Breaking News
ಎಸ್.ಎಸ್.ಎಲ್.ಸಿ ಫಲಿತಾಂಶ ಸುಧಾರಣೆ ಪ್ರಗತಿ ಪರಿಶೀಲನಾ ಸಭೆ

ಎಸ್.ಎಸ್.ಎಲ್.ಸಿ ಫಲಿತಾಂಶ ಸುಧಾರಣೆ ಪ್ರಗತಿ ಪರಿಶೀಲನಾ ಸಭೆ

SSLC Result Improvement Progress Review Meeting

ಮಕ್ಕಳಿಗೆ ಸರಳೀಕರಿಸಿ ಪಾಠಮಾಡಿ- ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ

ಕೊಪ್ಪಳ ಡಿಸೆಂಬರ್ 16 (ಕರ್ನಾಟಕ ವಾರ್ತೆ): ಎಸ್.ಎಸ್.ಎಲ್.ಸಿ ಫಲಿತಾಂಶ ಸುಧಾರಣೆಗೆ ಶಿಕ್ಷಕರು ಕಠಿಣ ವಿಷಯಗಳನ್ನು ಸರಳೀಕರಿಸಿ ಮಕ್ಕಳಿಗೆ ಸುಲಭವಾಗಿ ತಿಳಿಯುವ ಹಾಗೆ ಪಾಠ ಬೋಧನೆ ಮಾಡಬೇಕೆಂದು ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ ಹೇಳಿದರು.
 ಅವರು ಮಂಗಳವಾರ ಕೊಪ್ಪಳ ಜಿಲ್ಲಾ ಪಂಚಾಯತ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಕೊಪ್ಪಳ ಜಿಲ್ಲೆಯ ಎಲ್ಲಾ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು, ದತ್ತು ಶಾಲೆ ಹಾಗೂ ಎಸ್.ಎಸ್.ಎಲ್.ಸಿ ತಾಲ್ಲೂಕು ನೋಡಲ್ ಅಧಿಕಾರಿಗಳು ಮತ್ತು ಜಿಲ್ಲೆಯ ಎಲ್ಲಾ ಸರಕಾರಿ ಹಾಗೂ ಅನುದಾನಿತ ಪ್ರೌಢ ಶಾಲೆಯ ಮುಖ್ಯ ಶಿಕ್ಷಕರಿಗೆ ಕರೆದ 2025-26ನೇ ಸಾಲಿನ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷಾ ಫಲಿತಾಂಶದ ಸುಧಾರಣೆ ಕುರಿತ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.
 ಮಕ್ಕಳಿಗೆ ಸರಿಯಾಗಿ ತಿಳಿಯುವ ರೀತಿಯಲ್ಲಿ ವಿಶೇಷ ಕೌಶಲ್ಯಗಳನ್ನು ಉಪಯೋಗಿಸಿ ಪಾಠ ಮಾಡಿದರೆ ಅವರು ತಮ್ಮ ತರಗತಿಯಲ್ಲಿ ಆಸಕ್ತಿಯಿಂದ ಕುಳಿತು ತಾವು ಹೇಳುವ ಪಾಠವನ್ನು ಕಲಿಯುತ್ತಾರೆ. ನಾವು ಕಲಿಯುವ ಅಂದಿನ ದಿನಮಾನಗಳಲ್ಲಿ ಶಿಕ್ಷಕರು ಮಕ್ಕಳನ್ನು ತಮ್ಮ ಮಕ್ಕಳಂತೆ ತಿಳಿದು ವಿಶೇಷ ಕಾಳಜಿವಹಿಸಿ ಅವರಿಗೆ ಪಾಠ ಮಾಡುತ್ತಿದ್ದರು. ಗಣಿತ, ಹಳೆಗನ್ನಡ ಸೇರಿದಂತೆ ಇತರೆ ಕಠಿಣ ವಿಷಯಗಳನ್ನು ಸರಳೀಕರಿಸಿ ಪಾಠ ಮಾಡಿದಾಗ ಆ ವಿಷಯ ಮಕ್ಕಳ ತಲೆಯಲ್ಲಿ ಸುಲಭವಾಗಿ ಹೋಗುತ್ತದೆ ಎಂದರು.
 ಜಿಲ್ಲೆಯ ಎಸ್.ಎಸ್.ಎಲ್.ಸಿ ಫಲಿತಾಂಶ ಸುಧಾರಣೆಗೆ ಶಿಕ್ಷಕರು ವಿಶೇಷ ಒತ್ತು ನೀಡಬೇಕು. ಕಳೆದ ಸಲದಂತೆ ಈ ಸಲ ನಮ್ಮ ಜಿಲ್ಲೆಯ ಫಲಿತಾಂಶ ಕಡಿಮೆಯಾಗಬಾರದು. ಜಿಲ್ಲೆಯಲ್ಲಿ ಈ ಹಿಂದೆ ಒಳ್ಳೆಯ ಫಲಿತಾಂಶ ಬಂದ ಶಾಲೆಗಳಿಗೆ ಭೇಟಿ ನೀಡಿ, ಅಲ್ಲಿ ಮಕ್ಕಳಿಗೆ ಯಾವ ರೀತಿಯಲ್ಲಿ ಬೋಧನೆ ಮಾಡುತ್ತಿದ್ದಾರೆ ಎಂದು ತಿಳಿದುಕೊಂಡು ಅದನ್ನು ತಮ್ಮಲ್ಲಿ ಅಳವಡಿಸಿಕೊಳ್ಳಬೇಕು. ಕಲಿಕೆ ನಿರಂತರ ಪ್ರಕ್ರಿಯೆ ಇಲ್ಲಿ ಎಲ್ಲರೂ ದಿನಾಲೂ ಒಂದಿಲ್ಲ ಒಂದು ಹೊಸದನ್ನು ಕಲಿಯುತ್ತಲೆ ಇರಬೇಕು. ಶಿಕ್ಷಕರು ಅಹಂ ಬಿಟ್ಟು ಕೆಲಸ ಮಾಡಿದಾಗ ತಮ್ಮ ಗುರಿ ತಲುಪಲು ಸಾಧ್ಯವಿದೆ ಎಂದರು.
 ಫಲಿತಾಂಶ ಕಡಿಮೆಯಾದ ಶಾಲೆಗಳನ್ನು ದತ್ತು ಪಡೆದು ಅವುಗಳ ಸುಧಾರಣೆಗೆ ಒತ್ತು ನೀಡಬೇಕು. ಅನುದಾನಿತ ಶಾಲೆಗಳಿಗೂ ವಿಶೇಷ ಒತ್ತು ನೀಡಬೇಕು. ಅಲ್ಲಿ ಸರಿಯಾದ ಶಿಕ್ಷಕರು ಇರುವುದಿಲ್ಲ. ಮಕ್ಕಳಿಗೆ ಕೌನ್ಸಿಲಿಂಗ್ ಮಾಡಿಸುವುದರ ಜೊತೆಗೆ ಶಿಕ್ಷಕರು ವಿದ್ಯಾರ್ಥಿಗಳ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡುವ ಮೂಲಕ ಜಿಲ್ಲೆಯ ಫಲಿತಾಂಶ ಸುಧಾರಣೆಗೆ ಒತ್ತು ನೀಡಬೇಕು. ಕೆಲವೊಂದು ಶಾಲೆಗಳಲ್ಲಿ ಶಿಕ್ಷಕರು ಸರಿಯಾಗಿ ಪಾಠಮಾಡುವುದಿಲ್ಲ ಹಾಗೂ ಅನಧಿಕೃತ ಗೈರಾಗುತ್ತಾರೆ ಎನ್ನುವ ದೂರುಗಳಿಗೆ. ಅವುಗಳು ಮರುಕಳಿಸದಂತೆ ಎಚ್ಚರವಹಿಸಬೇಕು. ಕಡಿಮೆ ಫಲಿತಾಂಶ ಬಂದ ಶಾಲೆಯ ಸುಧಾರಣೆಗೆ ಏನು ಕ್ರಮವಹಿಸಲಾಗಿದೆ ಎಂದು ಸಂಬಂಧಿಸಿದ ಶಾಲೆಯ ಶಿಕ್ಷಕರಿಗೆ ಪ್ರಶ್ನಿಸಿದ ಜಿಲ್ಲಾಧಿಕಾರಿಗಳು, ಎಸ್.