಹಿಸಿದ್ದ ಕೊಟ್ಟೂರೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ. ಕೊಟ್ಟೂರುಮಹಾಸ್ವಾಮಿಗಳು ಮಾತನಾಡುತ್ತ ವೈವಿದ್ಯಮಯ ಸಂಸ್ಕೃತಿಯನ್ನು ಅರ್ಥಮಾಡಿಕೊಳ್ಳಲು ಮತ್ತು ಚಾರಿತ್ರಿಕ, ಸಾಂಸ್ಕೃತಿಕ ಪ್ರಜ್ಞೆ ಯನ್ನು ಹೆಚ್ಚಿಸಿಕೊಳ್ಳಲು ಸಹಾಯಕವಾಗುತ್ತವೆ ಎಂದರು. ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಉಪಾಧ್ಯಕ್ಷರಾದ ಕೆ. ಚನ್ನಬಸಯ್ಯ ಸ್ವಾಮಿಯವರು ಮಾತನಾಡುತ್ತ ಪುಸ್ತಕಗಳು ಬಾಷಾಜ್ಙಾನವನ್ನು ಬೆಳಸಿಕೊಳ್ಳಲು ನೆರವಾಗುತ್ತವೆ ಎಂದರು ಪ್ರಾಧಿಕಾರದ ಸದಸ್ಯ ಡಾ. ಶರಣಬಸಪ್ಪ ಕೋಲ್ಕಾರ ಪ್ರಾಸ್ತಾವಿಕವಾಗಿ ಮಾತನಾಡುತ್ತ.‌ ಪುಸ್ತಕ ಸಂಸ್ಕೃತಿಯನ್ನು ಬೆಳೆಸುವ ಉದ್ದೇಶದಿಂದ 1993 ರಲ್ಲಿ ಪುಸ್ತಕ ಪ್ರಾಧಿಕಾರ ಸ್ಥಾಪನೆಯಾಗಿದೆ. ಹಿರಿಯ ಸಾಹಿತಿಗಳ ಸಮಗ್ರ ಸಾಹಿತ್ಯ ಪ್ರಕಟಣೆ, ಪ್ರಕಾಶಕರಿಗೆ ಪ್ರಶಸ್ತಿ, ಲೇಖಕರಿಗೆ ಪ್ರಶಸ್ತಿ, ಶಾಲಾ ಕಾಲೇಜುಗಳಿಗೆ ಉಚಿತ ಪುಸ್ತಕ ವಿತರಣೆ ಮನೆ ಮನೆಗೆ ಗ್ರಂಥಾಲಯ ಮುಂತಾದ ಕಾರ್ಯಯೋಜನೆಯನ್ನು ಹೊಂದಿದೆ. ಮತ್ತು ವಿದ್ಯಾರ್ಥಿಗಳಲ್ಲಿ ಪುಸ್ತಕ ಓದುವ ಸಂಸ್ಕೃತಿಯನ್ನು ಬೆಳೆಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಿದೆ ಎಂದರು. ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ನನ್ನ ಮೆಚ್ಚಿನ ಪುಸ್ತಕ ಕುರಿತು ಮಾತನಾಡಿದರು. ಸಂಸ್ಥೆಯ ಕಾರ್ಯದರ್ಶಿ ಶರಣೆಗೌಡ ಮಾಲೀಪಾಟೀಲ್ ಮತ್ತು ಸಹಾ ಕಾರ್ಯದರ್ಶಿ ಹೆಚ್.ಎಂ. ಮಂಜುನಾಥ ವಕೀಲರು ಉತ್ತಮವಾಗಿ ಮಾತನಾಡಿದ ಹತ್ತು ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು. ಪ್ರಾಚಾರ್ಯ ಡಾ.ರವಿ ಚವ್ಹಾಣ ಸ್ವಾಗತಿಸಿದರು. ವೇದಿಕೆಯಲ್ಲಿ ಸದಸ್ಯ ಕಮತಗಿ ಲಿಂಗಪ್ಪ, ಪ್ರಾಚಾರ್ಯರಾದ ವಿ.ಜಿ.ಯಾವಗಲ್, ಬಸವರಾಜ್ ಅಯೋಧ್ಯ ಉಪಸ್ಥಿತರಿದ್ದರು.

ಕೊಟ್ಟೂರು ನೇಕಾರರ ಸಹಕಾರ ಮತ್ತು ಮಾರಾಟ ಸಂಘಕ್ಕೆ ಅಧ್ಯಕ್ಷರಾಗಿ ವಕೀಲರು ಬಾವಿಕಟ್ಟಿ ಶಿವಾನಂದ ಆಯ್ಕೆ

Lawyer Bavikatti Sivananda elected as President of Kottoor Weavers Cooperative and Sales Association

ಕೊಟ್ಟೂರು ನೇಕಾರರ ಸಹಕಾರ ಉತ್ಪತ್ತಿ ಮತ್ತು ಮಾರಾಟ ಸಂಘದ ಅಧ್ಯಕ್ಷರಾಗಿ ಬಾವಿಕಟ್ಟಿ ಶಿವಾನಂದ, ಉಪಾಧ್ಯಕ್ಷರಾಗಿ ತೋಟದ ಹನುಮಂತಪ್ಪ ಗುರುವಾರ ಆಯ್ಕೆಯಾಗಿದ್ದು

ನೇಕಾರರ ಸಹಕಾರ ಉತ್ಪತ್ತಿ ಮತ್ತು ಮಾರಾಟ ಸಂಘಕ್ಕೆ ನಿರ್ದೇಶಕರಾಗಿ ವಿ ಎಸ್ ಕೊಟ್ರೇಶ್,ರಾಂಪುರ ಬಸವರಾಜ, ದೇವರೆಡ್ಡಿ ವೆಂಕಟೇಶ್ , ಗಂಜಿ ದಿನೇಶ, ಪಟ್ಟಶಾಲಿ ನಿಂಗರಾಜ, ತೂಲಹಳ್ಳಿ ಬೊಮ್ಮಪ್ಪ,ಕಾಸಲ ಕೊಟ್ರೇಶ್ , ವಿ ಶಿವರಾಜ್, ಪದ್ಮಾವತಿ ಆರ್ ,ಬಿ. ಸುನಂದಾ, ಅವಿರೋಧವಾಗಿ ಆಯ್ಕೆಯಾಗಿದ್ದು. ಅಧಿಕಾರಾವಧಿ ಐದು ವರ್ಷದ ವರೆಗೆ ಇರಲಿದೆ ಎಂದು ಚುನಾವಣಾಧಿಕಾರಿ ಎಚ್.ಸುರೇಶ ಪ್ರಮಾಣ ಪತ್ರ ನೀಡಿ ಪ್ರಕಟಿಸಿದರು.

ನಂತರ ನೂತನ ಅಧ್ಯಕ್ಷರಾದ ಬಾವಿಕಟ್ಟಿ ಶಿವಾನಂದ ಮಾತನಾಡಿ  ಉಪಾಧ್ಯಕ್ಷರು ಹಾಗೂ ಸರ್ವ ಸದಸ್ಯರು ನೇಕಾರರ ಸಹಕಾರ ಉತ್ಪತ್ತಿ ಮತ್ತು ಮಾರಾಟ ಸಂಘದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿ ಶ್ರಮಿಸುತ್ತೇವೆ ಎಂದು ತಿಳಿಸಿದರು

ಈ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯ ಎಂ.ಎಂ.ಜೆ.ಹರ್ಷವರ್ಧನ್, ಪ್ರಮುಖರಾದ ಬಾಚಿನಳ್ಳಿ ಗುರುಬಸವರಾಜ್‌, ಭಾವಿಕಟ್ಟಿ ಗುರುಬಸಪ್ಪ, ಬಾರಿಕರ ಮರಿಗೋಣಪ್ಪ, ಜವಳಿ ರಾಜಣ್ಣ, ಶಿವಕುಮಾರ್, ಲಾರಿ ಗುರುಬಸವರಾಜ್‌ ಹಾಗೂ ಸಂಘದ ಕಾರ್ಯದರ್ಶಿ ಹರೀಶ ಇತರರಿದ್ದರು.

ದೈರ್ಯವಿದ್ದರೇ ಈರಣ್ಣ ಅವರ ಮನೆಗೆ ಮುತ್ತಿಗೆ ಹಾಕಿ,,! ಬಿಜೆಪಿ ಮುಖಂಡ ವಿರೇಶ ಸಬರದ ಸವಾಲು

Besiege Eranna’s house if you have courage! BJP leader Viresh Sabar’s challenge

ವರದಿ : ಪಂಚಯ್ಯ ಹಿರೇಮಠ,,
ಕೊಪ್ಪಳ : ಗುರುವಾರದಂದು ಕಾಂಗ್ರೆಸ್ ಪಕ್ಷದಿಂದ ಕರೆದ ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ವಕ್ತಾರ ಸಂಗಮೇಶ ಗುತ್ತಿ ವೀರಣ್ಣ ಹುಬ್ಬಳ್ಳಿಯವರ ಬಗ್ಗೆ ಹಗುರವಾಗಿ ಮಾತನಾಡಿದ್ದು ಖಂಡನೀಯವಾಗಿದೆ ಗುತ್ತಿಯವರು ನಮ್ಮ ವೀರಣ್ಣ ಹುಬ್ಬಳ್ಳಿ ಕ್ಷಮೆಯಾಚಿಸಬೇಕು ಇಲ್ಲವೇ ಅವರ ಮನೆಗೆ ಮುತ್ತಿಗೆ ಹಾಕುತ್ತೇವೆ ಎಂದಿದ್ದಾರೆ ಅವರಿಗೆ ತಾಕತ್ತಿದ್ದರೇ ಮುತ್ತಿಗೆ ಹಾಕಲಿ ನೋಡೋಣ ಎಂದರು.

