Srikanth Swami is not against Brahmins,
ಆರ್ ಎಸ್ ಎಸ್ ಮುಖಂಡರು ಶ್ರೀಕಾಂತ ಸ್ವಾಮಿ ವಿರೋಧ ಮಾಡಬೇಕಿತ್ತು, ಆದರೆ ಕಾಂಗ್ರೆಸ್ ಪಕ್ಷದ ಬ್ರಾಹ್ಮಣ ಸಮುದಾಯದ ಮುಖಂಡರನ್ನು ಬಳಸಿಕೊಂಡು ಸಮುದಾಯದಲ್ಲಿ ಜಗಳ ಹಚ್ಚುವ ಕಾರ್ಯ ಆರ್ ಎಸ್ ಎಸ್ ಮಾಡುತ್ತಿದೆ, ಬ್ರಾಹ್ಮಣ ಸಮಾಜ ಮತ್ತು ಅನ್ಯ ಸಮುದಾಯಗಳ ಮಧ್ಯ ಜಗಳವಾಗಿ.ಕಾದಾಟವಾಗಿ ಹಾನಿ ಉಂಟಾದರೆ ಅದಕ್ಕೆ ಆರ್ ಎಸ್ ಎಸ್ ನೇರವಾಗಿ ಹೊಣೆ ಯಾಗುವದು. ಅಲ್ಲದೆ ಇದೇರೀತಿ ಮುಂದು ವರದಿ ದರೆ ಎಲ್ಲಾ ಸಮಾಜದ ಜನರು ದಂಗೆ ಹೇಳಬೇಕಾಗುತ್ತದೆ ಎಂದುಎಚ್ಚರಿಸಿದ್ದಾರೆ.


ಬೀದರ್: ಶ್ರೀಕಾಂತ ಸ್ವಾಮಿಯವರು ಬ್ರಾಹ್ಮಣವರ ವಿರೋಧಿ ಅಲ್ಲ, ಬ್ರಾಹ್ಮಣ ಸಮುದಾಯದವರು ಕೆಲವರು ಲಿಂಗಾಯತ ನಾಯಕರಾದ ಸಾಮಾಜಿಕ ಹೋರಾಟಗಾರರಾದ ಶರಣ ಶ್ರೀ ಶ್ರೀಕಾಂತ ಸ್ವಾಮಿ ಅವರ ವಿರುದ್ಧ ಸುಳ್ಳು ಆಪಾದನೆ ಮಾಡಿ ಮಾನಹಾನಿ ಮಾಡಿದ್ದು ಖಂಡಿಸುತ್ತೇವೆ ಎಂದು ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ಶ್ರೀ ಶ್ರೀಕಾಂತ ಸ್ವಾಮಿಯವರು ಅನೇಕ ವರ್ಷಗಳಿಂದ ಜನಪರ ಸೇವೆಯಲ್ಲಿ ತೊಡಗಿಸಿಕೊಂಡು ಎಲ್ಲ ಜಾತಿ ಹಾಗೂ ಧರ್ಮದ ಜನರೊಂದಿಗೆ ಬೆರೆತು ಸರ್ವ ಜನಾಂಗದ ಅಭಿವೃದ್ಧಿಗಾಗಿ ಸೇವೆ ಸಲ್ಲಿಸುತ್ತಾ ಬಂದಿರುವ ವಿಷಯ ಎಲ್ಲರಿಗೂ ಗೊತ್ತಿದೆ.
ಶ್ರೀಕಾಂತ ಸ್ವಾಮಿಯವರು ಬ್ರಾಹ್ಮಣವರ ವಿರೋಧಿ ಅಲ್ಲ, ಬಸವ ಭಕ್ತರಾಗಿದ್ಗು, ವಚನ ಸಾಹಿತ್ಯ ಹಾಗೂ ಭಾರತದ ಸಂವಿಧಾನವನ್ನು ಗೌರವಿಶಿವವರಾಗಿದ್ದಾರೆ. ಬಸವಣ್ಣನವರ ವಿಚಾರ ಧಾರೆಯಂತೆ ಇನ್ನೊಬ್ಬರನ್ನು ಕೀಳಾಗಿ ಕಾಣುವ ಮನೋಭಾವನೆಯವರಲ್ಲಾ.