ಎಸ್.ಎಲ್.ಸಿ. ಯಲ್ಲಿ ಶೂನ್ಯ ಫಲಿತಾಂಶ ಬಂದ ಶಾಲೆಗಳಿಗೆ ಕಾರಣ ಕೇಳಿ ನೋಟೀಸ್ ನೀಡುವಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೆಶಕರಿಗೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
 ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕ ಸೋಮಶೇಖರಗೌಡ ಪಾಟೀಲ ಅವರು ಮಾತನಾಡಿ, ಜಿಲ್ಲೆಯ ಸರಕಾರಿ ಶಾಲೆಗಳಿಗೆ ಭೇಟಿ ನೀಡಿ, ಅಲ್ಲಿನ ಶೈಕ್ಷಣಿಕ ಚಟುವಟಿಕೆಗಳನ್ನು ವೀಕ್ಷಣೆ ಮಾಡಲಾಗುತ್ತಿದೆ. ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಗಳಿಗೆ ಇನ್ನೂ ಮೂರು ತಿಂಗಳು ಮಾತ್ರ ಉಳಿದಿದ್ದು, ಎಲ್ಲಾ ಮುಖ್ಯೋಪಾಧ್ಯಾಯರು ಜವಾಬ್ದಾರಿಯಿಂದ ಕೆಲಸ ಮಾಡಬೇಕು. ಬೆಳಿಗ್ಗೆ ಮತ್ತು ಸಂಜೆ ಸ್ಪೆಷಲ್ ಕ್ಲಾಸ್ ತೆಗೆದುಕೊಳ್ಳುವಾಗ ಶಾಲೆಯ ಎಲ್ಲಾ ಶಿಕ್ಷಕರ ಉಪಸ್ಥಿತಿ ಬಹಳ ಮುಖ್ಯವಾಗಿದೆ. ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಬೆಳಿಗ್ಗೆ ಹಾಗೂ ಸಂಜೆ ವಿಶೇಷ ತರಗತಿಗಳನ್ನು ತೆಗೆದುಕೊಳ್ಳುವ ಮೂಲಕ ಮಕ್ಕಳ ಫಲಿತಾಂಶ ಹೆಚ್ಚಳಕ್ಕೆ ಒತ್ತು ನೀಡಬೇಕು. ಜಿಲ್ಲೆಯ ಎಸ್.ಎಸ್.ಎಲ್.ಸಿ ಫಲಿತಾಂಶ ಸುಧಾರಣೆಗಾಗಿ ಈ ಸಲ ಎಲ್ಲರೂ ಒಟ್ಟಿಗೆ ಶ್ರಮಿಸೋಣ ಎಂದರು.
 ಅಕ್ಷರ ದಾಸೋಹವು ಬರಿ ಒಂದು ಯೋಜನೆಯಲ್ಲ. ಅದು ಸಾಮಾಜಿಕ ಕಳಕಳಿಯ ಕಾರ್ಯಕ್ರಮವಾಗಿದೆ. ಹಾಗಾಗಿ ಪ್ರತಿನಿತ್ಯದ ಅಡುಗೆಯನ್ನು ಸ್ವಚ್ಛತೆಯಿಂದ ಮಾಡುತ್ತಿದ್ದಾರೆಯೇ ಎಂಬುವುದರ ಬಗ್ಗೆ ಆಯಾ ಶಾಲಾ ಮುಖ್ಯ ಗುರುಗಳು ಪರಿಶೀಲಿಸಬೇಕು. ಮಕ್ಕಳ ಆರೋಗ್ಯದ ಬಗ್ಗೆಯೂ ಹೆಚ್ಚು ಗಮನ ಹರಿಸಬೇಕು. ಇದರ ಜೊತೆಗೆ ಸಮಯ ಸಿಕ್ಕಾಗ ಶಾಲೆಗಳಲ್ಲಿ ಮಕ್ಕಳ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬಾಲ್ಯವಿವಾಹ ನಿಷೇಧ, ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆ ಹಾಗೂ ವಿಶೇಷವಾಗಿ ಹೆಣ್ಣು ಮಕ್ಕಳಿಗೆ ಸುರಕ್ಷಿತ ಮತ್ತು ಅಸುರಕ್ಷಿತ ಸ್ಪರ್ಶಗಳ ಕುರಿತು ಅರಿವು ಮೂಡಿಸಿ ಎಂದು ಮುಖ್ಯೋಪಾಧ್ಯಯರಿಗೆ ತಿಳಿ ಹೇಳಿದರು.
 ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಟಿ.ಕೃಷ್ಣಮೂರ್ತಿ, ಜಿಲ್ಲೆಯ ಎಲ್ಲಾ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಶಾಲಾ ಶಿಕ್ಷಣ ಮತ್ತು ಸಾಕ್ಷಾರತಾ ಇಲಾಖೆಯ ವಿಷಯ ಪರಿವೀಕ್ಷರು, ದತ್ತು ಶಾಲೆ ಹಾಗೂ ಎಸ್.ಎಸ್.ಎಲ್.ಸಿ ತಾಲ್ಲೂಕು ನೋಡಲ್ ಅಧಿಕಾರಿಗಳು ಮತ್ತು ಜಿಲ್ಲೆಯ ಎಲ್ಲಾ ಸರಕಾರಿ, ಅನುದಾನಿತ ಪ್ರೌಢ ಶಾಲೆಯ ಮುಖ್ಯ ಶಿಕ್ಷಕರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಅಪರಾಧಗಳ ವಿರುದ್ಧ ಹೋರಾಡಲು ಮಹಾನ್ ವ್ಯಕ್ತಿಗಳ ವಿಚಾರ ಮತ್ತು ಆದರ್ಶ ಅತ್ಯವಶ್ಯಕ – ವಿಜಯಲಕ್ಷ್ಮಿ, ರಾಜ್ಯ ಸೆಕ್ರೆಟರಿಯೇಟ್ ಸದಸ್ಯರು, AIMSS