ಅವರು ಪಟ್ಟಣದ ಎಪಿಎಂಸಿಯ ಗೋಡೌನ ಒಂದರ ಆವರಣದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ರಾಜಕೀಯ ಎಂದ ಮೇಲೆ ಟೀಕೆ ಟಿಪ್ಪಣೆ ಇರುವುದು ಸಹಜ, ಆದರೆ ಮಾತನಾಡುವಾಗ ವೀರಣ್ಣ ಹುಬ್ಬಳ್ಳಿಯವರು ರಾಯರಡ್ಡಿಯವರಿಗೆ ಮಾನ್ಯರು ಎಂದು ಯಾವಾಗಲೂ ಸಂಬೋಧನೆ ಮಾಡಿ ಮಾತನಾಡುತ್ತಾರೆ ವಿನಃ ಎಂದು ಏಕವಚನದಲ್ಲಿ ಮಾತನಾಡುವುದಿಲ್ಲಾ ಎಂದರು.

ಆದರೆ ಗುತ್ತಿಯವರು ಹೇಳ್ತಾರೇ ನಮ್ಮ ಮನೆಯವರು ಹಾಗೂ ಪಕ್ಷದ ಹಿರಿಯರು ಮುಖಂಡರು ಗೌರವಯುತವಾಗಿ ಮಾತನಾಡುವುದನ್ನು ಕಲಿಸಿದ್ದಾರೆ ಎಂದು ಹೇಳುವ ನಿಮಗೆ ನಿಮ್ಮ ತಂದೆ ವಯಸ್ಸಿನ ವೀರಣ್ಣನವರಿಗೆ ಏಕ ವಚನದಲ್ಲಿ ಮಾತನಾಡಿದ್ದು ಸರಿಯೇ ಮೊದಲು ನೀವು ವೀರಣ್ಣನವರನ್ನು ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.

ಅವರು ನಮ್ಮ ಸಮಾಜದ ಹಿರಿಯರು ಹಾಗೂ ಜಿಲ್ಲಾಧ್ಯಕ್ಷರು ಅವರಿಗೆ ನೀವು ಈ ರೀತಿಯಾಗಿ ಮಾತನಾಡಿದ್ದು ನಮ್ಮ ಸಮಾಜ ಖಂಡಿಸುತ್ತದೆ ಮತ್ತು ಅವರನ್ನು ಕ್ಷಮೆ ಕೇಳುವಂತೆ ಆಗ್ರಹಿಸುತ್ತದೆ ಒಂದು ವೇಳೆ ನೀವು ಕ್ಷಮೆ ಕೇಳದಿದ್ಧರೇ ನಾವು ನಿಮ್ಮ ಮನೆಗೆ ಮುತ್ತಿಗೆ ಹಾಕುತ್ತೇವೆ ಎಂದು ಎಚ್ಚರಿಕೆ ನೀಡಿದರು.

ನಂತರ ಬಿಜೆಪಿ ನಗರ ಘಟಕ ಕಾರ್ಯದರ್ಶಿ ಕರಬಸಯ್ಯ ಬಿನ್ನಾಳ ಮಾತನಾಡಿ ಸಂಗಪ್ಪ ಗುತ್ತಿಯವರೇ ಮೊದಲು ನೀವು ಮಾತನಾಡುವ ರೀತಿ, ನೀತಿಗಳನ್ನು ಕಲಿತುಕೊಳ್ಳಿ, ನಿಮ್ಮ ಶಾಸಕರ ಆಡಳಿತ ಪಕ್ಷದಲ್ಲಿದ್ದಾಗ ನಮ್ಮ ಶಾಸಕ ಹಾಲಪ್ಪ ಆಚಾರ ಅವರ ಮನೆ ಮುಂದೆ ಸಿಸಿ ರಸ್ತೆ ಮಾಡಿದ್ದು ಯಾರಪ್ಪನ ಮನೆಯ ಸ್ವತ್ತಿನಿಂದ ಅಲ್ಲಾ ಎನ್ನುವುದು ತಿಳಿದು ಮಾತನಾಡಿ, ಹಾಲಪ್ಪನವರು ಮೊದಲ ಬಾರಿ ಮೂರು ಖಾತೆಗಳನ್ನು ನಿಭಾಯಿಸಿ ನಿಷ್ಠಾವಂತ ಸಚಿವರಾಗಿದ್ದರು. ಕೊಟ್ಟಂತ ಖಾತೆಗೆ ನ್ಯಾಯ ಒದಗಿಸಿ ರಾಜ್ಯದಲ್ಲಿ ಮಾದರಿಯಾಗಿದ್ದರು, ಅಂತಹ ಹಿರಿಯರ ಬಗ್ಗೆ ಮಾತನಾಡುವ ಮುನ್ನ ಬಾಯಿಗೆ ಲಗಾಮು ಹಾಕಿಕೊಂಡು ಮಾತನಾಡಿ ಇಲ್ಲದಿದ್ದರೇ ಪರಿಣಾಮ ಎದುರಿಸಬೇಕಾಗುವುದು ಎಚ್ಚರಿಕೆ ಎಂದರು.

ಈ ವೇಳೆ ಮುಖಂಡ ನಾಗಪ್ಪ ಕಲ್ಮನಿ ಮಾತನಾಡಿ ನಮ್ಮ ಪಕ್ಷದ ಹಿರಿಯ ನಾಯಕ ಕೇಂದ್ರ ಮಂತ್ರಿ ಅಮಿತ್ ಶಾ ಅವರು ಡಾ. ಬಿ ಆರ್ ಅಂಬೇಡ್ಕರ್ ಅವರ ಬಗ್ಗೆ ಮಾತನಾಡಿದ್ದು ನಾವು ಹಾಗೂ ನಮ್ಮ ಪಕ್ಷದವರು ಖಂಡಿಸುತ್ತೇವೆ. ಆದರೆ ಕಾಂಗ್ರೆಸ್ ನವರು ಅಂಬೇಡ್ಕರ್ ಅವರನ್ನು ನಡೆಸಿಕೊಂಡ ರೀತಿ ನೀತಿಗಳ ಕುರಿತು ಒಮ್ಮೆ ಅಧ್ಯಯನ ಮಾಡಿ ಮಾತನಾಡಬೇಕು. ಅಂಬೇಡ್ಕರ್ ಅವರ ಹೆಸರು ಹೆಳಲು ಕಾಂಗ್ರೆಸ್ ನವರ ಯೋಗ್ಯರಲ್ಲಾ ಎಂದರು.

ನಮಗೆ ಕೃಷಿ ಪತ್ತಿನ ಚುನಾವಣೆಗೆ 338 ಜನ ಮಾತ್ರ ಅರ್ಹ ಸದಸ್ಯರು ಎಂಬುದು ಗೊತ್ತಿತ್ತು, ಆದರೆ ಇನ್ನೂಳಿದಂತೆ ಸದಸ್ಯರು ಅರ್ಹರು, ಅನರ್ಹರು ಎಂಬುದು ಗೊತ್ತಿರಲಿಲ್ಲಾ, ಚುನಾವಣೆಯ ದಿನ ಬೆಳಗ್ಗೆ 9 ಗಂಟೆಗೆ 448 ಮತದಾರರು ಅರ್ಹರು ಎಂದು ಗೊತ್ತಾಗಿದ್ದೆ ಆಗ, ಆದರೆ ನಾವು ಚುನಾವಣೆ ಫಲಿತಾಂಶವನ್ನು ಅಂದೇ ಸಾಯಂಕಾಲ ಬಹಿರಂಗಗೊಳಿಸಿ ಎಂದು ಆರ್ ಓ ಅವರನ್ನು ಕೇಳಿದ್ದು ಇದಕ್ಕೆ ರಾಜಕೀಯ ತಂದವರೇ ಕಾಂಗ್ರೆಸ್ ನವರು ಇಲ್ಲದಿದ್ದರೇ ಅಂದೇ ಫಲಿತಾಂಶ ಹೊರ ಬಿಳತಿತ್ತು, ಒಟ್ಟಾರೇ ಇದನ್ನೆಲ್ಲಾ ಹದಗೇಡಿಸಿದ್ದು ಕಾಂಗ್ರೆಸ್ ನವರೇ ಎಂದು ಆರೋಪಿಸಿದರು.

ಈ ಸಂದರ್ಭದಲ್ಲಿ ಬಸವರಾಜ ಹಾಳಕೇರಿ, ಮಧು ಕಲ್ಮನಿ, ರಮೇಶ ಶಾಸ್ತ್ರೀ, ಶರಣಪ್ಪ ಕಾಳಿ, ರಾಜು ದ್ಯಾಂಪೂರ, ವಿನಾಯಕ ಸರಗಣಾಚಾರ, ಪ್ರಕಾಶ ಬೋರಣ್ಣವರ್, ಜಗದೀಶ ಸೂಡಿ, ಚಂದ್ರು ಬಗನಾಳ, ಬಸವರಾಜ ಬಡಗೇರ, ಮಂಜು ಚನ್ನಪ್ಪನಹಳ್ಳಿ, ಮಂಜು ಕಾಳಿ, ಲಕ್ಷ್ಮಣ ಕಾಳಿ ಇನ್ನಿತರರು ಇದ್ದರು.