ದಿನಾಂಕ 17/10/2025ರಂದು ಜರುಗಿದ ಸನ್ಮಾನ್ಯ ಶ್ರೀ ಪ್ರಿಯಾಂಕ ಖರ್ಗೆ ಅವರ ಪರವಾಗಿ ಆರ್ ಎಸ್ ಎಸ್ ವಿರೋಧ ನಡೆದ ಕಾಂಗ್ರೆಸ್ ಪಕ್ಷದ ಪ್ರತಿಭಟನೆ ವೇಳೆ ಲಿಂಗಾಯತ ಮುಖಂಡರು ಕಾಂಗ್ರೆಸ್ ನಾಯಕರು ಶ್ರೀ ಶ್ರೀಕಾಂತ ಸ್ವಾಮಿ ಯವರು ಆರ್ ಎಸ್ ಎಸ್ ಬಗ್ಗೆ ತಮ್ಮ ಅನುಭವದ ಮಾತುಗಳನ್ನು ಆಡಿ ಖಂಡಿಸಿ ಪ್ರಿಯಾಂಕ್ ಖರ್ಗೆಯವರಿಗೆ ಬೆಂಬಲ ನೀಡುತ್ತಾ, ಆರ್ ಎಸ್ ಎಸ್ ಸಮಾಜದಲ್ಲಿ ಗೊಂದಲ ನಿರ್ಮಾಣ ಮಾಡಲು ಬಡಗಿ ದಂಡ ಹಿಡಿದು ರಾಲಿ ಮಾಡುತ್ತಿರುವುದು ಜನರಿಗೆ ಹೆದರಿಸುತ್ತಿದ್ದಾರೆ.
ಮತ್ತು ಆರ್ ಎಸ್ ಎಸ್ ದಲ್ಲಿರುವ ಬ್ರಾಹ್ಮಣರು ಹೊರಗಿನ ದೇಶದಿಂದ ವಲಸೆ ಬಂದವರು, ಭಾರತ ದೇಶದ ದ್ವಜ ರಾಷ್ಟ್ರಗೀತೆ ಅವರು ಗೌರವ ಕೊಟ್ಟಿಲ್ಲ, ಭಾರತೀಯ ಉಡುಪು ಬಿಟ್ಟು ಜರ್ಮನ್ ನಾಝಿ ಉಡುಪುಗಳು ಧರಿಸುವುದು ತಪ್ಪು ಮತ್ತು ಕಪ್ಪು ಕರಿ ಬಣ್ಣದ ಟೋಪಿ ಧರಿಸುವುದು ಹಿಂದೂ ಸಂಸ್ಕೃತಿ ಅಶುಭ ಎನ್ನುತ್ತಾರೆಂದು ಹೇಳಿದ್ದರು, ಅವರು ಹೇಗೆ ದೇಶಪ್ರೇಮಿ ಆಗುತ್ತಾರೆ ಎಂದು ಪ್ರಶ್ನೆ ಮಾಡಿದ್ದರು. ಲಿಂಗಾಯತ ಧರ್ಮದ ಹೋರಾಟದ ಸಮಯದಲ್ಲಿ ಆರ್ ಎಸ್ ಎಸ್ ಬ್ರಾಹ್ಮಣ ಮುಖಂಡರು ಲಿಂಗಾಯತರು ಶನಿ ಸಂತಾನ ಮತ್ತು ಲಿಂಗಾಯತ ಮಠಾಧೀಶರು ಮತಿ ಹೀನರು ಎಂದು ಹೀಯಾಳಿಸಿ ಶ್ರೀ ಭಾಗವತ್ , ಶ್ರೀ ಸೂ ರಾಮಣ್ಣ ಅವರು ಲಿಂಗಾಯತ ಸಮುದಾಯಕ್ಕೆ ಯಾವುದೇ ಕಾರಣಕ್ಕೂ ಅಲ್ಪಸಂಖ್ಯಾತ ಮೀಸಲಾತಿ ನೀಡುವದಕ್ಕೆ ಬಿಡಲ್ಲ, ಕೇಂದ್ರ ಸರ್ಕಾರ ನಮ್ಮ ಕೈಯಲ್ಲಿದೆ ಎಂದು ಲಿಂಗಾಯತ ಹೋರಾಟಗಾರರಿಗೆ ಹೊಡೆತ ಕೊಟ್ಟಿದ್ದರು, ಲಿಂಗಾಯತರಿಗೆ ಅವಮಾನ ಮಾಡಿದ್ದರು, ಆವಾಗ ಈ ಬೀದರ ಬ್ರಾಹ್ಮಣ ಸಮುದಾಯದ ಮುಖಂಡರು ಸಂತೋಷ ಪಟ್ಟಿದ್ದರು.