ಅಪರಾಧಗಳ ವಿರುದ್ಧ ಹೋರಾಡಲು ಮಹಾನ್ ವ್ಯಕ್ತಿಗಳ ವಿಚಾರ ಮತ್ತು ಆದರ್ಶ ಅತ್ಯವಶ್ಯಕ – ವಿಜಯಲಕ್ಷ್ಮಿ, ರಾಜ್ಯ ಸೆಕ್ರೆಟರಿಯೇಟ್ ಸದಸ್ಯರು, AIMSS

The ideas and ideals of great people are essential to fight crime - Vijayalakshmi, State Secretariat Member, AIMSS

   ಕೊಪ್ಪಳ :ಮಹಿಳೆಯರು ಮತ್ತು ಮಕ್ಕಳ ಮೇಲಿನ ಅಪರಾಧಗಳ ವಿರುದ್ಧ ಸಮರ ಹೂಡಲು ರಾಜ್ಯವ್ಯಾಪಿ ಆಂದೋಲನದ ಭಾಗವಾಗಿ ‘ನಿರ್ಭಯಾ ದಿನ’ದ ಪ್ರಯುಕ್ತ AIMSS ಹಾಗೂ AIDYO ಸಂಘಟನೆಗಳ ವತಿಯಿಂದ ಜಂಟಿಯಾಗಿ ರಾಮುಲು ನರ್ಸಿಂಗ್ ಕಾಲೇಜಿನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

AIMSS ನ ರಾಜ್ಯ ಸೆಕ್ರೆಟರಿಯೇಟ್ ಸದಸ್ಯರಾದ ಶ್ರೀಮತಿ ವಿಜಯಲಕ್ಷ್ಮಿ ಮಾತನಾಡುತ್ತಾ “ನಿರ್ಭಯಾ ಘಟನೆ ನಡೆದು ಇಂದಿಗೆ 13 ವರ್ಷಗಳಾಯಿತು. ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ, ತುಕ್ಕು ಹಿಡಿದ ಕಬ್ಬಿಣದ ರಾಡನ್ನು ದೇಹದೊಳಗೆ ತೂರಿಸಿ ಕ್ರೂರವಾಗಿ ಹಲ್ಲೆ ಮಾಡಿ, ನಗ್ನ ದೇಹವನ್ನು ದಾರಿ ಮಧ್ಯೆ ಬಿಸಾಡಿ ಹೋಗಿದ್ದರು ರಕ್ಕಸರು. ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು ಈ ಘಟನೆ. ವಿದ್ಯಾರ್ಥಿ, ಯುವಜನರು, ಮಹಿಳೆಯರು ಸೇರಿದಂತೆ ಇಡೀ ದೇಶದ ಜನತೆ ಪೊಲೀಸ್ ಲಾಠಿ ಚಾರ್ಜ್, ಜಲ ಫಿರಂಗಿಯನ್ನು ಎದುರಿಸಿ ನಿರ್ಭಯಾಳಿಗೆ ನ್ಯಾಯ ಬೇಕು ಎಂದು ಬೀದಿಗಿಳಿದಿದ್ದರು. ಇದಕ್ಕಿಂತಲೂ ದೊಡ್ಡ ಹೋರಾಟಗಳು ಇಂದು ಬೆಳೆಯಬೇಕಾಗಿದೆ. ಏಕೆಂದರೆ ದಿನೇ ದಿನೇ ಮಹಿಳೆಯರು ಮತ್ತು ಮಕ್ಕಳ ಮೇಲಿನ ಅಪರಾಧಗಳು ಹೆಚ್ಚುತ್ತಲೇ ಅತ್ಯಂತ ವಿಕೃತ ರೂಪ ತಳೆಯುತ್ತಿವೆ. ಹಸುಗೂಸಿನಿಂದ ಹಿಡಿದು ವಯೋ ವೃದ್ಧೆಯ ಮೇಲೂ ನಡೆಯುವ ಅಪರಾಧಗಳು ಈ ದೇಶದಲ್ಲಿ ಹೆಣ್ಣುಮಕ್ಕಳು ಎಷ್ಟು ಅಸುರಕ್ಷಿತರು ಎಂಬುದನ್ನು ಸ್ಪಷ್ಟಪಡಿಸುತ್ತವೆ. ಇದಕ್ಕೆ ಮುಖ್ಯ ಕಾರಣ ಇಂದು ವ್ಯಾಪಾಕವಾಗಿರುವ ಸಾಮಾಜಿಕ ಮಾಧ್ಯಮಗಳಲ್ಲಿನ ಅಶ್ಲೀಲತೆ ಹಾಗೂ ಮದ್ಯ – ಮಾದಕ ವಸ್ತುಗಳ ಜಾಲ ವಿದ್ಯಾರ್ಥಿ – ಯುವಕರಲ್ಲಿನ ಮೌಲ್ಯಗಳನ್ನು ಹೊಸಕಿ ಹಾಕಿ ಮೃಗೀಯ ಮಟ್ಟಕ್ಕೆ ಇಳಿಸುತ್ತಿದೆ. ನೈತಿಕ ಬೆನ್ನೆಲುಬು ಮುರಿದು ಅಪಾರಧಗಳಿಗೆ ಪ್ರೇರೇಪಿಸುತ್ತಿದೆ. ಇಂತಹ ಹುನ್ನಾರದ ಹಿಂದಿರುವ ಸರ್ಕಾರಗಳು ಮತ್ತು ವ್ಯವಸ್ಥೆಯ ವಿರುದ್ಧ ವಿದ್ಯಾರ್ಥಿ, ಯುವಜನರು, ಪ್ರಜ್ಞಾವಂತ ಜನತೆ ಒಗ್ಗಟ್ಟಾಗಿ ಹೋರಾಟ ಕಟ್ಟಿ ಹೊಸ ಸಮಾಜ ತರುವುದು ಘಳಿಗೆಯ ಅವಶ್ಯಕತೆಯಾಗಿದೆ. ಈ ನಿಟ್ಟಿನಲ್ಲಿ ಮುಂದೆ ಬಂದು ಸಮಾಜ ಬದಲಾವಣೆಯ ಮಹಾನ್ ಕಾರ್ಯಕ್ಕೆ ಕೈ ಜೋಡಿಸಬೇಕು” ಎಂದು ಕರೆ ನೀಡಿದರು. 

AIMSS ನ ಜಿಲ್ಲಾ ಸಂಘಟನಾ ಸಮಿತಿಯ ಕಾರ್ಯದರ್ಶಿ ಶಾರದಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾಲೇಜಿನ ಉಪನ್ಯಾಸಕರಾದ ಶ್ರೀ ಸೋಮಶೇಖರ, ಉಪನ್ಯಾಸಕ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ರಾಜ್ಯಮಟ್ಟದ ಪದವಿಪೂರ್ವ ಕಾಲೇಜುಗಳ ಜಂಪ್‌ರೋಪ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು  ರಾಷ್ಟ್ರ ಮಟ್ಟಕ್ಕೆ  ಕುಮಾರ ಮಂಜುನಾಥ ಆಯ್ಕೆ.

ರಾಜ್ಯಮಟ್ಟದ ಪದವಿಪೂರ್ವ ಕಾಲೇಜುಗಳ ಜಂಪ್‌ರೋಪ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು
  ರಾಷ್ಟ್ರ ಮಟ್ಟಕ್ಕೆ  ಕುಮಾರ ಮಂಜುನಾಥ ಆಯ್ಕೆ.

Kumar Manjunath, who won first place in the state-level pre-university college jump rope competition, was selected for the national level.

ಗಂಗಾವತಿ: ನಗರದ ಪ್ರತಿಷ್ಠಿತ ಶ್ರೀಕೊಟ್ಟೂರೇಶ್ವರ ಸಂಯುಕ್ತ ಪದವಿ ಪೂರ್ವ ಕಾಲೇಜಿನ ದ್ವಿತೀಯು ಪಿ.ಯು.ಸಿ ವಾಣಿಜ್ಯ ವಿಭಾಗದ ವಿದ್ಯಾರ್ಥಿಯಾದ ಕುಮಾರ ಮಂಜುನಾಥ ತಂ. ದೊಡ್ಡಪ್ಪ ಇವರು ಡಿಸೆಂಬರ್-೧೩ ಮತ್ತು ೧೪ ರಂದು ಹನುಮಸಾಗರದ ಇಂದಿರಾಗಾAಧಿ ವಸತಿ ಶಾಲೆಯಲ್ಲಿ ನಡೆದ ರಾಜ್ಯಮಟ್ಟದ ಪದವಿಪೂರ್ವ ಕಾಲೇಜುಗಳ ಜಂಪ್‌ರೋಪ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಷ್ಟçಮಟ್ಟಕ್ಕೆ ಆಯ್ಕೆಯಾಗಿರುತ್ತಾನೆ.
ಈ ವಿದ್ಯಾರ್ಥಿಗೆ  ಸಂಘದ ಸರ್ವ ಸದಸ್ಯರು, ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಜಗದೀಶ್ ಜಿ.ಹೆಚ್., ಕಾಲೇಜಿನ ಪ್ರಾಚಾರ್ಯರಾದ ಚಂದ್ರಶೇಖರ ಹಂಚಿನಾಳ ಹಾಗೂ ಬೋಧಕ, ಬೋಧಕೇತರ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.

ಜ. 3 ರಿಂದ 9 ರವರೆಗೆ ಬೃಹತ್ ಕೃತಕ ಕಾಲು, ಕ್ಯಾಲಿಪರ್ ಹಾಗೂ ಮುಂಗೈ ಜೋಡಣಾ ಶಿಬಿರ

ಜ. 3 ರಿಂದ 9 ರವರೆಗೆ ಬೃಹತ್ ಕೃತಕ ಕಾಲು, ಕ್ಯಾಲಿಪರ್ ಹಾಗೂ ಮುಂಗೈ ಜೋಡಣಾ ಶಿಬಿರ

Jan. 3 to 9, massive artificial leg, caliper and forearm fitting camp

ಬೆಂಗಳೂರು: ಜೈಪುರದ  ಶ್ರೀ ಭಗವಾನ್ ಮಹಾವೀರ ವಿಕಲಾಂಗ ಸಹಾಯಕ ಸಮಿತಿ ಹಾಗೂ ರೋಟರಿ ಬೆಂಗಳೂರು ಪೀಣ್ಯಾ ಸಂಘಟನೆಯಿಂದ 28ನೇ ವರ್ಷದ ಉಚಿತ ಕೃತಕ ಕಾಲು, ಕ್ಯಾಲಿಪರ್ ಗಳು ಹಾಗು ಮುಂಗೈ ಬೃಹತ್ ಜೋಡಣ ಶಿಬಿರವನ್ನು ಜನವರಿ 3 ರಿಂದ 9 ರವರೆಗೆ ಆಯೋಜಿಸಲಾಗಿದೆ.
ಶಿವಾಜಿನಗರ ಇನ್‌ ಫೆಂಟ್ರಿ ರಸ್ತೆಯಲ್ಲಿರುವ ಗಣೇಶ್ ಬಾಗ್, ಎಸ್.ಎಸ್.ಬಿ.ಎಸ್. ಜೈನ್ ಸಂಘ ಟ್ರಸ್ಟ್, ಭಗವಾನ್ ಮಹಾವೀರ ರಸ್ತೆ, ಇಲ್ಲಿ ಶಿಬಿರ ನಡೆಯುತ್ತಿದ್ದು, ದಿವ್ಯಾಂಗರಿಗೆ ಉಚಿತವಾಗಿ ಪರಿಕರಗಳನ್ನು ಅಳವಡಿಸಲಾಗುತ್ತಿದೆ ಎಂದು ಲಿಂಬ್‌ ಕ್ಯಾಂಪ್‌ ಅಧ್ಯಕ್ಷರಾದ ರೋಟರಿ ಜಿ.ಆರ್.‌ ವಸಂತ್‌ ಕುಮಾರ್‌ ತಿಳಿಸಿದ್ದಾರೆ.
ಈ ಶಿಬಿರವು ಏಳು ದಿನಗಳ ಕಾಲ ಇರಲಿದ್ದು, ಇಲ್ಲಿಗೆ ಬರುವವರಿಗೆ ಉಚಿತ  ವಸತಿ,  ಊಟದ ವ್ಯವಸ್ಥೆ ಕಲ್ಪಿಸಲಾಗಿದೆ. ಶಿಬಿರಕ್ಕೆ ಬರುವವರು ಕಡ್ಡಾಯವಾಗಿ ತಮ್ಮ ಆಧಾರ್ ಕಾರ್ಡ್ ನ ಮೂರು ನಕಲಿ ಪ್ರತಿಗಳನ್ನು ತರಬೇಕು. ದಿವ್ಯಾಂಗರಿಗೆ ಎಲ್ಲಾ ರೀತಿಯ ಸೌಲಭ್ಯ ಕಲ್ಪಿಸಲಾಗಿದೆ ಎಂದು ಶಿಬಿರದ ಮಾರ್ಗದರ್ಶಕರಾದ ಗೌತಮ್‌ ಚಂದ್‌ ನಹಾರ್‌ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗೆ ಮೊಬೈಲ್ ಸಂಖ್ಯೆ- 9845052554 ಮತ್ತು 9341214915 ಸಂಖ್ಯೆಗೆ ಸಂಪರ್ಕಿಸಬೇಕಿಸುವಂತೆ   ಕೋರಲಾಗಿದೆ.

ಪಚ್ಚೆದೊಡ್ಡಿ ಶಾಲೆಗೆ ಆನೆ ದಾಳಿಪೀಟೋಪಕರಣಗಳು ನಾಶ .

ಪಚ್ಚೆದೊಡ್ಡಿ ಶಾಲೆಗೆ ಆನೆ ದಾಳಿ
ಪೀಟೋಪಕರಣಗಳು ನಾಶ

Elephant attacks Pachedoddy school, artillery equipment destroyed.