ಹೊಸ ವರ್ಷವನ್ನು ಅರ್ಥಪೂರ್ಣವಾಗಿ ಆಚರಿಸಿದ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯವಿಶ್ವ ವಿದ್ಯಾಲಯ

Prajapita Brahmakumari Ishwariya Vishwa Vidyalaya celebrated the New Year meaningfully

.
ವರದಿ : ಬಂಗಾರಪ್ಪ .ಸಿ .
ಹನೂರು : ಪ್ರತಿಯೊಬ್ಬ ವ್ಯಕ್ತಿಯೂ ಅವರು ಮಾಡುವ ಕರ್ಮಕ್ಕೆ ತಕ್ಕ ಫಲವನ್ನು ಪಡೆಯುತ್ತಾರೆ. ಆದ ಕಾರಣ ಸದಾ ಭಗವಂತನ ನೆನಪಿನಿಂದ ಒಳ್ಳೆಯ ಕರ್ಮವನ್ನೇ ಮಾಡಬೇಕು. ಸದ್ಗುರುವಾದ ಶಿವತಂದೆಯನ್ನು ನೆನೆಪು ಮಾಡಲು, ಅವರ ಯಥಾರ್ಥ ಪರಿಚಯವನ್ನು ತಿಳಿದು ಸದ್ಗುರುವಿನ ಆಶೀರ್ವಾದಕ್ಕೆ ಪಾತ್ರರಾಗಬೇಕೆಂದು ರಾಜಯೋಗಿನಿ ಬ್ರಹ್ಮಾಕುಮಾರಿ ಪ್ರಭಾಮಣಿ ಬೆಹಂಜಿರವರು ತಿಳಿಸಿದರು .
ಹನೂರು ಪಟ್ಟಣದಲ್ಲಿನ ಬ್ರಹ್ಮಾಕುಮಾರಿ ವಿಶ್ವ ವಿದ್ಯಾಲಯದ ಶಾಖೆಯಲ್ಲಿ ಮಾತನಾಡಿದ ಅವರು ಮನುಷ್ಯನು ಆತ್ಮ ಮತ್ತು ಶರೀರ ಎರಡರಿಂದ ಮಾಡಲ್ಪಟ್ಟಿದೆ.ನಾನೊಂದು ಆತ್ಮ. ಆತ್ಮದಲ್ಲಿ ಮೂರು ಭಾಗಗಳಿವೆ, ಅವು ಮನಸ್ಸು, ಬುದ್ದಿ, ಸಂಸ್ಕರವಾಗಿದೆ.ನಾವು ಕೇವಲ ಸತ್ಕಾರ್ಯಗಳನ್ನು ಮಾಡುವುದರಿಂದ ಅದರ ಪುಣ್ಯದ ಫಲವನ್ನು ಪಡೆಯುತ್ತೇವೆ ಎಂದು ತಿಳಿಸಿದರು. ಇಂದು ಹಳೆಯ ವರ್ಷದ ಜೊತೆ ನಮ್ಮಹಳೆಯ ನಿಶ್ಶಕ್ತತೆಗೆ ವಿದಾಯಿ ಕೊಟ್ಟು, ಹೊಸ ವರ್ಷದಲ್ಲಿ ಹೊಸ ನವೀನತೆಯನ್ನು ತರಬೇಕಾಗಿ ತಿಳಿಸಿದರು.ಇದೇ ಸಂದರ್ಭದಲ್ಲಿ ಶ್ರೀ ಬಿಂದು ಅಕ್ಕನವರು ,ಸುಶೀಲಾ ಅಕ್ಕನವರು ,ಸಂತೋಷಣ್ಣ ನವರು, ಮೋಹನರವರು, ವೆಂಕಟೇಶಣ್ಣನವರು, ಮಲ್ಲೇಶಣ್ಣನವರು,ಪುಟ್ಟಸ್ವಾಮಿಣ್ಣನವರು ,ಸೇರಿದಂತೆ ಇನ್ನಿತರರು ಹಾಜರಿದ್ದರು

ಮೌಲಸಾಬ್ಜಿಪಿಎಲ್ ಸೀಜನ್ ನೈನ್ ಪಂದ್ಯಾವಳಿ ನಗರಸಭೆ ಅಧ್ಯಕ್ಷ ಮೌಲಸಾಬ್ ರಿಂದ ಉದ್ಘಾಟನೆ.

MoulasabGPL Season Nine Tournament Inaugurated by Municipal Chairman Moulasab

ಗಂಗಾವತಿ: ಇಂದು ಜಿ.ಪಿ.ಎಲ್ ಕ್ರಿಕೆಟ್ ಪಂದ್ಯಾವಳಿಯ ಉದ್ಘಾಟನೆ ಮಾಡಿ ಮಾತನಾಡಿ ದೈಹಿಕ ಮತ್ತು ಮಾನಸಿಕ ಸದೃಢತೆ ಹೊಂದಿದಾಗ ಮಾತ್ರ. ಕ್ರೀಡೆ ಆಡೋದು ಉತ್ತಮ: ಮೌಲಸಾಬ್ ನಗರಸಭೆ ಅಧ್ಯಕ್ಷರ ಸಲಹೆ ನೀಡಿದರು.

ಈ ಪಂದ್ಯಾವಳಿಯ ಉದ್ಘಾಟನೆ ಕಾರ್ಯಕ್ರಮವನ್ನು ಉದ್ದೇಶಿಸಿನಗರಸಭೆ ಅಧ್ಯಕ್ಷ ಮೌಲಸಾಬ್ ಮಾತನಾಡಿ. ದೈಹಿಕ ಚಟುವಟಿಕೆಯ
ಮುಂದುವರಿದ ಭಾಗವೇ ಕ್ರೀಡೆಯಾಗಿದ್ದು, ಪ್ರತಿಯೊಬ್ಬರೂಚಿಕ್ಕವಯಸ್ಸಿನಿಂದಲೇ ಕ್ರೀಡೆಯ ಬಗ್ಗೆ ಆಸಕ್ತಿ ಹಾಗೂ ಮಹತ್ವವನ್ನುಅರಿತುಕೊಳ್ಳಬೇಕಾದ ಅಗತ್ಯವಿದೆ ಎಂದು ಹೇಳಿದರು. ನಗರದ ಎಪಿಎಂಸಿ
ಪಕ್ಕದಲ್ಲಿರುವ ಸಿ.ಬಿ.ಎಸ್ ತಾಲೂಕ ಕ್ರೀಡಾಂಗಣದಲ್ಲಿ ಜಿಪಿಎಲ್ ಸೀಸನ್-೯ಆಯೋಜಿಸಲಾಗಿತ್ತು. ಅವರು ಗಂಗಾವತಿ ಪ್ರೀಮಿಯರ್ ಲೀಗ್ ಕ್ರಿಕೆಟ್ಪಂದ್ಯಾವಳಿಯ ಉದ್ಘಾಟನಾ ಸಮಾರಂಭದಲ್ಲಿ ಪಂದ್ಯಾವಳಿ ತಂಡಗಳಲೋಗೋ ಅನಾವರಣ ಮಾಡಿ ಮಾತನಾಡಿದರು. ಕ್ರೀಡಾಕೂಟಗಳಮಹತ್ವವನ್ನು ಅರಿತು ಕ್ರೀಡೆಗಳನ್ನು ಅಬಿವೃದ್ಧಿಪಡಿಸುವ
ಮನೋಭಾವ ಬೆಳೆಸಿಕೊಂಡು ಇಂದಿನ ಯುವಜನತೆಯುಕ್ರೀಡೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ದೈಹಿಕವಾಗಿಮತ್ತು ಮಾನಸಿಕವಾಗಿ ಸದೃಢರಾಗಬೇಕೆಂದರು.
ಅದೇ ರೀತಿಯಾಗಿ ನಗರಸಭೆ ಪೌರಾಯುಕ್ತ ಆರ್. ವಿರುಪಾಕ್ಷಪ್ಪಮೂರ್ತಿ ಟ್ರೋಫಿ ಅನಾವರಣಗೊಳಿಸಿ ಮಾತನಾಡಿ, ಎಲ್ಲಕ್ರೀಡಾಭಿಮಾನಿಗಳನ್ನು ಕ್ರೀಡಾಂಗಣದಲ್ಲಿ ಹಿಡಿದಿಟ್ಟುಕೊಳ್ಳುವ ಶಕ್ತಿಕ್ರಿಕೆಟ್ ಪಂದ್ಯಾವಳಿಗಿದೆ. ಕ್ರೀಡಾಭಿಮಾನಿಗಳಿಗೆ ಹಬ್ಬದ ವಾತಾವರಣವೇಸೃಷ್ಟಿಯಾಗಲಿದೆ. ಹಾಗಾಗಿ ಕ್ರಿಡಾಪಟುಗಳು ಕ್ರೀಡಾಮನೋಭಾವನೆಯಿಂದ ಭಾಗವಹಿಸಿ ಸೋಲು-ಗೆಲುವನ್ನು ಸಮನಾಗಿ
ಸ್ವೀಕರಿಸಬೇಕೆಂದು ಕ್ರೀಡಾಪಟುಗಳಿಗೆ ಹೇಳಿದರು ಮತ್ತು ನಂತರಕಪ್‌ಗಳನ್ನು ವೀಕ್ಷಣೆ ಮಾಡಿ ಎಲ್ಲಾ ಕ್ರೀಡಾಪಟುಗಳಿಗೆ ಶುಭಹಾರೈಸಿದರು.
ಈ ಜಿಪಿಎಲ್ ಪಂದ್ಯಾವಳಿಯಲ್ಲಿ ಒಟ್ಟು ಎಂಟು ತಂಡಗಳು ಭಾಗವಹಿಸಲಿವೆ.