ಬೀದರ ಬ್ರಾಹ್ಮಣ ಸಂಘಟನೆಗಳ ಹೆಸರ ಮೇಲೆ ಕೆಲವು ಕಾಂಗ್ರೆಸ್ ಮುಖಂಡರು ರಾಜ್ಯದ ಲಿಂಗಾಯತ ಮುಖಂಡರಾದ ಶ್ರೀ ಶ್ರೀಕಾಂತ ಸ್ವಾಮಿ ಬ್ರಾಹ್ಮಣ ಸಮುದಾಯದವರ ಮಾನ ಹಾನಿ ಮಾಡಿದ್ದಾರೆ ಎಂದ ಸುಳ್ಳು ಆಪಾದನೆ ಮಾಡಿ ಅವರ ಮಾನ ಹಾನಿ ಮಾಡಲು ಕುತಂತ್ರ ಮಾಡುತ್ತಿದ್ದಾರೆ. ಶ್ರೀಕಾಂತ ಸ್ವಾಮಿ ಕರ್ನಾಟಕ ರಾಜ್ಯ, ಮಹಾರಾಷ್ಟ್ರ, ತೆಲಂಗಾಣ, ಆಂಧ್ರ ಪ್ರದೇಶ ಮತ್ತು ದಿಲ್ಲಿಯಲ್ಲಿ ಲಿಂಗಾಯತ ರಾಲಿಗಳು ಮಾಡಿ ಲಿಂಗಾಯತ ಸಮಾಜದ ಗೌರವ ವ್ಯಕ್ತಿ ಆಗಿದ್ದಾರೆ. ಶ್ರೀಕಾಂತ ಸ್ವಾಮಿ ಧರ್ಮ ಜಾತಿ ಭೇದ ಮಾಡದೆ ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯ ಸಾಮಾಜಿಕ ಕಾರ್ಯಗಳು ಮಾಡುತ್ತ ಜನಾನುರಾಗಿ ಆಗಿದ್ದಾರೆ. ಬೀದರ ಜಿಲ್ಲೆಯ ಎಲ್ಲಾ ಸಮುದಾಯದ ಜನರ ಕಣ್ಮಣಿ ಆಗಿದ್ದಾರೆ. ಕೊವಿಡ್ ವಿಪ್ಪತ್ತಿನಲ್ಲಿ ಹಳೆ ನಗರದಲ್ಲಿ ಕಷ್ಟದಲ್ಲಿ ಇದ್ದ ಹಿಂದೂ ಬ್ರಾಹ್ಮಣ ಮುಸ್ಲಿಮ ದಲಿತ ಹಿಂದುಳಿದವರ ಯೋಗ ಕ್ಷಮೆ ನೋಡಿಕೊಳ್ಳಲು ಹಗಲಿರುಳು ಶ್ರಮಿಸಿದ್ದಾರೆ, ಜೀವದ ಪರವೇ ಇಲ್ಲದೆ ಸಾವಿರಾರು ಜೀವ ಉಳಿಸಿದ್ದಾರೆ. ಬೀದರ ಜಿಲ್ಲೆಯ ಆಪತಬಂಧವ, ಸಾಮಾಜಿಕ ಹೋರಾಟಗಾರ, ಅಭಿವೃದ್ಧಿ ಹರಿಕಾರ, ದಿನಾಲೂ ನೂರಾರು ಜನರ ಸಹಾಯ ಮಾಡುತ್ತಾರೆ, ಇದು ಎಲ್ಲರಿಗೂ ಗೊತ್ತಿದ್ದ ವಿಷಯ. ವೈಚಾರಿಕ ಪ್ರಗತಿಪರ ಹೋರಾಟಗಾರರು ಆಗಿದ್ದು, ಬ್ರಾಹ್ಮಣ ಸಮಾಜದಲ್ಲಿಯೂ ಅವರ ಕಾರ್ಯಕ್ರಮಗಳಲ್ಲಿ ಭಾಗವತ್ , ಕೃಷ್ಣಾಷ್ಟಮಿ ಮತ್ತಿತರೆ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಬೆಂಬಲ ನೀಡುತ್ತಾರೆ, ನರಸಿಂಹ ಜೀರಾದಲ್ಲಿ ಜಿಲ್ಲಾಡಳಿತ ಮಳಗಿಗಳು ಹರಾಜು ಮಾಡುತ್ತಿರುವಾಗ ಮಧ್ಯಸ್ತಿಕೆ ವಹಿಸಿ ಪೂಜಾರಿಗಳ ಪರವಾಗಿ ಹೋರಾಟ ಮಾಡಿದ್ದಾರೆ, ಇಂದಿಗೂ ಬ್ರಾಹ್ಮಣ ಸಮಾಜ ಅವರ ಕಾರ್ಯಗಳು ಮರೆಯುವಂತಿಲ್ಲ. ಬ್ರಾಹ್ಮಣ ಸಮಾಜದಲ್ಲಿ ಬೆಳೆಯುತ್ತಿರುವ ಅವರ ಒಡನಾಟ ಪ್ರತಿಷ್ಠೆ, ಕಾಂಗ್ರೆಸ್ ಪಕ್ಷದಲ್ಲಿ ಬೆಳೆಯುತ್ತಿರುವ ಅವರ ನಾಯಕತ್ವ ಕೆಲವು ಬ್ರಾಹ್ಮಣರಿಗೆ ಸಹಿಸಲು ಆಗುತ್ತಿಲ್ಲ.
ಇದು ಎಲ್ಲ ರಾಜಕೀಯ ಷಢ್ಯಂತ್ರ ಮತ್ತು ದ್ವೇಷದ ಭಾವನೆಯಿಂದ ಬ್ರಾಹ್ಮಣ ಸಮುದಾಯದಲ್ಲಿ ಶ್ರೀಕಾಂತ ಸ್ವಾಮಿ ಗೌರವ ಕಡಿಮೆ ಮಾಡಲು ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಪ್ರಯತ್ನ ಮಾಡುತ್ತಿದ್ದಾರೆ. ತಾವು ರಾಜಕೀಯದಲ್ಲಿ ಬೆಳೆಯಲು ಲಿಂಗಾಯತ ಧರ್ಮದ ನಾಯಕರನ್ನು ಗುರಿ ಮಾಡಿದರೆ ಪ್ರಸಿದ್ಧ ಆಗಬಹುದು ಎಂದು ಹಗಲು ಕನಸ್ಸು ಈ ಬ್ರಾಹ್ಮಣ ಹೋರಾಟಗಾರರು ಕಾಣುತ್ತಿದ್ದಾರೆ. ಶ್ರೀಕಾಂತ ಸ್ವಾಮಿಯವರ ಕುಟುಂಬ ನೂರಾರು ವರ್ಷಗಳಿಂದ ಜನಸೇವೆ ಮಾಡುತ್ತಾ ಬಂದಿದೆ, ಅವರ ತಂದೆ ಲಿಂಗೈಕ್ಯ ಶ್ರೀ ವೀರಯ್ಯ ಸ್ವಾಮಿ ಮತ್ತು ಮಾವ ಲಿಂಗೈಕ್ಯ ಶ್ರೀ ಶಂಕರಪ್ಪ ದೇವರಶೆ ಸ್ವತಂತ್ರ ಸೇನಾನಿ ಆಗಿದ್ದು ದೇಶದ ಮತ್ತು ರಾಜ್ಯಕ್ಕಾಗಿ ಹೋರಾಟ ಮಾಡಿದ್ದಾರೆ. ಪತ್ನಿ ಶ್ರೀಮತಿ ರಾಜಶ್ರೀ ಸ್ವಾಮಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಆಗಿ ಅಪಾರ ಸೇವೆ ಮಾಡಿದ್ದಾರೆ, ಅವರು ರಾಜ್ಯ ರಾಷ್ಟ್ರ ಮಟ್ಟದಲ್ಲಿ ಪಕ್ಷದ ಕೆಲಸ ಮಾಡಿ ಕಾಂಗ್ರೆಸ್ ನಾಯಕರ ಮೆಚ್ಚುಗೆ ಗಳಿಸಿಕೊಂಡಿದ್ದಾರೆ.