ವರದಿ: ಬಂಗಾರಪ್ಪ .ಸಿ .
ಹನೂರು :ಇತ್ತಿಚಿನ ದಿನಗಳಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳ ಭೆಜಾವಬ್ದಾರಿಯೆ ಕಾರಣವೆಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು .
ತಾಲ್ಲೂಕಿನ ಪಚ್ಚೆದೊಡ್ಡಿಯಲ್ಲಿನ
ಶಾಲೆಗೆ ಕಾಡನೆಯು ಲಗ್ಗೆಯಿಟ್ಟಿದ್ದು ಶಾಲೆಯ ಸುತ್ತುಗೋಡೆ , ಕುಡಿಯುವ ನೀರಿನ ಪೈಪ್‌ಗಳು ಸೇರಿದಂತೆ ಇನ್ನಿತರ ವಸ್ತುಗಳು ಹಾಳಾಗುತ್ತಿದ್ದು, ಗ್ರಾಮಸ್ಥರು
ಅರಣ್ಯ ಇಲಾಖೆಯ ಅಧಿಕಾರಿಗಳು ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು .
ಗ್ರಾಮದ ರೈತ ಮುಖಂಡರಾದ ಬಸವರಾಜು ಕಾಂಚಳ್ಳಿ ಮಾತನಾಡಿ ನಮ್ಮ ಗ್ರಾಮವು ಕಾಡಂಚಿನಲ್ಲಿದ್ದು ಕಾಡು ಪ್ರಾಣಿಗಳ ಹಾವಳಿಯನ್ನು ತಡೆಗಟ್ಟಲು ಅಧಿಕಾರಿಗಳು ವಿಪಲವಾಗಿದ್ದಾರೆ ,ಇದೆ ವಿಷಯವಾಗಿ ಶಿಕ್ಷಣ ಅಧಿಕಾರಿಗಳು ಅರಣ್ಯ ಇಲಾಖೆಯ ಅಧಿಕಾರಿಗಳ ಜೊತೆಯಲ್ಲಿ ತಕ್ಷಣವೇ ಸ್ಥಳಕ್ಕೆ ಆಗಮಿಸಿ ಗ್ರಾಮಕ್ಕೆ ಉಂಟಾದ ನಷ್ಟವನ್ನು ಭರಿಸಬೇಕಾಗಿದೆ ಇಲ್ಲದಿದ್ದ ಪಕ್ಷದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು .

21ನೇ ಸಂಸ್ಥಾಪನಾ ದಿನಾಚರಣೆ ಹಾಗೂ ಐಐಎಚ್‌ಎಮ್‌ಆರ್ ಮಾಜಿ ವಿದ್ಯಾರ್ಥಿಗಳ ಸಭೆ

21ನೇ ಸಂಸ್ಥಾಪನಾ ದಿನಾಚರಣೆ ಹಾಗೂ ಐಐಎಚ್‌ಎಮ್‌ಆರ್ ಮಾಜಿ ವಿದ್ಯಾರ್ಥಿಗಳ ಸಭೆ

21st Foundation Day Celebration and IIHMR Alumni Meet

ಬೆಂಗಳೂರು; ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್ ಮ್ಯಾನೇಜ್‌ಮೆಂಟ್ ರಿಸರ್ಚ್, ಬೆಂಗಳೂರು ಐಐಎಚ್ ಆರ್ – ಬಿ ತನ್ನ 21ನೇ ಸಂಸ್ಥಾಪನಾ ದಿನಾಚರಣೆ ಮತ್ತು ಹಳೆಯ ವಿದ್ಯಾರ್ಥಿಗಳ ಸಭೆ-2025 ಎಲೆಕ್ಟ್ರಾನಿಕ್ ಸಿಟಿಫೇಸ್-1ರ ಸಂಸ್ಥೆಯ ಬೆಂಗಳೂರಿನ ಕ್ಯಾಂಪಸ್‌ನಲ್ಲಿ ಭವ್ಯವಾಗಿ ಆಯೋಜಿಸಲಾಯಿತು.

1984ರಲ್ಲಿ ಜೈಪುರದಲ್ಲಿ ಸ್ಥಾಪನೆಯಾದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್ ಮ್ಯಾನೇಜ್‌ಮೆಂಟ್ ರಿಸರ್ಚ್ ಸಂಸ್ಥೆಯು ದಕ್ಷಿಣ ಭಾರತದ ಅಂಗ ಸಂಸ್ಥೆಯಾಗಿ ಬೆಂಗಳೂರಿನಲ್ಲಿ 2004ರಲ್ಲಿ ಪ್ರಾರಂಭವಾಯಿತು. ಕಳೆದ ಎರಡು ದಶಕಗಳಲ್ಲಿ, ಈ ಸಂಸ್ಥೆ ಆರೋಗ್ಯ ಮತ್ತು ಆಸ್ಪತ್ರೆ ನಿರ್ವಹಣಾ ಶಿಕ್ಷಣ, ಬಹುಶಾಖಾ ಸಂಶೋಧನೆ. ತರಬೇತಿ ಹಾಗೂ ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಸಲಹಾ ಸೇವೆಗಳ ಪ್ರಮುಖ ಕೇಂದ್ರವಾಗಿ ಹೊರಹೊಮ್ಮಿದೆ.

ಸಂಸ್ಥೆಯಲ್ಲಿ ಪ್ರಸ್ತುತ ಸ್ನಾತಕೋತ್ತರ ಮಟ್ಟದ ಪಿಜಿಡಿಎಂ ಕಾರ್ಯಕ್ರಮ ಮತ್ತು ಡಾಕ್ಟರಲ್ ಮಟ್ಟದ ಫೆಲೋಶಿಪ್ ಪ್ರೋಗ್ರಾಂ ಇನ್ ಮ್ಯಾನೇಜೆಂಟ್ ಅನ್ನು ನೀಡಲಾಗುತ್ತಿದ್ದು, ಆಸ್ಪತ್ರೆ ನಿರ್ವಹಣೆ, ಸಾರ್ವಜನಿಕ ಆರೋಗ್ಯ, ಆರೋಗ್ಯ ಮಾಹಿತಿ ತಂತ್ರಜ್ಞಾನ, ಔಷಧೀಯ ನಿರ್ವಹಣೆ, ಹಾಗೂ ಆರೋಗ್ಯ ಕ್ಷೇತ್ರದ ಎ ಐ ಮತ್ತು ಡೇಟಾ ಸೈನ್ಸ್ ಮೊದಲಾದ ವಿಶೇಷೀಕರಣಗಳನ್ನು ಒಳಗೊಂಡಿದೆ.
ಐಐಎಚ್‌ಎಮ್‌ಆರ್ ಹಿರಿಯ ಸಲಹೆಗಾರ
ಡಾ. ಸಿ. ಎಸ್. ಕೇದಾರ್, ಹೆಬ್ಬಾಳದ ಮಣಿಪಾಲ್ ಆಸ್ಪತ್ರೆಯ ನಿರ್ದೇಶಕರಾದ
ಡಾ. ನಿಶಾ ವರದರಾಜ್, ನಿರ್ದೇಶಕರಾದ
ಡಾ.ಉಷಾ ಮಂಜುನಾಥ್ ಮತ್ತು ಡೀನ್
ಡಾ. ಆರ್. ಸರಳಾ ಮತ್ತಿತರರು ಭಾಗವಹಿಸಿದ್ದರು.