ಇದರಲ್ಲಿ ಪ್ರಥಮ ಬಹುಮಾನ ರೂ. ೨ ಲಕ್ಷ, ದ್ವಿತೀಯ ಬಹುಮಾನ ೧

ಲಕ್ಷ, ತೃತೀಯ ಬಹುಮಾನ ೫೦,೦೦೦ ಇರುತ್ತದೆ. ಭಾಷಾ ಪಾಂಟಿಂಗ್,ಪರಂಜೋತಿ, ದೀಪಕ್ ಪಾಂಡೆ, ರಾಜ್ ಮೊಹಮ್ಮದ್ ರವರು ಈ ಪಂದ್ಯದಮುಖ್ಯ ಆಯೋಜಕರಾಗಿದ್ದು, ಪಂದ್ಯಾವಳಿಗಳು ನಾಳೆಯಿಂದಪ್ರಾರಭವಾಗಲಿವೆ.
ಈ ಸಂದರ್ಭದಲ್ಲಿ ನಗರಸಭೆಯ ಸಾಯಿ ಸಮಿತಿ ಅಧ್ಯಕ್ಷ ರಮೇಶ್ಚೌಡ್ಕಿ. ನಗರಸಭೆ ಸದಸ್ಯರಾದ ನವೀನ್ ಮಾಲಿಪಾಟೀಲ್ ಮತ್ತು ಮತ್ತೊಬ್ಬ ಈ
ಪಂದ್ಯಾವಳಿ ಆಯುಕ್ತರಾದ ಭಾಷೆಸಾಬ್, ನಗರಸಭೆ ಸದಸ್ಯಗಳಾದಉಮೇಶ್ ಸಿಂಗನಾಳ, ಪರಶುರಾಮ ಮಡ್ಡೇರ್, ಮುಸ್ತಾಕ್ ಅಲಿ, ಫಾರೂಕ್,ದಲಿತ ಮುಖಂಡ ದುರ್ಗೇಶ್, ಉಡಚಪ್ಪ, ಅರ್ಜುನ್ ಶ್ರೀರಾಮನಗರ, ಈ.ದೊಡ್ಡಮನಿ, ರಮೇಶ್ ಹೊಸಮಲಿ, ವಿರುಪಣ್ಣ ಹಿರೇಜಂತಕಲ್, ನವೀನ್,
ರಂಜಿತ, ಸಿರಾಜ್, ಹಜರತ್, ಬಸವ ಸೇರಿದಂತೆ ಅನೇಕ ಕ್ರಿಕೆಟ್ಕ್ರೀಡಾಭಿಮಾನಿಗಳು ಭಾಗವಹಿಸಿದ್ದರು.

ಸ್ಮಾರ್ಟ್‌ ಸಿಟಿ ಅಭಿಯಾನದಡಿ ನಡೆದಿರುವ ಕಾಮಗಾರಿಗಳ ತನಿಖೆಗೆ ಸಚಿವ ಬೈರತಿ ಸುರೇಶ ಸೂಚನೆ:

Thousands of devotees witnessed the Rathotsava of Male Madappa which was held with great enthusiasm.

ಬೆಂಗಳೂರು:– 02 ಜನವರಿ 2025: ಸ್ಮಾರ್ಟ್‌ ಸಿಟಿ ಅಭಿಯಾನದ ಅಡಿಯಲ್ಲಿ ರಾಜ್ಯದ 6 ಸ್ಮಾರ್ಟ್‌ ಸಿಟಿ (ಬೆಂಗಳೂರು ಹೊರತುಪಡಿಸಿ) ಯೋಜನೆಗಳಲ್ಲಿ ನಡೆದಿರುವ ಕಾಮಗಾರಿಗಳನ್ನು ಸಂಪೂರ್ಣ ತನಿಖೆಗೆ ನಡೆಸಿ ವರದಿ ನೀಡುವಂತೆ ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವರಾದ ಶ್ರೀ ಬಿ. ಎಸ್.‌ ಸುರೇಶ (ಬೈರತಿ) ಸೂಚಿಸಿದ್ದಾರೆ.

ಸ್ಮಾರ್ಟ್‌ ಸಿಟಿ ಅಭಿಯಾನದಡಿ ರಾಜ್ಯ ಬೆಳಗಾವಿ, ದಾವಣಗೆರೆ, ಹುಬ್ಬಳ್ಳಿ-ಧಾರವಾಡ, ಮಂಗಳೂರು, ಶಿವಮೊಗ್ಗ ಹಾಗೂ ತುಮಕೂರು ನಗರಗಳಲ್ಲಿ ನಡೆದಿರುವ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯನ್ನು ಸಚಿವ ಬೈರತಿ ಸುರೇಶ ರವರು ಇಂದು ವಿಧಾನಸೌಧದ ಕಚೇರಿಯಲ್ಲಿ ನಡೆಸಿದರು.

ಸ್ಮಾರ್ಟ್‌ ಸಿಟಿ ಅಭಿಯಾನ ಶೂರುವಾದಗಿನಿಂದ ಇಲ್ಲಿಯವರೆಗೂ ರಾಜ್ಯದ 7 ಸ್ಮಾರ್ಟ್‌ ಸಿಟಿಗಳಲ್ಲಿ ರೂ. 6415.51 ಕೋಟಿಗಳ ವೆಚ್ಚದ ಕಾಮಗಾರಿಗಳು ನಡೆದಿದ್ದು, ಪೂರ್ಣಗೊಂಡಿರುವ ಹಲವು ಕಾಮಗಾರಿಗಳು ಅಷ್ಟೊಂದು ತೃಪ್ತಿದಾಯಕವಾಗಿಲ್ಲವೆಂದು ತಿಳಿದು ಬಂದ ಕಾರಣ ಸಚಿವ ಬೈರತಿ ಸುರೇಶ ರವರು ಬೆಂಗಳೂರು ಹೊರತುಪಡಿಸಿ (ರೂ. 877.82 ಕೋಟಿ ರೂಪಾಯಿಗಳ ಕಾಮಗಾರಿ ಬೆಂಗಳೂರು ಸ್ಮಾರ್ಟ್‌ ಸಿಟಿಯಲ್ಲಿ ಪೂರ್ಣಗೊಂಡಿದ್ದು) ಇತರೆ 6 ಸ್ಮಾರ್ಟ್‌ ಸಿಟಿಗಳ ಯೋಜನೆಗಳ ಬಗ್ಗೆ ಸ್ವತಂತ್ರ ಸಂಸ್ಥೆ ಒಳಗೊಂಡಂತೆ ಸಮಿತಿ ರಚಿಸಿ ತನಿಖೆ ನಡೆಸಿ 3 ತಿಂಗಳ ಕಾಲಮಿತಿಯೊಳಗೆ ವರದಿಯನ್ನು ಸಲ್ಲಿಸುವಂತೆ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿಯವರಿಗೆ ಸಚಿವ ಬೈರತಿ ಸುರೇಶ ರವರು ಸೂಚಿಸಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರದ 50:50 ಅನುಪಾತದ ಅನುದಾನದಡಿಯಲ್ಲಿ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದು, ಬಹುತೇಕ ಕಾಮಗಾರಿಗಳು ಪೂರ್ಣಗೊಂಡಿದೆ. ನಡೆದಿರುವ ಕಾಮಗಾರಿಗಳಲ್ಲಿ ಬಹುತೇಕ ರಸ್ತೆ ನಿರ್ಮಾಣ, ಒಳಚರಂಡಿ, ಉದ್ಯಾನವನಗಳ ನಿರ್ಮಾಣ ಹಾಗೂ ದುರಸ್ಥಿ ಕಾರ್ಯಗಳಿಗೆ ಅನುದಾನವನ್ನು ವೆಚ್ಚ ಮಾಡಿರುವುದಕ್ಕೆ ಬೇಸರ ವ್ಯಕ್ತಪಡಿಸಿದ ಸಚಿವ ಬೈರತಿ ಸುರೇಶ ರವರು ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಮಪಾಲು ಅನುದಾನ ಇದಾಗಿದ್ದು, ಇದನ್ನು ಹೆಚ್ಚಿನ ರೀತಿಯಲ್ಲಿ ಸ್ಮಾರ್ಟ್‌ ಶಾಲೆಗಳು, ಆಸ್ಪತ್ರೆ, ಗ್ರಂಥಾಲಯ, ಬಸ್‌ ನಿಲ್ದಾಣ ಸೇರಿದಂತೆ ಶಾಶ್ವತ ಕಟ್ಟಡಗಳ ನಿರ್ಮಾಣಕ್ಕೆ ಒತ್ತು ನೀಡಬೇಕಾಗಿತ್ತು ಎಂದು ತಿಳಿಸಿದರು.

ಸ್ಮಾರ್ಟ್‌ ಸಿಟಿ ಅಭಿಯಾನದ ಅಡಿಯಲ್ಲಿ ನಡೆದಿರುವ ಕಾಮಗಾರಿಗಳು ಸರ್ಕಾರದ ಆಸ್ತಿಗಳನ್ನು ವೃದ್ಧಿಸುವಂತೆ ಇರಬೇಕೆ ಹೊರತು ರಸ್ತೆ ನಿರ್ಮಾಣ, ಚರಂಡಿ ಹಾಗೂ ಇತರೆ ಕಾಮಗಾರಿಗಳಿಗೆ ಬಳಸಿರುವುದು ಸರಿಯಾದ ಮಾರ್ಗವಲ್ಲವೆಂದು 6 ಸ್ಮಾರ್ಟ್‌ ಸಿಟಿ ವ್ಯವಸ್ಥಾಪಕ ನಿರ್ದೇಶಕರುಗಳಿಗೆ ಸೂಚಿಸಿದರು.