ಇಂತಹ ಮನೆತನ ಮತ್ತು ಶ್ರೀಕಾಂತ ಸ್ವಾಮಿಯವರಿಗೆ ಮಸಿ ಬಳಿಯುವ ಕೆಲಸ ಕೆಲವು ಬ್ರಾಹ್ಮಣ ಸಮುದಾಯದ ಮುಖಂಡರು ಪ್ರಯತ್ನ ಮಾಡುತ್ತಿದ್ದಾರೆ, ಆರ್ ಎಸ್ ಎಸ್ ವಿರುದ್ಧ ಹೋರಾಟ ಇತ್ತು, ಬ್ರಾಹ್ಮಣ ಸಮುದಾಯದ ವಿರುದ್ಧ ಹೋರಾಟ ಇದ್ದಿಲ್ಲ, ಆರ್ ಎಸ್ ಎಸ್ ಮುಖಂಡರು ಶ್ರೀಕಾಂತ ಸ್ವಾಮಿ ವಿರೋಧ ಮಾಡಬೇಕಿತ್ತು, ಆದರೆ ಕಾಂಗ್ರೆಸ್ ಪಕ್ಷದ ಬ್ರಾಹ್ಮಣ ಸಮುದಾಯದ ಮುಖಂಡರನ್ನು ಬಳಸಿಕೊಂಡು ಸಮುದಾಯದಲ್ಲಿ ಜಗಳ ಹಚ್ಚುವ ಕಾರ್ಯ ಆರ್ ಎಸ್ ಎಸ್ ಮಾಡುತ್ತಿರುವುದು ಖಂಡನೀಯ. ಬ್ರಾಹ್ಮಣ ಸಮಾಜ ಮತ್ತು ಅನ್ಯ ಸಮುದಾಯಗಳ ಮಧ್ಯ ಕಾದಾಟ ಆಗಿ ಹಾನಿ ಆದರೆ ಆರ್ ಎಸ್ ಎಸ್ ನೇರವಾಗಿ ಜವಾಬ್ದಾರಾಗುತ್ತಾರೆ. ಹೀಗೆ ಮುಂದುವರೆದರೆ ಇವರ ವಿರುದ್ಧ ದೊಡ್ಡ ಹೋರಾಟ ಮಾಡುತ್ತೇವೆ. ಶ್ರೀಕಾಂತ ಸ್ವಾಮಿ ಯವರ ವಿರುದ್ಧ ಮಾಡಿದ್ದ ಆಪಾದನೆಗಳು ಮಾನಹಾನಿ ವಾಪಸ ತಗೊಳಬೇಕು.ಎಂದು ಬೀದರ್ ನ ಶ್ರೀ ಬಾಬುರಾವ ಹೊನ್ನಾ ವಕೀಲರು, ನಿವೃತ್ತ ಪ್ರಾಚಾರ್ಯ ಶ್ರೀ ವಿಠಲ್ ದಾಸ ಫ್ಯಾಗೆ, ನಿವೃತ್ತ ಪ್ರಾಚಾರ್ಯರು ಶ್ರೀ ನಿಜಾಮುದ್ದಿeನ, ವಿಶ್ವಗುರು ಬಸವಧರ್ಮ ಕೇಂದ್ರದ ಅದ್ಯಕ್ಷ ಶ್ರೀ ಓಂಪ್ರಕಾಶ ರೋಟ್ಟೆ, ಸಾಮಾಜಿಕ ಕಾರ್ಯಕರ್ತ ಶ್ರೀ ಮಚ್ಚೇಂದ್ರ ವಾಘಮಾರೆ ಇವರುಗಳು ಪ್ರಕಟಣೆ ಮೂಲಕ ಆಗ್ರಹಿಸಿದ್ದಾರೆ.
Kalyanasiri Kannada News Live 24×7 | News Karnataka