ದೇಶದ ವಿವಿಧ ರಾಜ್ಯಗಳು ಮತ್ತು ವಿದೇಶಗಳಲ್ಲಿ ಉದ್ಯೋಗ ನಿರ್ವಹಿಸುತ್ತಿರುವ ಸಹಸ್ರಾರು ಮಾಜಿ ವಿದ್ಯಾರ್ಥಿಗಳು ಈ ಸಭೆಯಲ್ಲಿ ಭಾಗಿಯಾಗಿದ್ದರು. ಆಸ್ಪತ್ರೆಗಳು, ಆರೋಗ್ಯ ತಂತ್ರಜ್ಞಾನ ಸಂಸ್ಥೆಗಳು,, ಔಷಧೀಯ ಕ್ಷೇತ್ರ, ಸಲಹಾ ಸಂಸ್ಥೆಗಳು ಮತ್ತು ಡಿಜಿಟಲ್ ಹೆಲ್ತ್ ಸಂಸ್ಥೆಗಳಲ್ಲಿನ ಪ್ರಮುಖ ನಾಯಕತ್ವ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿರುವವರು ಭಾಗವಹಿಸಿದ್ದರು.

ಡಾ.ಬಿ.ಆರ್. ಅಂಬೇಡ್ಕರ್ ಪುಸ್ತಕಗಳ ಅಧ್ಯಯನ ಅಗತ್ಯ: ಕುಲಪತಿ ಪ್ರೊ.ಬಿ.ರಮೇಶ್

ಡಾ.ಬಿ.ಆರ್.ಅಂಬೇಡ್ಕರ್ ವಿಚಾರ ಸಂಕಿರಣ ಆಯೋಜಿಸಿದ್ದ ಬೆಂಗಳೂರು ವಿವಿ

ಡಾ.ಬಿ.ಆರ್. ಅಂಬೇಡ್ಕರ್ ಪುಸ್ತಕಗಳ ಅಧ್ಯಯನ ಅಗತ್ಯ: ಕುಲಪತಿ ಪ್ರೊ.ಬಿ.ರಮೇಶ್

ಡಾ‌.ಬಿ.ಆರ್.ಅಂಬೇಡ್ಕರ್ ಸರ್ವಕಾಲಕ್ಕೂ ಪ್ರಸ್ತುತ: ಕುಲಪತಿ ಡಾ.ಜಯಕರ ಎಸ್.ಎಂ

Dr. B.R. Study of Ambedkar's books is necessary: Chancellor Prof. B. Ramesh

ಬೆಂಗಳೂರು:ಡಿ.16: “ಬಾಬಾಸಾಹೇಬ್ ಅಂಬೇಡ್ಕರ್‌ರವರ ಪುಸ್ತಕಗಳನ್ನು ಆಳವಾಗಿ ಅಧ್ಯಯನ ನಡೆಸದಿದ್ದರೆ ಅವರ ಪುಸ್ತಕಗಳು ದಕ್ಕುವುದಿಲ್ಲ. ಇಂದಿನ ಯುವ ಪೀಳಿಗೆ ಬಾಬಾಸಾಹೇಬರ ನೀರಿಕ್ಷೆಗಳನ್ನು ಪೂರೈಸಲು ಪ್ರತಿ ವಿಷಯವನ್ನು ವೈಜ್ಞಾನಿಕವಾಗಿ ಗ್ರಹಿಸಿ ಅರ್ಥ ಮಾಡಿಕೊಂಡು ಮನನ ಮಾಡುವ ಮೂಲಕ ಅವರ ಆಶಯಗಳನ್ನು ಎತ್ತಿ ಹಿಡಿಯಬೇಕು” ಎಂದು ಬೆಂಗಳೂರು ನಗರ ವಿಶ್ವವಿದ್ಯಾಲಯದ ಕುಲಪತಿಗಳು ಪ್ರೊ.ಬಿ.ರಮೇಶ್ ಅಭಿಪ್ರಾಯ ವ್ಯಕ್ತಪಡಿಸಿದರು.

ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನಾ ತರಭೇತಿ ಹಾಗೂ ವಿಸ್ತರಣಾ ಕೇಂದ್ರ, ಸಮಾಜ ಕಲ್ಯಾಣ ಇಲಾಖೆ ಮತ್ತು ಬಾಬಾಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಸಹಯೋಗದಲ್ಲಿ ಆಯೋಜಿಸಿದ್ದ “ಡಾ.ಬಿ.ಆರ್.ಅಂಬೇಡ್ಕರ್‌ರವರ ಸಮಗ್ರ ಆಧುನಿಕ ಚಿಂತನೆಗಳು” ಕುರಿತಾದ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು‌.

“ಬಾಬಾಸಾಹೇಬರು 21ನೇ ಶತಮಾನದ ಭವಿಷ್ಯಕ್ಕೆ ಮಾರ್ಗದಾತರಾಗಿದ್ದಾರೆ. ಸರ್ವಕಾಲಕ್ಕೂ ಸಲ್ಲುವಂತಹ ವ್ಯಕ್ತಿ, ವ್ಯಕ್ತಿತ್ವ ಅಂಬೇಡ್ಕರ್‌ ರವರು. 3 ಸಾವಿರ ವರ್ಷಗಳ ಇತಿಹಾಸದಲ್ಲಿ ರಾಜರ ಆಳ್ವಿಕೆಯನ್ನು ಅರಮನೆಯಿಂದ ಪ್ರಜೆಗಳ ಬಾಗಿಲಿಗೆ ತಂದು ಪ್ರಜಾಪ್ರಭುತ್ವ ವ್ಯವಸ್ಥೆಯ ಪರಿಕಲ್ಪನೆ ನೀಡಿದರು. ಶಿಕ್ಷಣವಂತ, ಹಣವಂತ, ಭೂ ಒಡೆಯರಿಗೆ ಮಾತ್ರ ಇದ್ದ ಮತದಾನದ ಹಕ್ಕನ್ನು ದಮನಿತರು, ಮಹಿಳೆಯರು, ಹಿಂದುಳಿದವರು ಸೇರಿದಂತೆ ಎಲ್ಲಾ ವರ್ಗಕ್ಕೂ ಮತದಾನದ ಹಕ್ಕನ್ನು ಕಲ್ಪಿಸಿ ಪ್ರಜಾತಂತ್ರ ಆಳ್ವಿಕೆ ಜಾರಿಯಾಗುವಂತೆ ಮಾಡಿ ದೇಶದ ದಿಕ್ಸೂಚಿ ರೂಪಿಸಿದರು” ಎಂದು ತಿಳಿಸಿದರು.