ಪ್ರತಿ ಸ್ಮಾರ್ಟ್‌ ಸಿಟಿಗೂ ಅಂದಾಜು ರೂ. 990 ಕೋಟಿಗಳ ಅನುದಾನ ಬಿಡುಗಡೆಯಾಗಿದ್ದು, ಇದರಲ್ಲಿ ಶೈಕ್ಷಣಿಕ ಶೇ. 2 ರಷ್ಟು, ಇಂಧನ ಶೇ. 8 ರಷ್ಟು, ಆರೋಗ್ಯ ಶೇ. 2 ರಷ್ಟು, ಮಾಹಿತಿ ತಂತ್ರಜ್ಞಾನಕ್ಕೆ ಶೇ. 8 ರಷ್ಟು ಒಟ್ಟಾರೆಯಾಗಿ ಶೇ. 20 ರಷ್ಟು ಅನುದಾನವನ್ನು ಕೆರೆ ಮತ್ತು ಉದ್ಯಾನವನ ಶೇ. 9 ರಷ್ಟು, ಮಾರುಕಟ್ಟೆ ಶೇ. 5 ರಷ್ಟು, ರಸ್ತೆ ನಿರ್ಮಾಣ ಶೇ. 36 ರಷ್ಟು, ಕ್ರೀಡಾ ವಲಯಕ್ಕೆ ಶೇ. 5 ರಷ್ಟು, ಸಾರಿಗೆ ವ್ಯವಸ್ಥೆಗೆ ಶೇ. 8 ರಷ್ಟು, ಇತರೆ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಶೇ. 18 ರಷ್ಟು ಅನುದಾನ ಹಂಚಿಕೆಯಾಗಿದ್ದು, ಈ ವಲಯಗಳಲ್ಲಿ ನಡೆದಿರುವ ಕಾಮಗಾರಿಗಳು ಬಹುತೇಕ ಪೂರ್ಣಗೊಂಡಿದ್ದು, ಅವುಗಳಲ್ಲಿ ಕೆಲವು ಸಮರ್ಪಕವಾಗಿ ನಡೆದಿಲ್ಲ ಎಂದು ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಚಿವರ ಗಮನಕ್ಕೆ ಬಂತು. ಈಗಾಗೀ ಒಟ್ಟಾರೆಯಾಗಿ ನಡೆದಿರುವ ಎಲ್ಲಾ ಕಾಮಗಾರಿಗಳನ್ನು ತನಿಖೆಗೆ ಒಳಪಡಿಸ ಬೇಕಾಗುತ್ತದೆ ಎಂದು ಸಚಿವ ಬೈರತಿ ಸುರೇಶ ರವರು ಸಭೆಯಲ್ಲಿ ತಿಳಿಸಿದರು.

2025 ಮಾರ್ಚ್‌ ಅಂತ್ಯಕ್ಕೆ ಸ್ಮಾರ್ಟ್‌ ಸಿಟಿ ಅಭಿಯಾನ ಮುಗಿಯಲಿದ್ದು, ಬರಬೇಕಾಗಿರುವ ಉಳಿಕೆ ಮೊತ್ತ ಹಾಗೂ ಹಾಲಿ ಉಳಿದಿರುವ ಮೊತ್ತದಲ್ಲಿ ಆಧುನಿಕ ತಂತ್ರಜ್ಞಾನದ ಅಂತರ್‌ರಾಷ್ಟ್ರೀಯ ಮಟ್ಟದ ಸ್ಮಾರ್ಟ್‌ ಶಾಲೆಗಳ ನಿರ್ಮಾಣಕ್ಕೆ ವಿನೀಯೋಗಿಸ ಬೇಕು. ಇದರಿಂದಾಗಿ ನಮ್ಮ ಬಡ ಮಕ್ಕಳು ಸಹ ಕಲಿಕೆಯಲ್ಲಿ ಮುಂದುವರೆಯ ಬೇಕು. ಇದಕ್ಕಾಗಿ ಅತ್ಯಾಧುನಿಕ ಕಲಿಕ ಸಾಮಗ್ರಿಗಳು ಸ್ಮಾರ್ಟ್‌ ಶಾಲೆಗಳಲ್ಲಿ ಒಳಗೊಳ್ಳಬೇಕು ಎಂದು ಸಚಿವ ಬೈರತಿ ಸುರೇಶ ರವರು ಅಭಿಪ್ರಾಯಿಸಿದರು.

ಬೆಳಗಾವಿ, ಹುಬ್ಬಳ್ಳಿ-ಧಾರವಾಡ ಮತ್ತು ಶಿವಮೊಗ್ಗ ಸ್ಮಾರ್ಟ್‌ ಸಿಟಿ ಯೋಜನೆಯಲ್ಲಿ ನಡೆದಿರುವ ಕಾಮಗಾರಿಗಳ ಬಗ್ಗೆ ಸ್ಥಳೀಯ ಜನ ಪ್ರತಿನಿಧಿಗಳು ಅಸಮಾಧಾನವನ್ನು ವ್ಯಕ್ತಪಡಿಸಿ ನನಗೆ ನೇರವಾಗಿ ಹೇಳಿದ್ದಾರೆ ಎಂದು ಸಚಿವರು ಸಭೆಯಲ್ಲಿ ತಿಳಿಸುತ್ತಾ, ಮುಂದೆ ಈ ರೀತಿ ಆಗಬಾರದೆಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

ಸ್ಮಾರ್ಟ್‌ ಸಿಟಿ ಅಭಿಯಾನದ ಅಡಿಯಲ್ಲಿ ರಾಜ್ಯದ 6 ಸ್ಮಾರ್ಟ್‌ ಸಿಟಿಗಳಲ್ಲಿ ಇಲ್ಲಿಯವರೆಗೂ ನಡೆದಿರುವ ಕಾಮಗಾರಿಗಳನ್ನು ತನಿಖೆಗೆ ಒಳಪಡಿಸಲು ಸಮಿತಿಯೊಂದನ್ನು ರಚಿಸಲು ಸಚಿವರು ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿಗೆ ಸೂಚಿಸುತ್ತಾ, ತನಿಖಾ ಸಮಿತಿಯಲ್ಲಿ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ, ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮದ ವ್ಯವಸ್ಥಾಪಕ ನಿರ್ದೇಶಕರು ಮತ್ತು ಮುಖ್ಯ ಅಭಿಯಂತರರು, ಲೋಕೋಪಯೋಗಿ ಇಲಾಖೆಯಿಂದ ಮುಖ್ಯ ಅಭಿಯಂತರ ದರ್ಜೆಯ ಒರ್ವ ಅಧಿಕಾರಿ ಹಾಗೂ ಆಯಾ ಸ್ಮಾರ್ಟ್‌ ಸಿಟಿ ವ್ಯಾಪ್ತಿಗಳಲ್ಲಿ ಬರುವ ವಿಶ್ವ ವಿದ್ಯಾನಿಲಯದ ತಾಂತ್ರಿಕ ಪರಿಣಿತರು ಮತ್ತು Indian Institute of Science ಸಂಸ್ಥೆಯಿಂದ ಒರ್ವ ಪರಿಣಿತಿ ತಜ್ಞರನ್ನು ಸಮಿತಿ ಒಳಗೊಳ್ಳಬೇಕು, ಅಗತ್ಯ ತನಿಖೆ ನಡೆಸಿ ಸಮಗ್ರವಾದ ವರದಿಯನ್ನು ಮೂರು ತಿಂಗಳ ಕಾಲಮಿತಿಯೊಳಗೆ ಸರ್ಕಾರಕ್ಕೆ ಸಲ್ಲಿಸಬೇಕು ಎಂದು ಸಚಿವರಾದ ಬಿ. ಎಸ್.‌ ಸುರೇಶ (ಬೈರತಿ) ಸೂಚಿಸಿದರು.

ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ದೀಪಾ ಚೋಳನ್, ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮದ ವ್ಯವಸ್ಥಾಪಕ ನಿರ್ದೇಶಕ ಬಿ. ಶರತ್‌, ಮುಖ್ಯ ಅಭಿಯಂತರ ನಂದೀಶ್‌, 6 ಸ್ಮಾರ್ಟ್‌ ಸಿಟಿಗಳ ವ್ಯವಸ್ಥಾಪಕ ನಿರ್ದೇಶಕರುಗಳು ಸೇರಿದಂತೆ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ಶ್ರೀರಾಮನಗರದಲ್ಲಿ ನಿರ್ಮಲ ತುಂಗಭದ್ರಾ ಅಭಿಯಾನದ ರಥ ಸ್ವಾಗತಿಸಿದ ಜನತೆ

ಗಂಗಾವತಿ: ಜನೇವರಿ-೮ ರಂದು ನಡೆಯಲಿರುವ ಸಮಾರೋಪ ಸಮಾರಂಭದ ಜಾಗೃತಿ ಕಾರ್ಯಕ್ರಮದ ಅಂಗವಾಗಿ ನಿರ್ಮಲ ತುಂಗಭದ್ರ ಅಭಿಯಾನದ ರಥ ಜ.೦೧ ರಂದು ಶ್ರೀರಾಮನಗರದಲ್ಲಿ ಚಾಲನೆಗೊಂಡಿತು. ಚಾಲನೆಯನ್ನು ಎಸ್.ಪಿ.ಎಸ್ ಬ್ಯಾಂಕ್ ಅಧ್ಯಕ್ಷ ಸಿ.ಹೆಚ್.ವಿ ರಾಮಕೃಷ್ಣ, ಮಾಜಿ ತಾಲೂಕ ಪಂಚಾಯತ ಆದ್ಯಕ್ಷ ಮಹಮ್ಮದ ರಫಿ, ಲಯನ್ಸ್ ಕ್ಲಬ್ ಅಧ್ಯಕ್ಷ ಸುಬ್ರಹ್ಮಣ್ಣೇಶ್ರರಾವ್ ಮತ್ತು ರೆಡ್ಡಿ ವೀರರಾಜು ನೆರವೇರಿಸಿದರು.
ನಿರ್ಮಲ ತುಂಗಭದ್ರಾ ಅಭಿಯಾನದ ಸಂಚಾಲಕರಾದ ಬಾಲಕೃಷ್ಣ ನಾಯ್ಡು, ಡಾ|| ಶಿವಕುಮಾರ ಮಾಲಿಪಾಟೀಲ್, ಲೋಕೇಶ್ವರಪ್ಪ, ರಾಘವೇಂದ್ರ ತೂನ, ಮಂಜುನಾಥ್ ಗುಡ್ಲಾನೂರ ಜನಜಾಗೃತಿ, ಜಲಜಾಗೃತಿ ಮತ್ತು ಸಮಾರೋಪ ಕಾರ್ಯಕ್ಕೆ ಆಗಮಿಸಿ ಈ ಸ್ವಚ್ಛತಾ ಆಂದೋಲನಕ್ಕೆ ಕೈ ಜೋಡಿಸಿ ಎಂದು ಕರೆ ನೀಡಿದರು.
ಶ್ರೀ ರಾಮನಗರದಲ್ಲಿ ಪ್ರತಿ ಓಣಿಯಲ್ಲಿ ಜಾಗೃತಿಯ ರಥ ಸಂಚರಿಸಿ ಜಾಗೃತಿ ಮೂಡಿಸಿತು. ಈ ವೇಳೆ ಗ್ರಾಮ ಪಂಚಾಯತಿ ಅಧ್ಯಕ್ಷ ಶಾಂತಪ್ಪ, ರಾಮಕೃಷ್ಣರಾಜು, ಜಿ. ರಾಮಕೃಷ್ಣ, ಕೆ. ವಿಜಯಭಾಸ್ಕರ್ ರೆಡ್ಡಿ, ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆಯ ಸರ್ವ ಸಿಬ್ಬಂದಿ, ವಿದ್ಯಾರ್ಥಿಗಳು, ಗ್ರಾ.ಪಂ ಅಭಿವೃದ್ದಿ ಅಧಿಕಾರಿ ನಾಗೇಶ ಕುರಡಿ, ಸಿಬ್ಬಂದಿ ಗಿರಿಧರ ಜೂರಟಗಿ, ಮುಖಂಡರಾದ ಶ್ರೀನಿವಾಸ ಬಿ., ರಮೇಶ ಕುಲಕರ್ಣಿ, ಸುಮಂಗಲಾ, ಪರಮೇಶಪ್ಪ, ತಾಯಪ್ಪ, ಯಲ್ಲಪ್ಪ, ಪರಮೇಶ್ವರಪ್ಪ, ಮಾರೆಪ್ಪ ಮುಂತಾದವರು ಇದ್ದರು.

ಬಿಜೆಪಿಯವರು ನಾಲಿಗೆಯ ಮೇಲೆ ಹಿಡಿತವಿಟ್ಟುಮಾತನಾಡುವುದನ್ನುಕಲಿಯಬೇಕಿದೆ : ಸಂಗಮೇಶ ಗುತ್ತಿ,,,

BJP needs to learn to hold its tongue: Sangamesh Gutti

ವರದಿ : ಪಂಚಯ್ಯ ಹಿರೇಮಠ.
ಕೊಪ್ಪಳ : ಬಿಜೆಪಿಯವರುನಾಲಿಗೆಗೆಎಲುಬಿಲ್ಲಾವೆಂದು ಬಾಯಿಗೆ ಬಂದಂತೆ ಮಾತನಾಡುವುದನ್ನು ಬೀಡಬೇಕು ಎಂದು ಕುಕನೂರು ಕಾಂಗ್ರೆಸ್ ವಕ್ತಾರ ಸಂಗಮೇಶ ಗುತ್ತಿ ಹೇಳಿದರು.

ಅವರು ಕುಕನೂರು ಪಟ್ಟಣದ ಎಪಿಎಂಸಿಯ ಗೊಡೌನ್ ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಮೊನ್ನೆ ಡಿ.29ರಂದು ನಡೆದ ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆ ರಾಜಕೀಯ ಪ್ರೇರಿತ ಚುನಾವಣೆಯಲ್ಲದಿದ್ದರೂ ಇದರಲ್ಲಿ ಬಿಜೆಪಿ ಪಕ್ಷದವರು ಗೊಂದಲ ಸೃಷ್ಠಿಸಿ ಮತ ಎಣಿಕೆಯಾಗದಂತೆ ಮಾಡಿದರು ಎಂದು ಆರೋಪಿಸಿದ ಅವರು, ಎರಡು ಬೂತ್ ನ ಮತಗಳನ್ನು ಎಣಿಕೆ ಮಾಡಲು ಸೂಚಿಸಿದರೇ ತಗಾದೇ ತೆಗೆದು ಪ್ರತಿಭಟನೆಗೆ ನಿಂತ ಬಿಜೆಪಿಗರು ಪ್ರತಿಭಟನೆ ನೆಪದಲ್ಲಿ ತಾಲೂಕಿನಲ್ಲಿ ಕಾಂಗ್ರೆಸ್ ಅಭಿವೃದ್ದಿ ಸಹಿಸದೇ ಬಾಯಿಗೆ ಬಂದಂತೆ ಮಾತನಾಡಿದರು. ಮೊದಲು ಮಾತನಾಡುವ ಸಂಸ್ಕೃತಿಯನ್ನು ಮಾಜಿ ಸಚಿವರು ಹಾಗೂ ಅವರ ಹಿಂಬಾಲಕರು ಕಲಿಯಬೇಕು ಎಂದು ಎಚ್ಚರಿಸಿದರು.

ಹುಬ್ಬಳ್ಳಿ ಈರಣ್ಣ ಎನ್ನುವ ಬಿಜೆಪಿ ಹಿರಿಯ ವಕ್ತಾರ ಎಲ್ಲಿ, ಯಾರಿಗೆ, ಹೇಗೆ ಮಾತನಾಡಬೇಕು ಎನ್ನುವುದನ್ನು ಕಲಿಯಬೇಕು, ತಾವು ತಮ್ಮ ಹಿರಿತನಕ್ಕೆ ತಕ್ಕಂತೆ ಸೌಜನ್ಯ ರೀತಿಯಲ್ಲಿ ಮಾತನಾಡದೇ ಸಭೆಯಲ್ಲಿ ಅವಾಚ್ಯ ಪದಗಳನ್ನು ಹಗುರವಾಗಿ ಮಾತನಾಡುವುದನ್ನು ನಿಲ್ಲಿಸಬೇಕು. ನಮಗೂ ಮಾತನಾಡಲು ಬರುತ್ತದೆ ನಾವು ಅಷ್ಟು ಕೀಳ ಮಟ್ಟಕ್ಕೆ ಇಳಿದು ಮಾತನಾಡುವುದಿಲ್ಲಾ, ನಮಗೆ ನಮ್ಮ ಮನೆಯವರು ಹಾಗೂ ಪಕ್ಷದ ಹಿರಿಯರು ಮಾತಿನ ಸಂಸ್ಕೃತಿಯನ್ನು ಕಲಿಸಿದ್ದಾರೆ ಎಂದರು.

ನೀವು ಸಹ ಶಾಸಕ ಸಚಿವ ಸ್ಥಾನದಲ್ಲಿ ಮೂರು ಹುದ್ದೆಗಳನ್ನು ನಿಭಾಯಿಸಿ ಆಡಳಿತ ನಡೆಸಿದ್ದೀರಿ ನೀವು ಅಧಿಕಾರದಲ್ಲಿದ್ದಾಗ ತಾಲೂಕಿಗೆ ಏನು ಕಿತ್ತು ಗುಡ್ಡೆ ಹಾಕಿದ್ದಿರಿ, ತಾಲೂಕಿನಲ್ಲಿ ಏನು ಅಭಿವೃದ್ದಿ ಮಾಡಿದ್ದಿರಿ ಎನ್ನುವುದನ್ನು ಆತ್ಮಾವಲೋಕನ ಮಾಡಿಕೊಳ್ಳಿ ಎಂದು ಹಾಲಪ್ಪ ಆಚಾರ್ ಗೆ ಸಂಗಮೆಶ ಗುತ್ತಿ ತಿರುಗೇಟು ನೀಡಿದರು.

ನಮ್ಮ ಶಾಸಕ ಬಸವರಾಜ ರಾಯರಡ್ಡಿ ಆಡಳಿತಾವಧಿಯಲ್ಲಿ ಮಾಡಿದ ಕೆಲಸಗಳನ್ನೇ ನಿಮಗೆ ಉಳಿಸಿ ಬೆಳಸಲಾಗಲಿಲ್ಲಾ ನಮ್ಮ ಶಾಸಕರು ಚಿಲ್ಲರೇ ಕೆಲಸ ಮಾಡವಷ್ಟು ಹೀನ ಪ್ರವೃತ್ತಿಯವರಲ್ಲಾ ಅವರು ತಾಲೂಕಿನಲ್ಲಿ ಮಾಡುತ್ತಿರುವ ಅಭಿವೃದ್ದಿ ನಿಮಗೆ ಸಹನೆ ಇಲ್ಲಾ ಅದಕ್ಕೆ ಮನ ಬಂದಂತೆ ನೀವು ನಿಮ್ಮ ಹಿಂಬಾಲಕರು ಭ್ರಮೆಗೊಂಡು ಮಾತನಾಡುತ್ತಿದ್ದಾರೆ ಎಂದರು.