ಬಾಬಾಸಾಹೇಬರ ಎಲ್ಲಾ ಹೋರಾಟಗಳು ಸಮಸ್ಯೆಗಳ ಮೂಲವನ್ನು ಪ್ರಶ್ನಿಸಿತ್ತು, ಆ ಚಿಂತನೆಯಲ್ಲೇ ದಲಿತ ಚಳುವಳಿ ಶುರುವಾಯಿತು. ಮಹಿಳಾ ಚಳುವಳಿ, ರೈತ ಚಳುವಳಿ, ವಿದ್ಯಾರ್ಥಿ ಚಳುವಳಿಗಳಿಗೆ ದಲಿತ ಚಳುವಳಿಗಳೆ ತಾಯಿ ಬೇರು. ಇಂದು ಭಾರತ ಸಂವಿಧಾನ ಇಕ್ಕಟ್ಟಿನಲ್ಲಿ ಸಿಲುಕಿದೆ, ಹೊಸಹಾತುಶಾಹಿ, ವೈದಿಕ ಮನಸ್ಥಿತಿಗಳು ಸಂವಿಧಾನದ ವಿರುದ್ದ ಹೋರಾಡುತ್ತಿದೆ. ಸ್ವಾತಂತ್ರ್ಯ ಪಡೆದು 75 ವರ್ಷ ಕಳೆದರೂ ಹೊಸಹಾತುಶಾಹಿತನ ದೂರವಾಗಿಲ್ಲ. ಇಂದು ಮನುವಾದ ಉಚ್ಛ್ರಾಯ ಸ್ಥಿತಿ ತಲುಪಿದೆ. ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಅಂಬೇಡ್ಕರ್‌ ರವರ ಪುಸ್ತಕ, ತತ್ವ ಚಿಂತನೆಗಳನ್ನು ಕಡ್ಡಾಯವಾಗಿ ಅಧ್ಯಯನ ನಡೆಸಬೇಕು. ವೈಜ್ಞಾನಿಕ ನೆಲೆಗಟ್ಟಿನಲ್ಲಿ ಚಿಂತಿಸುವುದನ್ನು ರೂಡಿಸಿಕೊಳ್ಳಬೇಕು. ವಿದ್ಯಾರ್ಥಿಗಳು ಸಂವಿಧಾನ ಪೂರ್ಣ ಜಾರಿಗೊಳಿಸದಿದ್ದರೆ ಪ್ರಬುದ್ದ ಭಾರತದ ಬದಲಿಗೆ ವೈದಿಕ ಶಾಹಿ ಭಾರತ ನಿರ್ಮಾಣವಾಗಲಿದೆ” ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಡಾ.ಜಯಕರ ಎಸ್.ಎಂ ಮಾತ‌ನಾಡಿ ” ಬಾಬಾಸಾಹೇಬ್ ಅಂಬೇಡ್ಕರ್‌ರವರು ವಿಶ್ವವೇ ಮೆಚ್ಚಿದ ಮಹಾಜ್ಞಾನಿ, ಅವರ ಜ್ಞಾನದ ಸಂಪತ್ತು ಸರ್ವಕಾಲಕ್ಕೂ ಪ್ರಸ್ತುತವಾಗಿರಲಿದೆ. ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ಕಾನೂನು ನೀತಿಗಳನ್ನು ರೂಪಿಸಿ ದೇಶಕ್ಕೆ ಸಂವಿಧಾನದ ಮೂಲಕ ಭದ್ರ ಬುನಾದಿ ಹಾಕಿದ್ದಾರೆ. ಅಂಬೇಡ್ಕರ್‌ ರವರ ಚಿಂತನೆಗಳನ್ನು ಎಲ್ಲಾ ಆಯಾಮದಲ್ಲೂ ಅಧ್ಯಯನ ನಡೆಸಬೇಕು. ಇಂದಿನ ಯುವ ಪೀಳಿಗೆ ಅಂಬೇಡ್ಕರ್‌ ರವರ ದೂರದೃಷ್ಟಿ ಚಿಂತನೆಗಳನ್ನು ಮೈಗೂಡಿಸಿಕೊಳ್ಳಬೇಕು. ಆ ನಿಟ್ಟಿನಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣವನ್ನು ಹಮ್ಮಿಕೊಂಡಿದೆ, ವಿದ್ಯಾರ್ಥಿಗಳು ಈ ಕಾರ್ಯಕ್ರಮದ ಮೂಲಕ ಅಂಬೇಡ್ಕರ್‌ರವರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು” ಎಂದರು.

ಬಾಬಾಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ನಿರ್ದೇಶಕರಾದ ಡಾ. ಸಿ. ಸೋಮಶೇಖರ್ ಮಾತನಾಡಿ “ಅಂಬೇಡ್ಕರ್ ವಿಚಾರಗಳು ವಿದ್ಯಾರ್ಥಿಗಳಿಗೆ ತಲುಪಿಸುವ ದೃಷ್ಟಿಯಿಂದ ವಿಚಾರ ಸಂಕಿರಣ ಆಯೋಜಿಸಲಾಗಿದೆ. ಅಂಬೇಡ್ಕರ್‌ ರವರ ಕುರಿತಾದ ಸಂಶೋಧನೆ ಮತ್ತು ಅಧ್ಯಯನ ವಿಶ್ವವಿದ್ಯಾಲಯ ಮಟ್ಟದಲ್ಲಿ ಸಮಗ್ರವಾಗಿ ನಡೆಯಬೇಕು. ಆ ನಿಟ್ಟಿನಲ್ಲಿ ರಾಜ್ಯದ ಎಲ್ಲಾ ಅಧ್ಯಯನ ಕೇಂದ್ರಗಳಿಗೆ ಪೂರ್ಣಕಾಲಿಕ ನಿರ್ದೇಶಕರನ್ನು ನೇಮಿಸಬೇಕು” ಎಂದು ಸರ್ಕಾರಕ್ಕೆ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನಾ ತರಭೇತಿ ಹಾಗೂ ವಿಸ್ತರಣಾ ಕೇಂದ್ರದ ನಿರ್ದೇಶಕರು ಡಾ. ಸಾಬೀರ್ ಅಹನದ್ ಮುಲ್ಲಾ, ಜನಪದ‌ ಕಲಾವಿದರು ಡಾ.ಅಪ್ಪಗೆರೆ ತಿಮ್ಮರಾಜು, ಪ್ರಾಧ್ಯಪಕರು ಪ್ರೊ.ಎಚ್. ವಿಶ್ವನಾಥ್ ಸೇರಿದಂತೆ ಹಿರಿಯ ಪ್ರಾಧ್ಯಾಪಕರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು, ಸಂಶೋಧನಾ ವಿದ್ಯಾರ್ಥಿಗಳು, ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು, ಅಂಬೇಡ್ಕರ್ ರವರ ಅಭಿಮಾನಿಗಳು ಮತ್ತಿತರರು ಉಪಸ್ಥಿತರಿದ್ದರು.

ಫೋಟೋ ಸುದ್ದಿ1:
ಬೆಂಗಳೂರು ವಿಶ್ವವಿದ್ಯಾಲಯಲ್ಲಿ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್‌ರವರ ಸಮಗ್ರ ಆಧುನಿಕ ಚಿಂತನೆಗಳು ಕುರಿತಾದ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಬೆಂಗಳೂರು ನಗರ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ರಮೇಶ್ ರವರು ಮಾತನಾಡಿದರು.

ಫೋಟೋ ಸುದ್ದಿ2:
ಬೆಂಗಳೂರು ವಿಶ್ವವಿದ್ಯಾಲಯಲ್ಲಿ ಆಯೋಜಿಸಿದ್ದ
ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನಾ ತರಭೇತಿ ಹಾಗೂ ವಿಸ್ತರಣಾ ಕೇಂದ್ರ, ಸಮಾಜ ಕಲ್ಯಾಣ ಇಲಾಖೆ ಮತ್ತು ಬಾಬಾಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಸಹಯೋಗದಲ್ಲಿ “ಡಾ.ಬಿ.ಆರ್.ಅಂಬೇಡ್ಕರ್‌ರವರ ಸಮಗ್ರ ಆಧುನಿಕ ಚಿಂತನೆಗಳು” ಕುರಿತಾದ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಗಣ್ಯರು ಉದ್ಘಾಟಿಸಿದರು.