ಶಾಸಕ ಬಸವರಾಜ ರಾಯರಡ್ಡಿ ನಲವತ್ತು ವರ್ಷ ಆಡಳಿತಾವಧಿಯಲ್ಲಿ ತಾಲೂಕಿಗೆ ಏನು ಕೊಡುಗೆ ನೀಡಿದ್ದಾರೆ, ನಮ್ಮ ತಾಲೂಕು ಯಾರಿಂದ ಅಭಿವೃದ್ದಿಯಾಗಿದೆ ಎನ್ನುವುದು ನಮ್ಮ ತಾಲೂಕಿನ ಮತದಾರರಷ್ಟೇ ಅಲ್ಲಾ ರಾಜ್ಯದ ಜನ ಹೇಳುತ್ತಿದ್ದಾರೆ. ಯಾರೋ ಏನೋ ಎಂದರು ಅಂದರೆ ನಮ್ಮದೇನು ಹಾಳಾಗುವುದಿಲ್ಲಾ, ಆನೆ ಹೋಗ್ತಿರುತ್ತೆ ಶ್ವಾನ ಬೋಗಳ್ತಿರುತ್ತೆ ಅಂತ ಆನೆ ತಲೆ ಕೆಡಸಿಕೊಳ್ಳೊದಿಲ್ಲಾ ಎಂದು ವ್ಯಂಗವಾಗಿ ತಿರುಗೇಟು ಟಾಂಗ್ ನೀಡಿದರು.

ಎಪಿಎಂಸಿ ಆವರಣದಲ್ಲಿ ಭಜನೆ ಮಾಡಿದವರು ಮುಂದೆಯು ಭಜನೆಯನ್ನೇ ಮಾಡಲಿದ್ದಾರೆ ಎಂದು ವ್ಯಂಗ್ಯವಾಡಿ ಅವರಿಗೆ ಕಾನೂನು, ಸಂವಿಧಾನ ಎಂದರೇ ಏನು ಎನ್ನುವುದು ಗೊತ್ತಿಲ್ಲಾ ಮತ್ತು ಇವರ ಬಿಜೆಪಿ ಹಿರಿಯ ಹಾಗೂ ಕೇಂದ್ರ ಮಂತ್ರಿ ಅಮಿತ್ ಶಾ ಅವರು ಕೂಡಾ ನಾಲಿಗೆ ಹಿಡಿತವಿಲ್ಲದವರು ಅವರು ಸಂವಿಧಾನ ಶಿಲ್ಪಿ ಡಾ. ಬಿ. ಆರ್ ಅಂಬೇಡ್ಕರ್ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ ಅವರು ಕೂಡಾ ಕ್ಷಮೆಯಾಚಿಸಬೇಕು ಎಂದು ಈ ಸಂದರ್ಭದಲ್ಲಿ ಆಗ್ರಹಿಸಿದರು.

ನಂತರ ಸಿದ್ದಯ್ಯ ಕಳ್ಳಿಮಠ ಮಾತನಾಡಿ ಕೃಷಿ ಪತ್ತಿನ ಚುನಾವಣೆಯಲ್ಲಿ ಗೆದ್ದರೇ ನಮಗೇನು ಇಂದ್ರನ ಪದವಿ ದೊರೆಯುತ್ತದೆ ಎಂದು ನಾವು ಚುನಾವಣೆಗೆ ಸ್ಪರ್ಧಿಸಿಲ್ಲಾ, ಅಲ್ಲಿರುವ ಭ್ರಷ್ಟಾಚಾರವನ್ನು ಬಹಿರಂಗ ಪಡಿಸಲು ಚುನಾವಣೆಗೆ ಸ್ಪರ್ಧಿಸಿದ್ದೇವೆ, 1700 ಸದಸ್ಯರ ಮತದಾನ ಹಕ್ಕು ಇದ್ದದ್ದನ್ನು ಕೇವಲ 300 ಸದಸ್ಯರ ಮತದಾನ ಹಕ್ಕನ್ನು ಮಾಡಿಕೊಂಡವರು ತಮಗೆ ಬೇಕಾದವರಿಗೆ ಮಾತ್ರ ಮತದಾನ ನೀಡುತ್ತಿದ್ದರಿಂದ ನಾವು ಸಹ ಕಾನೂನು ಚೌಕಟ್ಟಿನಲ್ಲಿ ರೈತಪರ ಕಾಳಜಿಯಿಂದ ಸ್ಪರ್ಧೆಗೆ ಇಳಿದಿದ್ದೇವು.

ಆದರೆ ಯಲಬುರ್ಗಾ ಬಿಜೆಪಿ ವಕ್ತಾರ ಈರಣ್ಣ ಹುಬ್ಬಳ್ಳಿ ಶಾಸಕರಿಗೆ ಹಾಗೂ ಕಾಂಗ್ರೆಸ್ ಕಾರ್ಯಕರ್ತರಿಗೆ ಬಾಯಿಗೆ ಬಂದಂತೆ ಅವಾಚ್ಯ ಪದಗಳನ್ನಾಡಿದ್ದು ಅವರು ಕೂಡಲೇ ಬಹಿರಂಗವಾಗಿ ಕ್ಷಮೆಯಾಚಿಸಬೇಕು ಇಲ್ಲವಾದಲ್ಲಿ ಅವರ ಮನೆಗೆ ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿ ಪಟ್ಟಣದ ಪೋಲಿಸ್ ಇಲಾಖೆಗೆ ತೆರಳಿ ಪಿಎಸ್ಐ ಟಿ. ಗುರುರಾಜ ಅವರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಸುಧೀರ ಕೊರ್ಲಳ್ಳಿ, ಗಗನ್ ನೋಟಗಾರ, ಮುತ್ತು ವಾಲ್ಮೀಕಿ, ಯಮನೂರಪ್ಪ ಕಟ್ಟಿಮನಿ, ರಫಿ ಮಂಡಲಗಿರಿ, ಹಂಪಯ್ಯ ಹಿರೇಮಠ, ದಾನರಡ್ಡಿ, ರಾಮಣ್ಣ ಬಂಕದಮನಿ, ವೀರಯ್ಯ ತೋಂಟದಾರ್ಯಮಠ, ಕೆರಿಬಸಪ್ಪ ನಿಡಗುಂದಿ, ಶಿವಾನಂದ ಬಣಕಾರ, ಪ್ರಶಾಂತ ಆರಬೆರಳಿನ, ಅಶೋಕ ತೋಟದ, ದಸ್ತಗಿರಸಾಬ ರಾಜೂರ, ರಫಿ ಹಿರೇಹಾಳ, ನಿಂಗಪ್ಪ ಗೊರ್ಲೆಕೊಪ್ಪ ಇನ್ನಿತರರು ಇದ್ದರು.

ವಿದ್ಯಾರ್ಥಿಗಳು ತಮ್ಮ ಮನೆಯಲ್ಲಿ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ

Students should take care of their health at home

ಗಂಗಾವತಿ,ವಿದ್ಯಾರ್ಥಿಗಳು ತಮ್ಮ ಮನೆಯಲ್ಲಿ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಕ್ಷಯ ರೋಗದ ಲಕ್ಷಣಗಳು ಕಂಡು ಬಂದಾಗ ಸರ್ಕಾರಿ ಆಸ್ಪತ್ರೆಗೆ ಪರೀಕ್ಷೆಗಳಿಗಾಗಿ ಕಳುಹಿಸಿಕೊಡಬೇಕು ಎಂದು ವೈದ್ಯಾಧಿಕಾರಿ ಡಾ. ಸಂತೋಷ್ ಕುಮಾರ್ ರವರು ತಿಳಿಸಿದರು. ಅವರು ಜಿಲ್ಲಾ ಕ್ಷಯ ರೋಗ ನಿರ್ಮೂಲನ ಕಾರ್ಯಾಲಯ, ಕೊಪ್ಪಳ, ತಾಲೂಕ ಆರೋಗ್ಯ ಅಧಿಕಾರಿಗಳ ಕಚೇರಿ, ಉಪ ವಿಭಾಗ ಆಸ್ಪತ್ರೆ ಗಂಗಾವತಿ, ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಂಗಾಪುರ ಸಹಯೋಗದೊಂದಿಗೆ ಶಾಲಾ ವಿದ್ಯಾರ್ಥಿಗಳಿಗೆ 100 ದಿನಗಳ ಕ್ಷಯ ಮುಕ್ತ ಕೊಪ್ಪಳ ಅಭಿಯಾನ ದ ಅಂಗವಾಗಿ ನಡೆದ ಪ್ರಬಂಧ ಸ್ಪರ್ಧೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ರಾಷ್ಟ್ರದಾದ್ಯಂತ ನಡೆಯುತ್ತಿರುವ 100 ದಿನಗಳ ಕ್ಷಯ ಮುಕ್ತ ಅಭಯಾನದ ಅಡಿಯಲ್ಲಿ ಸಮುದಾಯದಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.
6, 7 ಮತ್ತು 8ನೇ ತರಗತಿಯ ವಿದ್ಯಾರ್ಥಿಗಳು ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿ, ಕ್ಷಯ ರೋಗದ ಕುರಿತು ಸವಿಸ್ತಾರವಾಗಿ ತಮ್ಮ ವಿಚಾರಗಳನ್ನು ಮಂಡಿಸಿದರು.
ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಕ್ಷಯ ಘಟಕ ಗಂಗಾವತಿಯ ಹಿರಿಯ ಚಿಕಿತ್ಸಾ ಮೇಲ್ವಿಚಾರಕ ಶ್ರೀ ಹುಸೇನ್ ಭಾಷಾ, ಕ್ಷಯ ರೋಗ ಆರೋಗ್ಯ ಪರಿವೀಕ್ಷಕ ಶ್ರೀ ಮಲ್ಲಿಕಾರ್ಜುನ್ ಇವರುಗಳು ಕ್ಷಯ ರೋಗದ ತೀವ್ರತೆ, ರೋಗ ಹರಡುವ ರೀತಿ, ಪರೀಕ್ಷಾ ವಿಧಾನಗಳು ಚಿಕಿತ್ಸಾ ಪದ್ಧತಿ ತಡೆಗಟ್ಟುವ ವಿಧಾನಗಳ ಬಗ್ಗೆ ಮಾಹಿತಿ ನೀಡಿದರು.
ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಮಲ್ಲಿಕಾ, ದ್ವಿತೀಯ ಬಹುಮಾನ ಗೋವಿಂದರಾಜು ಹಾಗೂ ತೃತೀಯ ಬಹುಮಾನ ಕಾವೇರಿ ಪಡೆದರು.
ಕಾರ್ಯಕ್ರಮದಲ್ಲಿ ಆಸ್ಪತ್ರೆಯ ಸಿಬ್ಬಂದಿಗಳಾದ ವೆಂಕಟೇಶ್ ಲಕ್ಷ್ಮಿ ಪ್ರಸನ್ನ ಸುನಿತಾ ಸೌಭಾಗ್ಯ ನಾಗವೇಣಿ ಹಾಗೂ ಶಾಲೆಯ ಮುಖ್ಯ ಗುರುಗಳು ಹಾಗೂ ಶಿಕ್ಷಕರಾದ ಶ್ರೀ ಮೈಲಾರಪ್ಪ ಶ್ರೀಮತಿ ಖುತಿಜ ಶ್ರೀ ಚಂದ್ರಶೇಖರ್ ಶ್ರೀ ರಮೇಶ್ ಬಂಡಿ ಶ್ರೀಮತಿ ಅಕ್ಕಮಹಾದೇವಿ ಕುಮಾರಿ ಕಾವ್ಯ ಶ್ರೀಮತಿ ಲಕ್ಷ್ಮಿ ಇದ್ದರು.

ದಮ್ಮೂರಿನಲ್ಲಿ ೩೬೯ ನೇ ಶಿವಾನುಭವ ಗೋಷ್ಠಿ

369th Shivanubhava Concert at Dammur




ಯಲಬುರ್ಗಾ : ಸಜ್ಜನರ ಸಂಗದಿಂದ ಹೆಜ್ಜೆನು ಸವಿಯಬಹುದು ,ಒಳ್ಳೆಯ ಆಚಾರ, ವಿಚಾರ ನಡೆ ನುಡಿಯಿಂದ ಪ್ರೀತಿ ಪ್ರೇಮದಿಂದ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾದ್ಯ ಎಂದು ಸ.ಪ್ರೌ.ಶಾಲೇಯ ಮು.ಗುರು ಎಫ್.ಎಂ.ಕಳ್ಳಿ ಅವರು ಮಾತನಾಡಿ ಸಜ್ಜನರ ಸಂಗದೋಡನೆ ಬೆರೆತಾಗ ಸಂಸ್ಕಾರ ಸಂಸ್ಕೃತಿಯನ್ನು ಪಡೆಯುವದಕ್ಕೆ ಸಾಧ್ಯವಾಗುತ್ತದೆ ಎಂದರು. ಮನುಷ್ಯ ಸಂಗಜೀವಿ ಅದರಂತೆ ಎಲ್ಲಾ ಪ್ರಾಣಿಗಳು ಸಹಿತ ಸಂಗ ಜೀವಿಗಳೆ, ಅದರಲ್ಲಿ ಮನುಷ್ಯ ಬುದ್ದಿಜೀವಿ ಈ ಮನುಷ್ಯ ಸಂಗ ಪರಿಹಾರವನ್ನು ಬಿಟ್ಟು ಸಮಾಜದಲ್ಲಿ ಬದುಕಲಾರ ಸುಖ ದುಃಖಗಳನ್ನು ಹಂಚಿಕೊಳ್ಳುವದಕ್ಕೆ ವ್ಯಕ್ತಿಗಳು ಬೇಕು ,ಸ್ನೇಹ ಪ್ರೀತಿಗಾಗಿ ಉತ್ತಮ ಸಂಗ ಬೇಕು ,ಉತ್ತಮರ ಸಂಗ ಹಾಲು ಜೇನು ಇದ್ದಂತೆ , ವ್ಯಕ್ತಿಗಳಿಗೆ ಉತ್ತಮ ಶಿಕ್ಷಣ ಕೊಟ್ಟಾಗ ಅವರು ಸಂಸ್ಕಾರ ಸಂಸ್ಕೃತಿಯನ್ನು ಜಿವನದಲ್ಲಿ ಅಳವಡಿಸಿಕೊಂಡು ಕಷ್ಟದಲ್ಲಿರುವ ವ್ಯಕ್ತಿಗಳಿಗೆ ಸಹಾಯ ಸಹಕಾರ ನಿಡುವ ದಯ ಗುಣಗಳನ್ನು ಪಡೆದುಕೊಂಡು ಪರೋಪಕಾರಿ ಕಾರ್ಯಗಳನ್ನು ಮಾಡುವದಕ್ಕೆ ಸಾದ್ಯ ಎಂದುಮರಕಟ್ಟಿಯ ಶರಣ ಅಂಬರೇಷಪ್ಪ ಬಳ್ಳಾರಿ ಅವರು ಯಲಬುರ್ಗಾ ತಾಲೂಕಿನ ದಮ್ಮೂರ ಗ್ರಾಮದ ಶ್ರೀ ಭೀಮಾಂಬಿಕಾ ದೇವಿ ದೇವಸ್ಥಾನದಲ್ಲಿ ಚತುರ್ದಶಿ ಅಂಗವಾಗಿ ಹಮ್ಮಿಕೊಂಡಿರುವ ೩೬೯ ನೇ ಶಿವಾನುಭವಗೋಷ್ಠಿಯಲ್ಲಿ ಮಾತನಾಡಿದರು. ಚಿಂತನ ಗೋಷ್ಠಿಯಲ್ಲಿ , ಶ್ರೀ ಭೀಮಾಂಬಿಕಾ ದೇವಿ ಶಿವಾನುಭವ ಸೇವಾ ಸಮಿತಿ ಅಧ್ಯಕ್ಷ ಶರಣಬಸಪ್ಪ, ದಾನಕೈ ಅವರು ಅಧ್ಯಕ್ಷತೆ ವಹಿಸಿ ಸಜ್ಜನರ ಸಂಗದಿಂದ ಬದುಕು ಬಾಳು ಬಂಗಾರವಾಗುತ್ತದೆ ಹೂವಿನ ಜೋತೆ ದಾರ ಸಂಗ ಮಾಡಿದಾಗ ದೇವರ ಪೂಜೆಗೆ, ಗುರುವಿನ ಪಾದಕ್ಕೆ ಅರ್ಪಿತವಾಗುತ್ತದೆ ಇದರಿಂದ ಉತ್ತಮರಾಗಲು ಸಾದ್ಯ ಎಂದರು. ಧರ್ಮರಮಠದ ಹನುಮಂತಪ್ಪಜ್ಜ ಹಾಗೂ ಶರಣಯ್ಯ ಹಿರೇಮಠ , ಸಾನಿಧ್ಯ ವಹಿಸಿದ್ದರು. ಈ ವೇಳೆ ಸ.ಮಾ.ಹಿ.ಪ್ರಾ.ಶಾಲೆಯ ಮು.ಗುರು ಕನಕಪ್ಪ ಕಂಬಳಿ, ಕಲಾವಿದರ ಒಕ್ಕೂಟ ಸಂಘದ ಅಧ್ಯಕ್ಷ ಕಳಕಪ್ಪ ತೊಂಡಿಹಾಳ,ವಕೀಲರಾದ ಪ್ರಕಾಶ ಉಪ್ಪಾರ,ಮಲ್ಲನಗೌಡ ಪಾಟಲ, ಮುಖಂಡರಾದ ಹನುಮಗೌಡ್ರ ಬಳ್ಳಾರಿ ,ಹನುಮಂತಪ್ಪ ಹುಣಶ್ಯಾಳ,ಮಲ್ಲನಗೌಡ ನಿಡಗುಂದಿ,ಯಮನೂರಪ್ಪ ಚಿಕ್ಕಗೌಡ್ರ,ಭೀಮಣ್ಣ ಹವಳಿ,ಶೇಖರಗೌಡ ದ್ಯಾಮನಗೌಡ್ರ,ದುರಗೇಶ ಹರಿಜನ ,ಡಾ.ಪ್ರಕಾಶ ರಾವಣಕಿ, ನೀಲಕಂಠಪ್ಪ ರೋಡ್ಡರ, ಕಳಕಪ್ಪ ಹಡಪದ, ಯಮನೂರಪ್ಪ ಹಳ್ಳಿಕೇರಿ ಸಂಗೀತ ಸೇವೆ ನಿಡಿದರು. ಮರಕಟ್ಟ ಹಾಗು ದಮ್ಮೂರ ಸೇರಿದಂತೆ ಇತರ ಭಕ್ತರು ಇದ್ದರು.