ಆಸ್ತಿ ತೆರಿಗೆ  ಅಭಿವೃದ್ಧಿ ಅಧಿಕಾರಿಗಳಾದ ಸುರೇಶ ಚಲವಾದಿ ಸೂಚನೆ

ಆಸ್ತಿ ತೆರಿಗೆ ಪಾವತಿಸಿವಡ್ಡರಹಟ್ಟಿ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಾದ ಸುರೇಶ ಚಲವಾದಿ ಸೂಚನೆ

Property Tax Development Officer Suresh Chalwadi notice

ಗಂಗಾವತಿ : ತಾಲೂಕಿನ ವಡ್ಡರಹಟ್ಟಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ 2025-26ನೇಸಾಲಿನಲ್ಲಿ ಕರ ವಸೂಲಾತಿ ಆಂದೋಲನ ಆರಂಭಿಸಿದ್ದು, ಬಾಕಿ ಉಳಿಸಿಕೊಂಡಿರುವ ಎಲ್ಲಾ ಸಾರ್ವಜನಿಕ ಮಳಿಗೆಗಳು, ರೈಸ್ ಮಿಲ್ ಗಳು, ನಿವೇಶನ ಮತ್ತು ನೀರಿನ ತೆರಿಗೆ ಪಾವತಿಸುಂತೆ ವಡ್ಡರಹಟ್ಟಿ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಾದ ಸುರೇಶ ಚಲವಾದಿ ಅವರು ಸೂಚಿಸಿದ್ದಾರೆ.
ಈಗಾಗಲೇ ಮನೆ – ಮನೆ ಭೇಟಿ ನೀಡಿ ಗ್ರಾಮಸ್ಥರಿಗೆ ಕರ ವಸೂಲಾತಿ ಆಂದೋಲನ ಜಾಗೃತಿ ಮೂಡಿಸಲಾಗಿದೆ. ವಡ್ಡರಹಟ್ಟಿ ಗ್ರಾಮ ಪಂಚಾಯತ್ ಗಳ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಸಾರ್ವಜನಿಕ ಮಳಿಗೆಗಳು, ರೈಸ್ ಮಿಲ್ ಗಳು, ಪೆಟ್ರೋಲ್ ಬಂಕ್ ಗಳು, ಖಾಸಗಿ ಶಾಲೆ-ಕಾಲೇಜುಗಳು, ವಾಣಿಜ್ಯ ಆಸ್ತಿಗಳ ತೆರಿಗೆ ಸೇರಿದಂತೆ ಇತರೆ ಎಲ್ಲಾ ಸಣ್ಣ/ದೊಡ್ಡ ವ್ಯಾಪಾರಿಗಳು ಗ್ರಾಮ ಪಂಚಾಯತ್ ಸಿಬ್ಬಂದಿಗಳಿಗೆ ಸಹಕಾರ ನೀಡಿ ಪರವಾನಗಿ ನವೀಕರಿಸಿಕೊಳ್ಳಬೇಕು.

ಈಗಾಗಲೇ ತೆರಿಗೆ, ದರ, ಪೀಜುಗಳು ಮತ್ತು ಇತರೆ ಸೇವಾ ಶುಲ್ಕಗಳನ್ನು ಪಾವತಿಸಿರುವ ಸಾರ್ವಜನಿಕರಿಗೆ ತುಂಬು ಹೃದಯದ ಧನ್ಯವಾದಗಳು. ಪ್ರಸ್ತುತ 2025-26ನೇ ಸಾಲಿನ ಹಾಗೂ ಬಾಕಿ ವರ್ಷಗಳ ತೆರಿಗೆ, ದರ, ಫೀಜುಗಳುಮತ್ತು ಸೇವಾ ಶುಲ್ಕಗಳನ್ನು ಹಿಂದಿನ ವರ್ಷಗಳ ಬಾಕಿ ಉಳಿಸಿಕೊಂಡಿರುವ ಸಾರ್ವಜನಿಕರು ಇದೇ ಡಿ.17ರಂದು (ಬುಧವಾರ) ತಮ್ಮ ತೆರಿಗೆ ದರ, ಫೀಜುಗಳು ಮತ್ತು ಸೇವಾ ಶುಲ್ಕಗಳನ್ನು ಕೂಡಲೇ ಪಾವತಿಸುವಂತೆ ಕೋರಲಾಗಿದೆ. ಬಾಕಿ ವರ್ಷಗಳ ತೆರಿಗೆ, ದರ, ಫೀಜುಗಳು ಮತ್ತು ಸೇವಾ ಶುಲ್ಕಗಳನ್ನುಈ ದಿನದಂದು ಪಾವತಿಸದಿದ್ದಲ್ಲಿ ಶೇ.5% ದಂಡದೊಂದಿಗೆ (ವಾರ್ಷಿಕ) ವಸೂಲಾತಿಗೆ ಈ ಕಛೇರಿಯಿಂದ ಕ್ರಮ ಜರುಗಿಸಲಾಗುವುದು. ಗ್ರಾಮ ಪಂಚಾಯತ್ ವ್ಯಾಪ್ತಿಯ ಸೈನಿಕರು, ಮಾಜಿ ಸೈನಿಕರು, ಸೈನಿಕರ ವಿಧವಾ ಮಹಿಳೆಯರು, ವಿಶೇಷ ಚೇತನರು ಮತ್ತು ಹೆಚ್.ಐ.ವಿ. (ಏಡ್ಸ್), ಕುಷ್ಠರೋಗ ಪೀಡಿತ ಮಾಲೀಕರ ವಾಸದ ಮನೆಗಳಿಗೆ ಶೇ.50% ವಿನಾಯತಿ ನೀಡುವುದಾಗಿ ಗ್ರಾ.ಪಂ.ಆಡಳಿತ ಮಂಡಳಿ ಶೀರ್ಮಾನಿಸಿರುತ್ತದೆ ಎಂದು ಪ್ರಕಟಣೆಯಲ್ಲಿ ಗ್ರಾಪಂ ಅಧ್ಯಕ್ಷರಾದ ಮಂಜುಳಾ ಶಿವಪ್ಪ ನಾಯಕ, ಉಪಾಧ್ಯಕ್ಷರಾದ ಟಿ.ಗೌಸ್ಸಾಬ್ ಹುಸೇನಸಾಬ್, ಪಿಡಿಓ ಸುರೇಶ ಸಿ., ಗ್ರಾಪಂ ಸದಸ್ಯರು ತಿಳಿಸಿದ್ದಾರೆ. ಗ್ರಾಪಂ ವ್ಯಾಪ್ತಿಯ ಮಾಲೀಕರು ಕರ ಪಾವತಿಗೆ ಗ್ರಾಪಂ ಪಿಡಿಓ, ಕಾರ್ಯದರ್ಶಿಗಳು, ಕರವಸೂಲಿಗಾರರ ಮೊಬೈಲ್ ನಂಬರ್ 8073563216, 7353334396, 9242124789 ಸಂಖ್ಯೆಗೆ ಸಂಪರ್ಕಿಸಿ ಕರಗಳನ್ನು ಪಾವತಿಸಿ ಅಭಿವೃದ್ಧಿಗೆ ಸಹಕರಿಸಲು ಕೋರಿದೆ.